# short film (news sources) — RSS Amplifier

Recent posts from the 1 feeds in the RSS Amplifier directory that cover short film.

Page: <https://rssamplifier.com/topics/short-film/news>  
Feed: <https://rssamplifier.com/topics/short-film/news.md>

---

## [ಉಡುಪಿಯಲ್ಲಿ ಭರ್ಜರಿ ಪೊಲೀಸ್ ಕಾರ್ಯಾಚರಣೆ: ಕಳ್ಳತನ ಆರೋಪಿಗಳ ಬಂಧನ, 23.56 ಲಕ್ಷ ಮೌಲ್ಯದ ವಸ್ತು ವಶಕ್ಕೆ](https://themangaloremirror.in/udupi-house-theft-case-arun-achari-kaushik-arrested-23-lakhs-worth-items-seized/)

_2026-08-27 · guru · themangaloremirror.in_

ಉಡುಪಿ ಅಗಸ್ಟ್ 27: ಬೀಗ ಹಾಕಿದ ಮನೆಗಳನ್ನೇ ಗುರಿಯಾಗಿಸಿಕೊಂಡು ಸರಣಿ ಕಳ್ಳತನ ನಡೆಸುತ್ತಿದ್ದ ಇಬ್ಬರು ಆರೋಪಿಗಳನ್ನು ಉಡುಪಿ ನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಬಂಧಿತರಿಂದ ಸುಮಾರು 23,56,230 ರೂಪಾಯಿ ಮೌಲ್ಯದ ಚಿನ್ನಾಭರಣ, ಬೆಳ್ಳಿ ಹಾಗೂ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಪೆರಂಪಳ್ಳಿ ಕುಂಜಿಬೆಟ್ಟುವಿನ ಅರುಣ್ ಎಸ್.ವಿ. ಅಲಿಯಾಸ್ ಅರುಣ್ ಆಚಾರಿ (43) ಹಾಗೂ ತೆಂಕನಿಡಿಯೂರಿನ ಕೌಶೀಕ್ (19) ಬಂಧಿತ ಆರೋಪಿಗಳು. ಪುತ್ತೂರು ಗ್ರಾಮದ ಭಗವತಿ ಲೇಔಟ್ ನಿವಾಸಿ ಸನಂ…

## [ಮಂಗಳೂರು ಸಚಿವ ಸಂಪುಟ ಸಭೆಯಲ್ಲಿ ತುಳು ಭಾಷೆಯನ್ನು ರಾಜ್ಯದ ಎರಡನೇ ಹೆಚ್ಚುವರಿ ಭಾಷೆಯನ್ನಾಗಿ ಘೋಷಿಸಿ: ಮುಖ್ಯಮಂತ್ರಿಗೆ ಶಾಸಕ ಅಶೋಕ್ ರೈ ಮನವಿ](https://themangaloremirror.in/mla-ashok-rai-on-tulu-langauge/)

_2026-08-27 · guru · themangaloremirror.in_

ಪುತ್ತೂರು: ಮಂಗಳೂರಿನಲ್ಲಿ ಮುಂದೆ ನಡೆಯಲಿರುವ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ತುಳು ಭಾಷೆಯನ್ನು ರಾಜ್ಯದ ಹೆಚ್ಚುವರಿ ಎರಡನೇ ಭಾಷೆಯನ್ನಾಗಿ ಘೋಷಣೆ ಮಾಡಬೇಕೆಂದು ಆಗ್ರಹಿಸಿ ಪುತ್ತೂರು ಶಾಸಕ ಅಶೋಕ್ ರೈ ಅವರು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಿದ್ದಾರೆ. ಬುಧವಾರ ಮುಖ್ಯಮಂತ್ರಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ ಶಾಸಕರು ಈ ಮನವಿಯನ್ನು ಸಲ್ಲಿಸಿದ್ದಾರೆ. ತುಳು ಭಾಷೆಯನ್ನು ರಾಜ್ಯದ ಎರಡನೇ ಹೆಚ್ಚುವರಿ ಭಾಷೆಯನ್ನಾಗಿ ಘೋಶಿಸುವಂತೆ ಹಲವು ಬಾರಿ ಮನವಿ ಸಲ್ಲಿಸಲಾಗಿದೆ.…

## [ನೇಪಾಳದಲ್ಲಿ ಭೀಕರ ಪ್ರವಾಹ : ಬಲಿಯಾದವರ ಸಂಖ್ಯೆ 270ಕ್ಕೆ ಏರಿಕೆ, 288 ಭಾರತೀಯರು ನಾಪತ್ತೆ!](https://themangaloremirror.in/nepal-flash-floods-death-toll-rises-270-indian-tourists-missing-mea-help/)

_2026-08-27 · guru · themangaloremirror.in_

ಕಠ್ಮಂಡು ಅಗಸ್ಟ್ 27: ನೇಪಾಳದಲ್ಲಿ ಸಂಭವಿಸಿದ ಪ್ರಳಯಾಂತಕ ಹಠಾತ್ ಪ್ರವಾಹಕ್ಕೆ ಬಲಿಯಾದವರ ಸಂಖ್ಯೆ ಗುರುವಾರ 270ಕ್ಕೆ ಏರಿಕೆಯಾಗಿದೆ. ಇತ್ತೀಚಿನ ವರ್ಷಗಳಲ್ಲಿ ದೇಶ ಕಂಡ ಅತ್ಯಂತ ಭೀಕರ ನೈಸರ್ಗಿಕ ವಿಕೋಪಗಳಲ್ಲಿ ಒಂದಾಗಿರುವ ಈ ದುರಂತದಲ್ಲಿ 288 ಭಾರತೀಯ ಪ್ರವಾಸಿಗರು ಹಾಗೂ ಜಲವಿದ್ಯುತ್ ಯೋಜನೆ ನೌಕರರು ಸೇರಿ ಸಾವಿರಾರು ಮಂದಿ ನಾಪತ್ತೆಯಾಗಿದ್ದು, ಶೋಧ ಕಾರ್ಯ ತೀವ್ರಗೊಂಡಿದೆ. ಬುಧವಾರ ಭೋಟೆ ಕೋಶಿ ನದಿಯಲ್ಲಿ ಉಂಟಾದ ಹಠಾತ್ ಪ್ರವಾಹವು ಮೂರು ಜಿಲ್ಲೆಗಳಲ್ಲಿ ಅಪಾರ ಪ್ರಮಾಣದ ಹಾನಿ ಎಸಗಿದೆ.…

## [ಈ ಬಾರಿ ಹುಟ್ಟುಹಬ್ಬ ಆಚರಿಸಿಕೊಳ್ಳಲ್ಲ &#8211; ಅಭಿಮಾನಿಗಳಿಗೆ ಪತ್ರ ಬರೆದ ‘ಅಭಿನಯ ಚಕ್ರವರ್ತಿ’!](https://themangaloremirror.in/kiccha-sudeep-september-2-birthday-cancellation-post-big-boss-kannada-movies/)

_2026-08-27 · guru · themangaloremirror.in_

ಬೆಂಗಳೂರು: ರಿಯಾಲಿಟಿ ಶೋ ‘ಬಿಗ್ ಬಾಸ್’ ಸಿದ್ಧತೆಯಲ್ಲಿರುವ ‘ಅಭಿನಯ ಚಕ್ರವರ್ತಿ’ ಕಿಚ್ಚ ಸುದೀಪ್ ಅವರು ತಮ್ಮ ಮುಂಬರುವ ಹುಟ್ಟುಹಬ್ಬದ ಆಚರಣೆಗೆ ಸಂಬಂಧಿಸಿದಂತೆ ಅಭಿಮಾನಿಗಳಿಗೆ ಪತ್ರವೊಂದನ್ನು ಬರೆದಿದ್ದಾರೆ. ವೈಯಕ್ತಿಕ ಕಾರಣಗಳಿಂದಾಗಿ ಈ ವರ್ಷ ಸೆಪ್ಟೆಂಬರ್ 2ರಂದು ಅಭಿಮಾನಿಗಳ ಜೊತೆ ಜನ್ಮದಿನವನ್ನು ಆಚರಿಸಿಕೊಳ್ಳದಿರಲು ನಿರ್ಧರಿಸಿದ್ದು, ಅಂದು ತಾವು ಮನೆಯಲ್ಲಿ ಲಭ್ಯವಿರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. 30 ವರ್ಷಗಳಿಂದ ಸೆಪ್ಟೆಂಬರ್ 2 ಎಂಬ ಸಾಮಾನ್ಯ ದಿನಾಂಕವನ್ನು ಸಂಭ್ರಮವನ್ನಾಗಿ…

## [ಸ್ಕೂಟರ್ ಸವಾರನ ಬೇಜವಬ್ದಾರಿತನಕ್ಕೆ ಪೆಟ್ರೋಲ್ ಬಂಕ್ ಆವರಣಕ್ಕೆ ಡಿಕ್ಕಿಯಾಗಿ ಪಲ್ಟಿಯಾದ ಬಸ್, ಮಕ್ಕಳು ಸೇರಿ 20 ಮಂದಿಗೆ ಗಾಯ, ತಪ್ಪಿದ ಭಾರಿ ದುರಂತ!](https://themangaloremirror.in/kochi-ernakulam-koothattukulam-tourist-bus-accident-petrol-pump-escape/)

_2026-08-27 · guru · themangaloremirror.in_

ಕೊಚ್ಚಿ ಅಗಸ್ಟ್ 27: ಎರ್ನಾಕುಲಂ ಜಿಲ್ಲೆಯ ಕೂತಟ್ಟುಕುಲಂನ ಕಕ್ಕೂರಿನಲ್ಲಿ ಗುರುವಾರ ಬೆಳಿಗ್ಗೆ ಮದುವೆ ಮಂದಿಯನ್ನು ಹೊತ್ತೊಯ್ಯುತ್ತಿದ್ದ ಪ್ರವಾಸಿ ಬಸ್ಸೊಂದು ಪಲ್ಟಿಯಾಗಿ ಪೆಟ್ರೋಲ್ ಬಂಕ್ ಆವರಣಕ್ಕೆ ಡಿಕ್ಕಿಯಾಗಿ ಪಲ್ಟಿಯಾದ ಘಟನೆ ನಡೆದಿದೆ. ಸುಮಾರು 35 ಪ್ರಯಾಣಿಕರಿದ್ದ ಈ ಬಸ್‌ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು, ಮಕ್ಕಳು ಹಾಗೂ ವೃದ್ಧರಿದ್ದರು. ಬಸ್ ಪಲ್ಟಿಯಾದ ಪರಿಣಾಮ ಸುಮಾರು 20 ಪ್ರಯಾಣಿಕರು ಗಾಯಗೊಂಡಿದ್ದು, ಅದೃಷ್ಟವಶಾತ್ ಎಲ್ಲರೂ ಅಪಾಯದಿಂದ ಪಾರಾಗಿದ್ದು ಚಿಕಿತ್ಸೆ…

## [ಕಾನ್ಪುರ &#8211; ತರಭೇತಿ ವಿಮಾನ ಪತನ: ಕರ್ನಾಟಕದ ಪೈಲಟ್ ಅಭಿಷೇಕ್ ಪೂಜಾರಿ ಸೇರಿ ಇಬ್ಬರು ಸಾವು!](https://themangaloremirror.in/uttar-pradesh-kanpur-garg-aviation-plane-crash-karnataka-pilot-abhishek-poojari-dead/)

_2026-08-27 · guru · themangaloremirror.in_

ಕಾನ್ಪುರ ಅಗಸ್ಟ್ 27: ಉತ್ತರ ಪ್ರದೇಶದ ಕಾನ್ಪುರದ ಗಂಗಾ ನದಿಯ ದಡದ ಬಳಿಯ ಹೊಲದಲ್ಲಿ ಗುರುವಾರ ತರಬೇತಿ ವಿಮಾನವೊಂದು ಪತನಗೊಂಡು ಕರ್ನಾಟಕ ಮೂಲದ ಪೈಲಟ್ ಸೇರಿದಂತೆ ಇಬ್ಬರು ದಾರುಣವಾಗಿ ಮೃತಪಟ್ಟಿದ್ದಾರೆ. ಗಾರ್ಗ್ ಏವಿಯೇಷನ್ ತರಬೇತಿ ಸಂಸ್ಥೆಗೆ ಸೇರಿದ ಟ್ವಿನ್-ಎಂಜಿನ್‌ನ 4 ಆಸನಗಳ ತರಬೇತಿ ವಿಮಾನವು ಬೆಳಿಗ್ಗೆ 11:30 ಕ್ಕೆ ಉಡಾವಣೆಗೊಂಡಿತ್ತು. ತರಬೇತಿ ಮುಗಿಸಿ ಬೆಳಿಗ್ಗೆ 11:50 ರ ಸುಮಾರಿಗೆ ಸಂಸ್ಥೆಗೆ ಹಿಂತಿರುಗುತ್ತಿದ್ದಾಗ ವಿಮಾನ ನಿಯಂತ್ರಣ ಕಳೆದುಕೊಂಡು ದಿಢೀರ್ ಪತನಗೊಂಡಿದೆ.…

