# kodagu (news sources) — RSS Amplifier

Recent posts from the 1 feeds in the RSS Amplifier directory that cover kodagu.

Page: <https://rssamplifier.com/topics/kodagu/news>  
Feed: <https://rssamplifier.com/topics/kodagu/news.md>

---

## [ಬಿರಿಯಾನಿ ಪಾತ್ರೆಯಲ್ಲಿತ್ತು ತುಂಡರಿಸಿದ ಮಹಿಳೆಯ ದೇಹದ ಭಾಗಗಳು &#8211; ಬೆನ್ನತ್ತಿದ ಪೊಲೀಸರಿ ಸಿಕ್ಕಿದ್ದು ಚೆನ್ನೈ ‘ಹಾರರ್ ಹೌಸ್’!](https://publictv.in/in-body-parts-on-train-case-cops-follow-cctv-trail-to-chennai-house-of-horrors/)

_2026-08-23 · Public TV · Public TV &#8211; Latest Kannada News, Public TV Kannada Live, Public TV News_

ಲಕ್ನೋ/ಚೆನ್ನೈ: ಆಗ್ರಾದಲ್ಲಿ ರೈಲಿನ ಕೆಂಪು ಸೂಟ್‌ಕೇಸ್‌ನಲ್ಲಿ ಮಹಿಳೆಯ ದೇಹದ ಭಾಗಗಳು ಪತ್ತೆಯಾದ ಪ್ರಕರಣದಲ್ಲಿ ತನಿಖೆ ತೀವ್ರಗೊಂಡಿದ್ದು, ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ ಪೊಲೀಸರು ಚೆನ್ನೈನ ಗುಡುವಂಚೇರಿ ಪ್ರದೇಶದಲ್ಲಿರುವ ಬಾಡಿಗೆ ಮನೆಯೊಂದನ್ನು ಪತ್ತೆಹಚ್ಚಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ, ಇದೇ ಮನೆಯಲ್ಲಿ ಮಹಿಳೆಯನ್ನ ಹತ್ಯೆ ಮಾಡಿ ದೇಹವನ್ನು ತುಂಡುಗಳಾಗಿ ಕತ್ತರಿಸಿರುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ. ತನಿಖೆಯ ವೇಳೆ, ಓರ್ವ ಪುರುಷ ಮತ್ತು ಮಹಿಳೆ ಕೆಂಪು…

## [ಬಾಂಗ್ಲಾದೇಶದಲ್ಲಿ ನಿವೃತ್ತ ಹಿಂದೂ ಶಿಕ್ಷಕ, ಪತ್ನಿ, ಇಬ್ಬರು ಮಕ್ಕಳು ಶವವಾಗಿ ಪತ್ತೆ](https://publictv.in/retired-hindu-teacher-family-found-dead-inside-locked-home-in-bangladesh/)

_2026-08-23 · Public TV · Public TV &#8211; Latest Kannada News, Public TV Kannada Live, Public TV News_

ಢಾಕಾ: ಬಾಂಗ್ಲಾದೇಶದ (Bangladesh) ರಂಗ್‌ಪುರ (Rangpur) ನಗರದಲ್ಲಿ ನಿವೃತ್ತ ಹಿಂದೂ ಶಿಕ್ಷಕರೊಬ್ಬರು (Retired Hindu Teacher), ಅವರ ಪತ್ನಿ, ಮಗಳು ಹಾಗೂ 12 ವರ್ಷದ ಪುತ್ರ ಸೇರಿದಂತೆ ಒಂದೇ ಕುಟುಂಬದ (Family) ನಾಲ್ವರು ಮನೆಯೊಳಗೆ ಶವವಾಗಿ ಪತ್ತೆಯಾಗಿದ್ದಾರೆ. ಶನಿವಾರ ತಡರಾತ್ರಿ ಈ ಘಟನೆ ಬೆಳಕಿಗೆ ಬಂದಿದ್ದು, ಕುಟುಂಬದ ಸದಸ್ಯರನ್ನು ಕತ್ತು ಹಿಸುಕಿ ಹತ್ಯೆ ಮಾಡಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ರಾತ್ರಿ ಸುಮಾರು 11:30ಕ್ಕೆ ನಾಲ್ವರ ಮೃತದೇಹಗಳನ್ನು…

## [ಕಾಲು ಜಾರಿ ಹಳಿ ಮೇಲೆ ಬಿದ್ದ ವ್ಯಕ್ತಿ; ರೈಲು ಹರಿದು ಸ್ಥಳದಲ್ಲೇ ಸಾವು](https://publictv.in/man-falls-under-train-while-boarding-at-holenarasipura-railway-station-dies-on-the-spot/)

_2026-08-23 · Public TV · Public TV &#8211; Latest Kannada News, Public TV Kannada Live, Public TV News_

ಹಾಸನ: ರೈಲು ಹತ್ತುವಾಗ ಕಾಲು ಜಾರಿ ವ್ಯಕ್ತಿಯೊಬ್ಬರು ಹಳಿ ಮೇಲೆ ಬಿದ್ದಿದ್ದು, ಆತನ ಮೇಲೆಯೇ ರೈಲು ಹರಿದು ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ಹಾಸನ ಜಿಲ್ಲೆಯ (Hassan Railway Station) ಹೊಳೆನರಸೀಪುರ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ. ಹೊಳೆನರಸೀಪುರ ತಾಲೂಕಿನ ಕೆ.ಮುದ್ದನಹಳ್ಳಿ ಗ್ರಾಮದ ನಾಗರಾಜು (48) ಮೃತ ವ್ಯಕ್ತಿ. ಬೆಂಗಳೂರಿಗೆ ತೆರಳಲು ನಾಗರಾಜು ಹೊಳೆನರಸೀಪುರ ರೈಲ್ವೆ ನಿಲ್ದಾಣಕ್ಕೆ ಬಂದಿದ್ದ. ಈ ವೇಳೆ ರೈಲು ಹೊರಡಲು ಆರಂಭಿಸಿದ್ದು, ನಿಧಾನವಾಗಿ ಚಲಿಸುತ್ತಿದ್ದ ರೈಲನ್ನು…

## [Exclusive &#124; 80 ಲಕ್ಷಕ್ಕೆ ಪಶುವೈದ್ಯಾಧಿಕಾರಿ ಹುದ್ದೆಯ ಪ್ರಶ್ನೆಪತ್ರಿಕೆ ಸೇಲ್‌; ದಾವಣಗೆರೆ ರೆಸಾರ್ಟ್‌ನಲ್ಲಿ ಟ್ರೈನಿಂಗ್](https://publictv.in/public-tv-exclusive-question-paper-for-the-post-of-veterinary-officer-on-sale-for-80-lakhs/)

_2026-08-23 · Public TV · Public TV &#8211; Latest Kannada News, Public TV Kannada Live, Public TV News_

– ಇಡಿ ಮೂಲಗಳಿಂದ ಖಚಿತ ಮಾಹಿತಿ – 300 ಅಂಕಗಳ ಪ್ರಶ್ನೆಗೆ ಟ್ರೈನಿಂಗ್ ಬೆಂಗಳೂರು/ದಾವಣಗೆರೆ: ಪಶು ವೈದ್ಯಾಧಿಕಾರಿ ಹುದ್ದೆಯ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸ್ಫೋಟಕ ತಿರುವು ಸಿಕ್ಕಿದೆ. ಜಾರಿ ನಿರ್ದೇಶನಾಲಯ (ED) ಅಧಿಕಾರಿಗಳ ವಿಚಾರಣೆ ವೇಳೆ ಅಭ್ಯರ್ಥಿಯೊಬ್ಬರು ತಪ್ಪೊಪ್ಪಿಗೆ ನೀಡಿದ್ದು ಪ್ರಕರಣಕ್ಕೆ ತಿರುವು ಸಿಕ್ಕಿದ್ದು, ʻಪಬ್ಲಿಕ್‌ ಟಿವಿʼಗೆ ಮಾಹಿತಿ ಲಭ್ಯವಾಗಿದೆ. ಇಡಿ ಮುಂದೆ ಅಭ್ಯರ್ಥಿಯಿಂದ ಸ್ಫೋಟಕ ಹೇಳಿಕೆ ಅಭ್ಯರ್ಥಿಯ ಹೇಳಿಕೆ ಪ್ರಕಾರ, 80 ಲಕ್ಷ ರೂ.ಗೆ ಪ್ರಶ್ನೆಪತ್ರಿಕೆ…

## [IAS ಅಧಿಕಾರಿ ಗ್ಯಾನೇಂದ್ರ ಕುಮಾರ್ ಮನೆ ಬಾಗಿಲು ಒಡೆದು ಇಡಿ ದಾಳಿ](https://publictv.in/ias-officer-gyanendra-kumars-house-raid-by-ed/)

_2026-08-23 · Public TV · Public TV &#8211; Latest Kannada News, Public TV Kannada Live, Public TV News_

– ಫೋನ್ ಸಂಪರ್ಕಕ್ಕೆ ಸಿಗದ ಹಿನ್ನೆಲೆ ದಾಳಿ ಬೆಂಗಳೂರು: ಕೆಪಿಎಸ್‌ಸಿ (KPSC) ಹಗರಣ ಸಂಬಂಧ ಫೋನ್ ಕರೆಗೆ ಪ್ರತಿಕ್ರಿಯಿಸದ ಹಿನ್ನೆಲೆ ಐಎಎಸ್ (IAS) ಅಧಿಕಾರಿ ಗ್ಯಾನೇಂದ್ರ ಕುಮಾರ್ (Gyanendra Kumar) ಅನುಪಸ್ಥಿತಿಯಲ್ಲಿ ಅವರ ಮನೆ ಮೇಲೆ ಇಡಿ (ED) ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇಡಿ ಅಧಿಕಾರಿಗಳು ಗ್ಯಾನೇಂದ್ರ ಕುಮಾರ್ ಅವರ ನಿರಂತರ ಸಂಪರ್ಕಕ್ಕೆ ಯತ್ನಿಸಿದರೂ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆ ಜಯಮಹಲ್ ರಸ್ತೆಯಲ್ಲಿ ಇರುವ ಗ್ಯಾನೇಂದ್ರ ಕುಮಾರ್ ಮನೆಯ ಬಾಗಿಲು ಒಡೆದು ಇಡಿ…

## [ಬೆಂಗಳೂರು &#124; ಪಾಗಲ್‌ ಪ್ರೇಮಿಯಿಂದ ಟಾರ್ಚರ್‌ &#8211; ಕೆರೆಗೆ ಹಾರಿ ಸಾಗರದ ಯುವತಿ ಆತ್ಮಹತ್ಯೆ](https://publictv.in/young-woman-committed-suicide-in-bengaluru-after-being-harassed-by-a-young-man/)

_2026-08-23 · Public TV · Public TV &#8211; Latest Kannada News, Public TV Kannada Live, Public TV News_

ಬೆಂಗಳೂರು/ ಶಿವಮೊಗ್ಗ: ಪಾಗಲ್‌ ಪ್ರೇಮಿಯ ಕಿರುಕುಳಕ್ಕೆ ಬೇಸತ್ತು ಸಾಗರ (Sagar) ತಾಲೂಕಿನ ಬೆಳಮಕ್ಕಿ ಗ್ರಾಮದ ಯುವತಿಯೊಬ್ಬಳು ಬೆಂಗಳೂರಲ್ಲಿ ( Bengaluru) ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ವಾಣಿ (22 )ಆತ್ಮಹತ್ಯೆಗೆ ಶರಣಾದ ಯುವತಿ. ಹೆಚ್‌ಎಸ್‌ಆರ್ ಲೇಔಟ್‌ನಲ್ಲಿರುವ ಅಗರ ಕೆರೆಗೆ ಹಾರಿ ಯುವತಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಆತ್ಮಹತ್ಯೆಗೂ ಮುನ್ನ ಡೆತ್‌ನೋಟ್‌ ಬರೆದಿಟ್ಟಿದ್ದಾಳೆ. ಅದರಲ್ಲಿ ಕ್ಲಾಸ್‌ಮೇಟ್‌ ಅಭಿಷೇಕ್ ಎಂಬಾತನ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ…

## [ರಾಜ್ಯದಲ್ಲಿ ಹಂದಿ ಜ್ವರ ಪ್ರಕರಣಗಳ ಸಂಖ್ಯೆ ಹೆಚ್ಚಳ &#8211; 4,125 ಕೇಸ್ ದಾಖಲು; ಆರೋಗ್ಯ ಇಲಾಖೆ ಅಲರ್ಟ್](https://publictv.in/number-of-swine-flu-cases-increases-in-the-state-4125-cases-registered/)

_2026-08-23 · Public TV · Public TV &#8211; Latest Kannada News, Public TV Kannada Live, Public TV News_

