# #crime (news sources) — RSS Amplifier

Recent posts from the 1 feeds in the RSS Amplifier directory that cover #crime.

Page: <https://rssamplifier.com/topics/sharp-crime/news>  
Feed: <https://rssamplifier.com/topics/sharp-crime/news.md>

---

## [ಕೊಕ್ಕಡ: ಸಮಾಜ ಸೇವಕರಾಗಿ ಗುರುತಿಸಿಕೊಂಡಿದ್ದ, ಪಾರ್ಕಿಂಗ್ ಹರೀಶ್ ಅನಾರೋಗ್ಯದಿಂದ ನಿಧನ](https://newsnotout.com/2026/08/22/parking-harish-no-more/)

_2026-08-22 · Team Newsnotout · Newsnotout_

ನ್ಯೂಸ್ ನಾಟೌಟ್ : ಕೊಕ್ಕಡದ ಕೊಲ್ಲಾಜೆಪಲ್ಕೆ ನಿವಾಸಿ ಪಾರ್ಕಿಂಗ್ ಹರೀಶ್ (36) ಅವರು ಅನಾರೋಗ್ಯದಿಂದ ಆ. 20ರಂದು ರಾತ್ರಿ ನಿಧನರಾದರು. ಎಲ್ಲರೊಂದಿಗೆ ಆತ್ಮೀಯವಾಗಿ ಬೆರೆಯುತ್ತಿದ್ದ ಹರೀಶ್ ಅವರು ಉತ್ತಮ ಸಮಾಜ ಸೇವಕರಾಗಿ ಗುರುತಿಸಿಕೊಂಡಿದ್ದರು. ಸರಳ, ಸ್ನೇಹಪರ ವ್ಯಕ್ತಿತ್ವದ ಅವರು ಸ್ಥಳೀಯವಾಗಿ ಅನೇಕರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು. ಅವರ ಅಕಾಲಿಕ ನಿಧನಕ್ಕೆ ಕುಟುಂಬಸ್ಥರು, ಬಂಧುಗಳು, ಸ್ನೇಹಿತರು ಹಾಗೂ ಸ್ಥಳೀಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. The post ಕೊಕ್ಕಡ: ಸಮಾಜ…

## [ಟಾಕ್ಸಿಕ್ ಕೌಂಟ್‌ಡೌನ್&#8230; ವಿಶ್ವ &#038; ಕರ್ನಾಟಕದಲ್ಲಿ ಹೊಸ ದಾಖಲೆ ಬರೆದ ಯಶ್ &#8216;ಟಾಕ್ಸಿಕ್&#8217;!ಟಿಕೆಟ್ ಬುಕ್ಕಿಂಗ್ ಶುರುವಾಗಿ, ಸ್ವಲ್ಪ ಹೊತ್ತಿನಲ್ಲೇ ಎಲ್ಲಾ ಟಿಕೆಟ್ ಸೋಲ್ಡ್‌ ಔಟ್!!](https://newsnotout.com/2026/08/22/countdown-to-yash-starrer-toxic-on-26-august-2026-is-underway-with-only-04-days-to-go-as-of-21-august/)

_2026-08-22 · Team Newsnotout · Newsnotout_

ನ್ಯೂಸ್ ನಾಟೌಟ್ : ಯಶ್ ನಾಯಕತ್ವದ ಟಾಕ್ಸಿಕ್ ಸಿನಿಮಾ ಭಾರೀ ಕುತೂಹಲ ಕೆರಳಿಸುತ್ತಿದೆ. ಆಗಸ್ಟ್ 26ರಂದು ಟಾಕ್ಸಿಕ್ ಸಿನಿಮಾ ದೇಶ ವಿದೇಶಗಳಲ್ಲಿ ಬಿಡುಗಡೆಯಾಗಲಿದೆ. ಕನ್ನಡ ಸೇರಿದಂತೆ ಹಲವು ಭಾರತೀಯ ಭಾಷೆ, ಹಾಲಿವುಡ್‌ನಲ್ಲೂ ಟ್ರೇಲರ್ ಬಿಡುಗಡೆಯಾಗಿದೆ. ಟಾಕ್ಸಿಕ್ ಸಿನಿಮಾ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ. ಬಿಡುಗಡೆಗೂ ಮೊದಲೇ ಯಶ್ ಟಾಕ್ಸಿಕ್ ಸಿನಿಮಾ ದಾಖಲೆ ಬರೆದಿದೆ. 2.6 ಲಕ್ಷಕ್ಕೂ ಅಧಿಕ ಟಿಕೆಟ್ ಮಾರಾಟವಾಗಿದೆ. ಅಡ್ವಾನ್ಸ್ ಬುಕಿಂಗ್ ಮೂಲಕ ಈ ಚಿತ್ರವು ಭರ್ಜರಿ ಆದಾಯ ಗಳಿಸಿದೆ....…

## [ಕುಕ್ಕೆ ಸುಬ್ರಹ್ಮಣ್ಯದಲ್ಲಿ ಅ.23 ಹಾಗೂ 24ರಂದು ಸರ್ಪಸಂಸ್ಕಾರ,ಆಶ್ಲೇಷ ಬಲಿ, ನಾಗಪ್ರತಿಷ್ಠೆ ಸೇವೆ ಇಲ್ಲ](https://newsnotout.com/2026/08/22/tomorrow-and-there-after-tomorrow-there-will-be-no-ashlesha-bali-service-sarpa-samskara-in-kukke/)