## [ಅಗಸ್ಟ್ 31 ರ &#8216;ಪುತ್ತೂರು ಚಲೋ&#8217;ಗೆ ಕೌಂಟರ್, &#8216;ಸೌಹಾರ್ದ ರ&#x200d;್ಯಾಲಿ&#8217;ಗೆ ಮುಸ್ಲಿಂ ಯುವಜನ ಪರಿಷತ್ ಕರೆ!](https://themangaloremirror.in/putturu-darbe-incident-muslim-yuvajana-parishat-counter-souharda-rally-august-31/)

_2026-08-27 · guru · themangaloremirror.in_

ಪುತ್ತೂರು ಅಗಸ್ಟ್ 27: ಪುತ್ತೂರಿನ ದರ್ಬೆ ಜೆರಾಕ್ಸ್ ಅಂಗಡಿಯಲ್ಲಿ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದೂ ಜಾಗರಣ ವೇದಿಕೆ ಕರೆ ನೀಡಿದ್ದ ‘ಪುತ್ತೂರು ಚಲೋ’ ಪ್ರತಿಭಟನೆಗೆ ಪ್ರತಿಯಾಗಿ, ದಕ್ಷಿಣ ಕನ್ನಡ ಜಿಲ್ಲಾ ಮುಸ್ಲಿಂ ಯುವಜನ ಪರಿಷತ್ ಅದೇ ದಿನ ಅಂದರೆ ಆಗಸ್ಟ್ 31ರಂದು ‘ಪುತ್ತೂರು ಸೌಹಾರ್ದ ರ‍್ಯಾಲಿ’ ಆಯೋಜಿಸಲು ನಿರ್ಧರಿಸಿದೆ. ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಯುವಜನ ಪರಿಷತ್ ಅಧ್ಯಕ್ಷ ಅಶ್ರಫ್ ಕಲ್ಲೇಗ, “ಪುತ್ತೂರಿನಲ್ಲಿ ನಡೆದ ಸಣ್ಣ ಘಟನೆಯನ್ನು ಕೋಮುವಾದಿ…

## [ಮಂಗಳೂರು ರೈಲ್ವೆ ಸ್ಟೇಷನ್ ಮೈಸೂರು ಡಿವಿಷನ್‌ಗೆ ಸೇರ್ಪಡೆ : ಸಿಪಿಎಂ-ಕಾಂಗ್ರೆಸ್ ವಿರೋಧಕ್ಕೆ ಕಾಸರಗೋಡು ಬಿಜೆಪಿ ಅಧ್ಯಕ್ಷೆ ಅಶ್ವಿನಿ ಕೌಂಟರ್!](https://themangaloremirror.in/mangaluru-railway-station-palakkad-to-mysuru-division-bjp-ashwini-ml/)

_2026-08-27 · guru · themangaloremirror.in_

ಕಾಸರಗೋಡು ಅಗಸ್ಟ್ 27: ಪಾಲಕ್ಕಾಡ್ ರೈಲ್ವೆ ಡಿವಿಷನ್ ವ್ಯಾಪ್ತಿಯಲ್ಲಿರುವ ಮಂಗಳೂರು ರೈಲ್ವೆ ಸ್ಟೇಷನ್ ಅನ್ನು ಕರ್ನಾಟಕದ ಮೈಸೂರು ಡಿವಿಷನ್‌ಗೆ ಹಸ್ತಾಂತರಿಸುವ ಕುರಿತು ಕೇರಳದಲ್ಲಿ ತೀವ್ರ ಚರ್ಚೆ ಹಾಗೂ ರಾಜಕೀಯ ಸಂಘರ್ಷ ಆರಂಭವಾಗಿದೆ. ಮಂಗಳೂರು ಸ್ಟೇಷನ್‌ನಿಂದ ಬರುವ ದೊಡ್ಡ ಮೊತ್ತದ ಆದಾಯದ ಕಾರಣಕ್ಕೆ ಇದನ್ನು ಪಾಲಕ್ಕಾಡ್ ಡಿವಿಷನ್‌ನಲ್ಲೇ ಉಳಿಸಿಕೊಳ್ಳಬೇಕೆಂದು ಸಿಪಿಎಂ, ಕಾಂಗ್ರೆಸ್ ಹಾಗೂ ಮುಸ್ಲಿಂ ಲೀಗ್ ನಾಯಕರು ಜಂಟಿಯಾಗಿ ವಿರೋಧಿಸುತ್ತಿರುವುದಕ್ಕೆ ಕಾಸರಗೋಡು ಜಿಲ್ಲಾ ಬಿಜೆಪಿ ಅಧ್ಯಕ್ಷೆ…

## [ದೆಹಲಿ &#8211; ಮನೆಗೆ ನುಗ್ಗಿ 21 ವರ್ಷದ ಮಾಡೆಲ್ ಇರಿದು ಕೊಲೆ ಮಾಡಿದ ಸ್ನೇಹಿತ](https://themangaloremirror.in/delhi-model-21-stabbed-to-death-at-home/)

_2026-08-27 · guru · themangaloremirror.in_

ನವದೆಹಲಿ ಅಗಸ್ಟ್ 27: ದೆಹಲಿಯ ತಿಲಕ್ ನಗರದ ನ್ಯೂ ಮಹಾವೀರ್ ನಗರ ಪ್ರದೇಶದಲ್ಲಿ 21 ವರ್ಷದ ಮುಸ್ಕಾನ್ ಎಂಬ ಯುವತಿಯನ್ನು ಆಕೆಯ ಮನೆಯೊಳಗೆ ಚಾಕುವಿನಿಂದ ಇರಿದು ದಾರುಣವಾಗಿ ಹತ್ಯೆ ಮಾಡಲಾದ ಭೀಕರ ಘಟನೆ ಸಂಭವಿಸಿದೆ. ವಿದ್ಯಾರ್ಥಿನಿಯಾಗಿದ್ದ ಮುಸ್ಕಾನ್ ಅರೆಕಾಲಿಕ ಮಾಡೆಲ್ ಆಗಿಯೂ ಕೆಲಸ ಮಾಡುತ್ತಿದ್ದರು. ಬುಧವಾರ ಆಕೆ ಬಾಡಿಗೆ ಮನೆಯಲ್ಲಿ ಒಬ್ಬಂಟಿಯಾಗಿದ್ದ ವೇಳೆಯಲ್ಲಿ ಮನೆಗೆ ನುಗ್ಗಿದ ಕಿರಾತಕ, ಚಾಕುವಿನಿಂದ ಪದೇ ಪದೇ ಹಲ್ಲೆ ನಡೆಸಿದ್ದಾನೆ. ತೀವ್ರವಾಗಿ ಗಾಯಗೊಂಡಿದ್ದ ಮುಸ್ಕಾನ್ ಅವರನ್ನು…

## [ಉತ್ತರಪ್ರದೇಶ &#8211; ಜಿಮ್ ಹೊರಗೆ ಹರಿಯಾಣದ ಗಾಯಕ ಯೂಟ್ಯೂಬರ್ ಅಂಕಿತ್ ಬಲಿಯಾನ್‌ ಗುಂಡಿಕ್ಕಿ ಹತ್ಯೆ](https://themangaloremirror.in/haryanvi-singer-shot-20-times-until-dead-outside-gym/)

_2026-08-27 · guru · themangaloremirror.in_

ಶಾಮ್ಲಿ (ಉತ್ತರ ಪ್ರದೇಶ) ಅಗಸ್ಟ್ 27: ಜನಪ್ರಿಯ ಹರಿಯಾಣ ಗಾಯಕ ಮತ್ತು ಯೂಟ್ಯೂಬರ್ 35 ವರ್ಷದ ಅಂಕಿತ್ ಬಲಿಯಾನ್ ಅವರನ್ನು ಜಿಮ್‌ನ ಹೊರಗಡೆ ಬುಧವಾರ ಸಂಜೆ ನಾಲ್ವರು ದುಷ್ಕರ್ಮಿಗಳು ಭೀಕರವಾಗಿ ಗುಂಡಿಕ್ಕಿ ಕೊಲೆ ಮಾಡಿದ್ದಾರೆ. ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯಲ್ಲಿ ಸಂಜೆ ಸುಮಾರು 7 ಗಂಟೆ ವೇಳೆಗೆ ಈ ಘಟನೆ ನಡೆದಿದೆ. ಜಿಮ್ ಮುಗಿಸಿ ಹೊರಬಂದ ಅಂಕಿತ್ ಬಲಿಯಾನ್ ತಮ್ಮ ಕಾರಿನ ಬಳಿಗೆ ತೆರಳುತ್ತಿದ್ದಾಗ ದಾಳಿಕೋರರು ದಿಢೀರ್ ದಾಳಿ ನಡೆಸಿ ಸುಮಾರು 20 ಸುತ್ತು ಗುಂಡು ಹಾರಿಸಿದ್ದಾರೆ. \[…\]

## [AI QA that opens fix PRs (Sponsored)](https://crawlproof.com/a/YuksRWqEbFht)

_2026-08-27 · **Sponsored**_

Run a browser QA from plain-English instructions; get GitHub issues and optional fix PRs.

## [ಮಂಗಳೂರು ರೈಲು ಜಾಲ ಮೈಸೂರು ವಿಭಾಗಕ್ಕೆ ಸೇರ್ಪಡೆ: ಕೇರಳದ ವಿರೋಧ&#8230;ರಾಜ್ಯ ಸರ್ಕಾರದ ಅಧಿಕೃತ ಬೆಂಬಲ ಕೋರಿ ಸಿಎಂ ಗೆ ಸಂಸದ ಕ್ಯಾ. ಚೌಟ ತುರ್ತು ಪತ್ರ!](https://themangaloremirror.in/mangaluru-railway-network-mysuru-division-mp-brijesh-chowta-letter-dk-shivakumar/)

_2026-08-25 · guru · themangaloremirror.in_

ಮಂಗಳೂರು ಅಗಸ್ಟ್ 25: ಮಂಗಳೂರು ವ್ಯಾಪ್ತಿಯ ರೈಲು ಜಾಲವನ್ನು ನೈರುತ್ಯ ರೈಲ್ವೆ ವಲಯಕ್ಕೆ ಸೇರ್ಪಡೆಗೊಳಿಸುವ ಕೇಂದ್ರ ಸರ್ಕಾರವು ಐತಿಹಾಸಿಕ ನಿರ್ಧಾರವನ್ನು ಕೈಗೊಂಡಿದ್ದು, ಈ ಬಗ್ಗೆ ರೈಲ್ವೆ ಮಂಡಳಿ ಹೊರಡಿಸಿರುವ ಅಧಿಸೂಚನೆಯನ್ನು ಕಾರ್ಯರೂಪಕ್ಕೆ ತರುವುದಕ್ಕೆ ರಾಜ್ಯ ಸರ್ಕಾರವು ಪೂರ್ಣ ರೀತಿಯ ಆಡಳಿತಾತ್ಮಕ ಸಹಕಾರ ನೀಡಬೇಕೆಂದು ಕೋರಿ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್‌ ಚೌಟ ಅವರು ಸಿಎಂ ಡಿಕೆ ಶಿವಕುಮಾರ್‌ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ. ಮುಖ್ಯಮಂತ್ರಿಗೆ ಬರೆದಿರುವ ಈ…

## [ಉಡುಪಿ: ದೇವಸ್ಥಾನದ ಕೆರೆಯಲ್ಲಿ ಮುಳುಗಿ ವಿದ್ಯಾರ್ಥಿ ದುರ್ಮರಣ!](https://themangaloremirror.in/udupi-tenkapete-temple-tank-drowning-student-aditya-nayak-death/)

_2026-08-25 · guru · themangaloremirror.in_

ಉಡುಪಿ ಅಗಸ್ಟ್ 25: ತೆಂಕಪೇಟೆಯ ಶ್ರೀಲಕ್ಷ್ಮೀವೆಂಕಟರಮಣ ದೇವಸ್ಥಾನದ ಕೆರೆಯಲ್ಲಿ ಮುಳುಗಿ 15 ವರ್ಷದ ವಿದ್ಯಾರ್ಥಿಯೊಬ್ಬ ಮೃತಪಟ್ಟ ದುರಂತ ಘಟನೆ ಇಂದು ಮಧ್ಯಾಹ್ನ ಸಂಭವಿಸಿದೆ. ಬೆಳ್ಳಂಪಳ್ಳಿ ಕುಕ್ಕಿಕಟ್ಟೆಯ ಕೃಷ್ಣ ನಾಯಕ್ ಎಂಬವರ ಪುತ್ರ ಆದಿತ್ಯ ನಾಯಕ್ (15) ಮೃತಪಟ್ಟ ದುರ್ದೈವಿ. ದೇವಸ್ಥಾನದಲ್ಲಿ ಭಜನೆ ಕಾರ್ಯಕ್ರಮ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಆದಿತ್ಯ ತನ್ನ ಸಂಬಂಧಿಯೊಂದಿಗೆ ದೇವಸ್ಥಾನಕ್ಕೆ ಬಂದಿದ್ದ ಎಂದು ತಿಳಿದುಬಂದಿದೆ. ಭಜನಾ ಕಾರ್ಯಕ್ರಮದ ಪ್ರಯುಕ್ತ ಭಕ್ತರು ಕೆರೆಯಲ್ಲಿ…

