# kannada (news sources) — RSS Amplifier

Recent posts from the 1 feeds in the RSS Amplifier directory that cover kannada.

Page: <https://rssamplifier.com/topics/kannada/news>  
Feed: <https://rssamplifier.com/topics/kannada/news.md>

---

## [ಆಹಾರ ಸುರಕ್ಷತೆ ಮತ್ತು ನಕಲಿ ಔಷಧ ಪತ್ತೆಗೆ ಜಿಲ್ಲಾ, ತಾಲೂಕು ಮಟ್ಟದಲ್ಲಿ ಕಾವಲು ಪಡೆ &#8211; ಯು.ಟಿ. ಖಾದರ್](https://newskarkala.com/2026/08/22/wacth-team/)

_2026-08-22 · Newskarkala Desk · News Karkala_

ಮಂಗಳೂರು : ಆಹಾರ ಸುರಕ್ಷತೆ ಮತ್ತು ನಕಲಿ ಔಷಧಿಗಳ ನಿರಂತರ ಮೇಲ್ವಿಚಾರಣೆಗಾಗಿ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಕಾವಲು ಪಡೆ (ವಾಚ್ ಟೀಮ್) ರಚಿಸುವ ಬಗ್ಗೆ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಹೇಳಿದರು. ಶನಿವಾರ ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಸುರಕ್ಷಿತ ಆಹಾರ ಮತ್ತು ನಕಲಿ ಔಷಧಿಗಳ ಬಗ್ಗೆ ಸಾರ್ವಜನಿಕರು ದೂರುಗಳನ್ನು ಸಲ್ಲಿಸಲು ಸುಲಭವಾಗುವಂತೆ ಕ್ಯೂಆರ್ ಕೋಡ್ ರಚಿಸಲಾಗಿದೆ. ಪ್ರತಿ ಹೋಟೆಲ್ ಮತ್ತು…

## [ಜ್ಞಾನಸುಧಾ ಸಂಸ್ಥಾಪಕ ದಿ. ಗೋಪ ಶೆಟ್ಟಿಯವರ ಜನ್ಮದಿನಾಚರಣೆಯ ಸಂಭ್ರಮ](https://newskarkala.com/2026/08/22/gopa-shetty-105-birthday/)

_2026-08-22 · Newskarkala Desk · News Karkala_

ವಿಶೇಷ ಮಕ್ಕಳ ಶಾಲಾ ಅಧ್ಯಾಪಕರಿಗೆ ಸನ್ಮಾನ ಟ್ರಸ್ಟಿನಿಂದ 3 ಲಕ್ಷದ 30 ಸಾವಿರದ 503 ರೂ. ನೆರವು ಕಾರ್ಕಳ : ಬರಡು ಭೂಮಿಯನ್ನು ವಿದ್ಯಾಕಾಶಿಯನ್ನಾಗಿ ಮಾಡಿದ ಕೀರ್ತಿ ಡಾ.ಸುಧಾಕರ್ ಶೆಟ್ಟಿಯವರಿಗೆ ಸಲ್ಲುತ್ತದೆ. ದಾನ ಮಾಡಲಿಕ್ಕೆ ಮನಸ್ಸು ಬೇಕು. ಅದರ ಜೊತೆಗೆ ಕೊಡುವ ಸಂಸ್ಕಾರವು ಬೇಕು. ಇವೆರಡನ್ನು ಮೈಗೂಡಿಸಿಕೊಂಡ ಜೀವನ ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ತಿಳಿಸುವ ಸುಂದರ ಕಾರ್ಯಕ್ರಮ ಇದಾಗಿದೆ ಎಂದು ಡಾ.ಟಿ.ಎಂ.ಎ.ಪೈ ರೋಟರಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಸಂಜಯ್ ಹೇಳಿದರು. ಅವರು…

## [ಆ. 30 : ರಂಗನಪಲ್ಕೆಯಲ್ಲಿ ಅಮ್ಮ ಸಭಾಭವನ &#8211; ಕಲ್ಯಾಣ ಸಿಂಧೂರ ಉದ್ಘಾಟನೆ](https://newskarkala.com/2026/08/22/amma-sabhabavan-kalyan-sindoora/)