_2026-08-22 · Team Newsnotout · Newsnotout_

ನ್ಯೂಸ್ ನಾಟೌಟ್ : ದ.ಕ. ಜಿಲ್ಲೆಯಲ್ಲಿರುವ ಪ್ರಸಿದ್ಧ ದೇವಸ್ಥಾನ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಆ.23 ಹಾಗೂ 24ರಂದು ಸರ್ಪಸಂಸ್ಕಾರ, ಆಶ್ಲೇಷ ಬಲಿ ಮತ್ತು ನಾಗಪ್ರತಿಷ್ಠೆ ಸೇವೆಗಳು ನಡೆಯುವುದಿಲ್ಲ.ಆ.23ರಂದು ಏಕಾದಶಿ ಹಾಗೂ ಆ.24ರಂದು ಅತಿರಿಕ್ತ ಏಕಾದಶಿ ಇರುವುದರಿಂದ ಪೂಜೆ ನಡೆಯುವುದಿಲ್ಲ.. ಉಳಿದಂತೆ ದೇವರ ದರ್ಶನ, ಮಂಗಳಾರತಿ, ಅರ್ಚನೆ, ಮಹಾಪೂಜೆ ಸಹಿತ ಇತರ ಎಲ್ಲ ಪೂಜಾ ಸೇವೆಗಳು ಎಂದಿನಂತೆ ನಡೆಯಲಿವೆ ಎಂದು ದೇಗುಲದ ಪ್ರಕಟಣೆ ತಿಳಿಸಿದೆ. The post ಕುಕ್ಕೆ…

## [ಮೈಸೂರು: ದೇಶದಲ್ಲಿಯೇ ಮೊದಲು; ಬಸವನಹುಳು ಸಾಕಾಣಿಕೆ ಕೇಂದ್ರ ಆರಂಭ](https://newsnotout.com/2026/08/22/state-news-the-countrys-first-snail-farming-center-in-mysore/)

_2026-08-22 · Team Newsnotout · Newsnotout_

ನ್ಯೂಸ್ ನಾಟೌಟ್ : ನಗರದ ಜೆಎಸ್ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿ ವತಿಯಿಂದ ಬಸವನಹುಳು ಸಾಕಾಣಿಕೆ ಕೇಂದ್ರ ಆರಂಭಿಸಲಾಗಿದೆ. ಇದು ಅಕಾಡೆಮಿಕ್ ಆಗಿ ಈ ಪ್ರಯೋಗ ದೇಶದಲ್ಲೇ ಮೊದಲು ಎನ್ನಲಾಗಿದೆ. ಕೇಂದ್ರ ಸರ್ಕಾರದ ಬಯೋಟೆಕ್ನಾಲಜಿ ಇಂಡಸ್ಟ್ರಿ ರಿಸರ್ಚ್ ಅಸಿಸ್ಟೆನ್ಸ್ ಕೌನ್ಸಿಲ್(ಬಿಐಆರ್‌ಸಿ), ಬಯೋಟೆಕ್ನಾಲಜಿ ಇಗ್ನಿಷನ್ ಗ್ರಾಂಟ್ (ಬಿಐಜಿ), ಕರ್ನಾಟಕ ಸ್ಟಾರ್ಟ್ ಆಫ್ ಎಲಿವೆಟ್ ಅನುದಾನದಿಂದ ಜೆಎಸ್ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯ (ಜೆಎಸ್ಎಸ್ ಎಎಚ್‌ಇಆರ್) ಸ್ಕೂಲ್ ಆಫ್…

## [ಸುಳ್ಯ :ಎನ್ನೆoಪಿಯು ವಿದ್ಯಾರ್ಥಿಗಳು ರನ್ನರ್ಸ್.](https://newsnotout.com/2026/08/21/sullia-nmc-student-achievement/)

_2026-08-21 · Team Newsnotout · Newsnotout_

ನ್ಯೂಸ್ ನಾಟೌಟ್ : ಸುಳ್ಯ ನೆಹರು ಮೆಮೋರಿಯಲ್ ಕಾಲೇಜು ವತಿಯಿಂದ ನಡೆದ ಪಿಯು ವಿಭಾಗದ ಅಂತರ್ ಕಾಲೇಜು ಸ್ಪರ್ಧೆಗಳಲ್ಲಿ ಸುಳ್ಯ ನೆಹರು ಮೆಮೋರಿಯಲ್ ಪಿಯು ಕಾಲೇಜು ವಿದ್ಯಾರ್ಥಿಗಳು ರನ್ನರ್ಸ್ ಆಗಿ ಹೊರ ಹೊಮ್ಮಿದ್ದಾರೆ.ಸೆಮಿ ಕ್ಲಾಸಿಕಲ್ ನೃತ್ಯ (ಪ್ರ )ಸ್ಪಿಲಿಟ್ ಸ್ಕ್ರೀನ್ (ಪ್ರ )ಮಾಡ್ ಆಡ್ (ದ್ವಿ )ಬಹುಮಾನ ಟ್ರೋಫಿ, ನಗದು ಒಳಗೊಂಡಿದೆ.ವಿಜೇತ ವಿದ್ಯಾರ್ಥಿಗಳನ್ನು ಆಡಳಿತ ಮಂಡಳಿ, ಪ್ರಾಚಾರ್ಯರು, ಆಡಳಿತಾಧಿಕಾರಿ, ಬೋಧಕ ಬೋಧಕೇತರ ವೃಂದದವರು ಅಭಿನಂದಿಸಿದ್ದಾರೆ. The post ಸುಳ್ಯ :ಎನ್ನೆoಪಿಯು…

## [ಇಂತಹ ಯಾವುದಕ್ಕೂ ತಲೆ ಕೆಡಿಸಿಕೊಳ್ಳುವುದಿಲ್ಲ&#8217;: ವೃತ್ತಕ್ಕೆ ಎಷ್ಟು ಸೈಡ್ಸ್ ಇರುತ್ತದೆ ಎಂದು ಕೇಳಿ ಟ್ರೋಲ್‌ಗೆ ಗುರಿಯಾಗಿದ್ದ ವಿನಯ್ ಗೌಡ!](https://newsnotout.com/2026/08/21/bigg-boss-kannada-former-contestant-vinay-gowda-defends-circle-has-two-sides-question-hits-back-at-trolls/)