## [ಮಿತ್ತೂರು ಸಮೀಪ ಭೀಕರ ರಸ್ತೆ ಅಪಘಾತ: ಚಿಕಿತ್ಸೆ ಫಲಕಾರಿಯಾಗದೆ ಬೈಕ್ ಸವಾರ ಹರ್ಷದ್ ಸಾವು!](https://themangaloremirror.in/mittur-parlotu-road-accident-bike-rider-harshad-mura-death/)

_2026-08-25 · guru · themangaloremirror.in_

ವಿಟ್ಲ ಅಗಸ್ಟ್ 25: ಮಿತ್ತೂರು ಸಮೀಪದ ಪರ್ಲೋಟು ಎಂಬಲ್ಲಿ ಎಲೆಕ್ಟ್ರಿಕ್ ಕಾರು ಹಾಗೂ ದ್ವಿಚಕ್ರ ವಾಹನದ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಯುವಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಕಲ್ಲೇಗ ಸಮೀಪದ ಮುರ ನಿವಾಸಿ, ರಝಾಕ್ ಸಾಹೇಬ್ ಅವರ ಪುತ್ರ ಹರ್ಷದ್ ಮೃತಪಟ್ಟ ದುರ್ದೈವಿ. ಇವರು ಪುತ್ತೂರಿನ ನೆಹರುನಗರದ ‘ರೆಕ್ಸಾ ಶಾಪ್’ನಲ್ಲಿ ಉದ್ಯೋಗಿಯಾಗಿದ್ದರು. ಆಗಸ್ಟ್ 25ರ ಮಂಗಳವಾರದಂದು ಪರ್ಲೋಟು ಬಳಿ ಎಲೆಕ್ಟ್ರಿಕ್ ಕಾರು ಮತ್ತು ಹರ್ಷದ್ ಚಲಾಯಿಸುತ್ತಿದ್ದ…

## [ಪುತ್ತೂರು &#8211; ಮತ್ತೊಂದು ಹೋರಾಟಕ್ಕೆ ಮುಂದಾದ ಹಿಂದೂ ಸಂಘಟನೆಗಳು &#8211; ಆಗಸ್ಟ್ 31ರಂದು &#8216;ಪುತ್ತೂರು ಚಲೋ&#8217;ಗೆ ಕರೆ!](https://themangaloremirror.in/puttur-digital-seva-kendra-clash-august-31-puttur-chalo-call/)

_2026-08-25 · guru · themangaloremirror.in_

ಪುತ್ತೂರು ಅಗಸ್ಟ್ 25: ಪುತ್ತೂರಿನ ಡಿಜಿಟಲ್ ಸೇವಾ ಕೇಂದ್ರದಲ್ಲಿ ನಡೆದ ಗಲಾಟೆ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ಇಂದಿನ ಸ್ವಯಂಪ್ರೇರಿತ ಬಂದ್ ಯಶಸ್ವಿಯಾದ ಬೆನ್ನಲ್ಲೇ ಹಿಂದೂ ಸಂಘಟನೆಗಳು ಮತ್ತೊಂದು ಬೃಹತ್ ಹೋರಾಟಕ್ಕೆ ಮುಹೂರ್ತವಿಟ್ಟಿವೆ. ಆಗಸ್ಟ್ 31ರ ಸೋಮವಾರದಂದು ಬೃಹತ್ ‘ಪುತ್ತೂರು ಚಲೋ’ ಪ್ರತಿಭಟನೆಗೆ ವಿಶ್ವಹಿಂದೂ ಪರಿಷತ್ (VHP), ಹಿಂದೂ ಜಾಗರಣ ವೇದಿಕೆ ಹಾಗೂ ಬಿಜೆಪಿ ಸೇರಿದಂತೆ ಸಂಘ ಪರಿವಾರ ಸಂಘಟನೆಗಳು ಜಂಟಿಯಾಗಿ ಕರೆ ನೀಡಿವೆ. ಪ್ರಕರಣದಲ್ಲಿ ಗಾಯಗೊಂಡು…

## [ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮಳೆ ಅಬ್ಬರ &#8230; ಉಕ್ಕಿ ಹರಿದ ದರ್ಪಣ ತೀರ್ಥ ಹೊಳೆ, ಆದಿ ಸುಬ್ರಹ್ಮಣ್ಯ ಕ್ಷೇತ್ರದ ಬಾಗಿಲ ತನಕ ನುಗ್ಗಿದ ನೀರು!](https://themangaloremirror.in/kukke-subramanya-heavy-rain-darpanatirtha-river-overflow/)

_2026-08-25 · guru · themangaloremirror.in_

ಸುಬ್ರಹ್ಮಣ್ಯ ಅಗಸ್ಟ್ 25: ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ನಾಗ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ಇದರಿಂದಾಗಿ ದರ್ಪಣ ತೀರ್ಥ ಹೊಳೆ ಉಕ್ಕಿ ಹರಿಯುತ್ತಿದೆ. ಸತತ ಮಳೆಯ ಪ್ರಭಾವದಿಂದ ದರ್ಪಣ ತೀರ್ಥ ನದಿಯಲ್ಲಿ ನೀರಿನ ಮಟ್ಟ ಗಣನೀಯವಾಗಿ ಏರಿಕೆಯಾಗಿದ್ದು, ನದಿ ನೀರು ಪ್ರವಾಹದ ರೂಪದಲ್ಲಿ ಬಂದು ಆದಿ ಸುಬ್ರಹ್ಮಣ್ಯ ಕ್ಷೇತ್ರದ ಬಾಗಿಲ ತನಕ ನುಗ್ಗಿದೆ. ಹೊಳೆ ನೀರು ಕ್ಷೇತ್ರ ವ್ಯಾಪ್ತಿಗೆ ನುಗ್ಗಿರುವ ಹಿನ್ನೆಲೆಯಲ್ಲಿ ಕುಕ್ಕೆ…

## [ನಿಯಮ ಉಲ್ಲಂಘಿಸಿ ಗ್ಲಾಸ್ ಹಾಗೂ ನಂಬರ್ ಪ್ಲೇಟ್‌ಗಳಿಗೆ ಸ್ಟಿಕ್ಕರ್ ಅಳವಡಿಸಿ ಸಂಚಾರ: ಪುತ್ತೂರು ಸಂಚಾರ ಪೊಲೀಸರಿಂದ ದಂಡ ಪ್ರಯೋಗ, ಖಡಕ್ ಎಚ್ಚರಿಕೆ!](https://themangaloremirror.in/puttur-traffic-police-fine-vehicles-for-glass-and-number-plate-stickers/)

_2026-08-25 · guru · themangaloremirror.in_

ಪುತ್ತೂರು ಅಗಸ್ಟ್ 25: ವಾಹನ ಚಾಲನೆಗೆ ಅಡ್ಡಿಯಾಗುವಂತೆ ವಿಂಡ್‌ಸ್ಕ್ರೀನ್ ಗ್ಲಾಸ್‌ಗಳಿಗೆ ಸ್ಟಿಕ್ಕರ್ ಅಳವಡಿಸಿ ಹಾಗೂ ನೋಂದಣಿ ಸಂಖ್ಯೆ (ನಂಬರ್ ಪ್ಲೇಟ್) ಮರೆಮಾಚುವಂತೆ ಸ್ಟಿಕ್ಕರ್ ಹಾಕಿ ಸಂಚಾರ ನಿಯಮ ಉಲ್ಲಂಘಿಸುತ್ತಿದ್ದ ವಾಹನಗಳ ವಿರುದ್ಧ ಪುತ್ತೂರು ಸಂಚಾರ ಠಾಣಾ ಪೊಲೀಸರು ಕಟ್ಟುನಿಟ್ಟಿನ ಕಾರ್ಯಾಚರಣೆ ನಡೆಸಿ ದಂಡ ವಿಧಿಸಿದ್ದಾರೆ. ಸಾರ್ವಜನಿಕರು ಯಾವುದೇ ಉತ್ಸವಗಳು, ಹಬ್ಬ ಹರಿದಿನಗಳು ಅಥವಾ ಖಾಸಗಿ ಕಾರ್ಯಕ್ರಮಗಳ ನೆಪದಲ್ಲಿ ಸಂಚಾರ ನಿಯಮಗಳನ್ನು ಉಲ್ಲಂಘಿಸಬಾರದು. ಒಂದು ವೇಳೆ ನಿಯಮ ಮೀರಿ…

## [ಸಾಮಾಜಿಕ ಜಾಲತಾಣದಲ್ಲಿ ಪುತ್ತೂರು ಬಂದ್ ಕರೆ ಸುಳ್ಳು ಸುದ್ದಿ ಪ್ರಸಾರ: ಪುತ್ತೂರು ನಗರ ಠಾಣೆಯಲ್ಲಿ ಮಂಜುನಾಥ್ ಎಂಬಾತನ ವಿರುದ್ಧ ಎಫ್‌ಐಆರ್ ದಾಖಲು!](https://themangaloremirror.in/puttur-bandh-fake-news-fir-against-manjunath-whatsapp-user/)

_2026-08-25 · guru · themangaloremirror.in_

ಪುತ್ತೂರು ಅಗಸ್ಟ್ 25: ಸಾರ್ವಜನಿಕ ಶಾಂತಿ ಹಾಗೂ ಸುವ್ಯವಸ್ಥೆಗೆ ಧಕ್ಕೆ ತರುವಂತಹ ಮತ್ತು ಪ್ರಚೋದನಕಾರಿ ಸುಳ್ಳು ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹರಡಿದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬನ ವಿರುದ್ಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಾಮಾಜಿಕ ಜಾಲತಾಣ ವಾಟ್ಸಾಪ್‌ನಲ್ಲಿ ‘ಮಂಜುನಾಥ್’ ಎಂಬ ಹೆಸರಿನ ಖಾತೆ ಹೊಂದಿರುವ ವ್ಯಕ್ತಿಯು ರಾಜಕೀಯ ಪಕ್ಷವೊಂದರ ಹೆಸರಿನಲ್ಲಿ ದಿನಾಂಕ 26.08.2026 ರಂದು ‘ಪುತ್ತೂರು ಬಂದ್’ ನಡೆಸಲು ಸವಾಲು ಹಾಕುವಂತಹ ಪ್ರಚೋದನಕಾರಿ…

## [ಪುತ್ತೂರಿನಲ್ಲಿ ಸ್ವಯಂಪ್ರೇರಿತ ಬಂದ್ ಹಾಗೂ ಈದ್ ಮಿಲಾದ್: ಎಸ್ಪಿ ಅರುಣ್ ಕುಮಾರ್ ಭೇಟಿ, ಪರಿಶೀಲನೆ](https://themangaloremirror.in/puttur-bandh-and-eid-milad-sp-arun-kumar-inspects-security/)

_2026-08-25 · guru · themangaloremirror.in_

ಪುತ್ತೂರು ಅಗಸ್ಟ್ 25: ಹಿಂದೂ ಜಾಗರಣ ವೇದಿಕೆ ವತಿಯಿಂದ ಪುತ್ತೂರು ಬಂದ್‌ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಹಾಗೂ ಈದ್ ಮಿಲಾದ್ ಹಬ್ಬದ ಸಂಭ್ರಮದ ನಡುವೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಅರುಣ್ ಕುಮಾರ್ ಅವರು ಇಂದು ಪುತ್ತೂರಿಗೆ ಭೇಟಿ ನೀಡಿ ಭದ್ರತಾ ಪರಿಸ್ಥಿತಿಯ ಪರಿಶೀಲನೆ ನಡೆಸಿದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಎಸ್ಪಿ, “ಜಿಲ್ಲಾದ್ಯಂತ ಇಂದು ಈದ್ ಮಿಲಾದ್ ಆಚರಣೆ ಶಾಂತಿಯುತವಾಗಿ ನಡೆಯುತ್ತಿದೆ. ಪುತ್ತೂರಿನಲ್ಲೂ ಬೆಳಿಗ್ಗೆ ಈದ್ ಮಿಲಾದ್ ಮೆರವಣಿಗೆ ಅತ್ಯಂತ…

## [ಮಲ್ಪೆ ಬೋಟ್ ನಲ್ಲಿ ಮೀನುಗಾರಿಕಾ ಕಾರ್ಮಿಕನ ಕೊಲೆ ಪ್ರಕರಣ &#8211; ಪೊಲೀಸರ ಮಿಂಚಿನ ಕಾರ್ಯಾಚರಣೆ ಆರೋಪಿ ಅರೆಸ್ಟ್](https://themangaloremirror.in/malpe-harbor-fisherman-abhishek-murdered-chikkamagaluru/)

_2026-08-25 · guru · themangaloremirror.in_

ಉಡುಪಿ ಅಗಸ್ಟ್ 25: ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಕೊಡವೂರು ಗ್ರಾಮದ ಪಡುಕೆರೆ ದಕ್ಕೆಯಲ್ಲಿ ಲಂಗರು ಹಾಕಲಾಗಿದ್ದ ಬೋಟ್‌ನಲ್ಲಿ ಮೀನುಗಾರಿಕಾ ಕಾರ್ಮಿಕನ ಕೊಲೆ ಮಾಡಿ ಪರಾರಿಯಾಗಲು ಯತ್ನಿಸುತ್ತಿದ್ದ ಆರೋಪಿಯನ್ನು ಮಲ್ಪೆ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ಉಡುಪಿ ರೈಲ್ವೆ ನಿಲ್ದಾಣದಲ್ಲಿ ವಶಕ್ಕೆ ಪಡೆದುಕೊಂಡಿದ್ದಾರೆ. ಮೃತ ಅಭಿಷೇಕ್ ಹಾಗೂ ಆರೋಪಿ ಗೋವಿಂದ ರಾಜು ಇಬ್ಬರೂ ಮಲ್ಪೆ ಬಂದರಿನಲ್ಲಿ ಲಂಗರು ಹಾಕಲಾಗಿದ್ದ ‘ಶ್ರೀ ಮಹಾಕಾಳಿ’ ಬೋಟ್‌ನಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು.…