_2026-08-22 · Newskarkala Desk · News Karkala_

ಕಾರ್ಕಳ : ಕೌಡೂರು – ರಂಗನಪಲ್ಕೆಯಲ್ಲಿ ಆ. 30ರಂದು ಬೆಳಿಗ್ಗೆ 9.30ಕ್ಕೆ ಅಮ್ಮ ಸಭಾಭವನ – ಕಲ್ಯಾಣ ಸಿಂಧೂರ ಲೋಕಾರ್ಪಣೆಗೊಳ್ಳಲಿದೆ.ಶಾಂತ ಪೂಜಾರಿ ಕಾರ್ಯಕ್ರಮ ಉದ್ಘಾಟಿಸಲಿದ್ದು, ಶಾಸಕ ವಿ. ಸುನಿಲ್‌ ಕುಮಾರ್‌ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಂಜುನಾಥ ಪೂಜಾರಿ ಮುದ್ರಾಡಿ, ಕೌಡೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ವಿಶ್ವನಾಥ ಭಟ್‌, ಪಳ್ಳಿ – ಅಡಪಾಡಿ ಶ್ರೀ ಕ್ಷೇತ್ರದ ಧರ್ಮದರ್ಶಿ ಪುಂಡಲೀಕ…

## [ಹೃದಯಾಘಾತಕ್ಕೆ ವ್ಯಕ್ತಿ ಬಲಿ](https://newskarkala.com/2026/08/22/heart-attack-girish-acharya-no-more/)

_2026-08-22 · Newskarkala Desk · News Karkala_

ಕಾರ್ಕಳ : ಹೃದಯಾಘಾತಕ್ಕೆ ವ್ಯಕ್ತಿಯೊಬ್ಬರು ಮೃತಪಟ್ಟ ದುರ್ಘಟನೆ ಆ. 22ರಂದು ಯರ್ಲಪಾಡಿ ಕಾಂತರಗೋಳಿಯಲ್ಲಿ ನಡೆದಿದೆ. ಗಿರೀಶ್ ಆಚಾರ್ಯ (44 ವರ್ಷ) ಮೃತ ದುರ್ದೈವಿ. ಮಾಹೆ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದ ಇವರು ಇಂದು ಬೆಳಿಗ್ಗೆ ಮನೆಯಲ್ಲಿ ಹೃದಯಾಘಾತಕ್ಕೀಡಾಗಿದ್ದಾರೆ. ಮೃತರು ತಾಯಿ, ಪತ್ನಿ ಹಾಗೂ ಪುತ್ರಿಯನ್ನು ಅಗಲಿದ್ದಾರೆ. The post ಹೃದಯಾಘಾತಕ್ಕೆ ವ್ಯಕ್ತಿ ಬಲಿ appeared first on News Karkala .

## [ಬಿಜೆಪಿ ಅಧಿವೇಶನಕ್ಕೆ ಅಡ್ಡಿಪಡಿಸುತ್ತಿರುವ ಹಿಂದೆ ಹಿಡನ್ ಅಜೆಂಡಾ ಇದೆ : ಯು.ಟಿ.ಖಾದರ್ ಆರೋಪ](https://newskarkala.com/2026/08/22/u-t-khadar-manglore/)

_2026-08-22 · Newskarkala Desk · News Karkala_

ಮಂಗಳೂರು : ಪ್ರತಿಪಕ್ಷವಾದ ಬಿಜೆಪಿ ವಿಧಾನಸಭೆ ಹಾಗೂ ವಿಧಾನ ಪರಿಷತ್‌ನ ಅಧಿವೇಶನ ನಡೆಸಲು ಅಡ್ಡಿ ಪಡಿಸುವ ಮೂಲಕ ಜನರಿಗೆ ಸಾಮಾಜಿಕ ವಂಚನೆ ಮಾಡುತ್ತಿದ್ದು, ಇದರ ಹಿಂದೆ ಹಿಡನ್ ಅಜೆಂಡಾ ಇದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಆರೋಪಿಸಿದ್ದಾರೆ. ಮಂಗಳೂರು ಸರ್ಕ್ಯೂಟ್ ಹೌಸ್‌ನಲ್ಲಿ ಆ.22ರಂದು ಸುದ್ದಿಗೋಷ್ಟಿಯಲ್ಲಿ ಈ ಆರೋಪ ಮಾಡಿದ ಅವರು, ರಾಜ್ಯದಲ್ಲಿ ಈಗಾಗಲೇ ಬರ, ಅತಿವೃಷ್ಟಿಯ ಸಮಸ್ಯೆ ಇದೆ. ಇಂತಹ ಸಾಮಾಜಿಕ ಸಮಸ್ಯೆಗಳ ಬಗ್ಗೆ ಚರ್ಚಿಸಿ…