_2026-08-21 · Team Newsnotout · Newsnotout_

ನ್ಯೂಸ್ ನಾಟೌಟ್ : ಇತ್ತೀಚೆಗೆ ನಡೆದ ‘ಬಿಗ್ ಬಾಸ್ ಅಗ್ನಿಪರೀಕ್ಷೆ’ ಸಂಚಿಕೆಯಲ್ಲಿ ತಾವು ಕೇಳಿದ್ದ ಪ್ರಶ್ನೆಯೊಂದಕ್ಕೆ ಟ್ರೋಲ್‌ಗಳಿಗೆ ಗುರಿಯಾಗಿದ್ದ ಬಿಗ್‌ಬಾಸ್ ಮಾಜಿ ಸ್ಪರ್ಧಿ ವಿನಯ್ ಗೌಡ ಇದೀಗ ಖಡಕ್ ತಿರುಗೇಟು ನೀಡಿದ್ದು, ಇಂತಹ ಯಾವುದೇ ವಿಚಾರಗಳಿಗೂ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದಿದ್ದಾರೆ. ಆಡಿಷನ್‌ಗೆಂದು ಆಗಮಿಸಿದ್ದ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿಯೊಬ್ಬರಿಗೆ ವಿನಯ್ ಗೌಡ ಅವರು ‘ವೃತ್ತವೊಂದಕ್ಕೆ ಎಷ್ಟು ಸೈಡ್ಸ್ ಇರುತ್ತದೆ?’ ಎಂದು ಪ್ರಶ್ನಿಸಿದ್ದರು. ಅದಕ್ಕೆ ಆ ಯುವಕ…

## [ಕಟ್ ಆಗಿ ಹೊಳೆಗೆ ಬಿದ್ದಿದ್ದ ವಿದ್ಯುತ್ ತಂತಿಯನ್ನ ಈಜಿ ಮರು ಜೋಡಣೆ: ಲೈನ್‌ಮ್ಯಾನ್ ಸಾಹಸಕ್ಕೆ ಭಾರಿ ಶ್ಲಾಘನೆ](https://newsnotout.com/2026/08/21/mangalurus-lineman-repair-electric-wire/)

_2026-08-21 · Team Newsnotout · Newsnotout_

ನ್ಯೂಸ್ ನಾಟೌಟ್ : ಹೊಳೆಗೆ ಕಡಿದು ಬಿದ್ದ ವಿದ್ಯುತ್ ತಂತಿಯನ್ನು ಲೈನ್‌ಮನ್ ಈಜಿ ಮರು ಜೋಡಿಸಿದ ಪ್ರಸಂಗ ಮಂಗಳೂರಿನ ಬೆಟ್ಟಂಪಾಡಿಯ ಧೂಮಡ್ಕ ಎಂಬಲ್ಲಿ ನಡೆದಿದೆ. ಧೂಮಡ್ಕದಲ್ಲಿ ಹಾದುಹೋಗುವ ಹೊಳೆಗೆ ವಿದ್ಯುತ್ ತಂತಿ ಬಿದ್ದಿತ್ತು. ಬೆಟ್ಟಂಪಾಡಿ ಮೆಸ್ಕಾಂ ಸಿಬ್ಬಂದಿ ನವಾಜ್ ಎಂಬ ಲೈನ್‌ಮನ್ ಅದನ್ನು ಮರುಜೋಡಿಸಿದ್ದಾರೆ. ಲೈನ್‌ಮನ್ ಉಕ್ಕಿ ಹರಿಯುತ್ತಿದ್ದ ನದಿಯಲ್ಲಿ ಸಾಹಸಮಯ ಕರ್ತವ್ಯ ಪ್ರದರ್ಶಿಸಿದ್ದಾರೆ. ಈ ದೃಶ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. The post ಕಟ್ ಆಗಿ ಹೊಳೆಗೆ…

## [ಸುಳ್ಯ: ಪೋಕ್ಸೋ ಪ್ರಕರಣದ ಆರೋಪಿಗೆ 5 ವರ್ಷಗಳ ಕಾಲ ಜೈಲು ಶಿಕ್ಷೆ](https://newsnotout.com/2026/08/21/jail-punishment/)

_2026-08-21 · Team Newsnotout · Newsnotout_

ನ್ಯೂಸ್ ನಾಟೌಟ್ : ಪೋಕ್ಸೋ ಪ್ರಕರಣದ ಆರೋಪಿಗೆ ಪೋಕ್ಸೋ ವಿಶೇಷ ನ್ಯಾಯಾಲಯ 5 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. The post ಸುಳ್ಯ: ಪೋಕ್ಸೋ ಪ್ರಕರಣದ ಆರೋಪಿಗೆ 5 ವರ್ಷಗಳ ಕಾಲ ಜೈಲು ಶಿಕ್ಷೆ appeared first on Newsnotout .

## [ಹೋಂ ವರ್ಕ್‌ ಮಾಡದಿದ್ದಕ್ಕೆ ಶಿಕ್ಷಕಿಯಿಂದ ಹಲ್ಲೆ; ಕುಸಿದುಬಿದ್ದು ವಿದ್ಯಾರ್ಥಿ ಸಾವು](https://newsnotout.com/2026/08/21/6-year-old-dies-after-being-slapped-by-teacher/)

_2026-08-21 · Team Newsnotout · Newsnotout_

ನ್ಯೂಸ್ ನಾಟೌಟ್ : ಹೋಂ ವರ್ಕ್‌ ಮಾಡದಿದ್ದಕ್ಕೆ ಶಿಕ್ಷಕಿ ಹಲ್ಲೆ ನಡೆಸಿದ ಪರಿಣಾಮ ಕುಸಿದು ಬಿದ್ದು ವಿದ್ಯಾರ್ಥಿ ಸಾವನ್ನಪ್ಪಿರುವ ಘಟನೆ ಅಮರಾವತಿ ವಿಶಾಖಪಟ್ಟಣಂನ (Visakhapatnam) ಖಾಸಗಿ ಶಾಲೆಯಲ್ಲಿ ನಡೆದಿದೆ. ಶಿಕ್ಷಕಿ ಕೋಲಿನಿಂದ ಹೊಡೆದ ನಂತರ ವಿದ್ಯಾರ್ಥಿ ತೇಜ ಕುಸಿದು ಬಿದ್ದ. ಆತನನ್ನು ಕಿಂಗ್‌ ಜಾರ್ಜ್‌ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಬಾಲಕ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಪೊಲೀಸರು ಮತ್ತು ಕಂದಾಯ ಅಧಿಕಾರಿಗಳು ಸಾವಿನ ಕುರಿತು ಪರಿಶೀಲನೆ ನಡೆಸಿದ್ದಾರೆ.…