## [&#8216;ಟಾಕ್ಸಿಕ್&#8217; ಸಿನಿಮಾ ಬಿಡುಗಡೆ ಹಿನ್ನೆಲೆ: ಮಂಗಳೂರಿಗೆ ಆಗಮಿಸಿದ ನಟ ಯಶ್; ಧರ್ಮಸ್ಥಳ ಮಂಜುನಾಥ ಸ್ವಾಮಿ ದರ್ಶನ!](https://themangaloremirror.in/rocking-star-yash-arrives-in-mangaluru-toxic-movie/)

_2026-08-25 · guru · themangaloremirror.in_

ಮಂಗಳೂರು ಅಗಸ್ಟ್ 25: ಸ್ಯಾಂಡಲ್‌ವುಡ್‌ನ ರಾಕಿಂಗ್ ಸ್ಟಾರ್ ಯಶ್ ಇಂದು ಚೆನ್ನೈನಿಂದ ವಿಶೇಷ ವಿಮಾನದ ಮೂಲಕ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದರು. ವಿಮಾನ ನಿಲ್ದಾಣದಲ್ಲಿ ಅಭಿಮಾನಿಗಳು ನೆಚ್ಚಿನ ನಟನಿಗೆ ಅದ್ದೂರಿ ಸ್ವಾಗತ ಕೋರಿದರು. ಮಂಗಳೂರಿಗೆ ಆಗಮಿಸಿರುವ ನಟ ಯಶ್ ಇಂದು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ ಮಂಜುನಾಥ ಸ್ವಾಮಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಅಂದಹಾಗೆ, ತಮ್ಮ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ (Toxic) ಸಿನಿಮಾ…

## [profullstack on Ko‑fi (Sponsored)](https://crawlproof.com/a/NnbhpUNXRs93)

_2026-08-25 · **Sponsored**_

Open the creator's Ko‑fi page.

## [ಗಂಡನ ಮನೆ ತೊರೆದಿದ್ದನ್ನು ದೃಢಪಡಿಸಿದ ಮೇಘಾ ನಾಯರ್: ಬಸ್ ಕಂಡಕ್ಟರ್ ಜೊತೆ ಓಡಿಹೋದ್ರು ಅನ್ನೋ ವದಂತಿಗೆ ಕ್ಲಾರಿಟಿ!](https://themangaloremirror.in/megha-nair-breaks-silence-on-leaving-akhil-nrd-house/)

_2026-08-22 · guru · themangaloremirror.in_

ಕೇರಳ: ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದ್ದ ಅಖಿಲ್ ಎನ್ಆರ್‌ಡಿ ಹಾಗೂ ಮೇಘಾ ನಾಯರ್ ಅವರ ಸಂಬಂಧ ಮುರಿದುಬಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವತಃ ಮೇಘಾ ನಾಯರ್ ಅವರೇ ಮೌನ ಮುರಿದಿದ್ದಾರೆ. ತಾವು ಅಖಿಲ್ ಅವರ ಎನ್‌ಆರ್‌ಡಿ ನಿವಾಸದಿಂದ ಹೊರಟು ಬಂದಿರುವುದು ನಿಜ ಹಾಗೂ ಪ್ರಸ್ತುತ ಅನೂಪ್ ಜೊತೆ ಇರುವುದಾಗಿ ಸ್ಪಷ್ಟಪಡಿಸಿದ್ದಾರೆ. ಇತ್ತೀಚೆಗೆ ಮೇಘಾ ರಾತ್ರಿ ವೇಳೆ ನೈಟಿ ಧರಿಸಿ ಕೈಯಲ್ಲಿ ಬ್ಯಾಗ್ ಹಿಡಿದು ಮನೆಯಿಂದ ಹೊರಡುತ್ತಿರುವ ಸಿಸಿಟಿವಿ ದೃಶ್ಯಾವಳಿಗಳು ಜಾಲತಾಣಗಳಲ್ಲಿ…

## [ಪುತ್ತೂರು ಜೆರಾಕ್ಸ್ ಅಂಗಡಿ ಹಲ್ಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಸಿಸಿಟಿವಿಯಲ್ಲಿ ವಾಗ್ವಾದ, ನೂಕಾಟ ತಳ್ಳಾಟದ ವಿಡಿಯೋ](https://themangaloremirror.in/puttur-darbe-xerox-shop-attack-case-cctv-footage-revealed/)

_2026-08-22 · guru · themangaloremirror.in_

ಪುತ್ತೂರು ಅಗಸ್ಟ್ 22: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ದರ್ಬೆಯಲ್ಲಿರುವ ಜೆರಾಕ್ಸ್ ಅಂಗಡಿಯೊಂದರಲ್ಲಿ ನಡೆದ ಹಲ್ಲೆ ಹಾಗೂ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಸಿಸಿಟಿವಿ (CCTV) ಕ್ಯಾಮೆರಾ ದೃಶ್ಯಾವಳಿಗಳು ಲಭ್ಯವಾಗಿದ್ದು, ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಭಾರೀ ರಾಜಕೀಯ ಹಾಗೂ ಸಾರ್ವಜನಿಕ ವಿವಾದಕ್ಕೆ ಕಾರಣವಾಗಿದ್ದ ಈ ಘಟನೆಯ ಅಸಲಿಯತ್ತು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸಿಸಿಟಿವಿಯಲ್ಲೇನಿದೆ?: ದಾಖಲೆ ಪತ್ರಗಳ ಜೆರಾಕ್ಸ್ ವಿಚಾರಕ್ಕೆ ಸಂಬಂಧಿಸಿದಂತೆ ಅಂಗಡಿ ಮಾಲಕರು…

## [105 ವರ್ಷದ ವೃದ್ಧನಿಗೆ ಜೀವಾವಧಿ ಶಿಕ್ಷೆಯಿಂದ ಮುಕ್ತಿ ನೀಡಿದ ಸುಪ್ರೀಂ ಕೋರ್ಟ್](https://themangaloremirror.in/supreme-court-grants-relief-from-life-imprisonment-to-105-year-old-man/)

_2026-08-22 · guru · themangaloremirror.in_

ನವದೆಹಲಿ, ಆಗಸ್ಟ್ 22: 1988ರ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ 105 ವರ್ಷದ ರಸಿಕ್ ಚಂದ್ರ ಮಂಡಲ್ ಅವರಿಗೆ ಸುಪ್ರೀಂ ಕೋರ್ಟ್ ಜೀವಾವಧಿ ಶಿಕ್ಷೆಯಿಂದ ಮುಕ್ತಿ ನೀಡಿ ಮಹತ್ವದ ಆದೇಶ ಹೊರಡಿಸಿದೆ. ವೃದ್ಧಾಪ್ಯ ಹಾಗೂ ಆರೋಗ್ಯ ಸಮಸ್ಯೆಗಳನ್ನು ಪರಿಗಣಿಸಿದ ನ್ಯಾಯಾಲಯ, ಉಳಿದಿರುವ ಜೀವಾವಧಿ ಶಿಕ್ಷೆಯನ್ನು ಮನ್ನಾ ಮಾಡಿ ಅವರನ್ನು ಮತ್ತೆ ಜೈಲಿಗೆ ಕಳುಹಿಸದಂತೆ ಆದೇಶಿಸಿದೆ. ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯ ರಸಿಕ್ ಚಂದ್ರ ಮೊಂಡಲ್ ಎಂಬುವವರು 1988 ರಲ್ಲಿ ನಡೆದ ಕೊಲೆ…

## [ಅದು ನನ್ನ ಕರ್ತವ್ಯ&#8221;: ಮದುವೆ ಸಡಗರದಲ್ಲೂ ಅಸ್ವಸ್ಥರಿಗೆ ಆಸರೆಯಾಗಿ &#8216; ರಿಯಲ್ ಹೀರೋ&#8217; ಎನಿಸಿಕೊಂಡ ಕಣ್ಣೂರಿನ ವಧು ಡಾ. ಶಿರಿನ್!](https://themangaloremirror.in/bride-doctor-dr-shirin-subair-gives-first-aid-at-wedding-viral-video/)

_2026-08-22 · guru · themangaloremirror.in_

ಕಣ್ಣೂರು ಅಗಸ್ಟ್ 22: ವಿವಾಹದ ಸಂಭ್ರಮದಲ್ಲಿದ್ದ ವೈದ್ಯೆಯೊಬ್ಬರು ತಮ್ಮ ಮದುವೆಯ ಉಡುಪಿನಲ್ಲೇ ಅಸ್ವಸ್ಥಗೊಂಡ ಇಬ್ಬರು ಅಡುಗೆ ಸಿಬ್ಬಂದಿಗೆ ತುರ್ತು ಪ್ರಥಮ ಚಿಕಿತ್ಸೆ ನೀಡಿ, ವೈದ್ಯಕೀಯ ವೃತ್ತಿಧರ್ಮ ಹಾಗೂ ಮಾನವೀಯತೆಯನ್ನು ಎತ್ತಿಹಿಡಿದ ಅಪರೂಪದ ಘಟನೆ ನಡೆದಿದೆ. ವಧುವಿನ ಅಲಂಕಾರದಲ್ಲಿದ್ದ ಡಾ. ಶಿರಿನ್ ಸುಬೈರ್ ಅಸ್ವಸ್ಥರಿಗೆ ಚಿಕಿತ್ಸೆ ನೀಡುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ. ಕಣ್ಣೂರಿನ ಪಾನೂರು ಮೂಲದ ಡಾ. ಶಿರಿನ್ ಸುಬೈರ್, ಒಟ್ಟಪಾಲಂನ…

## [ಕಿರುತೆರೆಯಿಂದ ಪ್ಯಾನ್ ಇಂಡಿಯಾ ಮಟ್ಟಕ್ಕೆ ಕುಂದಾಪುರ ಬೆಡಗಿ: &#8216;ಮಹಾಕಾಳಿ&#8217;ಯಾಗಿ ಮಿಂಚಲು ಸಜ್ಜಾದ ಭೂಮಿ ಶೆಟ್ಟಿ!](https://themangaloremirror.in/bhoomi-shetty-mahakali-pan-india-movie-first-look-poster/)

_2026-08-22 · guru · themangaloremirror.in_

ಬೆಂಗಳೂರು: ‘ಕಿನ್ನರಿ’ ಧಾರಾವಾಹಿ ಹಾಗೂ ‘ಬಿಗ್ ಬಾಸ್ ಕನ್ನಡ 7’ ಮೂಲಕ ಕನ್ನಡಿಗರ ನೆಚ್ಚಿನ ನಟಿಯಾಗಿದ್ದ ಕುಂದಾಪುರದ ಬೆಡಗಿ ಭೂಮಿ ಶೆಟ್ಟಿ ಇದೀಗ ದೊಡ್ಡ ಪರದೆಯ ಮೇಲೆ ಭಾರಿ ಧಮಾಕಾ ಮಾಡಲು ಸಜ್ಜಾಗಿದ್ದಾರೆ. ‘ಹನುಮಾನ್’ ಚಿತ್ರದ ಮೂಲಕ ಭಾರತೀಯ ಚಿತ್ರರಂಗದಲ್ಲಿ ಸಂಚಲನ ಸೃಷ್ಟಿಸಿದ್ದ ನಿರ್ದೇಶಕ ಪ್ರಶಾಂತ್ ವರ್ಮಾ ಕಥೆ ಬರೆದಿರುವ ‘ಮಹಾಕಾಳಿ’ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಭೂಮಿ ಶೆಟ್ಟಿ ನಾಯಕಿಯಾಗಿ ‘ಮಹಾಕಾಳಿ’ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕುಂದಾಪುರ ಮೂಲದ ಭೂಮಿ ಶೆಟ್ಟಿ…

## [ತಿರುಮಲದಲ್ಲಿ ಇನ್ಮುಂದೆ &#8216;ರೋಬೋಟ್ ನಾಯಿ&#8217; ಪಹರೆ: ಭಕ್ತರ ರಕ್ಷಣೆಗೆ ತಿರುಪತಿ ದೇವಸ್ಥಾನದ ಬಿಗ್ ಪ್ಲಾನ್!](https://themangaloremirror.in/robot-dog-to-guard-tirumala-from-now-on-tirupati-temples-big-plan-to-protect-devotees/)