– H1N1 ನಿಯಂತ್ರಣಕ್ಕೆ ಮಾರ್ಗಸೂಚಿ ಪ್ರಕಟ ಬೆಂಗಳೂರು: ಡೇಂಜರ್ ಡೇಂಜರ್ H1N1 ಡೇಂಜರ್. ರಾಜ್ಯದಲ್ಲಿ H1N1 (Swine Flu ಅಥವಾ ಹಂದಿ ಜ್ವರ) ಕೇಸ್ ಏರಿಕೆ ಆಗ್ತಿದೆ. ಈ ವರ್ಷದಲ್ಲೇ ಬರೋಬ್ಬರಿ 4,125 ಕೇಸ್ ದಾಖಲಾಗಿದೆ. ‌ಹೆಚ್1ಎನ್1 ನಿಯಂತ್ರಣಕ್ಕೆ ಮಾರ್ಗಸೂಚಿಯನ್ನ ಆರೋಗ್ಯ ಇಲಾಖೆ (Health Department) ಬಿಡುಗಡೆ ಮಾಡಿದೆ. ದಿನೇ ದಿನೇ ಪ್ರಕರಣಗಳ ಸಂಖ್ಯೆ ಏರಿಕೆ ಆಗ್ತಿದ್ದು, ಜನವರಿಯಿಂದ ಆಗಸ್ಟ್ ವರೆಗೆ ಅಂದ್ರೆ 8 ತಿಂಗಳಿಗೆ 4,125 ಕೇಸ್ ದಾಖಲಾಗಿದೆ. ಇನ್ನೂ ವರ್ಷಾಂತ್ಯದ ವೇಳೆಗೆ…

## [ಒಂದೇ ದಿನ 444 ಮದುವೆ! &#8211; ಗುರುವಾಯೂರು ದೇಗುಲದಲ್ಲಿ ಹೊಸ ದಾಖಲೆ](https://publictv.in/444-weddings-at-guruvayur-on-sunday-highest-ever-in-a-single-day/)

_2026-08-23 · Public TV · Public TV &#8211; Latest Kannada News, Public TV Kannada Live, Public TV News_

– 6 ಮಂಟಪಗಳಲ್ಲಿ 444 ಜೋಡಿಗೆ ಕಲ್ಯಾಣ ತಿರುವನಂತಪುರಂ (ತ್ರಿಶೂರ್): ಕೇರಳದ ಪ್ರಸಿದ್ಧ ಗುರುವಾಯೂರು ದೇವಸ್ಥಾನದಲ್ಲಿ (Guruvayur Temple) ಭಾನುವಾರ (ಇಂದು) ಒಂದೇ ದಿನ ಬರೋಬ್ಬರಿ 444 ಮದುವೆಗಳು ನಡೆದಿದೆ. ಇದು ದೇವಸ್ಥಾನದ ಇತಿಹಾಸದಲ್ಲೇ ಹೊಸ ದಾಖಲೆಯಾಗಿದೆ. ಇದಕ್ಕೂ ಮುನ್ನ 2024ರ ಸೆಪ್ಟೆಂಬರ್ 8 ರಂದು ಒಂದೇ ದಿನ 344 ಮದುವೆಗಳು (Weddings) ನಡೆದಿದ್ದು, ಇದುವರೆಗಿನ ದಾಖಲೆಯಾಗಿತ್ತು. ಆ ದಾಖಲೆ ಇಂದು ಮುರಿದಿದೆ. ಬೆಳಗ್ಗೆ 4 ಗಂಟೆಯಿಂದಲೇ ಮದುವೆ ಸಂಭ್ರಮ 444 ವಿವಾಹ ಮಹೋತ್ಸವದ…

## [ಪುತ್ತೂರಿನಲ್ಲಿ ಕಳೆದ ಕೆಲವು ತಿಂಗಳಿಂದ ತಾಲಿಬಾನ್‌ ಸಂಸ್ಕೃತಿ ಇದೆ: ನಳಿನ್ ಕುಮಾರ್ ಕಟೀಲ್](https://publictv.in/nalin-kumar-kateel-react-on-puttur-xerox-shop-owner-attacked-case/)

_2026-08-23 · Public TV · Public TV &#8211; Latest Kannada News, Public TV Kannada Live, Public TV News_

ಮಂಗಳೂರು: ಪುತ್ತೂರಿನಲ್ಲಿ ಕಳೆದ ಕೆಲವು ತಿಂಗಳಿಂದ ತಾಲಿಬಾನ್‌ ಸಂಸ್ಕೃತಿ ಇದೆ ಎಂದು ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ (Nalin Kumar Kateel) ಹೇಳಿದ್ದಾರೆ. ಪುತ್ತೂರಿನಲ್ಲಿ (Puttur) ಮಾಧ್ಯಮಗಳ ಜೊತೆ ಅವರು ಮಾತನಾಡಿದರು. ಈ ವೇಳೆ ದರ್ಬೆಯಲ್ಲಿ ನಡೆದ ಗಲಾಟೆ ವಿಚಾರವಾಗಿ, ಸಣ್ಣ ವಿಚಾರ ಮುಂದಿಟ್ಟುಕೊಂಡು ಅಂಗಡಿ ಮೇಲೆ ದಾಳಿ ಮಾಡಿದ್ದಾರೆ. ಮಹಿಳೆ ಮೇಲೆ ಹಲ್ಲೆ ಮಾಡಿರುವುದು ಖಂಡನೀಯ. ಇದು ತಾಲಿಬಾನ್ ಸಂಸ್ಕೃ=ತಿ, ತಾಲಿಬಾನ್ ಸಂಸ್ಕ್ರತಿಯ ಹೋರಾಟಗಳು ಜಾಸ್ತಿಯಾಗುತ್ತಿವೆ. ರಾಜ್ಯದಲ್ಲಿ…

## [ಕೇವಲ ಕೇಸ್ ಇರುವುದಕ್ಕೆಲ್ಲ ರಾಜೀನಾಮೆ ಕೇಳಿದರೆ ಯಾರೂ ಮಂತ್ರಿ ಆಗಿರಲ್ಲ: ಸತೀಶ್ ಜಾರಕಿಹೊಳಿ](https://publictv.in/if-resignations-are-demanded-merely-over-cases-no-one-can-remain-a-minister-satish-jarkiholi-slams-bjp-over-b-nagendra-issue/)

_2026-08-23 · Public TV · Public TV &#8211; Latest Kannada News, Public TV Kannada Live, Public TV News_

ಬಾಗಲಕೋಟೆ: ಕೇವಲ ಪ್ರಕರಣಗಳಿವೆ ಎಂಬ ಒಂದೇ ಕಾರಣಕ್ಕೆ ರಾಜೀನಾಮೆ ಕೊಡುವುದಾದರೆ ಕೇಂದ್ರ ಮತ್ತು ವಿವಿಧ ರಾಜ್ಯಗಳ ಅರ್ಧದಷ್ಟು ಮಂತ್ರಿಗಳು ರಾಜೀನಾಮೆ ನೀಡಬೇಕಾಗುತ್ತದೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ(Satish Jarkiholi) ತಿರುಗೇಟು ನೀಡಿದ್ದಾರೆ. ಸಚಿವ ಬಿ. ನಾಗೇಂದ್ರ(B Nagendra) ಅವರ ರಾಜೀನಾಮೆಗೆ ಬಿಜೆಪಿ ನಿರಂತರವಾಗಿ ಪಟ್ಟುಹಿಡಿದು ಪ್ರತಿಭಟನೆ ನಡೆಸುತ್ತಿರುವ ವಿಚಾರವಾಗಿ ಜಮಖಂಡಿಯಲ್ಲಿ ಪ್ರತಿಕ್ರಿಯಿಸಿದ ಅವರು ಈ ಪ್ರತಿಭಟನೆ ಕೇವಲ ಗದ್ದಲ ಸೃಷ್ಟಿಸುವುದಕ್ಕಷ್ಟೇ…

## [AI QA That Opens Fix PRs (Sponsored)](https://crawlproof.com/a/59etldNQjmZW)

_2026-08-23 · **Sponsored**_

Runs browser QA, files issues with repro evidence, and opens fix PRs.

## [ನಕಲಿ ಔಷಧ ಜಾಲದ ಕಿಂಗ್‌ಪಿನ್‌ ಪಶ್ಚಿಮ ಏಷ್ಯಾದಲ್ಲಿ ಲಾಕ್](https://publictv.in/spurious-drug-racket-kingpin-prashanth-detained-at-airport-karnataka-sit-approaches-interpol/)

_2026-08-23 · Public TV · Public TV &#8211; Latest Kannada News, Public TV Kannada Live, Public TV News_

– ಕಸ್ಟಮ್ಸ್‌ ಅಧಿಕಾರಿಗಳ ವಶದಲ್ಲಿ ಪ್ರಶಾಂತ್‌ – ಇಂಟರ್‌ಪೋಲ್ ನೆರವಿಗೆ ಮುಂದಾದ ಎಸ್‌ಐಟಿ ಬೆಂಗಳೂರು: ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ನಕಲಿ ಹಾಗೂ ಕಳಪೆ ಔಷಧ ಮಾರಾಟ ಜಾಲಕ್ಕೆ ಅಂತಾರಾಷ್ಟ್ರೀಯ ನಂಟು ಇರುವುದು ಬಯಲಾಗಿದ್ದು, ಪ್ರಕರಣದ ಪ್ರಮುಖ ರೂವಾರಿ ನಾಗರಬಾವಿಯ ಪ್ರಶಾಂತ್ ಹಾಗೂ ಆತನ ಇಬ್ಬರು ಸಹಚರರು ಪಶ್ಚಿಮ ಏಷ್ಯಾದ ದೇಶವೊಂದರ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್(Customs) ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ. ಅಜರ್‌ಬೈಜಾನ್‌ನಲ್ಲಿ ಕ್ಯಾನ್ಸರ್ ಸೇರಿದಂತೆ ಗಂಭೀರ ಕಾಯಿಲೆಗಳ ಔಷಧಗಳು…

## [ಆಟವಾಡುತ್ತಾ ಕೀ ಆನ್‌ ಮಾಡಿದ ಮಗು &#8211; ಟ್ರ್ಯಾಕ್ಟರ್‌ ಮೈಮೇಲೆ ಹರಿದು ತಂದೆ ದಾರುಣ ಸಾವು](https://publictv.in/man-died-in-holenarasipur-after-a-tractor-ran-over-him-when-his-3-year-old-toddler-accidentally-turned-the-vehicles-ignition-key-while-playing/)

_2026-08-23 · Public TV · Public TV &#8211; Latest Kannada News, Public TV Kannada Live, Public TV News_

ಹಾಸನ: ಮೂರು ವರ್ಷದ ಮಗು ಆಟವಾಡುತ್ತಾ ಟ್ರ್ಯಾಕ್ಟರ್‌ (Tractor) ಕೀ ಆನ್‌ ಮಾಡಿದ ಪರಿಣಾಮ ತಂದೆಯ ಮೇಲೆ ಚಕ್ರ ಹರಿದು ದಾರುಣವಾಗಿ ಸಾವನ್ನಪ್ಪಿದ ಘಟನೆ ಹೊಳೆನರಸೀಪುರ (Holenarasipur) ಪಟ್ಟಣದ ಕೋಟೆ ಒಕ್ಕಲಿಗರ ಬೀದಿಯಲ್ಲಿ ನಡೆದಿದೆ. ಯಶ್ವಂತ್ (37) ಟ್ರಾಕ್ಟರ್ ಹರಿದು ಸಾವನ್ನಪ್ಪಿದ ವ್ಯಕ್ತಿ. ಸಾರಿಗೆ ಸಂಸ್ಥೆಯ ನೌಕರರಾಗಿದ್ದ ಅವರು, ಅರಕಲಗೂಡು ಘಟಕದಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಇದನ್ನೂ ಓದಿ: ಬೆಂಗಳೂರಿನ ನಡುರಸ್ತೆಯಲ್ಲೇ ಮೆಡಿಕಲ್ ಶಾಪ್ ಮಾಲೀಕನ ಕೊಲೆ ಹೊಸ ಮನೆ…

## [ಬೆಂಗಳೂರಿನ ನಡುರಸ್ತೆಯಲ್ಲೇ ಮೆಡಿಕಲ್ ಶಾಪ್ ಮಾಲೀಕನ ಕೊಲೆ](https://publictv.in/medical-shop-owner-hacked-to-death-in-madiwala-traffic-revenge-murder-suspected-bengaluru/)

_2026-08-23 · Public TV · Public TV &#8211; Latest Kannada News, Public TV Kannada Live, Public TV News_

