ಕರಸ್ಥಲ ಲಿಂಗಸಹಿತ ಬಸವಣ್ಣನವರ ಈ ಶಿಲ್ಪದಲ್ಲಿರುವ ಚಮ್ಮಾಳಿಗೆ, ಗಲ್ಲೆಬಾನಿ, ತಮಟೆ, ಉಳಿ, ಕಬ್ಬಿಣಗೊಡತಿ, ಚಿಂಪರಿಕೆ, ರಂಪಿಗೆ ಇವೆಲ್ಲವೂ ಚರ್ಮಕಾರರ ಕಾಯಕದ ಸಾಮಾನ್ಯ ಸಲಕರಣೆಗಳಾಗಿ ಉಳಿಯದೆ ಬಸವಣ್ಣನವರು ತಲುಪಿದ ಸಾಮಾಜಿಕ- ಸಾಂಸ್ಕೃತಿಕ ನೆಲೆ ಹಾಗೂ ಅವರ ಅನುಭಾವದ ಹುಡುಕಾಟದ ಅಸ್ಮಿತೆಗಳಾಗಿ ಶಿಲ್ಪಿಯ ಕಲೆಯಲ್ಲಿ ಒಡಮೂಡಿವೆ. ಸಮಗಾರರು ಬಳಸುವ ಕೆಲವು ಉಪಕರಣಗಳ ಸಂಕ್ಷಿಪ್ತ ಚಿತ್ರಣ: ಗಲ್ಲೆಬಾನಿ: ಸಾಂಪ್ರದಾಯಿಕವಾಗಿ ಇದು ಚಮ್ಮಾರರು (ಚರ್ಮದ ಕೆಲಸ ಮಾಡುವವರು) ಹದ ಮಾಡಲು ಅಥವಾ ಚರ್ಮವನ್ನು…
ಐತಿಹಾಸಿಕ ಮಂಗಳವೆಡೆಯಿಂದ ದೊರೆ ಬಿಜ್ಜಳನ ರಾಜದಾನಿ ಕಲ್ಯಾಣಕ್ಕೆ ಸ್ಥಳಾಂತರವಾದ ಬಳಿಕ, ಬಸವಣ್ಣನವರು ಮಹಾಮಂತ್ರಿಯಾಗಿ ಅದನ್ನು ಭೂಮಿಯ ಮೇಲಿನ ಕೈಲಾಸವಾಗಿಸಿದ್ದರು. ಅಂತರ್ಜಾತಿ ವಿವಾಹದ ಪರಿಣಾಮವಾಗಿ ಕ್ರಾಂತಿ ಸಂಭವಿಸಿದ ಬಳಿಕ ಅದು ಶರಣರಿಂದ ವಿಮುಖವಾಯಿತು. ಚಾಲುಕ್ಯರ ಆಡಳಿತದ ನಂತರ ಅದಕ್ಕೆ ಕಿಲ್ಲೆ ಕಲ್ಯಾಣವೆಂದೆ ಕರೆಯುವುದು ವಾಡಿಕೆಯಾಗಿತ್ತು. ಕರ್ನಾಟಕ ರಾಜ್ಯ ಏಕೀಕರಣಕ್ಕೂ ಮೊದಲು ಅದಕ್ಕೆ ಬಸವ ಕಲ್ಯಾಣವೆಂದು ಕರೆಯಲು ಶಿಫಾರಸು ಮಾಡಲಾಯಿತು. 12 ನೇ ಶತಮಾನದ ಬಸವಾದಿ ಶರಣರ ಕಾಲದಲ್ಲಿ…
ಇಳೆ ನಿಮ್ಮ ದಾನ, ಬೆಳೆ ನಿಮ್ಮ ದಾನ.ಸುಳಿದು ಬೀಸುವ ವಾಯು ನಿಮ್ಮ ದಾನ.ನಿಮ್ಮ ದಾನವನುಂಡು ಅನ್ಯರ ಹೊಗಳುವಕುನ್ನಿಗಳೆನೇನೆಂಬೆ, ರಾಮನಾಥ.(ಸಮಗ್ರ ವಚನ ಸಂಪುಟ: ಏಳು-2021/ಪುಟ ಸಂಖ್ಯೆ-266/ವಚನ ಸಂಖ್ಯೆ-735) ಈ ವಚನದಲ್ಲಿ ವಚನಕಾರ ಜೇಡರ ದಾಸಿಮಯ್ಯನವರು ದಾನದ ನಿಜವಾದ ಅರ್ಥ ಯಾವುದೆಂದು ಪ್ರಶ್ನಿಸುತ್ತಾರೆ. ಭೂಮಿ (ಇಳೆ), ಬೆಳೆ, ಗಾಳಿ, ನೀರು, ಪ್ರಕೃತಿ ಇವೆಲ್ಲವೂ ಸೃಷ್ಠಿಕರ್ತನಾದ ಪರಶಿವನ ದಾನ, ದೇಣಿಗೆಗಳು. ಯಾವುದನ್ನೂ ಮಾನವರು ಸೃಷ್ಟಿಸಿಲ್ಲ. ಆದಾಗ್ಯೂ ದೇವರು ಕೊಟ್ಟಿದ್ದನ್ನು ತನ್ನದೆಂದು…