_2026-08-22 · guru · themangaloremirror.in_

ಅಮರಾವತಿ, ಆಗಸ್ಟ್ 22: ತಿರುಮಲ ತಿರುಪತಿ ದೇವಸ್ಥಾನಂ ವನ್ಯಜೀವಿಗಳ ಚಲನವಲನಗಳನ್ನು ಮೇಲ್ವಿಚಾರಣೆ ಮಾಡಲು ಮತ್ತು ಅರಣ್ಯದಿಂದ ಕೂಡಿದ ತಿರುಮಲದಲ್ಲಿ ವನ್ಯಮೃಗಗಳಿಂದ ಭಕ್ತರ ಸುರಕ್ಷತೆಯನ್ನು ಹೆಚ್ಚಿಸಲು ಕೃತಕ ಬುದ್ಧಿಮತ್ತೆ ಚಾಲಿತ ರೋಬೋಟಿಕ್ ನಾಯಿಗಳ ಬಳಕೆಗೆ ಚಿಂತನೆ ನಡೆಸಲಾಗಿದೆ. ದಟ್ಟವಾದ ಅರಣ್ಯ ಪ್ರದೇಶದಲ್ಲಿ ನಿಯೋಜಿಸಲು ಅದರ ಸಿದ್ಧತೆಯನ್ನು ನಿರ್ಣಯಿಸಲು ಟಿಟಿಡಿ ಹಿರಿಯ ಅಧಿಕಾರಿ ಚ. ವೆಂಕಯ್ಯ ಚೌಧರಿ ಮತ್ತು ಇತರ ಅಧಿಕಾರಿಗಳು ಇತ್ತೀಚೆಗೆ ಶ್ರೀ ಪದ್ಮಾವತಿ ಅತಿಥಿ ಗೃಹದಲ್ಲಿ ಚತುರ್ಭುಜ…

## [ಪಾಲ್ಘಾಟ್ ನಿಂದ ಮೈಸೂರು ರೈಲ್ವೆ ವಿಭಾಗಕ್ಕೆ ಮಂಗಳೂರು : ಕೇಂದ್ರದ ನಿರ್ಧಾರ ‘ಏಕಪಕ್ಷೀಯ’ ಎಂದ ಕೇರಳ ನಾಯಕರು; ತಕ್ಷಣದ ಮರುಪರಿಶೀಲನೆಗೆ ಆಗ್ರಹ!](https://themangaloremirror.in/mangaluru-railway-transfer-vd-satheesan-criticizes-railway-board-decision/)

_2026-08-22 · guru · themangaloremirror.in_

ತಿರುವನಂತಪುರಂ ಅಗಸ್ಟ್ 22: ಮಂಗಳೂರು ರೈಲ್ವೇ ಪ್ರದೇಶವನ್ನು ದಕ್ಷಿಣ ರೈಲ್ವೆಯ ಪಾಲಕ್ಕಾಡ್ ವಿಭಾಗದಿಂದ ನೈರ್ಮಲ್ಯ ಮತ್ತು ನೈಋತ್ಯ ರೈಲ್ವೆಯ (SWR) ಮೈಸೂರು ವಿಭಾಗಕ್ಕೆ ವಿಲೀನಗೊಳಿಸುವ ರೈಲ್ವೇ ಮಂಡಳಿಯ ನಿರ್ಧಾರವನ್ನು ಕೇರಳ ಸಿಎಂ ವಿ.ಡಿ. ಸತೀಶನ್ ಶನಿವಾರ ತೀವ್ರವಾಗಿ ಖಂಡಿಸಿದ್ದಾರೆ. ಈ ನಿರ್ಧಾರವು ‘ಏಕಪಕ್ಷೀಯ’ವಾಗಿದ್ದು, ಕೇಂದ್ರ ಸರ್ಕಾರವು ಇದನ್ನು ತಕ್ಷಣವೇ ಮರುಪರಿಶೀಲಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ. ಕೇರಳ ರಾಜ್ಯ ಸರ್ಕಾರಕ್ಕೆ ಯಾವುದೇ ಮುನ್ಸೂಚನೆ ನೀಡದೆ ಅಥವಾ ಚರ್ಚೆ…

## [ಅಸುರಕ್ಷಿತ ಆಹಾರ, ನಕಲಿ ಔಷಧ ತಡೆಗೆ ಜಿಲ್ಲಾ/ತಾಲ್ಲೂಕು ಮಟ್ಟದಲ್ಲಿ &#8216;ವಾಚ್ ಟೀಂ&#8217;: ಸಚಿವ ಯು.ಟಿ. ಖಾದರ್](https://themangaloremirror.in/ut-khader-announces-watch-team-for-food-safety-and-fake-medicines/)

_2026-08-22 · guru · themangaloremirror.in_

ಮಂಗಳೂರು ಅಗಸ್ಟ್ 22: ರಾಜ್ಯದಲ್ಲಿ ಅಸುರಕ್ಷಿತ ಆಹಾರ ಪದಾರ್ಥಗಳು ಹಾಗೂ ನಕಲಿ ಔಷಧಗಳ ಮಾರಾಟಕ್ಕೆ ತಡೆ ನೀಡುವ ನಿಟ್ಟಿನಲ್ಲಿ ಪ್ರತಿಯೊಂದು ಜಿಲ್ಲೆ ಹಾಗೂ ತಾಲ್ಲೂಕು ಮಟ್ಟದಲ್ಲಿ ‘ವಾಚ್ ಟೀಂ’ (Watch Team) ರಚಿಸಲು ಚಿಂತನೆ ನಡೆಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ. ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾರ್ವಜನಿಕರ ಆರೋಗ್ಯ ರಕ್ಷಣೆ ಮತ್ತು ನಕಲಿ ಜಾಲಕ್ಕೆ ಕಡಿವಾಣ ಹಾಕುವುದು ಸರ್ಕಾರದ ಮುಖ್ಯ ಉದ್ದೇಶವಾಗಿದೆ ಎಂದರು.…

## [ಪುತ್ತೂರು ಜೆರಾಕ್ಸ್ ಅಂಗಡಿ ಹಲ್ಲೆ ಪ್ರಕರಣ: ಪೊಲೀಸ್ ಪಕ್ಷಪಾತ ಖಂಡಿಸಿ ಡಿವೈಎಸ್ಪಿಗೆ ಬಿಜೆಪಿ ನಿಯೋಗ ಮನವಿ; ಆರೋಪಿಗಳ ತಕ್ಷಣ ಬಂಧನಕ್ಕೆ ಆಗ್ರಹ!](https://themangaloremirror.in/puttur-xerox-shop-attack-case-bjp-delegation-meets-dysp/)

_2026-08-22 · guru · themangaloremirror.in_

ಪುತ್ತೂರು ಅಗಸ್ಟ್ 22: ನಗರದ ಜೆರಾಕ್ಸ್ ಅಂಗಡಿಯೊಂದರಲ್ಲಿ ನಡೆದ ಹಲ್ಲೆ ಹಾಗೂ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಏಕಪಕ್ಷೀಯವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿ ಬಿಜೆಪಿ ನಿಯೋಗವು ಪುತ್ತೂರು ಡಿವೈಎಸ್ಪಿ ಕಚೇರಿಗೆ ಭೇಟಿ ನೀಡಿ ಮನವಿ ಸಲ್ಲಿಸಿದೆ. ವಿಧಾನಪರಿಷತ್ ಸದಸ್ಯ ಕಿಶೋರ್ ಪುತ್ತೂರು ಹಾಗೂ ಮಾಜಿ ಶಾಸಕ ಸಂಜೀವ ಮಠಂದೂರು ನೇತೃತ್ವದ ನಿಯೋಗವು ಡಿವೈಎಸ್ಪಿ ಪ್ರಮೋದ್ ಕುಮಾರ್ ಅವರನ್ನು ಭೇಟಿಯಾಗಿ ಪ್ರಕರಣದ ಸಮಗ್ರ ತನಿಖೆಗೆ ಆಗ್ರಹಿಸಿತು. ಜೆರಾಕ್ಸ್ ತೆಗೆಯುವ…

## [ಮಂಗಳೂರು ಮೈಸೂರು ವಿಭಾಗಕ್ಕೆ ವಿಲೀನ: &#8216;ಪಾಲಕ್ಕಾಡ್‌ಗೆ ಓಣಂ ಹಬ್ಬದ ದುಃಖದ ಕೊಡುಗೆ&#8217; ಎಂದ ಕೇರಳ; ₹600 ಕೋಟಿ ಆದಾಯ ನಷ್ಟದ ಕಳವಳ!](https://themangaloremirror.in/mangaluru-railway-merger-kerala-palakkad-division-losses-600-crore/)

_2026-08-22 · guru · themangaloremirror.in_

ಮಂಗಳೂರು/ಪಾಲಕ್ಕಾಡ್ ಅಗಸ್ಟ್ 22: ಮಂಗಳೂರು ರೈಲ್ವೇ ಪ್ರದೇಶವನ್ನು ದಕ್ಷಿಣ ರೈಲ್ವೆಯ (Southern Railway) ಪಾಲಕ್ಕಾಡ್ ವಿಭಾಗದಿಂದ ನೈಋತ್ಯ ರೈಲ್ವೆಯ (SWR) ಮೈಸೂರು ವಿಭಾಗಕ್ಕೆ ವರ್ಗಾಯಿಸುವ ಕೇಂದ್ರ ರೈಲ್ವೇ ಮಂಡಳಿಯ ನಿರ್ಧಾರವು ಕರಾವಳಿ ಕರ್ನಾಟಕದಲ್ಲಿ ಹರ್ಷ ಮೂಡಿಸಿದ್ದರೆ, ನೆರೆಯ ಕೇರಳದಲ್ಲಿ ತೀವ್ರ ಆಕ್ರೋಶ ಹಾಗೂ ಕಳವಳಕ್ಕೆ ಕಾರಣವಾಗಿದೆ. “ರೈಲ್ವೇ ಇಲಾಖೆಯು ಕೇರಳಕ್ಕೆ ಓಣಂ ಹಬ್ಬದ ದುಃಖದ ಕೊಡುಗೆ ನೀಡಿದೆ. ಮಂಗಳೂರನ್ನು ಕಳೆದುಕೊಳ್ಳುವುದರೊಂದಿಗೆ 70 ವರ್ಷ ಹಳೆಯ ಪಾಲಕ್ಕಾಡ್ ವಿಭಾಗ…

## [Browse ThreatCrush Modules (Sponsored)](https://crawlproof.com/a/AITmSkjUkzic)

_2026-08-22 · **Sponsored**_

Install community-built security modules to extend real-time threat intelligence and monitoring

## [ಬೆಳ್ತಂಗಡಿ: ಬಾಲಕ ಸುಮಂತ್ ಸಂಶಯಾಸ್ಪದ ಸಾವು ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಬೆಂಗಳೂರಿನಲ್ಲಿ ಕುಟುಂಬಸ್ಥರಿಗೆ ಮಂಪರು ಪರೀಕ್ಷೆ, ಬ್ರೈನ್ ಮ್ಯಾಪಿಂಗ್!](https://themangaloremirror.in/belthangady-sumanth-suspicious-death-case-fsl-brain-mapping-bengaluru/)

_2026-08-22 · guru · themangaloremirror.in_

ಬೆಳ್ತಂಗಡಿ ಅಗಸ್ಟ್ 22: ಗೇರುಕಟ್ಟೆ ಸಮೀಪದ ಸಂಭೋಳ್ಯದ 15 ವರ್ಷದ ಹೈಸ್ಕೂಲ್ ವಿದ್ಯಾರ್ಥಿ ಸುಮಂತ್ ಸಂಶಯಾಸ್ಪದ ಸಾವಿನ ಪ್ರಕರಣದ ನಿಗೂಢತೆಯನ್ನು ಭೇದಿಸಲು ಬೆಳ್ತಂಗಡಿ ಪೊಲೀಸರು ವೈಜ್ಞಾನಿಕ ತನಿಖೆಯನ್ನು ಚುರುಕುಗೊಳಿಸಿದ್ದಾರೆ. ನ್ಯಾಯಾಲಯದ ಪೂರ್ವಾನುಮತಿ ಪಡೆದು ಬೆಂಗಳೂರಿನ ಮಡಿವಾಳದಲ್ಲಿರುವ ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ (FSL) ಮಂಪರು ಪರೀಕ್ಷೆ ಹಾಗೂ ಬ್ರೈನ್ ಮ್ಯಾಪಿಂಗ್ ಪ್ರಕ್ರಿಯೆ ಆರಂಭಿಸಲಾಗಿದೆ. ಬೆಳ್ತಂಗಡಿ ವೃತ್ತ ನಿರೀಕ್ಷಕ ರವಿ ಬಿ.ಎಸ್. ಅವರ ನೇತೃತ್ವದ ಪೊಲೀಸ್ ತಂಡವು ಮೃತ…

## [ಪುತ್ತೂರು: ಜೆರಾಕ್ಸ್ ಅಂಗಡಿಯಲ್ಲಿ ದಾಖಲೆ ಸುಟ್ಟ ವಿಚಾರಕ್ಕೆ ಗಲಾಟೆ, ಪರಸ್ಪರ ಹಲ್ಲೆ: ಕೌಂಟರ್ ಕೇಸ್ ದಾಖಲು, ಪೊಲೀಸ್ ಕರ್ತವ್ಯಕ್ಕೆ ಅಡ್ಡಿಪಡಿಸಿದವರ ವಿರುದ್ಧವೂ ಪ್ರಕರಣ!](https://themangaloremirror.in/puttur-darbe-digital-seva-kendra-altercation-over-burnt-document/)