– ರೌಡಿಶೀಟರ್ ಹತ್ಯೆಗೆ ಪ್ರತೀಕಾರದ ಶಂಕೆ ಬೆಂಗಳೂರು: ರಾಜಧಾನಿ ಬೆಂಗಳೂರಿನ ಮಡಿವಾಳದ ಮುಖ್ಯರಸ್ತೆಯಲ್ಲಿ ಸಾರ್ವಜನಿಕರ ಎದುರಲ್ಲೇ ವ್ಯಕ್ತಿಯೊಬ್ಬನನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ. ಮಂಗಮ್ಮನಪಾಳ್ಯದ ನಿವಾಸಿ, ಮೆಡಿಕಲ್ ಶಾಪ್ ನಡೆಸುತ್ತಿದ್ದ ಸುಹೇಲ್ ಕೊಲೆಯಾದ ದುರ್ದೈವಿ. ಶನಿವಾರ ರಾತ್ರಿ ಸುಮಾರು 10 ಗಂಟೆಯ ವೇಳೆಗೆ ಸುಹೇಲ್ ಮಡಿವಾಳದಿಂದ ಕೊರಮಂಗಲ ಕಡೆಗೆ ತಮ್ಮ ಬೈಕ್‌ನಲ್ಲಿ ತೆರಳುತ್ತಿದ್ದರು. ಈ ವೇಳೆ ಟ್ರಾಫಿಕ್ ಜಾಮ್‌ನಲ್ಲಿ…

## [ಒಡಿಶಾ ಕರಾವಳಿಯಲ್ಲಿ ಪನಾಮ ಧ್ವಜ ಹೊತ್ತ ಹಡಗು ಮುಳುಗಡೆ &#8211; ಇಬ್ಬರ ರಕ್ಷಣೆ, 22 ಮಂದಿ ನಾಪತ್ತೆ](https://publictv.in/panama-flagged-cargo-ship-sinks-off-odisha-coast-2-survivors-rescued-22-missing/)

_2026-08-23 · Public TV · Public TV &#8211; Latest Kannada News, Public TV Kannada Live, Public TV News_

ಭುವನೇಶ್ವರ: ಒಡಿಶಾದ ಪ್ಯಾರದೀಪ್ ಕರಾವಳಿಯಿಂದ (Odisha Paradip Coast) ಸುಮಾರು 240 ನಾಟಿಕಲ್ ಮೈಲು (444 ಕಿಮೀ) ದೂರದಲ್ಲಿರುವ ಬಂಗಾಳ ಕೊಲ್ಲಿಯಲ್ಲಿ (Bay of Bengal) ಪನಾಮ (Panama) ಧ್ವಜ ಹೊತ್ತ ಹಡಗು ಮುಳುಗಡೆಯಾಗಿದೆ. ಹಡಗಿನಲ್ಲಿದ್ದ 24 ಮಂದಿಯಲ್ಲಿ ಇಬ್ಬರನ್ನು ರಕ್ಷಿಸಲಾಗಿದೆ. 22 ಮಂದಿ ನಾಪತ್ತೆಯಾಗಿದ್ದು, ಅವರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಕಬ್ಬಿಣದ ಅದಿರಿನ ಸರಕುಗಳನ್ನ ತುಂಬಿಕೊಂಡು ಒಡಿಶಾದಿಂದ ಸಿಂಗಾಪುರದ ಕಡೆಗೆ ಹಡಗು ಸಾಗುತ್ತಿತ್ತು. ಹಡಗು ಮುಂದಿನ ಪ್ರಯಾಣ…

## [ಜೆರಾಕ್ಸ್ ಪ್ರತಿ ಸುಟ್ಟಿದ್ದಕ್ಕೆ ಗ್ರಾಹಕರು, ಮಾಲೀಕರ ಮಧ್ಯೆ ಗಲಾಟೆ &#8211; ಪುತ್ತೂರಿನಲ್ಲಿ ಪೊಲೀಸ್ ಜೀಪಿಗೆ ಮುತ್ತಿಗೆ, ಲಾಠಿ ಪ್ರಹಾರ](https://publictv.in/puttur-xerox-shop-owner-attacked-over-burnt-document-mob-gheroas-police-jeep-cops-resort-to-lathi-charge/)

_2026-08-23 · Public TV · Public TV &#8211; Latest Kannada News, Public TV Kannada Live, Public TV News_

ಮಂಗಳೂರು: ದಾಖಲೆ ಜೆರಾಕ್ಸ್ ಮಾಡುವ ವೇಳೆ ಅಚಾನಕ್ಕಾಗಿ ಕಾಗದ ಸುಟ್ಟುಹೋದ ವಿಚಾರಕ್ಕೆ ಸಂಬಂಧಿಸಿದಂತೆ ಜೆರಾಕ್ಸ್ ಅಂಗಡಿ ಮಾಲೀಕರು ಮತ್ತು ಗ್ರಾಹಕರು ಹೊಡೆದಾಡಿಕೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ(Putturu) ದರ್ಬೆಯಲ್ಲಿ ನಡೆದಿದೆ. ಸುಳ್ಯದ ಮಂಡೆಕೋಲು ನಿವಾಸಿಗಳಾದ ಫಾತಿಮಾ ಮತ್ತು ಮುಬಾಶಿರಾ ಎಂಬವರು ದರ್ಬೆಯಲ್ಲಿರುವ ಸುದರ್ಶನ್ ಪೈ ಎಂಬವರಿಗೆ ಸೇರಿದ ಜನಸೇವಾ ಜೆರಾಕ್ಸ್ ಅಂಗಡಿಗೆ ದಾಖಲೆಗಳ ಜೆರಾಕ್ಸ್ ಪ್ರತಿ ಮಾಡಿಸಲು ಬಂದಿದ್ದರು. ಜೆರಾಕ್ಸ್(Xerox Shop) ತೆಗೆಯುವ…

## [ದಿನ ಭವಿಷ್ಯ 23-08-2026](https://publictv.in/daily-horoscope-23-08-2026/)

_2026-08-23 · Public TV · Public TV &#8211; Latest Kannada News, Public TV Kannada Live, Public TV News_

ರಾಹುಕಾಲ – 05:05 – 06:39 ಗುಳಿಕಕಾಲ – 03:32 – 05:05 ಯಮಗಂಡಕಾಲ – 12:25 – 01:59 ಸಂವತ್ಸರ : ಪರಾಭವನಾಮ, ಅಯನ : ದಕ್ಷಿಣಾಯಣ ಋತು : ವರ್ಷ, ಮಾಸ : ಶ್ರಾವಣ, ಪಕ್ಷ : ಶುಕ್ಲ, ತಿಥಿ : ಏಕಾದಶಿ, ನಕ್ಷತ್ರ : ಮೂಲಾ ಮೇಷ: ಕೃಷಿಕರಿಗೆ ಕಡಿಮೆ ಆದಾಯ, ಹಿರಿಯರಿಂದ ಸಹಾಯ, ಸ್ತ್ರೀಯರಿಗೆ ಆರೋಗ್ಯದಲ್ಲಿ ಸಮಸ್ಯೆ ವೃಷಭ: ಮಾತಿನಲ್ಲಿ ಒರಟು, ಧಾರ್ಮಿಕ ಕಾರ್ಯಕ್ಕೆ ದೇಣಿಗೆ ಕೊಡುವಿರಿ, ಸೇವಕರು ಸಹಾಯಕರಿಂದ ಏಳಿಗೆ \[…\]

## [ವಿಶ್ವದ ಮೊದಲ ಬೃಹತ್‌ ಎಲೆಕ್ಟ್ರಿಕ್‌ ಫ್ಲೈಟ್‌ ಹಾರಾಟ ಸಕ್ಸಸ್;‌ ವಿಮಾನದ ಒಂದು ಹಾರಾಟದ ವೆಚ್ಚ ಕೇವಲ 500 ರೂ.](https://publictv.in/worlds-largest-electric-aircraft-flies-for-27-minutes-on-5-dollar-of-power/)

_2026-08-23 · Public TV · Public TV &#8211; Latest Kannada News, Public TV Kannada Live, Public TV News_

ಒಂದು ಕಪ್ ಕಾಫಿ ಕುಡಿಯುವ ಹಣದಲ್ಲಿ ವಿಮಾನದಲ್ಲೇ ಪ್ರಯಾಣ ಮಾಡಬಹುದೇ? ಈ ಪ್ರಶ್ನೆಗೆ, ‘ಸಾಧ್ಯವೇ ಇಲ್ಲ’ ಎಂಬ ಉತ್ತರ ಬಂದೇ ಬರುತ್ತದೆ. ಆದರೂ, ವಿಮಾನಯಾನವನ್ನು ತುಂಬಾ ಅಗ್ಗವಾಗಿಸುವ ಸಂಶೋಧನೆಯೊಂದು ಆಗಿದೆ. ಅಮೆರಿಕದಲ್ಲಿ ಇತ್ತೀಚೆಗೆ ನಡೆದ ಪರೀಕ್ಷಾರ್ಥ ಹಾರಾಟವೊಂದು ಮುಂಬರುವ ವರ್ಷಗಳಲ್ಲಿ ವಿಮಾನ ಪ್ರಯಾಣ ಹೇಗಿರಬಹುದು ಎಂಬುದರ ಕುತೂಹಲಕಾರಿ ನೋಟವನ್ನು ನೀಡಿದೆ. ಭವಿಷ್ಯದಲ್ಲಿ ತುಂಬಾ ಅಗ್ಗದ ದರದಲ್ಲಿ ವಿಮಾನ ಪ್ರಯಾಣ ಮಾಡಬಹುದು ಎಂಬುದನ್ನು ಈ ಸಂಶೋಧನೆ ಮುನ್ನುಡಿ ಬರೆದಿದೆ. ಅದು ಹೇಗೆ?…

## [ಇಂದು ಪುತ್ರದಾ ಏಕಾದಶಿ &#8211; ಈ ನೈವೇದ್ಯ ಅರ್ಪಿಸಿ, ದೇವರ ಕೃಪೆಗೆ ಪಾತ್ರರಾಗಿ](https://publictv.in/today-is-putrada-ekadashi-offer-this-naivedhyam-and-seek-lord-vishnus-blessings/)

_2026-08-23 · Public TV · Public TV &#8211; Latest Kannada News, Public TV Kannada Live, Public TV News_

ಸಮಸ್ತ ಹಿಂದೂ ಧರ್ಮೀಯರಿಗೆ ಏಕಾದಶಿ ವ್ರತವು ಅತ್ಯಂತ ಪವಿತ್ರ ಹಾಗೂ ವಿಶೇಷವಾದ ದಿನ. ವರ್ಷದ 24 ಏಕಾದಶಿಗಳಿಗೂ ಅದರದ್ದೇ ಆದ ಮಹತ್ವವಿದೆ. ಅದರಲ್ಲೂ ಶ್ರಾವಣ ಮಾಸದಲ್ಲಿ ಬರುವ ಪುತ್ರದಾ ಏಕಾದಶಿಯು ಭಗವಾನ್ ಶ್ರೀಹರಿಯ ಕೃಪೆಯನ್ನು ಸಂಪೂರ್ಣವಾಗಿ ಕರುಣಿಸುವ ಶ್ರೇಷ್ಠ ವ್ರತವೆಂದು ಪರಿಗಣಿಸಲಾಗಿದೆ. ಹೆಸರೇ ಸೂಚಿಸುವಂತೆ, ಈ ದಿನದಂದು ಭಕ್ತಿ-ಶ್ರದ್ಧೆಯಿಂದ ಉಪವಾಸ ಮತ್ತು ಪೂಜೆಯನ್ನು ಆಚರಿಸುವುದರಿಂದ ಸಂತಾನ ಪ್ರಾಪ್ತಿ ಹಾಗೂ ಮಕ್ಕಳ ಒಳಿತಿಗಾಗಿ ಮಾಡುವ ಪ್ರಾರ್ಥನೆಗಳು ಫಲಿಸುತ್ತವೆ ಎಂಬುದು ಭಕ್ತರ…

## [ರಾಜ್ಯದ ಹವಾಮಾನ ವರದಿ 23-08-2026](https://publictv.in/karnataka-weather-report-23-08-2026/)

_2026-08-23 · Public TV · Public TV &#8211; Latest Kannada News, Public TV Kannada Live, Public TV News_

ಕಳೆದ ಕೆಲವು ದಿನಗಳಿಂದ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಮಳೆಯಾಗುತ್ತಿದೆ. ಇಂದು ಸಹ ರಾಜ್ಯದ ಕೆಲವು ಭಾಗಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ವಿಶೇಷವಾಗಿ ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ಹೆಚ್ಚಿನ ಮಳೆಯಾಗಲಿದೆ ಎಂದು ಇಲಾಖೆ ಎಚ್ಚರಿಕೆ ನೀಡಿದೆ. ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ 21 ಡಿಗ್ರಿ ಸೆಲ್ಸಿಯಸ್ ಇರಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 24 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ 20 ಡಿಗ್ರಿ…