## [ಸುಳ್ಯ: ಜ್ವರ ಉಲ್ಬಣಗೊಂಡು ಮಂಗಳೂರಿನ ಆಸ್ಪತ್ರೆಯಲ್ಲಿ ಎಲೆಕ್ಟ್ರಿಷಿಯನ್ ಪುರುಷೋತ್ತಮ ರಾವ್ ನಿಧನ](https://newsnotout.com/2026/08/21/sullia-kerpala-purushottama-rao-no-more/)

_2026-08-21 · Team Newsnotout · Newsnotout_

ನ್ಯೂಸ್ ನಾಟೌಟ್ : ಸುಳ್ಯ ಕೇರ್ಪಳ ನಿವಾಸಿ, ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡುತ್ತಿದ್ದ ಪುರುಷೋತ್ತಮ ರಾವ್ ಅವರು ಅನಾರೋಗ್ಯದಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ಆ.20ರಂದು ರಾತ್ರಿ ನಿಧನರಾದರು. ಸುಮಾರು 15 ದಿನಗಳ ಹಿಂದೆ ಪುರುಷೋತ್ತಮ ರಾವ್ ಅವರಿಗೆ ಜ್ವರ ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಸುಳ್ಯದಲ್ಲೇ ಔಷಧ ಪಡೆದು ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಮೂರು ದಿನಗಳ ಹಿಂದೆ ಜ್ವರ ಉಲ್ಬಣಗೊಂಡ ಹಿನ್ನೆಲೆಯಲ್ಲಿ ಅವರನ್ನು ಸುಳ್ಯದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ವೈದ್ಯರ ಸಲಹೆಯ…

## [Trade Bitcoin and Ethereum Today (Sponsored)](https://crawlproof.com/a/LbljMW33EDQQ)

_2026-08-21 · **Sponsored**_

Buy, sell, and margin trade BTC and ETH with EUR, USD, CAD, GBP, or JPY.

## [ಅಡಿಕೆ ತೋಟಕ್ಕೆ ನುಗ್ಗಿದ ಬಸ್‌ , ಓರ್ವ ಸಾವು, 15ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ](https://newsnotout.com/2026/08/21/bus-accident-in-bhadravati-more-than-15-passengers-injured/)

_2026-08-21 · Team Newsnotout · Newsnotout_

ನ್ಯೂಸ್ ನಾಟೌಟ್ : ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್‌ ರಸ್ತೆ ಬದಿಯ ಅಡಿಕೆ ತೋಟಕ್ಕೆ ನುಗ್ಗಿದ (Bus Accident) ಘಟನೆ ಭದ್ರಾವತಿ (Bhadravati) ತಾಲೂಕಿನ ಕೂಡ್ಲಿಗೆರೆ ಸಮೀಪ ನಡೆದಿದೆ. ಈ ಅಪಘಾತದಲ್ಲಿ 15ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ. ಬಸ್‌ ಭದ್ರಾವತಿಯಿಂದ ಚನ್ನಗಿರಿ ಕಡೆಗೆ ಪ್ರಯಾಣಿಕರನ್ನು ಕರೆದೊಯ್ಯುತ್ತಿತ್ತು. ಈ ವೇಳೆ ಎದುರಿನಿಂದ ಬೈಕ್‌ ಅಡ್ಡ ಬಂದಿದೆ. ಬಸ್‌ ಚಾಲಕ ಬೈಕ್‌ ಸವಾರನನ್ನು ಬಚಾವ್‌ ಮಾಡಲು ಯತ್ನಿಸಿದ್ದಾನೆ. ಆದರೆ ಬಸ್‌ ಬೈಕ್‌ಗೆ... The post…

## [ಇಂದು ನಾಡಿನಾದ್ಯಂತ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ; ಹೂ-ಹಣ್ಣು ಬೆಲೆ ಗಗನಕ್ಕೇರಿದ್ರೂ, ಮುಗಿಬಿದ್ದು ಖರೀದಿಸಿದ ಜನ!](https://newsnotout.com/2026/08/21/varamahalakshmi-festival-in-karnataka/)

_2026-08-21 · Team Newsnotout · Newsnotout_

ನ್ಯೂಸ್ ನಾಟೌಟ್ : ಶ್ರಾವಣ ಮಾಸದ ದೊಡ್ಡ ಹಬ್ಬವೇ ವರಮಹಾಲಕ್ಷ್ಮಿ (Varamahalakshmi Festival) ಹಬ್ಬ. ಖರೀದಿಗೆಂದು ಬೆಂಗಳೂರಿನ ಮಾರ್ಕೆಟ್‌ಗೆ ಜನಸಾಗರವೇ ಹರಿದು ಬರ್ತಿದೆ. ಅದರಲ್ಲೂ ಕೆ.ಆರ್ ಮಾರ್ಕೇಟ್‌ನಲ್ಲಂತೂ ಹೂವು, ಹಣ್ಣುಗಳ ಖರೀದಿಗೆ ಜನ ಮುಗಿಬಿದ್ದಿದ್ದಾರೆ. ಹೂವಿನ ಮಾರ್ಕೆಟ್‌ನಲ್ಲಿ ಕಾಲಿಡಲು ಜಾಗವಿಲ್ಲದಷ್ಟು ಜನ ಲಗ್ಗೆಯಿಟ್ಟಿದ್ದಾರೆ. ಸಾವಿರದ ಗಟಿದಾಡಿದೆ ಹೂವುಗಳ ಬೆಲೆ. ಇದರ ಮಧ್ಯೆಯೂ ಬೆಂಗಳೂರಲ್ಲಿ ಜನ ಸಂಭ್ರಮದಿಂದ ಹಬ್ಬ ಆಚರಣೆಗೆ ಸಿದ್ಧರಾಗಿದ್ದಾರೆ. ಹಣ್ಣುಗಳ ಬೆಲೆಯಲ್ಲೂ…