ಸಮಾಜದಲ್ಲಿ ಧರ್ಮ ಎನ್ನುವ ಪರಿಕಲ್ಪನೆ ಧಾರಣ ಶಕ್ತಿಯಾಗಿ ನಮ್ಮನ್ನು ಹಿಡಿದಿಡಲು ಪ್ರಯತ್ನಿಸುತ್ತದೆ. ವರ್ಗ, ವರ್ಣ, ಸೌಹಾರ್ದತೆ, ಸಹಬಾಳ್ವೆ ನಮ್ಮನ್ನು ವ್ಯಾಖ್ಯಾನಿಸುವತ್ತ ಧಾವಿಸುತ್ತವೆ. ವಚನಗಳ ತಾತ್ವಿಕ ಮೀಮಾಂಸೆ ಭಕ್ತ ಮತ್ತು ಶರಣ ಸಂಬಂಧದಲ್ಲಿ ಧ್ಯಾನಸ್ತ ಮನಸ್ಸಿನ ಒಳ ಆವರಣವಾಗಿದೆ. ಕಾಯಕದ ಮೂಲಕ ದೇವರನ್ನು ಕಾಣುವ ಶ್ರಮ ಸಂಸ್ಕೃತಿಗೆ ನ್ಯಾಯವನ್ನು ಒದಗಿಸುವ ಎತ್ತರಿಸುವ ಪೂಜಿಸುವ ಸಂಸ್ಕೃತಿ ಎಂದರೆ ಶರಣರದು. ಕಾಯಕವನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿದ ಶರಣ ಮೇದಾರ ಕೇತಯ್ಯನವರು…
ಕ್ರಾಂತಿಕಾರಿ ಶರಣ ಹಡಪದ ಅಪ್ರಪಣ್ಣನವರ ಒಂದು ನೆನಪು … … ವಚನ ಚಳುವಳಿಯ ಹರಿಕಾರ, ಸಾಮಾಜಿಕ ಕ್ರಾಂತಿಯ ರೂವಾರಿ ಜಗಜ್ಯೋತಿ ಬಸವೇಶ್ವರರ ಆಪ್ತ ಕಾರ್ಯದರ್ಶಿಯಾದ ಹಡಪದ ಅಪ್ಪಣನವರು ಅತ್ಯುತ್ತಮ ವಚನಕಾರರಾಗಿದ್ದರು. 12 ನೇ ಶತಮಾನದಲ್ಲಿ ಪ್ರಜಾಪ್ರಭುತ್ವದ ಸಂಸತ್ತು ಎಂದೇ ಖ್ಯಾತವಾಗಿದ್ದ ಅನುಭವ ಮಂಟಪದಲ್ಲಿ ಇವರು ಸಕ್ರೀಯ ಸದಸ್ಯರಾಗಿದ್ದರು. ಇವರು ಬಸವಣ್ಣನವರ ಬಾಲ್ಯದ ಒಡನಾಡಿಗಳಲ್ಲಿ ಒಬ್ಬರಾಗಿದ್ದರು. ಅಂದು ಹಡಪದ ಅವರ ಮುಖ ನೋಡಿದರೆ ಕೆಟ್ಟದಾಗುತ್ತದೆ ಎನ್ನುವ ಕಾಲದಲ್ಲಿ ಮೂಡ ನಂಬಿಕೆ…
ಲೇಖನ ಕೃಪೆ: https://bayalu.co.in/ವಚನ-ಸಾಂಸ್ಕೃತಿಕ-ತಲ್ಲಣಗಳು/ ತುಮಕೂರಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಈಗ ನಿವೃತ್ತರು. ಕನ್ನಡದ ಸಂಸ್ಕೃತಿ ಚಿಂತಕ-ಸಂಶೋಧಕರಲ್ಲಿ ಒಬ್ಬರು. ಬುದ್ಧಚಿಂತನೆಯನ್ನು ಹರಳುಗೊಳಿಸಿದ ನಾಗಾರ್ಜುನನ ‘ಮೂಲಮಧ್ಯಮಕಾರಿಕಾ’ವನ್ನು ಕನ್ನಡಕ್ಕೆ ಅನುವಾದಿಸಿದವರು. ಕರ್ನಾಟಕದ ಸಂಸ್ಕೃತಿ ರೂಪಿಸುವಲ್ಲಿ ಶ್ರಮಣ ಧಾರೆಗಳು ವಹಿಸಿದ ಪ್ರಮುಖ ಪಾತ್ರಗಳ ಬಗ್ಗೆ ವಿಶೇಷ ಒಲವು ಉಳ್ಳವರು. ಕರ್ನಾಟಕ ಸರಕಾರ ಪ್ರಕಟಿಸಿದ ಸಮಗ್ರ ತತ್ವಪದ ಸಾಹಿತ್ಯ…