## [ನಿವೃತ್ತಿ ಬೆನ್ನಲ್ಲೇ ತೇಜಸ್ ಮಾರ್ಕ್-2 ಜೆಟ್‌ ಕಾರ್ಯಕ್ಷಮತೆ ಟೀಕಿಸಿದ ವಾಯುಪಡೆ ಏರ್ ಮಾರ್ಷಲ್](https://publictv.in/ex-iaf-vice-chief-kapoor-says-indias-4-5-gen-tejas-may-not-have-relevance-in-2030s-country-must-partner/)

_2026-08-22 · Public TV · Public TV &#8211; Latest Kannada News, Public TV Kannada Live, Public TV News_

ನವದೆಹಲಿ: ಭಾರತದ ವಾಯುಪಡೆಯ ಗೇಮ್‌ಚೇಂಜರ್ ಅಂತಲೇ ಖ್ಯಾತಿಗಳಿಸಿರುವ ಸ್ವದೇಶಿ ನಿರ್ಮಿತ ತೇಜಸ್ ಎಂಕೆ-2 ಫೈಟರ್ ಜೆಟ್‌ಗಳ ಕಾರ್ಯಕ್ಷಮತೆ, ದಕ್ಷತೆಯನ್ನು ಇತ್ತೀಚೆಗಷ್ಟೇ ವಾಯಪಡೆಯಿಂದ ನಿವೃತ್ತರಾಗಿರುವ ಮಾಜಿ ಉಪಮುಖ್ಯಸ್ಥ ನಾಗೇಶ್ ಕಪೂರ್ ಟೀಕಿಸಿದ್ದಾರೆ. ಭಾರತದಲ್ಲೇ ತಯಾರಾಗುತ್ತಿರುವ ತೇಜಸ್‌ ಎಂಕೆ-2 (ಮಾರ್ಕ್‌-2) ಯುದ್ಧ ಚಿಮಾನವು 2030ರ ದಶಕದ ಮಧ್ಯಭಾಗದಲ್ಲಿ ಗಣ ಸಂಖ್ಯೆಯಲ್ಲಿ ಸೇವೆಗೆ ಸೇರ್ಪಡೆಯಾಗುವ ವೇಳೆಗೆ, ಮುಂಚೂಣಿ ಕಾರ್ಯಾಚರಣೆಗಳಿಗೆ ಪ್ರಸ್ತುತವಾಗದೇ ಇರಬಹುದು ಎಂದು ಅಚ್ಚರಿ…

## [Stocks ranked by what execs say (Sponsored)](https://crawlproof.com/a/l3acBJnOomeB)

_2026-08-22 · **Sponsored**_

Evidence-backed watchlists from earnings calls and filings, cited to real transcripts—not guesses.

## [ಜಾನ್ವಿಗೆ ಸಿಹಿ &#8211; ಕಹಿ; ಎಲ್ಲಾ ಫ್ಯಾನ್‌ ಪೇಜ್‌ಗಳಲ್ಲಿನ ಫೋಟೋ ತೆಗೆಸಲು ಕೋರ್ಟ್‌ ನಕಾರ](https://publictv.in/janhvi-kapoor-gets-partial-relief-as-delhi-hc-orders-removal-of-obscene-content-rejects-blanket-takedown/)

_2026-08-22 · Public TV · Public TV &#8211; Latest Kannada News, Public TV Kannada Live, Public TV News_

– 552 ಪೇಜ್‌ಗಳಲ್ಲಿನ ಅಶ್ಲೀಲ ಫೋಟೋಗಳನ್ನ ತೆಗೆದುಹಾಕಲು ದೆಹಲಿ ಹೈಕೋರ್ಟ್ ಆದೇಶ ಬಾಲಿವುಡ್ ನಟಿ ಜಾನ್ವಿ ಕಪೂರ್ ಅವರ ವೈಯಕ್ತಿಕ ಹಕ್ಕುಗಳು (Personality Rights) ಕುರಿತ ಅರ್ಜಿಯಲ್ಲಿ ದೆಹಲಿ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. ಸುಮಾರು ಸಾವಿರಾರು ವೆಬ್‌ ಪೇಜ್‌ಗಳಲ್ಲಿರುವ ಅಶ್ಲೀಲ ಫೋಟೋ ಮತ್ತು ಪೋರ್ನೋಗ್ರಾಫಿಕ್ ವಿಷಯವನ್ನು ತೆಗೆದುಹಾಕುವಂತೆ ನ್ಯಾಯಾಲಯ ನಿರ್ದೇಶನ ನೀಡಿದೆ. ಆದ್ರೆ, ಅವರ ಹೆಸರಿನಲ್ಲಿ ಅಥವಾ ಗುರುತಿನೊಂದಿಗೆ ಕಾರ್ಯನಿರ್ವಹಿಸುವ ಎಲ್ಲಾ ಫ್ಯಾನ್ ಪೇಜ್‌ಗಳು ಮತ್ತು…

## [ಯುವತಿ ಮೇಲೆ ಅತ್ಯಾಚಾರ ಎಸಗಿ ಕೊಲೆ &#8211; ಪ್ರಮುಖ ಆರೋಪಿ ನ್ಯಾಯಾಂಗ ಬಂಧನಕ್ಕೆ, ನಾಲ್ವರು ಪೇದೆ ಅಮಾನತು](https://publictv.in/rape-and-murder-of-young-woman-prime-accused-sent-to-judicial-custody-four-constables-suspended/)

_2026-08-22 · Public TV · Public TV &#8211; Latest Kannada News, Public TV Kannada Live, Public TV News_

ರಾಯಚೂರು: ಜಿಲ್ಲೆಯ ಸಿರವಾರ (Sirwar) ತಾಲೂಕಿನ ಹೊಕ್ರಾಣಿ ಗ್ರಾಮದಲ್ಲಿ ನಡೆದಿದ್ದ ಯುವತಿ ಅತ್ಯಾಚಾರ & ಕೊಲೆ ಪ್ರಕರಣದ ಪ್ರಮುಖ ಆರೋಪಿಯನ್ನ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಜೊತೆಗೆ ಪ್ರಕರಣದಲ್ಲಿ ಕರ್ತವ್ಯಲೋಪ ಎಸಗಿದ ನಾಲ್ಕು ಜನ ಪೇದೆಗಳನ್ನು ಅಮಾನತು ಮಾಡಿದ್ದಾರೆ. ಹೊಕ್ರಾಣಿ ಗ್ರಾಮದ ಅಶ್ವಿನಿ (21) ಶವ ಬಾವಿಯಲ್ಲಿ ಪತ್ತೆಯಾಗಿತ್ತು. ಈ ಸಂಬಂಧ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ದಾಖಲಾಗಿತ್ತು. ಇದೀಗ ನಾಲ್ಕು ಜನ ಆರೋಪಿಗಳನ್ನ ಪೊಲೀಸರು ವಶಕ್ಕೆ ಪಡೆದಿದ್ದು, ಪ್ರಮುಖ…

## [30 ವರ್ಷದ ರಾಜಕೀಯ ಜೀವನದಲ್ಲಿ ಇಂತಹ ಡಿಸಿ ನೋಡಿಲ್ಲ &#8211; ಕೆ.ಎಸ್ ಲತಾಕುಮಾರಿ ವಿರುದ್ಧ ಹೆಚ್.ಡಿ.ರೇವಣ್ಣ ಕೆಂಡಾಮಂಡಲ](https://publictv.in/i-have-never-seen-such-a-dc-in-my-30-years-of-political-career-h-d-revanna-sparks-against-k-s-latha-kumari/)

_2026-08-22 · Public TV · Public TV &#8211; Latest Kannada News, Public TV Kannada Live, Public TV News_

ಹಾಸನ: ಜಿಲ್ಲಾಧಿಕಾರಿ (DC) ಪ್ರಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೋ ಇಲ್ಲವೊ ಗೊತ್ತಿಲ್ಲ. ನನ್ನ ಮೂವತ್ತು ವರ್ಷದ ರಾಜಕೀಯ ಜೀವನದಲ್ಲಿ ಇಂತಹ ಡಿಸಿ ನೋಡಿಲ್ಲ ಎಂದು ಹಾಸನ ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ (KS Latha Kumari) ವಿರುದ್ಧ ಮಾಜಿ ಸಚಿವ ಹೆಚ್.ಡಿ.ರೇವಣ್ಣ (HD Revanna) ಕೆಂಡಾಮಂಡಲರಾಗಿದ್ದಾರೆ. ಹಾಸನದಲ್ಲಿ ಜೆಡಿಎಸ್ ಶಾಸಕರಾದ ಎ.ಮಂಜು, ಹೆಚ್.ಪಿ.ಸ್ವರೂಪ್‌ಪ್ರಕಾಶ್ ಜೊತೆ ಜಂಟಿ ಸುದ್ದಿಗೋಷ್ಠಿ ನಡೆಸಿದ ಅವರು ಡಿಸಿ ವಿರುದ್ಧ ಹರಿಹಾಯ್ದರು. ಅದು ಎಲ್ಲಿಂದ ಹಿಡಿದುಕೊಂಡು…

## [ಮುಂದಿನ ದಿನಗಳಲ್ಲಿ ಪಿಯು ವಿದ್ಯಾರ್ಥಿಗಳಿಗೂ ಉಚಿತ ನೋಟ್‌ಬುಕ್ &#8211; ಮಧು ಬಂಗಾರಪ್ಪ](https://publictv.in/free-notebooks-for-pu-students-in-the-coming-days-madhu-bangarappa/)

_2026-08-22 · Public TV · Public TV &#8211; Latest Kannada News, Public TV Kannada Live, Public TV News_

ಬೆಂಗಳೂರು/ಶಿವಮೊಗ್ಗ: ಬಜೆಟ್‌ನಲ್ಲಿ ಪ್ರಕಟಿಸಿದಂತೆಯೇ ಪ್ರಸ್ತುತ ಶೈಕ್ಷಣಿಕ ಸಾಲಿನಿಂದ ರಾಜ್ಯದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಉಚಿತವಾಗಿ ಪಠ್ಯ ಪುಸ್ತಕ ವಿತರಿಸಲಾಗಿದೆ. ಮುಂದಿನ ದಿನಗಳಲ್ಲಿ ನೋಟ್‌ಬುಕ್‌ಗಳನ್ನು ಕೂಡ ಉಚಿತವಾಗಿ ವಿತರಿಸುವ ಉದ್ದೇಶವಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಚಿವ ಮಧು ಬಂಗಾರಪ್ಪ (Madhu Bangarappa) ಹೇಳಿದ್ದಾರೆ. ನಗರದ ಸೈನ್ಸ್ ಮೈದಾನದಲ್ಲಿ ಕರ್ನಾಟಕ ಪಬ್ಲಿಕ್ ಶಾಲೆಯ ನೂತನ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ…

## [ಅನಿರೀಕ್ಷಿತ ಹಾಡುಗಳೊಂದಿಗೆ ಅತಿಥಿಗಳ ಆಗಮನ](https://publictv.in/anireekshitha-athithigalu-song-release/)

_2026-08-22 · Public TV · Public TV &#8211; Latest Kannada News, Public TV Kannada Live, Public TV News_

ʻಅನಿರೀಕ್ಷಿತ ಅತಿಥಿಗಳುʼ ಎನ್ನುವುದು ಸಿನಿಮಾದ ಹೆಸರು. ಚಿತ್ರದ ಹೆಸರಿಗೂ ಕ್ರೈಮ್ ಜಾನ್ರಾಗೂ ಸಂಬಂಧವೇ ಇಲ್ಲ ಎಂದುಕೊಂಡಿರುವಾಗಲೇ ಹಾಡುಗಳು ಇನ್ನಷ್ಟು ಕುತೂಹಲ ಸೃಷ್ಟಿಸುವ ರೀತಿಯಲ್ಲಿ ಮೂಡಿ ಬಂದಿವೆ. ಇತ್ತೀಚೆಗೆ ಸಿನಿಮಾದ ಹಾಡುಗಳ ಬಿಡುಗಡೆ ಆದವು. ಆರು ಪ್ರಮುಖ ಪಾತ್ರಗಳನ್ನು ಕೇಂದ್ರವಾಗಿಸಿರುವ ಈ ಚಿತ್ರವನ್ನು ನವ ನಿರ್ದೇಶಕ ಮನೋಜ್ ಅಣ್ಣಯ್ಯ ನಿರ್ದೇಶಿಸಿದ್ದಾರೆ. ಬಿ ವಿನೋದ್ ಕುಮಾರ್ ನಿರ್ಮಾಣದ ಈ ಚಿತ್ರದಲ್ಲಿ 4 ಪ್ರಮುಖ ಹಾಡುಗಳಿವೆ. ಸ್ವಾಮಿನಾಥನ್ ಆರ್.ಕೆ ಸಂಗೀತದಲ್ಲಿ ಒಂದು…