_2026-08-21 · guru · themangaloremirror.in_

ಪುತ್ತೂರು ಅಗಸ್ಟ್ 21: ದಾಖಲೆಪತ್ರ ಲ್ಯಾಮಿನೇಷನ್ ಮಾಡುವಾಗ ತಾಂತ್ರಿಕ ದೋಷದಿಂದ ಸುಟ್ಟುಹೋದ ವಿಚಾರಕ್ಕೆ ಸಂಬಂಧಿಸಿದಂತೆ ಗ್ರಾಹಕರು ಹಾಗೂ ಅಂಗಡಿ ಮಾಲೀಕರ ನಡುವೆ ವಾಗ್ವಾದ ನಡೆದು ಪರಸ್ಪರ ಹಲ್ಲೆ ನಡೆಸಿಕೊಂಡ ಘಟನೆ ಪುತ್ತೂರಿನ ದರ್ಭೆಯಲ್ಲಿ ಆಗಸ್ಟ್ 21ರ ಮಧ್ಯಾಹ್ನ ಸಂಭವಿಸಿದೆ. ಸುಳ್ಯ ಮಂಡೆಕೋಲು ನಿವಾಸಿಗಳಾದ ಮುಬಾಶಿರ, ಫಾತೀಮಾ ಹಾಗೂ ಮುಬಾಶಿರ್ ಎಂಬುವವರು ಪುತ್ತೂರಿನ ದರ್ಭೆಯಲ್ಲಿರುವ ಅಂಜನಾ ಪೈ ಎಂಬುವರಿಗೆ ಸೇರಿದ “Dream destination digital seva Kendra” ಅಂಗಡಿಗೆ ತೆರಳಿ ಕೆಲವು…

## [ಕರಾವಳಿ ಜನರ ದಶಕಗಳ ಕನಸು ನನಸು &#8211; ಸಂಸದ ಬ್ರಿಜೇಶ್ ಚೌಟ ಶ್ರಮಕ್ಕೆ ಫಲ -ಪಾಲ್ಗಾಟ್ ನಿಂದ ಮುಕ್ತಿ ಪಡೆದ ಮಂಗಳೂರು](https://themangaloremirror.in/mangaluru-railway-network-merged-with-swr-mysuru-division-railway-ministry-approval/)

_2026-08-21 · guru · themangaloremirror.in_

ಮಂಗಳೂರು: ದಕ್ಷಿಣ ರೈಲ್ವೆ ವಲಯದ ವ್ಯಾಪ್ತಿಯಲ್ಲಿರುವ ಮಂಗಳೂರು ಭಾಗದ ರೈಲ್ವೆ ಜಾಲವನ್ನು ನೈಋತ್ಯ ರೈಲ್ವೆ ವಲಯಕ್ಕೆ ಒಳಪಟ್ಟ ಮೈಸೂರು ವಿಭಾಗಕ್ಕೆ ಸೇರ್ಪಡೆಗೊಳಿಸುವುದಕ್ಕೆ ರೈಲ್ವೆ ಸಚಿವಾಲಯದಿಂದ ಒಪ್ಪಿಗೆ ಲಭಿಸಿದ್ದು, ಶೀಘ್ರ ಗೆಜೆಟೆಡ್ ನೋಟಿಫಿಕೇಶನ್ ಹೊರಬೀಳಲಿದೆ. ಇದರೊಂದಿಗೆ, ದಕ್ಷಿಣ ಕನ್ನಡ ಜನರ ಬಹು ವರ್ಷಗಳ ಬಹುದೊಡ್ಡ ರೈಲ್ವೆ ಬೇಡಿಕೆ ಈಡೇರುತ್ತಿದೆ ಎಂದು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್‌ ಚೌಟ ಅವರು ತಿಳಿಸಿದ್ದಾರೆ. ಕೇಂದ್ರ ಸರ್ಕಾರದ ಈ ಐತಿಹಾಸಿಕ ತೀರ್ಮಾನದ ಬಗ್ಗೆ…

## [ಕರಾವಳಿಗರ ದಶಕಗಳ ಬೇಡಿಕೆ ಈಡೇರಿಕೆ: ಕೊನೆಗೂ ಪಾಲಕ್ಕಾಡ್ ವಿಭಾಗದಿಂದ ನೈಋತ್ಯ ರೈಲ್ವೆಯ ಮೈಸೂರು ವಿಭಾಗಕ್ಕೆ ಮಂಗಳೂರು ವಿಲೀನ!](https://themangaloremirror.in/mangaluru-railway-region-merged-with-swr-mysuru-division/)

_2026-08-21 · guru · themangaloremirror.in_

ಮಂಗಳೂರು ಅಗಸ್ಟ್ 21: ದಕ್ಷಿಣ ಕನ್ನಡ ಜಿಲ್ಲೆಯ ರೈಲ್ವೇ ಪ್ರಯಾಣಿಕರ ದಶಕಗಳ ಬಾಕಿ ಬೇಡಿಕೆಯೊಂದು ಕೊನೆಗೂ ಈಡೇರುವ ಹಂತಕ್ಕೆ ತಲುಪಿದೆ. ಪ್ರಸ್ತುತ ದಕ್ಷಿಣ ರೈಲ್ವೆ ವಲಯದ (Southern Railway) ಪಾಲಕ್ಕಾಡ್ ವಿಭಾಗದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮಂಗಳೂರು ರೈಲ್ವೆ ಪ್ರದೇಶವನ್ನು ನೈಋತ್ಯ ರೈಲ್ವೆ ವಲಯದ (SWR) ಮೈಸೂರು ವಿಭಾಗಕ್ಕೆ ಸೇರ್ಪಡೆಗೊಳಿಸಲು ಭಾರತೀಯ ರೈಲ್ವೆ ಇಲಾಖೆ ನಿರ್ಧರಿಸಿದೆ. ಈ ಕುರಿತು ಮಂಗಳೂರು ಸಂಸದ ಕ್ಯಾ. ಬ್ರಿಜೇಶ್‌ ಚೌಟ ಮಾಹಿತಿ ನೀಡಿದ್ದಾರೆ. ಹೊಸ ನಿರ್ಧಾರದಂತೆ…

## [ಮಹಾರಾಷ್ಟ್ರ: ಪ್ರಪಾತಕ್ಕೆ ಹಾರಿದ ಮಗನನ್ನು ರಕ್ಷಿಸಲು ಹೋಗಿ ತಾಯಿ-ತಂದೆಯೂ ಬಲಿ; ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ಸಾವು!](https://themangaloremirror.in/chhatrapati-sambhajinagar-khawadya-mountain-family-tragedy-three-dead/)

_2026-08-21 · guru · themangaloremirror.in_

ಛತ್ರಪತಿ ಸಂಭಾಜಿನಗರ ಅಗಸ್ಟ್ 21: : ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಆತ್ಮಹತ್ಯೆಗೆ ಯತ್ನಿಸುತ್ತಿದ್ದ ಮಗನನ್ನು ಕೊನೆ ಕ್ಷಣದಲ್ಲಿ ರಕ್ಷಿಸಲು ಹೋಗಿ ತಂದೆ-ತಾಯಿ ಇಬ್ಬರೂ ಆಳವಾದ ಕ್ವಾರಿಗೆ ಬಿದ್ದು, ಒಂದೇ ಕುಟುಂಬದ ಮೂವರು ದಾರುಣವಾಗಿ ಮೃತಪಟ್ಟ ಹೃದಯವಿದ್ರಾವಕ ಘಟನೆ ಧುಲೆ-ಸೋಲಾಪುರ ರಾಷ್ಟ್ರೀಯ ಹೆದ್ದಾರಿಯ ಪರ್ವತ ಪ್ರದೇಶದಲ್ಲಿ ನಡೆದಿದೆ. ಇಂದು (ಆಗಸ್ಟ್ 21) ಮಧ್ಯಾಹ್ನ 1 ಗಂಟೆ ಸುಮಾರಿಗೆ ಈ ದುರಂತ ಸಂಭವಿಸಿದೆ. ಮೃತರನ್ನು ಮುರಳೀಧರ್ ದಾಮೋಧರ್ ಚಂದಗುಡೆ (48), ಅವರ ಪತ್ನಿ ಸಂಗೀತಾ…

## [ಕುಂದಾಪುರ: ಸುದ್ಧಿ ಪ್ರಕಟಿಸಿದ ದ್ವೇಷಕ್ಕೆ &#8216;ಕನ್ನಡ ಪ್ರಭ&#8217; ಪತ್ರಕರ್ತನ ಮೇಲೆ ವೈದ್ಯನಿಂದ ಹಲ್ಲೆ; ದೂರು ದಾಖಲು](https://themangaloremirror.in/kundapura-doctor-assaults-kannada-prabha-journalist-srikanth-hemmadi/)

_2026-08-21 · guru · themangaloremirror.in_

ಕುಂದಾಪುರ ಅಗಸ್ಟ್ 21: ಸುದ್ದಿ ಪ್ರಕಟಿಸಿದ ವರದಿಗಾರನ ವಿರುದ್ಧ ದ್ವೇಷ ಸಾಧಿಸಿ ಸರಕಾರಿ ಆಸ್ಪತ್ರೆಯ ವೈದ್ಯ ರೊಬ್ಬರು ಸಾರ್ವಜನಿಕವಾಗಿ ಪತ್ರಕರ್ತನ ಮೇಲೆ ಏಕಾಏಕಿ ಹಲ್ಲೆ ನಡೆಸಿ ಜೀವ ಬೆದರಿಕೆಯೊಡ್ಡಿರುವ ಘಟನೆ ಕುಂದಾಪುರದಲ್ಲಿ ನಡೆದಿದೆ. ‘ಕನ್ನಡ ಪ್ರಭ’ ಪತ್ರಿಕೆಯ ಕುಂದಾಪುರ ಹಾಗೂ ಬೈಂದೂರು ತಾಲೂಕು ವರದಿಗಾರ ಶ್ರೀಕಾಂತ್ ಹೆಮ್ಮಾಡಿ ಹಲ್ಲೆಗೊಳಗಾದ ಪತ್ರಕರ್ತರಾಗಿದ್ದು, ಹಲ್ಲೆ ನಡೆಸಿದ ಕುಂದಾಪುರ ಸರ್ಕಾರಿ ಆಸ್ಪತ್ರೆಯ ಶಸ್ತ್ರಚಿಕಿತ್ಸಕ ಡಾ. ಮಹೇಂದ್ರ ಕುಮಾರ್ ಶೆಟ್ಟಿ ವಿರುದ್ಧ ಕುಂದಾಪುರ…

## [ವೇಣೂರು: ಶಾಲೆಗೆ ಕರೆದೊಯ್ಯುತ್ತಿದ್ದ ಆಟೋ ಚಾಲಕನಿಂದ ಅಪ್ರಾಪ್ತ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ &#8211; ಆರೋಪಿ ಅರೆಸ್ಟ್](https://themangaloremirror.in/venoor-belthangady-pocso-case-auto-driver-jamaluddin-arrested-for-assault/)

_2026-08-21 · guru · themangaloremirror.in_

ಬೆಳ್ತಂಗಡಿ ಅಗಸ್ಟ್ 21: ಬೆಳ್ತಂಗಡಿ ತಾಲೂಕಿನ ವೇಣೂರು ಗ್ರಾಮದಲ್ಲಿ 14 ವರ್ಷದ ಅಪ್ರಾಪ್ತ ಶಾಲಾ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಹಾಗೂ ಅತ್ಯಾಚಾರ ಎಸಗಿದ ಆರೋಪದ ಮೇಲೆ ಆಟೋ ರಿಕ್ಷಾ ಚಾಲಕ ಜಮಾಲುದ್ದೀನ್ ಎಂಬಾತನನ್ನು ವೇಣೂರು ಪೊಲೀಸರು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೊಳಪಡಿಸಿದ್ದಾರೆ. ವೇಣೂರು ನಿವಾಸಿಯಾಗಿರುವ ಆರೋಪಿ ಜಮಾಲುದ್ದೀನ್ ತನ್ನ ಆಟೋ ರಿಕ್ಷಾದಲ್ಲಿ 14 ವರ್ಷದ ಬಾಲಕಿಯನ್ನು ಕಳೆದ ಕೆಲವು ತಿಂಗಳುಗಳಿಂದ ಶಾಲೆಗೆ ಕರೆದೊಯ್ಯುತ್ತಿದ್ದನು. ಈ ವೇಳೆ ಆಕೆಯೊಂದಿಗೆ ಅನುಚಿತವಾಗಿ…

## [ಬ್ಯಾಂಕಾಕ್‌ನಿಂದ ಬೆಂಗಳೂರಿಗೆ ಬಂದ ಪ್ರಯಾಣಿಕರ ಬಳಿ ಚಿನ್ನದ ಪುಡಿ ಪತ್ತೆ](https://themangaloremirror.in/gold-powder-found-with-passengers-arriving-in-bengaluru-from-bangkok/)