## [ಉಡುಪಿ: ಕಾಂಗ್ರೆಸ್ ಮುಖಂಡ ಡೇವಿಡ್ ಡಿಸೋಜಾ ಹತ್ಯೆ ಕೇಸ್ , ಉತ್ತರಾಖಂಡ್‌ನಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಅರೆಸ್ಟ್‌](https://newsnotout.com/2026/08/21/udupi-david-dsouza-murder-case-another-accused-arrested-in-uttarakhand/)

_2026-08-21 · Team Newsnotout · Newsnotout_

ನ್ಯೂಸ್ ನಾಟೌಟ್ : ಕಾಂಗ್ರೆಸ್ ಮುಖಂಡ ಡೇವಿಡ್ ಡಿಸೋಜಾ ಹತ್ಯೆ ಪ್ರಕರಣದಲ್ಲಿ ಮತ್ತೋರ್ವ ಆರೋಪಿಯನ್ನು ಕುಂದಾಪುರ ಪೊಲೀಸರು ಬಂಧಿಸಿದ್ದಾರೆ. ಬಿಹಾರ ಮೂಲದ ಸೂರಜ್ (31) ಬಂಧಿತ ಆರೋಪಿ. ಉತ್ತರಾಖಂಡ್‌ನ ನೈನಿತಾಲ್ ಜಿಲ್ಲೆಯ ಹಲ್ದ್ವಾನಿ ಬಳಿ ವಿಶೇಷ ಕಾರ್ಯಾಚರಣೆ ನಡೆಸಿ, ತಲೆಮರೆಸಿಕೊಂಡಿದ್ದ ಸೂರಜ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಈ ಮೂಲಕ ಶೂಟೌಟ್ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 8ಕ್ಕೆ ಏರಿಕೆಯಾಗಿದೆ. ಸೂರಜ್‌ ವಿರುದ್ಧ ಈ ಪ್ರಕರಣದಲ್ಲಿ ಒಳಸಂಚು ರೂಪಿಸಿ, ಹಣಕಾಸು ಪೂರೈಕೆ ಮಾಡಿದ್ದ…

## [ಇಂಜಿನಿಯರಿಂಗ್‌ ಸ್ಟೂಡೆಂಟ್‌ಗೆ ವಿಚಿತ್ರ ಪ್ರಶ್ನೆ ಕೇಳಿ ಹಿಗ್ಗಾಮುಗ್ಗಾ ಟ್ರೋಲ್‌ ಆದ ವಿನಯ್‌ ಗೌಡ!ಒಂದು ಸರ್ಕಲ್‌ಗೆ ಎಷ್ಟು ಸೈಡ್ಸ್‌ ಇರುತ್ತವೆ?ಸರಿಯಾದ ಮಾಹಿತಿಯಿಲ್ಲದೇ ಪ್ರಶ್ನೆ ಕೇಳಬಾರದು ಎಂದ ನೆಟ್ಟಿಗರು!](https://newsnotout.com/2026/08/20/bigg-boss-kannada-bigg-boss-kannada-13-agni-parikshe-judge-vinay-gowda-circle-question-trolled/)

_2026-08-20 · Team Newsnotout · Newsnotout_

ನ್ಯೂಸ್ ನಾಟೌಟ್ : ʻಕಲರ್ಸ್‌ ಕನ್ನಡʼ ರಿಲೀಸ್‌ ಮಾಡಿರುವ ಹೊಸ ಪ್ರೋಮೋದಲ್ಲಿ ಇಂಜಿನಿಯರಿಂಗ್‌ ವಿದ್ಯಾರ್ಥಿಯೊಬ್ಬ ಡ್ಯಾನ್ಸ್‌ ಮಾಡ್ತಾ ಅಗ್ನಿಪರೀಕ್ಷೆಯ ವೇದಿಕೆಗೆ ಎಂಟ್ರಿ ಕೊಟ್ಟಿದ್ದಾನೆ. ಆದರೆ, ಜಡ್ಜ್‌ಗಳಾಗದ ಹಿರಿಯ ನಟಿ ಶ್ರುತಿ, ʻಬಿಗ್‌ ಬಾಸ್‌ʼ ಮಾಜಿ ಸ್ಪರ್ಧಿ ವಿನಯ್‌ ಗೌಡ ಮತ್ತು ನಿರೂಪಕ ನಿರಂಜನ್‌ ದೇಶಪಾಂಡೆ ಇದನ್ನ ಪರಿಗಣಿಸುವುದಿಲ್ಲ. ಇದರಿಂದ ಬೇಸರಗೊಂಡ ಯುವಕ, “ನಾನು ಅಷ್ಟೊಂದು ಚೆನ್ನಾಗಿ ಡ್ಯಾನ್ಸ್‌ ಮಾಡಿಕೊಂಡು ಬಂದರೂ ಯಾರೂ ಕೇರ್‌ ಮಾಡಲಿಲ್ಲಲ್ವಾ?” ಎಂದು ನೇರವಾಗಿಯೇ…

## [ವಿಚಿತ್ರ ಕಾಯಿಲೆಯಿಂದ 5 ವರ್ಷಗಳಿಂದ ಕೆರೆಯಲ್ಲೇ ಬದುಕುತ್ತಿದ್ದ ಬಾಲಕ; ವಿಡಿಯೋ ವೈರಲ್ ಬೆನ್ನಲ್ಲೇ ಅನಂತ್ ಅಂಬಾನಿ ಆಸರೆ! ಏರ್‌ಲಿಫ್ಟ್ ಮಾಡಿಸಿ ಉಚಿತ ಚಿಕಿತ್ಸೆ!!](https://newsnotout.com/2026/08/20/anant-ambani-airlifts-bengal-boy-iqbal-living-in-pond-mumbai-free-treatment-reliance-hospital-articleshow-sgiegga/)