## [IAS ಅಧಿಕಾರಿ ಐಟಿ, ಇಡಿ ಭಯದಿಂದ ಎಸ್ಕೇಪ್ ಆಗಿಲ್ಲ, ತಂದೆ ನೋಡೋಕೆ ಹೋಗಿದ್ದಾರೆ: ಪ್ರಿಯಾಂಕ್‌ ಖರ್ಗೆ](https://publictv.in/priyank-kharge-says-ias-officer-gyanendra-kumar-has-gone-to-meet-his-father-in-uttar-pradesh/)

_2026-08-22 · Public TV · Public TV &#8211; Latest Kannada News, Public TV Kannada Live, Public TV News_

– 2 ದಿನಗಳಲ್ಲಿ ಬೆಂಗಳೂರಿಗೆ ವಾಪಸ್‌ ಆಗ್ತಾರೆ ಎಂದು ಸ್ಪಷ್ಟನೆ ಬೆಂಗಳೂರು: ಐಎಎಸ್‌ ಅಧಿಕಾರಿ (IAS Officer) ಜ್ಞಾನೇಂದ್ರ ಕುಮಾರ್ ನಾಪತ್ತೆ ಆಗಿಲ್ಲ. ಅವರ ತಂದೆಗೆ ಅನಾರೋಗ್ಯದ ಹಿನ್ನಲೆ ನೋಡಲು ಊರಿಗೆ ಹೋಗಿದ್ದಾರೆ ಎಂದು ಗೃಹ ಸಚಿವ ಪ್ರಿಯಾಂಕ್‌ ಖರ್ಗೆ (Priyank Kharge) ಸ್ಪಷ್ಟನೆ ನೀಡಿದ್ದಾರೆ. ಪಶುವೈದ್ಯಧಾರಿ ಪರೀಕ್ಷೆ ಅಕ್ರಮ ಸಂಬಂಧ ಕೆಪಿಎಸ್‌ಸಿ (KPSC) ಕಚೇರಿ, ಸೇರಿದಂತೆ ಹಲವು ಕಡೆಗಳಲ್ಲಿ ಇ.ಡಿ. ಅಧಿಕಾರಿಗಳು ದಾಳಿ ನಡೆಸಿದ ನಂತರ ಪರೀಕ್ಷೆ ಕಂಟ್ರೋಲರ್‌ ಆಗಿ ಕೆಲಸ ಮಾಡಿದ್ದ…

## [ಮುಂದಿನ 3 ತಿಂಗಳು ರೇಸ್ ಕೋರ್ಸ್ ರಸ್ತೆಯ ಒಂದು ಭಾಗ ಕ್ಲೋಸ್](https://publictv.in/part-of-race-course-road-to-be-closed-for-next-3-months/)

_2026-08-22 · Public TV · Public TV &#8211; Latest Kannada News, Public TV Kannada Live, Public TV News_

ಬೆಂಗಳೂರು: ವೈಟ್ ಟಾಪಿಂಗ್ (White Topping) ಕಾಮಗಾರಿ ಹಿನ್ನೆಲೆ ಮುಂದಿನ ಮೂರು ತಿಂಗಳು ಬೆಂಗಳೂರಿನ ಹೃದಯ ಭಾಗ ರೇಸ್ ಕೋರ್ಸ್ ರಸ್ತೆಯ (Race Course Road) ಒಂದು ಭಾಗ ಕ್ಲೋಸ್ ಆಗಲಿದೆ. ಕಾಮಗಾರಿ ಹಿನ್ನೆಲೆ ರಸ್ತೆಗೆ ಅಡ್ಡಲಾಗಿ ಬ್ಯಾರಿಕೇಡ್ ಅಳವಡಿಕೆ ಮಾಡಲಾಗಿದೆ. ರೇಸ್ ಕೋರ್ಸ್ ಸರ್ಕಲ್‌ನಿಂದ ಹಳೆ ಜೆಡಿಎಸ್ ಆಫೀಸ್ ರಸ್ತೆ ಕ್ಲೋಸ್ ಆಗಲಿದೆ. ಒಂದು ಭಾಗ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟು ಮತ್ತೊಂದು ಭಾಗ ಕ್ಲೋಸ್ ಆಗಲಿದೆ. ಸಾಮಾನ್ಯವಾಗಿ ಹೆಚ್ಚು ಟ್ರಾಫಿಕ್ ಇರುವ ಪ್ರದೇಶ ಇದಾಗಿದ್ದು,…

## [ಗೋಲ್ಡನ್ ಸ್ಟಾರ್ ಗಣೇಶ್‌ಗೆ ಜೊತೆಯಾದ ನಟಿ ಸಂಜನಾ ಆನಂದ್](https://publictv.in/actress-sanjana-anand-pairs-up-with-golden-star-ganesh/)

_2026-08-22 · Public TV · Public TV &#8211; Latest Kannada News, Public TV Kannada Live, Public TV News_

ಗೋಲ್ಡನ್ ಸ್ಟಾರ್ ಗಣೇಶ್ (Ganesh) ನಟನೆಯ ಬಹುನಿರೀಕ್ಷಿತ ‘ತಮ್ಮ ಸುಖಾಗಮನ ಬಯಸುವ’ ಚಿತ್ರಕ್ಕೆ ನಾಯಕಿಯಾಗಿ ಸಂಜನಾ ಆನಂದ್ (Sanjana Anand) ಆಯ್ಕೆಯಾಗಿದ್ದಾರೆ. ಈ ಮೂಲಕ ಇಬ್ಬರು ಕಲಾವಿದರು ಇದೇ ಮೊದಲ ಬಾರಿಗೆ ತೆರೆಹಂಚಿಕೊಳ್ಳುತ್ತಿದ್ದಾರೆ. ರಾಮೇನಹಳ್ಳಿ ಜಗನ್ನಾಥ್ ನಿರ್ದೇಶಿಸುತ್ತಿರುವ ಈ ಕೌಟುಂಬಿಕ ಕಥಾಹಂದರದ ಚಿತ್ರವು ಸದ್ಯ ಭರದಿಂದ ಚಿತ್ರೀಕರಣಗೊಳ್ಳುತ್ತಿದ್ದು, ಬೆಂಗಳೂರಿನಲ್ಲಿ ತನ್ನ ಮೊದಲ ಹಂತದ ಚಿತ್ರೀಕರಣವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ‘ಹೊಂದಿಸಿ ಬರೆಯಿರಿ’ ಚಿತ್ರದ…

## [ಕನ್ನಡದಲ್ಲೂ ಬರಲಿದೆ ರಮೇಶ್ ವರ್ಮಾ ʻಮಹಾವೀರ ಕರ್ಣ&#8217;](https://publictv.in/kannada-cinema-mahavira-karna-rv-studios-ramesh-varma/)

_2026-08-22 · Public TV · Public TV &#8211; Latest Kannada News, Public TV Kannada Live, Public TV News_

ಪ್ರತಿಷ್ಠಿತ ಪೆನ್ ಮೂವೀಸ್ ಮತ್ತು ಶ್ರೀ ನೀಲಾದ್ರಿ ಪ್ರೊಡಕ್ಷನ್ಸ್, ಆರ್‌ವಿ ಸ್ಟುಡಿಯೋಸ್ ಸಹಯೋಗದಲ್ಲಿ ಕರ್ಣನ ಬಗ್ಗೆ ‘ಮಹಾವೀರ ಕರ್ಣ’ ಸಿನಿಮಾ ಅನೌನ್ಸ್ ಆಗಿದೆ. ತೆಲುಗಿನ ಖ್ಯಾತ ನಿರ್ದೇಶಕ ರಾಕ್ಷಸುಡು, ಖಿಲಾಡಿ, ವೀರ ಅಂತ ಸೂಪರ್ ಹಿಟ್ ಸಿನಿಮಾಗಳನ್ನು ನಿರ್ದೇಶಿಸಿರುವ ರಮೇಶ್ ವರ್ಮಾ ‘ಮಹಾವೀರ ಕರ್ಣ’ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಆ್ಯಕ್ಷನ್, ಥ್ರಿಲ್ಲರ್ ಹಾಗೂ ಕಮರ್ಷಿಯಲ್ ಸಿನಿಮಾಗಳಲ್ಲಿ ತಮ್ಮದೇ ಛಾಪು ಮೂಡಿಸಿರುವ ರಮೇಶ್ ವರ್ಮಾ, ಇದೀಗ ಮಹಾಭಾರತದ ವ್ಯಕ್ತಿ ಕರ್ಣನ…

## [ವಾಲ್ಮೀಕಿ ನಿಗಮದಿಂದ ಹಿಡಿದು ರಸ್ತೆ ಗುಂಡಿ ಮುಚ್ಚೋಕೂ ಕೋಟ್ಯಂತರ ಹಣ ಲೂಟಿ &#8211; ಛಲವಾದಿ](https://publictv.in/from-valmiki-corporation-to-filling-potholes-crores-of-rupees-looted-chalavadis-outburst/)

_2026-08-22 · Public TV · Public TV &#8211; Latest Kannada News, Public TV Kannada Live, Public TV News_

ಬೆಂಗಳೂರು: ವಾಲ್ಮೀಕಿ ನಿಗಮದಿಂದ (Valmini Scam) ಆರಂಭವಾಗಿ ಬೆಂಗಳೂರು ರಸ್ತೆ ಗುಂಡಿಗಳನ್ನ ತುಂಬಲು ಲಕ್ಷಾಂತರ ಕೋಟಿವರೆಗೆ ಲೂಟಿ ನಡೆಯುತ್ತಿದೆ. ಸಿಕ್ಕ ಸಿಕ್ಕ ಕಡೆಯಲ್ಲಿ ಲೂಟಿ ಮಾಡುವ ಕಾಂಗ್ರೆಸ್ (Congress) ಭ್ರಷ್ಟಾಚಾರ ಮಾಡದೇ ಬದುಕುವುದೇ ಇಲ್ಲ ಅಂತ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ (Chalavadi Narayanaswamy) ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ ಕಚೇರಿಯಲ್ಲಿ ಮಾತಾಡಿದ ಅವರು, ಕಾಂಗ್ರೆಸ್ ಸರ್ಕಾರ ಹಾಗೂ ಅಧಿಕಾರಿಗಳು ಲೂಟಿ…

## [Stream Torrents and IPTV Instantly (Sponsored)](https://crawlproof.com/a/SnZGf355nvxJ)

_2026-08-22 · **Sponsored**_

Search, index, and play music, movies, books, and live TV in your browser.

## [1 ಅಪಾರ್ಟ್ಮೆಂಟ್‌ಗೆ ಒಂದೇ ಅಸೋಸಿಯೇಷನ್; ಅಪಾರ್ಟ್ಮೆಂಟ್ ನಿವಾಸಿಗಳ ಹಿತರಕ್ಷಣೆಗಾಗಿ ಹೊಸ ವಿಧೇಯಕ: ಕೃಷ್ಣ ಬೈರೇಗೌಡ](https://publictv.in/new-bill-to-protect-apartment-residents/)

_2026-08-21 · Public TV · Public TV &#8211; Latest Kannada News, Public TV Kannada Live, Public TV News_

ಬೆಂಗಳೂರು: ಅಪಾರ್ಟ್ಮೆಂಟ್ ನಿವಾಸಿಗಳ ಹಿತರಕ್ಷಣೆ ಕಾಪಾಡುವ ಹಾಗೂ ಅವರಿಗೆ ಶಾಸನಬದ್ಧ ಹಕ್ಕುಗಳನ್ನು ಒದಗಿಸುವ ಸಲುವಾಗಿ 2026ನೇ ಸಾಲಿನ ‘ಕರ್ನಾಟಕ ಅಪಾರ್ಟ್ಮೆಂಟ್ (ಮಾಲೀಕತ್ವ ಮತ್ತು ನಿರ್ವಹಣೆ) ವಿಧೇಯಕಕ್ಕೆ ಅಂಗೀಕಾರ ದೊರೆತಿದೆ. ವಿಧಾನಸಭೆಯಲ್ಲಿ ‘2026ನೇ ಸಾಲಿನ ಕರ್ನಾಟಕ ಅಪಾರ್ಟ್ಮೆಂಟ್ (ಮಾಲೀಕತ್ವ ಮತ್ತು ನಿರ್ವಹಣೆ) ವಿಧೇಯಕʼವನ್ನು ಮಂಡಿಸಿ ವಿವರಣೆ ನೀಡಿದ ಅವರು, “ರಾಜ್ಯದಲ್ಲಿ ದಿನೇ ದಿನೇ ಬೆಳೆಯುತ್ತಿರುವ ಅಪಾರ್ಟ್ಮೆಂಟ್ ಸಂಸ್ಕೃತಿ, ನಿವಾಸಿಗಳು ಎದುರಿಸುತ್ತಿರುವ ನಿರಂತರ…