_2026-08-21 · guru · themangaloremirror.in_

ಚಿಕ್ಕಬಳ್ಳಾಪುರ, ಆಗಸ್ಟ್ 21: ದೇವನಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬ್ಯಾಂಕಾಕ್‌ನಿಂದ ಬೆಂಗಳೂರಿಗೆ ಬಂದಿದ್ದ ಇಬ್ಬರು ಪ್ರಯಾಣಿಕರ ಬಳಿ ಒಟ್ಟು 260 ಗ್ರಾಂ ಚಿನ್ನದ ಪುಡಿ ಪತ್ತೆಯಾಗಿದ್ದು, CISF ಸಿಬ್ಬಂದಿ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಕೆಐಎ ಟರ್ಮಿನಲ್-1ರಲ್ಲಿ CISF ಸಿಬ್ಬಂದಿ ಪ್ರಯಾಣಿಕರನ್ನು ತಪಾಸಣೆ ನಡೆಸುತ್ತಿದ್ದ ವೇಳೆ ಚಿನ್ನದ ಪುಡಿ ಪತ್ತೆಯಾಗಿದೆ. ಲಕ್ಷ್ಮಣ ಹಾಗೂ ರಾಘವೇಂದ್ರ ಎಂಬ ಇಬ್ಬರು ಪ್ರಯಾಣಿಕರು ಪ್ಯಾಂಟ್‌ನ ಸೊಂಟದ ಭಾಗದಲ್ಲಿ ವಿಶೇಷವಾಗಿ…

## [ದಕ್ಷಿಣಭಾರತ ಚಿತ್ರರಂಗದ ಹಿರಿಯ ನಟಿ ಪದ್ಮಶ್ರೀ ಪುರಸ್ಕೃತೆ ಸಾಹುಕಾರ್ ಜಾನಕಿ ಇನ್ನಿಲ್ಲ](https://themangaloremirror.in/legendary-actress-sowcar-janaki-passes-away-at-94-in-chennai/)

_2026-08-21 · guru · themangaloremirror.in_

ಚೆನ್ನೈ ಅಗಸ್ಟ್ 21: ದಕ್ಷಿಣ ಭಾರತೀಯ ಚಿತ್ರರಂಗದ ದಂತಕಥೆ, ಪದ್ಮಶ್ರೀ ಪುರಸ್ಕೃತೆ ಸಾಹುಕಾರ್ ಜಾನಕಿ (94) ಅವರು ಅನಾರೋಗ್ಯದ ಕಾರಣ ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ವಿಧಿವಶರಾಗಿದ್ದಾರೆ. ತೀವ್ರ ನಿಗಾ ಘಟಕದಲ್ಲಿ (ICU) ಚಿಕಿತ್ಸೆ ಪಡೆಯುತ್ತಿದ್ದ ಅವರು ಇಂದು ಕೊನೆಯುಸಿರೆಳೆದಿದ್ದು, ಚಿತ್ರರಂಗದ ಗಣ್ಯರು ಹಾಗೂ ಅಭಿಮಾನಿಗಳು ತೀವ್ರ ಕಂಬನಿ ಮಿಡಿದಿದ್ದಾರೆ. 1931 ಡಿಸೆಂಬರ್ 12 ರಂದು ಜನಿಸಿದ ಜಾನಕಿ ಅವರು ತಮ್ಮ ಸುದೀರ್ಘ ವೃತ್ತಿಜೀವನದಲ್ಲಿ ತಮಿಳು, ತೆಲುಗು,…

## [ಬೆಂಗಳೂರು: ಹೊಸೂರು ರಸ್ತೆಯಲ್ಲಿ ₹9 ಕೋಟಿ ನಗದು ಸಾಗಿಸುತ್ತಿದ್ದ ಕಾರು ಸೀಜ್, ತಮಿಳುನಾಡಿನಲ್ಲೂ ದಾಳಿ ನಡೆಸಿ ₹1.3 ಕೋಟಿ ಜಪ್ತಿ!](https://themangaloremirror.in/bangalore-electronic-city-it-raid-9-crore-cash-seized-in-creta-car/)

_2026-08-21 · guru · themangaloremirror.in_

ಬೆಂಗಳೂರು: ನಗರದ ಹೊರವಲಯದ ಎಲೆಕ್ಟ್ರಾನಿಕ್ ಸಿಟಿ ಎಕ್ಸ್‌ಪ್ರೆಸ್‌ವೇ ಟೋಲ್ ಪ್ಲಾಜಾ ಬಳಿ ಭಾರಿ ಪ್ರಮಾಣದ ಅಕ್ರಮ ನಗದು ಸಾಗಿಸುತ್ತಿದ್ದ ಕಾರನ್ನು ತಡೆದ ಪೊಲೀಸರು ಹಾಗೂ ಆದಾಯ ತೆರಿಗೆ (IT) ಇಲಾಖೆ ಅಧಿಕಾರಿಗಳು ಕಾರಿನಲ್ಲಿದ್ದ ₹9 ಕೋಟಿ ನಗದನ್ನು ವಶಪಡಿಸಿಕೊಂಡಿದ್ದಾರೆ. ಆಗಸ್ಟ್ 18ರಂದು ಬೆಂಗಳೂರಿನ ಆದಾಯ ತೆರಿಗೆ ಇಲಾಖೆಯ ಯೂನಿಟ್-22ರ ಉಪನಿರ್ದೇಶಕರಾದ ಜಗದೀಶ್ ಅವರಿಂದ ಲಭಿಸಿದ ಖಚಿತ ಮಾಹಿತಿ ಮೇರೆಗೆ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯ ಬೀಟ್ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ.…

## [ಕೇರಳ &#8211; ಒಂದೂವರೆ ವರ್ಷದ ಮಗುವಿನ ಸಾವಿನ ಪ್ರಕರಣ &#8211; ಚಾರ್ಜ್ ಶೀಟ್ ನಲ್ಲಿ ಮಗುವಿನ ಮೇಲಾದ ಕ್ರೌರ್ಯ ಬಿಚ್ಚಿಟ್ಟ ಪೊಲೀಸರು](https://themangaloremirror.in/kerala-nedumangad-baby-arshith-murder-chargesheet-filed-mother-and-partner-accused/)

_2026-08-21 · guru · themangaloremirror.in_

ನೆಡುಮಂಗಡ್ (ಕೇರಳ) ಅಗಸ್ಟ್ 21: ಕೇರಳದ ನೆಡುಮಂಗಡ್‌ನಲ್ಲಿ ಒಂದೂವರೆ ವರ್ಷದ ಕಂದಮ್ಮ ಅರ್ಷಿತ್ ಮೇಲೆ ನಡೆದ ಭೀಕರ ಹಲ್ಲೆ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನ್ಯಾಯಾಲಯಕ್ಕೆ ಬೃಹತ್ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದಾರೆ. ಮಗುವಿನ ಹೆತ್ತ ತಾಯಿ ಅಖಿಲಾ ಚಂದ್ರನ್ ಹಾಗೂ ಆಕೆಯ ಲಿವ್-ಇನ್ ಪಾರ್ಟ್‌ಫರ್ ಎ. ಅಶ್ಕರ್ ಈ ಭೀಕರ ಕೃತ್ಯದ ಪ್ರಮುಖ ಆರೋಪಿಗಳಾಗಿದ್ದಾರೆ. ಆರೋಪಿಗಳನ್ನು ಬಂಧಿಸಿದ 83 ನೇ ದಿನದಂದು ನೆಡುಮಂಗಾಡ್ ಉಪ ಪೊಲೀಸ್ ವರಿಷ್ಠಾಧಿಕಾರಿ (DySP) ಟಿ. ಬಿನುಕುಮಾರ್ ಅವರು…

## [ಸಾಲು ಸಾಲು ಹಬ್ಬಗಳ ಹಿನ್ನೆಲೆ: ಮಂಗಳೂರು ನಗರದಲ್ಲಿ ಮೂಲಸೌಕರ್ಯ, ದಾರಿ ದೀಪ ಹಾಗೂ ರಸ್ತೆ ದುರಸ್ತಿಗೆ ಶಾಸಕ ವೇದವ್ಯಾಸ ಕಾಮತ್ ಆಗ್ರಹ!](https://themangaloremirror.in/mangaluru-mla-vedavyas-kamath-writes-to-dc-mcc-commissioner-for-festival-preparations/)

_2026-08-21 · guru · themangaloremirror.in_

ಮಂಗಳೂರು ಅಗಸ್ಟ್ 21: ಮುಂಬರುವ ಶ್ರೀಕೃಷ್ಣ ಜನ್ಮಾಷ್ಟಮಿ, ಗಣೇಶ ಚತುರ್ಥಿ ಹಾಗೂ ಮಂಗಳೂರು ದಸರಾ ಸೇರಿದಂತೆ ಪ್ರಮುಖ ಹಬ್ಬಗಳ ಪ್ರಯುಕ್ತ ಮಂಗಳೂರು ನಗರ ವ್ಯಾಪ್ತಿಯಲ್ಲಿ ಸಾರ್ವಜನಿಕ ಹಿತದೃಷ್ಟಿಯಿಂದ ಅಗತ್ಯ ಮುಂಜಾಗೃತಾ ಹಾಗೂ ನವೀಕರಣ ಕಾಮಗಾರಿಗಳನ್ನು ಆದ್ಯತೆಯ ಮೇರೆಗೆ ಕೈಗೊಳ್ಳುವಂತೆ ಶಾಸಕ ಡಿ. ವೇದವ್ಯಾಸ ಕಾಮತ್ ಅವರು ಜಿಲ್ಲಾಧಿಕಾರಿಗಳು ಹಾಗೂ ಮಹಾನಗರ ಪಾಲಿಕೆ ಆಯುಕ್ತರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ. ಸಂಪರ್ಕ ರಸ್ತೆಗಳ ಕಾಮಗಾರಿ, ಎಲ್ಲಾ ರಸ್ತೆಗಳ ದುರಸ್ತಿ, ಶೋಭಾ ಯಾತ್ರೆ ಸಾಗುವ…

## [ಬೆಳ್ಳಾರೆ ಪೋಕ್ಸೋ ಪ್ರಕರಣ: ಅಜ್ಜನಿಗೆ 5 ವರ್ಷ ಜೈಲು, ₹35,000 ದಂಡ ವಿಧಿಸಿದ ಕೋರ್ಟ್!](https://themangaloremirror.in/bellare-pocso-case-64-year-old-abdulla-sentenced-to-5-years-jail-mangaluru-court/)

_2026-08-21 · guru · themangaloremirror.in_

ಮಂಗಳೂರು ಅಗಸ್ಚ್ 21: ಬೆಳ್ಳಾರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2020ರಲ್ಲಿ ದಾಖಲಾಗಿದ್ದ ಅಪ್ರಾಪ್ತ ವಯಸ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಮತ್ತು ಬೆದರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗೆ 5 ವರ್ಷ ಜೈಲು, ₹35,000 ದಂಡ ವಿಧಿಸಿದ ಕೋರ್ಟ್ ಆದೇಶ ಹೊರಡಿಸಿದೆ. ಕಡಬ ತಾಲೂಕಿನ ಕುದ್ಮಾರು ನಿವಾಸಿ ಅಬ್ದುಲ್ಲಾ (64) ಎಂಬಾತನಿಗೆ ಮಂಗಳೂರಿನ 7ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು 5 ವರ್ಷಗಳ ಸಾಧಾರಣ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ನೀಡಿದೆ. ಆರೋಪಿ ಅಬ್ದುಲ್ಲಾ…

## [ಮಂಗಳೂರು: ಸಿಮ್ ಸ್ವಾಪ್ ಮೂಲಕ ಹಿರಿಯ ನಾಗರಿಕನ ಬ್ಯಾಂಕ್ ಖಾತೆಗಳಿಂದ ₹2.12 ಕೋಟಿಗೂ ಅಧಿಕ ಹಣ ಲೂಟಿ ಹೊಡೆದ ಸೈಬರ್ ವಂಚಕರು](https://themangaloremirror.in/mangaluru-cyber-crime-senior-citizen-loses-2-12-crore-in-sim-swap-fraud/)

_2026-08-20 · guru · themangaloremirror.in_

ಮಂಗಳೂರು ಅಗಸ್ಟ್ 20: ಸಿಮ್ ನೆಟ್‌ವರ್ಕ್ ಹ್ಯಾಕ್ ಮಾಡಿ ಅಕ್ರಮವಾಗಿ ಆನ್‌ಲೈನ್ ನೆಟ್ ಬ್ಯಾಂಕಿಂಗ್ ಅಕ್ಸೆಸ್ ಪಡೆದ ಸೈಬರ್ ವಂಚಕರ ತಂಡವೊಂದು ಮಂಗಳೂರಿನ ನಿವೃತ್ತ ಖಾಸಗಿ ಉದ್ಯೋಗಿಯೊಬ್ಬರ ಬ್ಯಾಂಕ್ ಗಳಿಂದ ಬರೋಬ್ಬರಿ ₹2.12 ಕೋಟಿಗೂ ಅಧಿಕ ಹಣವನ್ನು ದೋಚಿರುವ ಸೈಬರ್ ಅಪರಾಧ ಪ್ರಕರಣ ಬೆಳಕಿಗೆ ಬಂದಿದೆ. ಮುಂಬೈನಲ್ಲಿ 50 ವರ್ಷಗಳ ಕಾಲ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿ ನಿವೃತ್ತರಾಗಿ ಪ್ರಸ್ತುತ ಮಂಗಳೂರಿನಲ್ಲಿ ನೆಲೆಸಿರುವ 78 ವರ್ಷದ ವೃದ್ಧರೊಬ್ಬರು ಈ ಸೈಬರ್ ವಂಚನೆಗೆ ಬಲಿಯಾಗಿದ್ದಾರೆ.…