ಸಂಕ್ಷಿಪ್ತ ಪರಿಚಯ:ಲಿಂಗ ತಾರತಮ್ಯ ತೀವ್ರವಾಗಿದ್ದ ಕಾಲಘಟ್ಟದಲ್ಲಿ ಮಹಿಳೆಯಲ್ಲಿ ತಾನೂ ಒಂದು ಚೇತನ ಎಂಬ ಅರಿವನ್ನು ಹುಟ್ಟು ಹಾಕಿದ್ದು 12 ನೇ ಶತಮಾನದ ಕಾಲ. ಇದೊಂದು ಅರಿವಿನ ಸ್ಫೋಟ. ಇದೇ ನಿಜವಾದ ಸ್ತ್ರೀ ಸಮಾನತೆ ಮತ್ತು ಸ್ವಾತಂತ್ರ್ಯದ ದ್ಯೋತಕ. ಮಹಾಮಾನವತಾವಾದಿ ಬಸವಣ್ಣನವರು ಮಹಿಳಾ ಸ್ವಾತಂತ್ರ್ಯದ ಹರಿಕಾರರು. ಶರಣೆ ಕಾಲಕಣ್ಣಿಯ ಕಾಮಮ್ಮನವರು 12 ನೇ ಶತಮಾನದಲ್ಲಿ ಜೀವಿಸಿದ್ದ ಶರಣೆಯಾಗಿದ್ದಾರೆ. ಇವರು ದಲಿತ ಸಮುದಾಯದ ಮಹಿಳೆ. ಕೊರವ, ಕೊಂಚೆಕೊರವ ಸಮುದಾಯದಿಂದ ಬಂದವರು. ಅಂದು ಈ…
ಹಂಜರ ಬಲ್ಲಿತ್ತೆಂದು ಅಂಜದೆ ಓದುವ ಗಿಳಿಯೆ,ಎಂದೆಂದೂ ಅಳಿಯೆನೆಂದುಗುಡಿಗಟ್ಟಿದೆಯಲ್ಲಾ, ನಿನ್ನ ಮನದಲ್ಲಿ.ಮಾಯಾಮಂಜರ ಕೊಲುವಡೆ ನಿನ್ನ ಹಂಜರ ಕಾವುದೆಕೂಡಲಸಂಗಮದೇವನಲ್ಲದೆ?(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-46/ವಚನ ಸಂಖ್ಯೆ-163) ವಚನ ಚಳುವಳಿಯ ತಾತ್ವಿಕ ಚೌಕಟ್ಟುಗಳು ರೂಪಕ ಮತ್ತು ಪ್ರತಿಮೆಗಳ ಮೇರು ಸಾದೃಶ್ಯವನ್ನು ಬಿಂಬಿಸುತ್ತವೆ. ಗಿಳಿ ಎಂಬ ತಾತ್ವಿಕ ಪರಿಕಲ್ಪನೆ ಜೀವಾತ್ಮದ ಶಕ್ತಿಯಾಗಿ ಜ್ಞಾನಾನುಸಂಧಾನ ಬಯಸುತ್ತದೆ. ಬಸವಣ್ಣನು ಪ್ರಭುವಿನಂತೆ ಬೆರಗನ್ನು ಮುಂದೆ ಮಾಡುವುದಿಲ್ಲ.…
ಲೋಕದ ಡೊಂಕ ನೀವೇಕೆ ತಿದ್ದುವಿರಿ?ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ;ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ.ನೆರೆಮನೆಯ ದುಃಖಕ್ಕೆ ಅಳುವವರ ಮೆಚ್ಚಕೂಡಲಸಂಗಮದೇವ.(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-36/ವಚನ ಸಂಖ್ಯೆ-124) ೧೨ ನೇ ಶತಮಾನದ ವಚನ ಸಾಹಿತ್ಯ ಅಂದು ವೈಜ್ಞಾನಿಕ ಮನೋಭಾವದ ವೈಚಾರಿಕತೆಯನ್ನು ಹುಟ್ಟು ಹಾಕಿದ ಕಾಲವದು. ಭಕ್ತಿ ಸಾಹಿತ್ಯದ ಜೊತೆಗೆ ಸಾಮಾಜಿಕ ಚಿಂತನೆಯನ್ನು ಹೇಳಿದ ಶರಣರು ಸಮಾಜವನ್ನು ತಮ್ಮ ಕುಟುಂಬವೆಂದು ಸ್ವೀಕರಿಸಿದ್ದರು. ಹೀಗಾಗಿ ಲೋಕದ ತುಡಿತ ಆಶಯಗಳನ್ನು…