## [ನೈಸ್‌ ಜಟಾಪಟಿ &#124; ಕೈಮುಗಿದು ಹೇಳುತ್ತೇನೆ ಯುವಕರೇ ಟೋಲ್ ಕಟ್ಟಬೇಡಿ, FIR ಗೆ ಹೆದರಬೇಡಿ &#8211; ಹೆಚ್‌ಡಿಕೆ ಕರೆ](https://publictv.in/hd-kumaraswamy-calls-young-people-dont-pay-the-toll-in-nice-road/)

_2026-08-21 · Public TV · Public TV &#8211; Latest Kannada News, Public TV Kannada Live, Public TV News_

ಬೆಂಗಳೂರು: ಕೈಮುಗಿದು ಹೇಳುತ್ತೇನೆ ಯುವಕರೇ ಟೋಲ್ ಕಟ್ಟಬೇಡಿ, FIR ಗೆ ಹೆದರಬೇಡಿ ಎಂದು ಕೇಂದ್ರ ಸಚಿವ ಹೆಚ್‌.ಡಿ ಕುಮಾರಸ್ವಾಮಿ ಕರೆ ನೀಡಿದ್ದಾರೆ. ನೈಸ್‌ ರಸ್ತೆಯ ಟೋಲ್‌ ಸಂಗ್ರಹ ವಿಚಾರವಾಗಿ ಕೇಂದ್ರ ಸಚಿವ ಹಾಗೂ ಜೆಡಿಎಸ್‌ ನಾಯಕ ಹೆಚ್‌.ಡಿ. ಕುಮಾರಸ್ವಾಮಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ನೈಸ್‌ ಸಂಸ್ಥೆ ವಿರುದ್ಧದ ಆರೋಪಗಳ ಹಿನ್ನೆಲೆಯಲ್ಲಿ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿರುವ ಅವರು, ಸಾರ್ವಜನಿಕರು ಟೋಲ್‌ ಪಾವತಿಸದಂತೆ ಕರೆ ನೀಡಿದ್ದಾರೆ.…

## [ಚುನಾವಣೆಗೂ ಮುನ್ನ ಯೋಗಿ ಸರ್ಕಾರ ಭದ್ರತಾ ಪ್ಲ್ಯಾನ್ &#8211; ಮಾಯಾವತಿ ಸೇರಿ 44 ನಾಯಕರಿಗೆ ಬುಲೆಟ್‌ಪ್ರೂಫ್ ಜಾಕೆಟ್](https://publictv.in/yogi-govts-big-security-plan-before-up-polls-bulletproof-jackets-for-akhilesh-mayawati-42-others-sources/)

_2026-08-21 · Public TV · Public TV &#8211; Latest Kannada News, Public TV Kannada Live, Public TV News_

– 10 ಲಕ್ಷ ರೂ. ಮೌಲ್ಯದ ಬುಲೆಟ್‌ಪ್ರೂಫ್ ಜಾಕೆಟ್‌ ಖರೀದಿ ಲಕ್ನೋ: ಉತ್ತರ ಪ್ರದೇಶದಲ್ಲಿ ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರ (Yogi Adityanath Govt) ಪ್ರಮುಖ ಭದ್ರತಾ ಕ್ರಮಕ್ಕೆ ಮುಂದಾಗಿದೆ. ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಹಾಗೂ ಬಹುಜನ ಸಮಾಜ ಪಕ್ಷದ (BSP) ಅಧ್ಯಕ್ಷೆ ಮಾಯಾವತಿ ಸೇರಿದಂತೆ ಸುಮಾರು 44 ಪ್ರಮುಖ ರಾಜಕೀಯ ನಾಯಕರಿಗೆ ಬುಲೆಟ್‌ಪ್ರೂಫ್ ಜಾಕೆಟ್‌ಗಳನ್ನ (Bulletproof Jackets )ಒದಗಿಸಲು ಸಿದ್ಧತೆ ನಡೆಸಿದೆ…

## [ಬ್ಯುಸಿಯಾಗಿದ್ರೂ ವರಮಹಾಲಕ್ಷ್ಮೀ ಹಬ್ಬ ಮಿಸ್‌ ಮಾಡದ ಯಶ್‌ &#8211; ವರ್ಚುವಲ್‌ ಆಗಿ ಪತ್ನಿಗೆ ಸಾಥ್‌](https://publictv.in/yash-participates-virtually-in-varalakshmi-festival/)

_2026-08-21 · Public TV · Public TV &#8211; Latest Kannada News, Public TV Kannada Live, Public TV News_

ಸಾಮಾನ್ಯವಾಗಿ ಪ್ರತಿ ಹಬ್ಬದಲ್ಲೂ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದ ಯಶ್ (Yash) ಮತ್ತು ರಾಧಿಕಾ ಪಂಡಿತ್ (Radhika Pandit) ಜೋಡಿ, ಈ ಬಾರಿ ವರಮಹಾಲಕ್ಷ್ಮಿ ಹಬ್ಬವನ್ನು ತುಸು ಭಿನ್ನವಾಗಿ ಆಚರಿಸಿದೆ. ಬಹುನಿರೀಕ್ಷಿತ ‘ಟಾಕ್ಸಿಕ್’ (Toxic) ಸಿನಿಮಾದ ಪ್ರಚಾರ ಕಾರ್ಯಗಳಲ್ಲಿ ರಾಕಿಂಗ್ ಸ್ಟಾರ್ ಯಶ್ ಬ್ಯುಸಿಯಾಗಿರುವುದರಿಂದ, ಹಬ್ಬದ ಸಂಭ್ರಮದಲ್ಲಿ ನೇರವಾಗಿ ಭಾಗವಹಿಸಲು ಸಾಧ್ಯವಾಗಿಲ್ಲ. ಆದರೆ, ಬಿಡುವಿಲ್ಲದ ಸಿನಿಮಾದ ಕೆಲಸಗಳ ನಡುವೆಯೂ ಯಶ್ ಅವರು ಹಬ್ಬದ ಸಂಭ್ರಮವನ್ನು ಮಿಸ್ ಮಾಡಿಕೊಂಡಿಲ್ಲ.…

## [500 ಕೆಪಿಎಸ್‌ ಶಾಲೆಗಳ ಅಭಿವೃದ್ಧಿಗೆ 1,750 ಕೋಟಿ ನೆರವು &#8211; ಎಡಿಬಿ ಜೊತೆ ಒಪ್ಪಂದಕ್ಕೆ ಸಿಎಂ ಡಿಕೆಶಿ ಸಹಿ](https://publictv.in/dk-shivakumar-signs-agreement-with-adb-for-rs-1750-crore-assistance-for-development-of-500-kps-schools/)

_2026-08-21 · Public TV · Public TV &#8211; Latest Kannada News, Public TV Kannada Live, Public TV News_

– 2030 ರೊಳಗೆ ಶಿಕ್ಷಣ ಕ್ರಾಂತಿಗೆ ಸರ್ಕಾರ ಮಹತ್ವದ ಹೆಜ್ಜೆ ಬೆಂಗಳೂರು: ಕರ್ನಾಟಕದ 500 ಕರ್ನಾಟಕ ಪಬ್ಲಿಕ್ ಸ್ಕೂಲ್‌ಗಳ (KPS) ಸಮಗ್ರ ಅಭಿವೃದ್ಧಿಗೆ ರಾಜ್ಯ ಸರ್ಕಾರವು ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್‌ (Asian Development Bank) ಸಹಯೋಗದೊಂದಿಗೆ 1,750 ಕೋಟಿ ರೂ. ಮೊತ್ತದ ಮಹತ್ವಾಕಾಂಕ್ಷಿ ಯೋಜನೆಯ ಒಪ್ಪಂದಕ್ಕೆ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ (DK Shivakumar) ಅವರು ವಿಧಾನಸೌಧದಲ್ಲಿ ಶುಕ್ರವಾರ ಸಹಿ ಹಾಕಿದರು. ಈ ವೇಳೆ ಡಿಸಿಎಂ ಡಾ. ಜಿ. ಪರಮೇಶ್ವರ್, ಪ್ರಾಥಮಿಕ ಹಾಗೂ…

## [ನಟ, ನಿರ್ದೇಶಕ ಓಂಪ್ರಕಾಶ್ ರಾವ್ ವಿರುದ್ಧ 3.85 ಕೋಟಿ ವಂಚನೆ ಆರೋಪ &#8211; ದೂರು ದಾಖಲು](https://publictv.in/actor-director-omprakash-rao-accused-of-cheating-rs-3-85-crore-complaint-filed/)

_2026-08-21 · Public TV · Public TV &#8211; Latest Kannada News, Public TV Kannada Live, Public TV News_

ಬೆಂಗಳೂರು: ಖ್ಯಾತ ನಿರ್ದೇಶಕ ಹಾಗೂ ನಟ ಓಂಪ್ರಕಾಶ್ ರಾವ್ ವಿರುದ್ಧ ವಂಚನೆ, ಕಿರುಕುಳ ಹಾಗೂ ಬೆದರಿಕೆ ಆರೋಪದಡಿ ದೂರು ದಾಖಲಾಗಿದೆ. ʻಫೀನಿಕ್ಸ್’ ಸಿನಿಮಾ ನಿರ್ಮಾಣಕ್ಕಾಗಿ ಹಂತ ಹಂತವಾಗಿ ಒಟ್ಟು 3 ಕೋಟಿ 85 ಲಕ್ಷ ಹಣ ಪಡೆದು, ಹಣ ವಾಪಸ್ ನೀಡದೇ ವಂಚಿಸಿದ್ದಾರೆ ಎಂದು ದೂರುದಾರರು ಆರೋಪಿಸಿದ್ದಾರೆ. ವಾಸುದೇವರೆಡ್ಡಿ, ಭಾಸ್ಕರ್ ಶೆಟ್ಟಿ, ವಸಂತಮ್ಮ ಹಾಗೂ ಜಯಲಕ್ಷ್ಮಿ ಎಂಬುವರು ಬ್ಯಾಡರಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಅನ್ವಯ, ʻಫೀನಿಕ್ಸ್’ ಸಿನಿಮಾ ನಿರ್ಮಾಣದ ಉದ್ದೇಶಕ್ಕಾಗಿ…

## [ನಾಗೇಂದ್ರ ರಾಜೀನಾಮೆ ಬಗ್ಗೆ ನೋಟಿಸ್‌ ‌ಕೊಟ್ಟು ವಿಪಕ್ಷ ಚರ್ಚೆ ಮಾಡಲಿ: ಡಿಕೆಶಿ](https://publictv.in/opposition-should-issue-a-notice-and-discuss-nagendras-resignation-dk-shivakumar/)

_2026-08-21 · Public TV · Public TV &#8211; Latest Kannada News, Public TV Kannada Live, Public TV News_

ಬೆಂಗಳೂರು: ವಿಧಾನ ಪರಿಷತ್ ಕಲಾಪ 5ನೇ ದಿನವೂ ಸಚಿವ ನಾಗೇಂದ್ರ (B Nagendra) ರಾಜೀನಾಮೆಗೆ ಒತ್ತಾಯಿಸಿ ಕಲಾಪ ಬಲಿಯಾಯ್ತು. ವಿಪಕ್ಷಗಳು ಹೋರಾಟ ಮುಂದುವರೆಸಿದ್ರು. ಈ ವೇಳೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ (DK Shivakumar) ಅವರು ನಾಗೇಂದ್ರ ರಾಜೀನಾಮೆ ಬಗ್ಗೆ ನೋಟಿಸ್‌ ‌ಕೊಟ್ಟು ವಿಪಕ್ಷ ಚರ್ಚೆ ಮಾಡಲಿ ಎಂದಿದ್ದಾರೆ. ಕಲಾಪ ಪ್ರಾರಂಭ ಆದ ಕೂಡಲೇ ಸಭಾಪತಿಗಳು ಪ್ರಶ್ನೋತ್ತರ ಕಲಾಪ, ಬರ ಸೇರಿ ವಿವಿಧ ವಿಷಯಗಳ ಬಗ್ಗೆ ಚರ್ಚೆ ಆಗಬೇಕು ಅವಕಾಶ ಕೊಡಿ ಅಂತ ಮನವಿ ಮಾಡಿದ್ರು‌‌. ಇದಕ್ಕೂ ಒಪ್ಪದ \[…\]

## [ಸಕಾಲ ಸೇವೆ, ಭೂ‌ಕಂದಾಯ ಸೇರಿ ಮಹತ್ವದ ಪ್ರಸ್ತಾವನೆಗಳಿಗೆ ಸಂಪುಟ ಸಭೆಯಲ್ಲಿ ಅನುಮೋದನೆ](https://publictv.in/several-important-proposals-approved-in-the-cabinet-meeting/)