_2026-08-20 · Team Newsnotout · Newsnotout_

ನ್ಯೂಸ್ ನಾಟೌಟ್ : ದೇಶದಲ್ಲೇ ಅತಿ ವಿಚಿತ್ರ ಕಾಯಿಲೆಯಿಂದಾಗಿ ಮನೆಯ ಬದಲು ದಿನದ 24 ಗಂಟೆಯೂ ಕೆರೆಯ ನೀರಿನಲ್ಲೇ ವಾಸಿಸುತ್ತಿದ್ದ ಪಶ್ಚಿಮ ಬಂಗಾಳದ ಬಡ ಬಾಲಕನೊಬ್ಬನ ನೆರವಿಗೆ ರಿಲಯನ್ಸ್ ಇಂಡಸ್ಟ್ರೀಸ್‌ನ ಕಾರ್ಯನಿರ್ವಾಹಕ ನಿರ್ದೇಶಕ ಅನಂತ್ ಅಂಬಾನಿ (Anant Ambani) ಧಾವಿಸಿದ್ದಾರೆ. ನೀರಿನಿಂದ ಹೊರಬಂದರೆ ಇಡೀ ದೇಹ ಉರಿಯುವ ಸಮಸ್ಯೆಯಿಂದ ನರಳುತ್ತಿದ್ದ ಬಾಲಕನನ್ನು ವಿಮಾನದ (Airlift) ಮೂಲಕ ಮುಂಬೈಗೆ ಕರೆಸಿಕೊಂಡಿರುವ ಅಂಬಾನಿ, ತಮ್ಮದೇ ಒಡೆತನದ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಉಚಿತ ವಿಶೇಷ…

## [ಕೇವಲ 4 ಚಿತ್ರ ಮಾಡಿದ ನಟನಿಗೆ &#8216;ಸರ್&#8217; ಎಂದು ಹೇಳಿದ ಶಿವಣ್ಣ; ಸೆಂಚೂರಿ ಸ್ಟಾರ್ ವಿರುದ್ಧ ಕನ್ನಡಿಗರಿಗೆ ಬಾರಿ ಬೇಸರ, Video ವೈರಲ್](https://newsnotout.com/2026/08/20/i-am-your-fan-shivarajkumar-compares-pradeep-ranganathan-to-dhanush/)

_2026-08-20 · Team Newsnotout · Newsnotout_

ನ್ಯೂಸ್ ನಾಟೌಟ್ : ಸ್ಯಾಂಡಲ್ವುಡ್ ನ ಸೆಂಚೂರಿ ಸ್ಟಾರ್ ಶಿವರಾಜ್‌ಕುಮಾರ್ ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ತಮಿಳು ನಟ ಪ್ರದೀಪ್ ರಂಗನಾಥನ್ ಅವರನ್ನು ಹೊಗಳಿದರು. ಬ್ಯಾಕ್ ಟು ಬ್ಯಾಕ್ ಹಿಟ್ ಚಿತ್ರಗಳ ಮೂಲಕ ಹೇಗೆ ಗಮನ ಸೆಳೆದಿದ್ದಾರೆ ಎಂಬುದನ್ನು ಹಂಚಿಕೊಂಡರು. ಶಿವರಾಜಕುಮಾರ್ ಅವರು ನಟ ಪ್ರದೀಪ್ ರಂಗನಾಥನ್ ಅವರ ಚಿತ್ರಗಳಿಗೆ ‘ಅಭಿಮಾನಿ’ ಎಂದು ಹೇಳಿದರು. ಆನಂದ ವಿಕಟನ್ ಪ್ರಶಸ್ತಿ ಸಮಾರಂಭದಲ್ಲಿ ಭಾಗಿಯಾಗಿದ್ದ ಭೈರತಿ ರಣಗಲ್ ನಟ, ಅಭಿಷನ್ ಜೀವಿಂತ್ ಅವರಿಗೆ ಪ್ರಶಸ್ತಿಯನ್ನು... The…

## [ರೇಣುಕಾಸ್ವಾಮಿ ಕೊಲೆ ಕೇಸ್‌ ಆರೋಪಿ ಪವಿತ್ರಾ ಗೌಡ ಮಾಜಿ ಪತಿ ಸಂಜಯ್ ಸಿಂಗ್ ನಿಧನ](https://newsnotout.com/2026/08/20/pavitra-gowdas-ex-husband-sanjay-singh-dies/)

_2026-08-20 · Team Newsnotout · Newsnotout_

ನ್ಯೂಸ್ ನಾಟೌಟ್ : ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಪವಿತ್ರಾ ಗೌಡ ಅವರ ಮಾಜಿ ಪತಿ ಸಂಜಯ್ ಸಿಂಗ್ (Sanjay Singh) ನಿಧನರಾಗಿದ್ದಾರೆ. 7 – 8 ತಿಂಗಳ ಹಿಂದೆಯೇ ಅವರು ಮೃತರಾಗಿದ್ದು, ವಿಷಯ ಮಾತ್ರ ತಡವಾಗಿ ಬೆಳಕಿಗೆ ಬಂದಿದೆ. ಹಲವಾರು ವರ್ಷಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದ ಅವರು, ಚಿಕಿತ್ಸೆ ಫಲಕಾರಿಯಾಗದೇ ರಾಜಸ್ಥಾನದಲ್ಲಿ ಮೃತಪಟ್ಟಿದ್ದಾರೆ. ವಿಚ್ಛೇದನದ ನಂತರ ಅವರು ಕುಡಿತಕ್ಕೆ ದಾಸನಾಗಿದ್ದರು. ಈ ಕುಡಿತವೇ ಅವರನ್ನು ಬಲಿ ತಗೆದುಕೊಂಡಿದೆ.... The…

## [ಉಡುಪಿ: ಧಗ ಧಗ ಹೊತ್ತಿ ಉರಿದ ಖಾಸಗಿ ಬಸ್ ; 7 ಪ್ರಯಾಣಿಕರು ಕೂದಲೆಳೆ ಅಂತರದಲ್ಲಿ ಪಾರು](https://newsnotout.com/2026/08/20/private-bus-catches-fire-near-brahmavar-seven-passengers-escape-unhurt/)