## [ಬಾಳೆಹಣ್ಣು ಮಂಡಿ ಮೇಲೆ ದಾಳಿ : ರಾಸಾಯನಿಕಯುಕ್ತ ಬಾಳೆಹಣ್ಣುಗಳ ನಾಶ ಪಡಿಸಿದ ಅಧಿಕಾರಿಗಳು](https://themangaloremirror.in/chemical-banna-ride/)

_2026-08-20 · guru · themangaloremirror.in_

ಉಡುಪಿ ಆಗಸ್ಟ್ 20 : ಉಡುಪಿಯ ಅಲೆವೂರು, ಕೆಮ್ತೂರು ಹಾಗೂ ದುಗ್ಲಿಪದವು ಪರಿಸರದಲ್ಲಿ ಸಹಾಯಕ ಕಮೀಷನರ್ ರಶ್ಮಿ ಎಸ್.ಆರ್, ಆಹಾರ ಸುರಕ್ಷತಾ ಅಧಿಕಾರಿ ವಿವೇಕ್, ಉಡುಪಿ ತಹಶೀಲ್ದಾರ್ ಗುರುರಾಜ್ ಹಾಗೂ ವಿವಿಧ ಅಧಿಕಾರಿಗಳ ತಂಡಗಳು ಇಂದು ಬಾಳೆಹಣ್ಣು ದಾಸ್ತಾನು ಕೇಂದ್ರಗಳ ಮೇಲೆ ಇಂದು ದಿಢೀರ್ ದಾಳಿ ನಡೆಸಿ, ಸುಮಾರು 10 ಕೆ.ಜಿ ಯಷ್ಟು ರಾಸಾಯನಿಕ ಬಳಸಿದ ಬಾಳೆಹಣ್ಣುಗಳನ್ನು ಜಪ್ತಿ ಮಾಡಿ, ನಾಶಪಡಿಸಿದರು. ಜೊತೆಗೆ ಬಾಳೆಹಣ್ಣಿಗೆ ಬಳಸುತ್ತಿದ್ದ, ಆರೋಗ್ಯಕ್ಕೆ ಹಾನಿಕಾರಕ ರಾಸಾಯನಿಕಗಳು, ಕೃತಕ ಬಣ್ಣ…

## [ಉಡುಪಿ ಉದ್ಯಮಿ ಡೇವಿಡ್ ಡಿಸೋಜಾ ಕೊಲೆ ಪ್ರಕರಣ: ಉತ್ತರಾಖಂಡದಲ್ಲಿ ಮತ್ತೊಬ್ಬ ಆರೋಪಿ ಅರೆಸ್ಟ್, ಬಂಧಿತರ ಸಂಖ್ಯೆ 8ಕ್ಕೆ ಏರಿಕೆ!](https://themangaloremirror.in/udupi-david-dsouza-murder-case-8th-accused-suraj-kumar-arrested-uttarakhand/)

_2026-08-20 · guru · themangaloremirror.in_

ಉಡುಪಿ ಅಗಸ್ಟ್ 20: ಕಾಪು ತಾಲೂಕಿನ ಮುದರಂಗಡಿ ಜಂಕ್ಷನ್‌ನಲ್ಲಿ ನಡೆದ ಪ್ರಿನ್ಸ್ ಎಂಟರ್‌ಪ್ರೈಸಸ್ ಮಾಲಕ ಡೇವಿಡ್ ಡಿಸೋಜಾ (David d’souza) ಅವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೃತ್ಯಕ್ಕೆ ಸಂಚು ರೂಪಿಸಿ ಹಣಕಾಸು ನೆರವು ನೀಡಿದ್ದ ಮತ್ತೋರ್ವ ಆರೋಪಿಯನ್ನು ಪೊಲೀಸರು ಉತ್ತರಾಖಂಡ ರಾಜ್ಯದ ನೈನಿತಾಲ್‌ನಲ್ಲಿ ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಬಿಹಾರ ರಾಜ್ಯದ ಶೇಖ್‌ಪುರ ಮೂಲದ ಸೂರಜ್ ಕುಮಾರ್ (31) ಎಂದು ಗುರುತಿಸಲಾಗಿದೆ. ಈತನ ಬಂಧನದೊಂದಿಗೆ ಈ ಕೊಲೆ ಪ್ರಕರಣದಲ್ಲಿ ಇದುವರೆಗೆ…

## [ಲಕ್ನೋದಲ್ಲಿ ಭೀಕರ ಜೋಡಿ ಕೊಲೆ: ಹೆಂಡತಿ, ತಂಗಿಯನ್ನು ಗುಂಡಿಕ್ಕಿ ಕೊಂದು &#8230;ದುರಂತ ಅಂತ್ಯಕಂಡ ಬ್ಯಾಂಕ್ ಉದ್ಯೋಗಿ](https://themangaloremirror.in/sbi-employee-shoots-wife-outside-icici-bank-in-lucknow-kills-sister-then-self/)

_2026-08-20 · guru · themangaloremirror.in_

ಲಕ್ನೋ ಅಗಸ್ಟ್ 20: ಕೌಟುಂಬಿಕ ಕಲಹ ಹಾಗೂ ದಾಂಪತ್ಯ ವಿವಾದದ ಹಿನ್ನೆಲೆಯಲ್ಲಿ ಎಸ್‌ಬಿಐ ಉದ್ಯೋಗಿಯೊಬ್ಬರು ಬ್ಯಾಂಕ್‌ ಅಧಿಕಾರಿಯಾಗಿದ್ದ ತಮ್ಮ ಪತ್ನಿಯನ್ನು ಕಚೇರಿ ಮುಂಭಾಗದಲ್ಲೇ ಗುಂಡಿಕ್ಕಿ ಕೊಂದ ಬಳಿಕ, ಮನೆಗೆ ತೆರಳಿ ತಂಗಿಗೂ ಗುಂಡಿಟ್ಟು ಕೊಂದು ತಾವೂ ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ಲಕ್ನೋದ ಗೋಮತಿ ನಗರದಲ್ಲಿ ಗುರುವಾರ ಮಧ್ಯಾಹ್ನ ಸಂಭವಿಸಿದೆ. ಸ್ಟೇಟ್‌ ಬ್ಯಾಂಕ್ ಆಫ್ ಇಂಡಿಯಾ (SBI) ಉದ್ಯೋಗಿಯಾಗಿದ್ದ ಮಾನಸ್ ವಾಜಪೇಯಿ (38) ಕೊಲೆ ಮಾಡಿ ಆತ್ಮಹತ್ಯೆಗೆ ಶರಣಾದ ದುರಂತ ನಾಯಕ.…

## [ಶಾಕಿಂಗ್ ಘಟನೆ: ಹೊಮ್ ವರ್ಕ್ ಮಾಡಿಲ್ಲ ಎಂದು ಯುಕೆಜಿ ಮಗುವಿನ ಕೆನ್ನೆಗೆ ಬಾರಿಸಿದ ಶಿಕ್ಷಕಿ&#8230;ತರಗತಿಯಲ್ಲೇ ಕುಸಿದುಬಿದ್ದು ಮಗು ಸಾವು](https://themangaloremirror.in/ukg-student-dies-after-teacher-tries-to-strip-slaps-him-in-visakhapatnam-classroom/)

_2026-08-20 · guru · themangaloremirror.in_

ವಿಶಾಖಪಟ್ಟಣಂ: ಹೋಮ್‌ವರ್ಕ್ ಪರಿಶೀಲಿಸುವಾಗ ಶಿಕ್ಷಕಿಯೊಬ್ಬರು ತರಗತಿಯಲ್ಲೇ 6 ವರ್ಷದ ಬಾಲಕನನ್ನು ಬಟ್ಟೆ ಕಳಚಲು ಯತ್ನಿಸಿ, ಕೆನ್ನೆಗೆ ಹೊಡೆದ ಪರಿಣಾಮ ಆತ ಸಾವನ್ನಪ್ಪಿರುವ ಭೀಕರ ಘಟನೆ ಆಂಧ್ರಪ್ರದೇಶದ ವಿಶಾಖಪಟ್ಟಣಂನ ‘ಒನ್ ಟೌನ್’ ಪ್ರದೇಶದಲ್ಲಿ ಗುರುವಾರ (ಆಗಸ್ಟ್ 20) ಸಂಭವಿಸಿದೆ. ಲಿಟಲ್ ಗಾರ್ಡನ್ಸ್ ಶಾಲೆಯ ಯುಕೆಜಿ ವಿದ್ಯಾರ್ಥಿ ಪ್ರಣಯ್ ತೇಜ ಮೃತಪಟ್ಟ ಬಾಲಕ. ಮಗುವನ್ನು ಕಿಂಗ್ ಜಾರ್ಜ್ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಆತ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ಶಿಕ್ಷಕಿಯ…

## [ಮುಲ್ಕಿ ಚಂದ್ರಮೌಳೇಶ್ವರ ದೇವಸ್ಥಾನದ ಕಾಣಿಕೆ ಹುಂಡಿ ಕಳ್ಳತನ: ಆರೋಪಿ ಅರೆಸ್ಟ್](https://themangaloremirror.in/mulki-chandramouleshwara-temple-kanike-hundi-theft-accused-arrested/)

_2026-08-20 · guru · themangaloremirror.in_

ಮಂಗಳೂರು: ಮುಲ್ಕಿ ಪೊಲೀಸ್‌ ಠಾಣಾ ವ್ಯಾಪ್ತಿಯ ಪ್ರಸಿದ್ಧ ಚಂದ್ರಮೌಳೇಶ್ವರ ದೇವಸ್ಥಾನದಲ್ಲಿ ಸಿಸಿಟಿವಿ ಕ್ಯಾಮೆರಾ ತಿರುಗಿಸಿ ಕಾಣಿಕೆ ಹುಂಡಿಯ ಬೀಗ ಮುರಿದು ಕಳ್ಳತನ ಮಾಡಿದ್ದ ಆರೋಪಿಯನ್ನು ಮಂಗಳೂರು ನಗರದ ಮುಲ್ಕಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ ಕಳುವಾಗಿದ್ದ ನಗದನ್ನು ವಶಪಡಿಸಿಕೊಳ್ಳಲಾಗಿದೆ. ಕೊಡಗು ಜಿಲ್ಲೆ ಮಡಿಕೇರಿ ತಾಲೂಕಿನ ಅಯ್ಯಂಗೇರಿ ಅಜ್ಜಿಮಡ ನಿವಾಸಿ ರವಿಕುಮಾರ ಅಲಿಯಾಸ್ ರವಿ ಹೆಚ್.ಜಿ. ಬಂಧಿತ ಆರೋಪಿ. ಆಗಸ್ಟ್ 18ರ ಮಧ್ಯರಾತ್ರಿ ಚಂದ್ರಮೌಳೇಶ್ವರ ದೇವಸ್ಥಾನದ ಮಾಡಿನ…

## [ಬಂಟ್ವಾಳದಲ್ಲಿ ಹಾಡಹಗಲೇ ಬೈಕ್ ಸವಾರನಿಗೆ ತಲವಾರು ತೋರಿಸಿ ₹8 ಲಕ್ಷಕ್ಕೂ ಅಧಿಕ ಹಣ ದೋಚಿದ ಖದೀಮರು!](https://themangaloremirror.in/bantwal-maninalkuru-robbery-bike-rider-threatened-with-talwar-lakhs-stolen/)

_2026-08-20 · guru · themangaloremirror.in_

ಬಂಟ್ವಾಳ ಅಗಸ್ಟ್ 20: ಮಣಿಹಳ್ಳ-ಕಕ್ಯಪದವು ರಸ್ತೆಯ ಮಣಿನಾಲ್ಕೂರು ಗ್ರಾಮದ ಮುಲ್ಕಾಜೆಮಾಡ ಎಂಬ ನಿರ್ಜನ ಪ್ರದೇಶದಲ್ಲಿ ಗುರುವಾರ (ಆಗಸ್ಟ್ 20) ಹಾಡಹಗಲೇ ಬೈಕ್ ಸವಾರನನ್ನು ಅಡ್ಡಗಟ್ಟಿದ ನಾಲ್ವರು ದುಷ್ಕರ್ಮಿಗಳು ತಲವಾರು ತೋರಿಸಿ ಬೆದರಿಸಿ ಲಕ್ಷಾಂತರ ರೂಪಾಯಿ ದರೋಡೆ ನಡೆಸಿ ಪರಾರಿಯಾಗಿದ್ದಾರೆ. ಸುರತ್ಕಲ್ ನಿವಾಸಿ ಮಯ್ಯದಿ ಎಂಬವರೇ ದರೋಡೆಗೊಳಗಾದ ಬೈಕ್ ಸವಾರ. ವಿವಿಧ ಅಂಗಡಿಗಳಿಗೆ ಹೋಲ್‌ಸೇಲ್ ಆಧಾರದಲ್ಲಿ ಪೂರೈಸಿದ್ದ ಸಿಮೆಂಟ್ ವ್ಯಾಪಾರದ ನಗದು ಹಣವನ್ನು ವಸೂಲಿ ಮಾಡಿಕೊಂಡು ಮಯ್ಯದಿ ಅವರು…