_2026-08-21 · Public TV · Public TV &#8211; Latest Kannada News, Public TV Kannada Live, Public TV News_

– ಮೆಟ್ರಿಕ್ ನಂತರದ ವಿದ್ಯಾರ್ಥಿ ಹಾಸ್ಟೆಲ್‌ಗಳಿಗೆ ಸ್ವಂತ ಕಟ್ಟಡ ನಿರ್ಮಿಸಲು 250 ಕೋಟಿ ಬೆಂಗಳೂರು: ರಾಜ್ಯ ಸಚಿವ ಸಂಪುಟ ಸಭೆಯಲ್ಲಿಂದು ಹಲವು ಮಹತ್ವದ ತೀರ್ಮಾನಗಳನ್ನು ಕೈಗೊಳ್ಳಲಾಗಿದ್ದು, ವಿವಿಧ ವಿಧೇಯಕಗಳು, ಯೋಜನೆಗಳು ಹಾಗೂ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಅನುಮೋದನೆ ನೀಡಲಾಗಿದೆ. ಸಚಿವ ಸಂಪುಟದ ಪ್ರಮುಖ ತೀರ್ಮಾನಗಳು 1. ಸರ್ಕಾರಿ ಉದ್ಯಾನವನಗಳ ಸಂರಕ್ಷಣೆ ಕಾಯ್ದೆಗೆ ತಿದ್ದುಪಡಿ ಕರ್ನಾಟಕ ಸರ್ಕಾರಿ ಉದ್ಯಾನವನಗಳ (ಸಂರಕ್ಷಣೆ) (ತಿದ್ದುಪಡಿ) ವಿಧೇಯಕ, 2026ಕ್ಕೆ ಸಚಿವ ಸಂಪುಟ ಅನುಮೋದನೆ…

## [28 ಜೀವಾವಧಿ ಶಿಕ್ಷಾ ಬಂಧಿಗಳ ಅವಧಿ ಪೂರ್ವ ಬಿಡುಗಡೆಗೆ ಸಂಪುಟ ಅಸ್ತು](https://publictv.in/cabinet-approves-early-release-of-28-life-sentenced-prisoners/)

_2026-08-21 · Public TV · Public TV &#8211; Latest Kannada News, Public TV Kannada Live, Public TV News_

ಬೆಂಗಳೂರು: ರಾಜ್ಯದ ವಿವಿಧ ಕೇಂದ್ರ ಕಾರಾಗೃಹಗಳಲ್ಲಿ ಜೀವಾವಧಿ ಶಿಕ್ಷೆ (Life Imprisonment) ಅನುಭವಿಸುತ್ತಿರುವ ಸನ್ನಡತೆ ಹೊಂದಿರುವ ಅರ್ಹ ಬಂಧಿಗಳ ಪೈಕಿ 28 ಮಂದಿಯನ್ನ ಅವಧಿಪೂರ್ವ ಬಿಡುಗಡೆ ಮಾಡಲು ಇಂದು ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಒಟ್ಟು 45 ಪ್ರಕರಣಗಳ ಪೈಕಿ 28 ಜೀವಾವಧಿ ಶಿಕ್ಷಾ ಬಂಧಿಗಳನ್ನು ಸನ್ನಡತೆ ಆಧಾರದ ಮೇಲೆ ಅವಧಿ ಪೂರ್ವ ಬಿಡುಗಡೆ ಮಾಡಲು ಸಚಿವ ಸಂಪುಟ ಅನುಮೋದನೆ ನೀಡಿದೆ. ಇನ್ನೊಂದು ಪ್ರಕರಣವನ್ನು ಕೇಂದ್ರ ಗೃಹ ಸಚಿವಾಲಯದ ಸಹಮತಿ ಪಡೆದು ಅವಧಿಪೂರ್ವ ಬಿಡುಗಡೆ…

## [ಕಾಂಗ್ರೆಸ್ ಸರ್ಕಾರದಲ್ಲಿ ಸಾವಿರಾರು ರೌಡಿಶೀಟರ್‌ಗಳಿಗೆ ʻಬಿಡುಗಡೆ ಭಾಗ್ಯʼ](https://publictv.in/thousands-of-rowdy-sheeters-lucky-to-be-released/)

_2026-08-21 · Public TV · Public TV &#8211; Latest Kannada News, Public TV Kannada Live, Public TV News_

ಬೆಂಗಳೂರು: ಕಾಂಗ್ರೆಸ್ ಸರ್ಕಾರದಲ್ಲಿ ರೌಡಿಶೀಟರ್ಗಳಿಗೆ ಬಿಡುಗಡೆ ಭಾಗ್ಯ ಸಿಕ್ಕಿದೆ. ರೌಡಿ ಶೀಟರ್ ಪಟ್ಟಿಯಿಂದ ಸಾವಿರಾರು ರೌಡಿಗಳನ್ನ ಸರ್ಕಾರ ಕೈಬಿಟ್ಟಿರುವ ಬಗ್ಗೆ ಗೃಹ ಇಲಾಖೆಯಿಂದ ಮಾಹಿತಿ ನೀಡಿದೆ. ವಿಧಾನಸಭೆಯಲ್ಲಿ ಶಾಸಕ ಗುರುರಾಜ್ ಗಂಟಿಹೊಳಿ ಪ್ರಶ್ನೆಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಲಿಖಿತ ಉತ್ತರ ನೀಡಿದ್ದು, 3 ವರ್ಷಗಳಲ್ಲಿ 25 ಸಾವಿರಕ್ಕೂ ಹೆಚ್ಚು ರೌಡಿಗಳಿಗೆ ರೌಡಿ ಶೀಟರ್ ಪಟ್ಟಿಯಿಂದ ಕೈಬಿಡಲಾಗಿದೆ. ಪ್ರಸ್ತುತ ಇರುವ ಮಾನದಂಡದ ಅಡಿಯೇ ಕ್ರಮ ಕೈಗೊಂಡಿದ್ದೇವೆ ಅಂದಿದ್ದಾರೆ.…

## [ಶಾಲೆಗೆ ಹೋಗಲು ಜೀವ ಕೈಯಲ್ಲಿ ಹಿಡಿದು ಹಳ್ಳ ದಾಟಬೇಕಾದ ದುಸ್ಥಿತಿ &#8211; ತಾತ್ಕಾಲಿಕ ರಸ್ತೆ ಮಾಡಿಕೊಡಿ: ಅಥಣಿ ಮಕ್ಕಳು](https://publictv.in/school-children-in-athani-risk-lives-crossing-overflowing-stream-parents-demand-road-connectivity-athani-belagavi/)

_2026-08-21 · Public TV · Public TV &#8211; Latest Kannada News, Public TV Kannada Live, Public TV News_

ಬೆಳಗಾವಿ: “ನಮಗೆ ಶಾಲೆ ಕಲಿಯಲು ಆಸೆ ಇದೆ, ದಯವಿಟ್ಟು ನಮಗೆ ಒಂದು ರಸ್ತೆ ಮಾಡಿಕೊಡಿ” – ಇದು ಅಥಣಿ (Athani) ತಾಲೂಕಿನ ಹಣಮಾಪುರ ಗ್ರಾಮದ ಒಡೆಯರ ತೋಟದ ವಸತಿ ಪ್ರದೇಶದ ಶಾಲಾ ಮಕ್ಕಳು (School Children) ಕಣ್ಣೀರಿಡುತ್ತಾ ಜನಪ್ರತಿನಿಧಿಗಳಿಗೆ ಹಾಕುತ್ತಿರುವ ಮೊರೆ. ಹಣಮಾಪುರ ಗ್ರಾಮದಿಂದ ಕೇವಲ 500 ಮೀಟರ್ ದೂರದಲ್ಲಿರುವ ಒಡೆಯರ ತೋಟದ ವಸತಿ ಪ್ರದೇಶದಲ್ಲಿ ನೂರಾರು ಕುಟುಂಬಗಳು ವಾಸಿಸುತ್ತಿವೆ. ಇಲ್ಲಿಂದ ಪ್ರತಿದಿನ 40ಕ್ಕೂ ಹೆಚ್ಚು ಮಕ್ಕಳು ಹಣಮಾಪುರದ ಶಾಲೆಗೆ(School) ವಿದ್ಯಾಭ್ಯಾಸಕ್ಕಾಗಿ…

## [\`ಮಹಾ&#8217; ದುರಂತ &#8211; ಮಗನನ್ನ ರಕ್ಷಿಸಲು ಹೋದ ತಂದೆ, ಬಳಿಕ ತಾಯಿ; ಮೂವರೂ ಸಾವು](https://publictv.in/teen-falls-from-maharashtra-cliff-as-father-tries-to-rescue-him-mother-jumps-after-them-all-three-die/)

_2026-08-21 · Public TV · Public TV &#8211; Latest Kannada News, Public TV Kannada Live, Public TV News_

– ಮೊಬೈಲ್‌ ಕೊಡಿಸುವಂತೆ ಪೋಷಕರೊಟ್ಟಿಗೆ ಜಗಳ; ಮೂವರ ಸಾವಿನಲ್ಲಿ ಅಂತ್ಯ ಮುಂಬೈ: ಮಹಾರಾಷ್ಟ್ರದಲ್ಲಿ (Maharashtra) ಹೃದಯ ವಿದ್ರಾವಕ ಘಟನೆಯೊಂದು ನಡೆದಿದೆ. ಬೆಟ್ಟದ ಅಂಚಿನಲ್ಲಿ ನಿಂತು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಸುತ್ತಿದ್ದ ಯುವಕನನ್ನ ರಕ್ಷಿಸಲು ಮುಂದಾದ ತಂದೆ, ಬಳಿಕ ತಾಯಿ ಕೂಡ ಬೆಟ್ಟದಿಂದ ಬಿದ್ದು (Fall From Hill) ಮೃತಪಟ್ಟಿದ್ದಾರೆ. 18/19 ವರ್ಷದ ಮಗ ಸೇರಿದಂತೆ ಒಂದೇ ಕುಟುಂಬದ ಮೂವರು ದುರಂತ ಸಾವಿಗೀಡಾಗಿದ್ದಾರೆ. ಮೃತರನ್ನು ನಗರದ ಜಲ್ತಾ ಫಾಟಾ ಪ್ರದೇಶದ ನಿವಾಸಿಗಳಾದ…

## [ಚಿನ್ನದ ದರ 1,771 ರೂ., ಬೆಳ್ಳಿ ದರ 3,128 ರೂ. ಏರಿಕೆ](https://publictv.in/gold-reclaims-rs-1-60-lakh-silver-nears-rs-2-50-lakh/)

_2026-08-21 · Public TV · Public TV &#8211; Latest Kannada News, Public TV Kannada Live, Public TV News_

ನವದೆಹಲಿ: ಅಮೆರಿಕ ಡಾಲರ್‌ ದುರ್ಬಲತೆ, ಅಮೆರಿಕದ ಬಡ್ಡಿದರಗಳಲ್ಲಿ ಆಗುತ್ತಿರುವ ಬದಲಾವಣೆ ಹಾಗೂ ಸುರಕ್ಷಿತ ಹೂಡಿಕೆ ಹುಡುಕಾಟ ಹೀಗೆ ಅನೇಕ ಕಾರಣಗಳಿಂದ ಚಿನ್ನ ಮತ್ತು ಬೆಳ್ಳಿಯ ದರದಲ್ಲಿ ಮತ್ತೆ ಏರಿಕೆ ಕಂಡುಬಂದಿದೆ. ಎಂಸಿಎಕ್ಸ್‌ನಲ್ಲಿ (MCX – Multi Commodity Exchange) ಫ್ಯೂಚರ್‌ ಚಿನ್ನ, ಬೆಳ್ಳಿ ದರ ಏರಿಕೆಯಾಗಿದೆ. ಮಲ್ಟಿ ಕಮಾಡಿಟಿ ಎಕ್ಸ್‌ಚೇಂಜ್‌ ನಲ್ಲಿ ಶುಕ್ರವಾರ (ಇಂದು) ಮಧ್ಯಾಹ್ನ 3:10ರ ವೇಳೆಗೆ ಚಿನ್ನದ (Gold) ಫ್ಯೂಚರ್ಸ್ ಬೆಲೆ 10 ಗ್ರಾಂಗೆ ಸುಮಾರು 1,61,196…

## [ಉತ್ತರ ಕನ್ನಡ ಜಿಲ್ಲೆಯಲ್ಲಿ 5 ಸಾವಿರಕ್ಕೂ ಹೆಚ್ಚು ಬಿಡಾಡಿ ದನಗಳು; ವಾಹನ ಸವಾರರ ಪರದಾಟ](https://publictv.in/more-than-5000-stray-cattles-in-uttara-kannada-district/)