_2026-08-20 · Team Newsnotout · Newsnotout_

ನ್ಯೂಸ್ ನಾಟೌಟ್ : ಬ್ರಹ್ಮಾವರ ಸಮೀಪ ಖಾಸಗಿ ಬಸ್‌ಗೆ ಬೆಂಕಿ ಹೊತ್ತಿಕೊಂಡ (Udupi) ಘಟನೆ ಸಂಭವಿಸಿದೆ. ಬಸ್‌ನಲ್ಲಿದ್ದ ಏಳು ಪ್ರಯಾಣಿಕರು ಅದೃಷ್ಟವಶಾತ್ (Bus Fire Accident) ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಉಡುಪಿಯಿಂದ ಸಾಗರದತ್ತ ತೆರಳುತ್ತಿದ್ದ ಖಾಸಗಿ ಬಸ್‌ನಲ್ಲಿ ಏಕಾಏಕಿ ಹೊಗೆ ಕಾಣಿಸಿಕೊಂಡಿದೆ. ಬಳಿಕ ಬಸ್‌ನ ಎಲೆಕ್ಟ್ರಿಕಲ್ ಬಾಕ್ಸ್ (EDC Box) ಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕೆಲವೇ ಕ್ಷಣಗಳಲ್ಲಿ ಬೆಂಕಿ ವ್ಯಾಪಿಸಲು ಆರಂಭಿಸಿದೆ ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಬಸ್…

## [ಕೊಡಗು:ಎರಡು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ತುಂಬೆಲ್ಲಾ ಕೆಸರು, ಶಾಲಾ ಬಸ್ ಸಿಲುಕಿ ವಿದ್ಯಾರ್ಥಿಗಳ ಪಾಡು ಹೇಳತೀರದಾಗಿದೆ..](https://newsnotout.com/2026/08/20/school-bus-gets-stuck-on-muddy-road-in-kodagu-students-face-daily-struggle/)

_2026-08-20 · Team Newsnotout · Newsnotout_

ನ್ಯೂಸ್ ನಾಟೌಟ್ : ಕೊಡಗು (Kodagu) ಜಿಲ್ಲೆಯ ನಾಪೋಕ್ಲು ಸಮೀಪದ ಚೆರಿಯಪರಂಬು (Rian Effect)ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಸಂಪೂರ್ಣ ಕೆಸರುಮಯವಾಗಿದ್ದು, ಗ್ರಾಮಸ್ಥರು ಹಾಗೂ ವಾಹನ ಸವಾರರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಮಳೆ ನೀರು ಹಾಗೂ ರಸ್ತೆಗೆ ಸುರಿದ ಮಣ್ಣು ಸೇರಿ ರಸ್ತೆ ಹದಗೆಟ್ಟಿದ್ದು, ಶಾಲಾ ಮಕ್ಕಳು ಸೇರಿದಂತೆ ಸಾರ್ವಜನಿಕರ ಸಂಚಾರವೇ ದುಸ್ತರವಾಗಿದೆ. ಮಡಿಕೇರಿ ತಾಲೂಕಿನ ನಾಪೋಕ್ಲು ಸಮೀಪದ ಚೆರಿಯಪರಂಬು ಗ್ರಾಮಕ್ಕೆ ತೆರಳುವ ಪ್ರಮುಖ ರಸ್ತೆಯುದ್ದಕ್ಕೂ…

## [ಕಾರ್ಕಳ ಮಾರುಕಟ್ಟೆ ಪಾರ್ಕಿಂಗ್ ದುರ್ನಾಥಮಯ..! ಮನುಷ್ಯರು ಬಿಡಿ.. ಪ್ರಾಣಿಗಳು ಕೂಡ ಅಲ್ಲಿ ಓಡಾಡಲ್ಲ..!](https://newsnotout.com/2026/08/20/karkala-purasabha-place-clean/)

_2026-08-20 · Team Newsnotout · Newsnotout_

ನ್ಯೂಸ್ ನಾಟೌಟ್: ಕಾರ್ಕಳ ಪುರಸಭೆ ವ್ಯಾಪ್ತಿಗೆ ಬರುವ ಮಾರುಕಟ್ಟೆ ಪಾರ್ಕಿಂಗ್ ಸ್ವಚ್ಛತೆ ಇಲ್ಲದೆ ಸರಿಯಾದ ನಿರ್ವಹಣೆ ಇಲ್ಲದೆ ಕೊಳೆತು ನಾರುತ್ತಿದೆ. ಮನುಷ್ಯರು ಬಿಡಿ ಪ್ರಾಣಿಗಳು ಕೂಡ ಇಲ್ಲಿ ಓಡಾಡಲಾಗದ ಸ್ಥಿತಿ ನಿರ್ಮಾಣವಾಗಿದೆ. ಈ ಅವ್ಯವಸ್ಥೆಯನ್ನು ಸಾಮಾಜಿಕ ಕಾರ್ಯಕರ್ತೆ ರಮಿತಾ ಸೂರ್ಯವಂಶಿ ಕಟು ಪದಗಳಿಂದ ಟೀಕಿಸಿದ್ದಾರೆ. “ಇಲ್ಲಿನ ಮಾರುಕಟ್ಟೆ ಪಾರ್ಕಿಂಗ್ ಸ್ವಚ್ಛತೆ ಹಾಗೂ ನಿರ್ವಹಣೆ ಇಲ್ಲದೆ ದುರ್ನಾಥ ಬರುತ್ತಿದೆ ಪುರಸಭೆ ಅಧಿಕಾರಿಗಳು ನಿದ್ರೆಯಿಂದ ಎದ್ದು ಒಮ್ಮೆ ಮಾರುಕಟ್ಟೆ…

## [One Cloud, Every AI Layer (Sponsored)](https://crawlproof.com/a/fHZAVHTVguXV)

_2026-08-20 · **Sponsored**_

Run agents, inference, and infrastructure on one stack — economics improve as you scale.