_2026-08-21 · Public TV · Public TV &#8211; Latest Kannada News, Public TV Kannada Live, Public TV News_

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಬಿಡಾಡಿ ಗೋವುಗಳ ಕಾಟ ಮಿತಿಮೀರಿದ್ದು, ಇವುಗಳಿಂದಾಗಿ ರಸ್ತೆಗಳಲ್ಲಿ ವಾಹನ ಸವಾರರು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಜಿಲ್ಲೆಯ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಬಿಡಾಡಿ ದನಗಳ ಕಾಟದಿಂದ ಅಪಘಾತ ಹೆಚ್ಚಾಗುತಿದ್ದು, ಸಾವಿನ ಸಂಖ್ಯೆ ಏರಿಕೆ ಕಂಡಿದೆ. ಜಿಲ್ಲೆಯಲ್ಲಿ ಒಟ್ಟು 4,10,305 ಗೋವುಗಳಿವೆ. ಇವುಗಳಲ್ಲಿ ಕಾರವಾರ, ಯಲ್ಲಾಪುರ, ಶಿರಸಿ, ಅಂಕೋಲ ಭಾಗದ ಬಿಡಾಡಿ ದನಗಳೇ 5,244 ಇವೆ. ಇವುಗಳನ್ನ ಹಿಡಿದು ಗೋಶಾಲೆಗೆ ಕಳುಹಿಸುವಲ್ಲಿ ಸ್ಥಳೀಯ…

## [ಮಂಗಳೂರು &#124; ಹೋಟೆಲ್, ಕ್ಯಾಟರಿಂಗ್‌ಗಳ ಮೇಲೆ ಮುಂದುವರಿದ ಆಹಾರ ಸುರಕ್ಷತಾ ಇಲಾಖೆಯ ಅಧಿಕಾರಿಗಳ ದಾಳಿ](https://publictv.in/raid-on-hotel-and-caterings-in-mangaluru/)

_2026-08-21 · Public TV · Public TV &#8211; Latest Kannada News, Public TV Kannada Live, Public TV News_

ಮಂಗಳೂರು: ನಗರದ ಹೋಟೆಲ್‌ಗಳು, ಕ್ಯಾಟರಿಂಗ್‌ಗಳ ಮೇಲೆ ಆಹಾರ ಸುರಕ್ಷತಾ ಇಲಾಖೆಯ ಅಧಿಕಾರಿಗಳ ದಾಳಿ ಮುಂದುವರಿದಿದೆ. ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ಅಂಕಿತ ಅಧಿಕಾರಿ ಡಾ. ಪ್ರವೀಣ್ ಕುಮಾರ್ ಸಿ.ಹೆಚ್ ನೇತೃತ್ವದಲ್ಲಿ ದಾಳಿ ನಡೆದಿದೆ. ರೈಲ್ವೇ ಹಾಗೂ ವಿಮಾನಗಳಿಗೆ ಸರಬರಾಜಾಗುವ ಆಹಾರಗಳ ಬಗ್ಗೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಮಂಗಳೂರಿನ ವಂದೇ ಭಾರತ್ ರೈಲು ಸೇವೆಗೆ ಕ್ಯಾಟರಿಂಗ್ ಮತ್ತು ಆಹಾರ ಸರಬರಾಜು ಮಾಡುವ ಕ್ಯಾಟರಿಂಗ್ ಮೇಲೆ ಅಧಿಕಾರಿಗಳು ದಾಳಿ ನಡೆಸಿದರು. ಮಂಗಳೂರಿನ…

## [KKRTC ಬಸ್‌ನಲ್ಲಿ ವಿದ್ಯಾರ್ಥಿಯಿಂದ ಟಿಕೆಟ್ ವಿತರಣೆ &#8211; ಚಾಲಕ-ಕಂ-ಕಂಡಕ್ಟರ್‌ ಅಮಾನತು](https://publictv.in/ticket-distribution-by-student-on-kkrtc-bus-driver-cum-conductor-suspended/)

_2026-08-21 · Public TV · Public TV &#8211; Latest Kannada News, Public TV Kannada Live, Public TV News_

ಕಲಬುರಗಿ: ಕೆಕೆಆರ್‌ಟಿಸಿ ಬಸ್‌ನಲ್ಲಿ (KKRTC Bus) ಪ್ರಯಾಣಿಕರಿಗೆ ವಿದ್ಯಾರ್ಥಿ ಮೂಲಕ ಟಿಕೆಟ್ ವಿತರಿಸಿದ ಪ್ರಕರಣ ಸಂಬಂಧ, ಕರ್ತವ್ಯ ಲೋಪ ಎಸಗಿದ ಆರೋಪದ ಮೇರೆಗೆ ಕಂಡಕ್ಟರ್‌ನನ್ನ ಅಮಾನತುಗೊಳಿಸಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ. ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಕಲಬುರಗಿ (Kalaburagi) ವಿಭಾಗ-1ರ ವ್ಯಾಪ್ತಿಯ ಕಾಳಗಿ ಘಟಕದ ಚಾಲಕ-ಕಂ-ನಿರ್ವಾಹಕ ಸಿದ್ದಪ್ಪನನ್ನು ಅಮಾನತುಗೊಳಿಸಲಾಗಿದೆ. ಇದನ್ನೂ ಓದಿ: ಹಗರಣ ಮುಚ್ಚಿ ಹಾಕಲು ನಾಟಕ, ಧೈರ್ಯವಿದ್ದರೆ ನೋಟಿಸ್ ನೀಡಿ ನಾಗೇಂದ್ರ…

## [ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಜಗಳೂರಿನಿಂದ ಬಳ್ಳಾರಿಗೆ ಬಿಜೆಪಿ ಪಾದಯಾತ್ರೆ](https://publictv.in/bjp-to-hold-mega-padayatra-from-jagalur-to-ballari-demanding-nagendras-resignation/)

_2026-08-21 · Public TV · Public TV &#8211; Latest Kannada News, Public TV Kannada Live, Public TV News_

ಬೆಂಗಳೂರು: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಬಹುಕೋಟಿ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಬಿ. ನಾಗೇಂದ್ರ(B Nagendra) ಅವರ ರಾಜೀನಾಮೆ ಆಗ್ರಹಿಸಿ ಹಾಗೂ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರವನ್ನು ಖಂಡಿಸಿ ರಾಜ್ಯ ಬಿಜೆಪಿ(BJP) ಬೃಹತ್ ಪಾದಯಾತ್ರೆ ನಡೆಸಲು ಸಜ್ಜಾಗಿದೆ. ಬಿಜೆಪಿ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಬಿಜೆಪಿ ನಾಯಕ ಬಿ. ಶ್ರೀರಾಮುಲು(B. Sriramulu), ಪಾದಯಾತ್ರೆಯ ರೂಪುರೇಷೆಗಳ ಬಗ್ಗೆ ಪಕ್ಷದ ಮಟ್ಟದಲ್ಲಿ ತೀವ್ರ…

## [2047ರ ವೇಳೆಗೆ ದಕ್ಷಿಣದ ಆರ್ಥಿಕತೆ 837 ಲಕ್ಷ ಕೋಟಿ ತಲುಪಬಹುದು: ಚಂದ್ರಬಾಬು ನಾಯ್ಡು ವಿಶ್ವಾಸ](https://publictv.in/southern-economy-could-reach-10-trillion-usd-by-2047-says-naidu-seeks-more-cooperation-among-states/)

_2026-08-21 · Public TV · Public TV &#8211; Latest Kannada News, Public TV Kannada Live, Public TV News_

– ಅಮರಾವತಿ, ಬೆಂಗಳೂರು ಮತ್ತು ಚೆನ್ನೈ ಸಂಪರ್ಕಿಸುವ ಬುಲೆಟ್‌ ರೈಲು ಮಾರ್ಗದ ಬಗ್ಗೆ ಪ್ರಸ್ತಾಪ ಹೈದರಾಬಾದ್‌: 2047ರ ವೇಳೆ ದಕ್ಷಿಣದ ಆರ್ಥಿಕತೆಯು (Southern Economy) 10 ಟ್ರಿಲಿಯನ್‌ ಡಾಲರ್‌ (837 ಲಕ್ಷ ಕೋಟಿ ರೂ.) ತಲುಪಬಹುದು ಎಂದು ಆಂಧ್ರ ಸಿಎಂ ಚಂದ್ರಬಾಬು ನಾಯ್ಡು (Chandrababu Naidu) ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮಹಾಬಲಿಪುರಂನಲ್ಲಿ ನಡೆದ ದಕ್ಷಿಣ ವಲಯ ಮಂಡಳಿ ಸಭೆಯಲ್ಲಿ ಮಾತನಾಡಿರುವ ಅವರು, 2047ರ ವೇಳೆ ದಕ್ಷಿಣದ ಆರ್ಥಿಕತೆ ವೃದ್ಧಿಸಲಿದೆ, ಅದಕ್ಕಾಗಿ ಈ ಭಾಗದ ರಾಜ್ಯಗಳ…

## [ನವದೆಹಲಿ &#124; ಒಂದೇ ದಿನ 114 ಜನರಲ್ಲಿ ಕಾಣಿಸಿದ H1N1 &#8211; ಉನ್ನತ ಮಟ್ಟದ ಪರಿಶೀಲನಾ ಸಭೆ ಕರೆದ ಜೆಪಿ ನಡ್ಡಾ](https://publictv.in/delhi-over-110-fresh-h1n1-cases-reported-union-health-minister-jp-nadda-calls-a-high-level-review-meeting/)

_2026-08-21 · Public TV · Public TV &#8211; Latest Kannada News, Public TV Kannada Live, Public TV News_

-ಈವರೆಗೆ ದೇಶದಲ್ಲಿ ಒಟ್ಟು 1,777 H1N1 ಕೇಸ್‌ ದಾಖಲು ನವದೆಹಲಿ: ದೆಹಲಿಯಲ್ಲಿ ಇತ್ತೀಚಿನ ದಿನಗಳಲ್ಲಿ ಇನ್ಫ್ಲುಯೆಂಜಾ ಮತ್ತು H1N1 ಪ್ರಕರಣಗಳು ಹಠಾತ್ ಹೆಚ್ಚಳ ಕಂಡಿದೆ. ಆ.20ರಂದು ಒಂದೇ ದಿನದಲ್ಲಿ 114 ಹೊಸ ಪ್ರಕರಣಗಳು ಕಾಣಿಸಿಕೊಂಡಿದ್ದು, ಒಟ್ಟು 159 ಕೇಸ್‌ಗಳು ವರದಿಯಾಗಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಏಕಾಏಕಿ ಹೆಚ್ಚಳದಿಂದಾಗಿ ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ (JP Nadda) ಅವರು ದೆಹಲಿ ಆರೋಗ್ಯ ಸಚಿವರು ಮತ್ತು ಹಿರಿಯ ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿ,…

## [ಬ್ಯಾಂಕಾಕ್‌ನಿಂದ ಬಂದ ಪ್ರಯಾಣಿಕರ ಬಳಿ ಚಿನ್ನದ ಪುಡಿ ಪತ್ತೆ](https://publictv.in/260-grams-of-gold-like-powder-seized-at-bengaluru-airport/)

_2026-08-21 · Public TV · Public TV &#8211; Latest Kannada News, Public TV Kannada Live, Public TV News_

ಚಿಕ್ಕಬಳ್ಳಾಪುರ: ದೇವನಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Bengaluru Airport) ಪ್ರಯಾಣಿಕರ ಬಳಿ ಚಿನ್ನದ ಪುಡಿ ಪತ್ತೆಯಾಗಿದೆ. ಬ್ಯಾಂಕಾಕ್‌ನಿಂದ ಬೆಂಗಳೂರಿಗೆ ಬಂದಿದ್ದ ಇಬ್ಬರು ಪ್ರಯಾಣಿಕರ ಬಳಿ ಒಟ್ಟು 260 ಗ್ರಾಂ ಚಿನ್ನದ ಪುಡಿ (Gold Like Powder) ಪತ್ತೆಯಾಗಿದ್ದು, CISF ಸಿಬ್ಬಂದಿ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಕೆಐಎ ಟರ್ಮಿನಲ್-1ರಲ್ಲಿ CISF ಸಿಬ್ಬಂದಿ ಪ್ರಯಾಣಿಕರನ್ನು ತಪಾಸಣೆ ನಡೆಸುತ್ತಿದ್ದ ವೇಳೆ ಚಿನ್ನದ ಪುಡಿ ಪತ್ತೆಯಾಗಿದೆ. ಲಕ್ಷ್ಮಣ ಹಾಗೂ…