## [ಟೀಂ ಸತ್ಯಜಿತ್ ಸುರತ್ಕಲ್ ವತಿಯಿಂದ ವಾರ್ಷಿಕ ಸಭೆ, 8 ತಾಲೂಕಿಗೆ ಸಮಿತಿ ರಚನೆ](https://newsnotout.com/2026/08/20/team-satyajith-surathkal-mangalore-annual-meeting/)

_2026-08-20 · Team Newsnotout · Newsnotout_

ನ್ಯೂಸ್ ನಾಟೌಟ್: ಟೀಂ ಸತ್ಯಜಿತ್ ಸುರತ್ಕಲ್ ವತಿಯಿಂದ ವಾರ್ಷಿಕ ಸಭೆ ಮಂಗಳೂರಿನ ತುಂಬೆ ಶಾರದಾ ಸಭಾ ಭವನದಲ್ಲಿ ನಿನ್ನೆ (ಆ.19) ರಂದು ನಡೆಯಿತು. ಈ ಸಭೆಯಲ್ಲಿ ಜಿಲ್ಲೆ ಹಾಗೂ ತಾಲೂಕು ಮಟ್ಟದಲ್ಲಿ ಸಾಮಾಜಿಕ ಚಟುವಟಿಕೆಗಳನ್ನು ನಡೆಸುವ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಯಿತು. ಇದೇ ವೇಳೆ ಮುಂದಿನ ದಿನಗಳಲ್ಲಿ ಸತ್ಯಜಿತ್ ಸುರತ್ಕಲ್ ಅವರ ರಾಜಕೀಯ ಬೆಳವಣಿಗೆಗಳ ಬಗ್ಗೆ ಮುಂದಿನ ದಿನಗಳಲ್ಲಿ ತೆಗೆದುಕೊಳ್ಳಬಹುದಾದ ನಿರ್ಧಾರದ ಬಗ್ಗೆಯೂ ಚರ್ಚಿಸಲಾಯಿತು. ಅಲ್ಲದೆ 8 ತಾಲೂಕಿಗೆ ಸಮಿತಿ ರಚನೆ... The post…

## [ತೆಲುಗಿನಲ್ಲಿ ‘ಮಹಾಕಾಳಿ’ಯಾದ ಕುಂದಾಪುರದ ಹುಡುಗಿ ಭೂಮಿ ಶೆಟ್ಟಿ;](https://newsnotout.com/2026/08/19/bhoomi-shettys-mahakali-movie-getting-ready-to-release/)

_2026-08-19 · Team Newsnotout · Newsnotout_

ನ್ಯೂಸ್ ನಾಟೌಟ್ : ಕನ್ನಡದ ನಟಿಯಾಗಿರುವ ಭೂಮಿ ಶೆಟ್ಟಿ ಅವರಿಗೆ ಪರಭಾಷೆಯಲ್ಲಿ ಪವರ್​ಫುಲ್ ಕತೆಯುಳ್ಳ ಸಿನಿಮಾನಲ್ಲಿ ಪಾತ್ರ ದೊರೆತಿದ್ದು, ಸಿನಿಮಾ ಸಹ ಬಿಡುಗಡೆಗೆ ರೆಡಿಯಾಗಿದೆ. ಮಹಾಕಾಳಿ’ ಹಸರಿನ ಪೌರಾಣಿಕ ಕತೆಯುಳ್ಳ ಸಿನಿಮಾನಲ್ಲಿ ಭೂಮಿ ಶೆಟ್ಟಿ ನಟಿಸಿದ್ದಾರೆ. ಸಿನಿಮಾ ತೆಲುಗಿನ ಜನಪ್ರಿಯ ಯುವ ನಿರ್ದೇಶಕ ಪ್ರಶಾಂತ್ ವರ್ಮಾ ಅವರು ತಮ್ಮ ಕತೆಗಳ ಮೂಲಕ ಕಟ್ಟಿರುವ ‘ಪ್ರಶಾಂತ್ ವರ್ಮಾ ಸಿನಿಮ್ಯಾಟಿಕ್ ಯೂನಿವರ್ಸ್’ (PVCU)ಕ್ಕೆ ಸೇರಿದ ಕತೆಯನ್ನು ಒಳಗೊಂಡಿದೆ. ಪ್ರಶಾಂತ್ ವರ್ಮಾ ಖುದ್ದು…

## [ಮಧ್ಯಾಹ್ನದ ಬಿಸಿಯೂಟದಲ್ಲಿ ಉಪ್ಪು ಬದಲು ಡಿಟರ್ಜೆಂಟ್‌ ಬಳಕೆ!!ಮಕ್ಕಳಿಗೆ ಇದೆಂಥಾ ಅನ್ಯಾಯ&#x1f621; 36 ಮಕ್ಕಳು ಅಸ್ವಸ್ಥ](https://newsnotout.com/2026/08/19/detergent-served-instead-of-salt-in-midday-meal-36-students-fall-ill/)

_2026-08-19 · Team Newsnotout · Newsnotout_

ನ್ಯೂಸ್ ನಾಟೌಟ್ : ಶಾಲೆಯ ಬಿಸಿಯೂಟದಲ್ಲಿ (Mid-Day Meal) ಉಪ್ಪಿನ ಬದಲು ಡಿಟರ್ಜೆಂಟ್ ಪೌಡರ್ ಸೇರಿಸಿದ ಪರಿಣಾಮ 36 ವಿದ್ಯಾರ್ಥಿನಿಯರು ಅಸ್ವಸ್ಥರಾದ ಆಘಾತಕಾರಿ ಘಟನೆ ಬಿಹಾರದ ನಳಂದ ಜಿಲ್ಲೆಯಲ್ಲಿ ನಡೆದಿದೆ. ನಳಂದದ ನೂರ್ಸರೈ ಪೊಲೀಸ್ ಠಾಣೆ ವ್ಯಾಪ್ತಿಯ ಪರಾಸಿಯ ಮಿಡಲ್ ಸ್ಕೂಲ್‌ನಲ್ಲಿ ಮಂಗಳವಾರ ಮಧ್ಯಾಹ್ನ ಈ ಘಟನೆ ನಡೆದಿದೆ. ಬಿಸಿಯೂಟ ಸೇವಿಸಿದ ಬಳಿಕ ಹಲವು ವಿದ್ಯಾರ್ಥಿಗಳಿಗೆ ತಲೆತಿರುಗುವಿಕೆ ಹಾಗೂ ವಾಂತಿ ಕಾಣಿಸಿಕೊಂಡಿದೆ. ವಿದ್ಯಾರ್ಥಿಗಳ ಆರೋಗ್ಯದಲ್ಲಿ ಸುಧಾರಣೆ ಕಾಣದ ಹಿನ್ನೆಲೆಯಲ್ಲಿ…