## [ಕರ್ನಾಟಕದಲ್ಲಿ 1 ವರ್ಷ ‌ಕೃತಕ ಪನ್ನೀರ್ ಬ್ಯಾನ್](https://newskarkala.com/2026/08/22/karnataka-bans-alalogue-pannir/)

_2026-08-22 · Newskarkala Desk · News Karkala_

ಬೆಂಗಳೂರು : ಕರ್ನಾಟಕದಲ್ಲಿ 1 ವರ್ಷದ ಅವಧಿಗೆ ಕೃತಕ ಪನ್ನೀರ್‌ ಬ್ಯಾನ್‌ ಮಾಡಿ ಆಹಾರ ಸುರಕ್ಷತಾ ಇಲಾಖೆ ಆದೇಶ ಹೊರಡಿಸಿದೆ.ರಾಜ್ಯಾದ್ಯಂತ ಪನ್ನೀರ್‌ ಹೆಸರಿನಲ್ಲಿ ಅನಾಲಾಗ್ ಪನ್ನೀರ್ ತಯಾರಿಕೆ, ಸಂಗ್ರಹಣೆ , ಮಾರಾಟವಾಗುತ್ತಿದೆ. ಕೃತಕ‌ ಪನ್ನೀರ್ ನಿಷೇಧ ಮಾಡಿ ಆದೇಶಿಸಲಾಗಿದೆ. ಕರ್ನಾಟಕವು ಹಲವಾರು ಪನ್ನೀರ್‌ ಮಾದರಿಗಳನ್ನು ಪರೀಕ್ಷಿಸಿದ್ದು, ಯಾವುದೇ ಕಲಬೆರಕೆ ಇಲ್ಲ ಎಂದು ಕಂಡುಬಂದಿದೆ. ಪನ್ನೀರ್‌ನಲ್ಲಿ ಸಸ್ಯಜನ್ಯ ಎಣ್ಣೆ, ಕೊಬ್ಬು ಅಥವಾ ಇತರೆ ಡೈರಿ ಪದಾರ್ಥಗಳೊಂದಿಗೆ ಕಲಬೆರಕೆ…

## [500 ಕೆಪಿಎಸ್‌ ಶಾಲೆಗಳ ಅಭಿವೃದ್ಧಿಗೆ 1,750 ಕೋಟಿ ನೆರವು – ಎಡಿಬಿ ಜೊತೆ ಒಪ್ಪಂದಕ್ಕೆ ಸಿಎಂ ಡಿಕೆಶಿ ಸಹಿ](https://newskarkala.com/2026/08/22/kps-school-development/)

_2026-08-22 · Newskarkala Desk · News Karkala_

ಬೆಂಗಳೂರು : ಕರ್ನಾಟಕದ 500 ಕರ್ನಾಟಕ ಪಬ್ಲಿಕ್ ಸ್ಕೂಲ್‌ಗಳ ಸಮಗ್ರ ಅಭಿವೃದ್ಧಿಗೆ ರಾಜ್ಯ ಸರ್ಕಾರವು ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್‌ ಸಹಯೋಗದೊಂದಿಗೆ 1,750 ಕೋಟಿ ರೂ. ಮೊತ್ತದ ಮಹತ್ವಾಕಾಂಕ್ಷಿ ಯೋಜನೆಯ ಒಪ್ಪಂದಕ್ಕೆ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ವಿಧಾನಸೌಧದಲ್ಲಿ ಶುಕ್ರವಾರ ಸಹಿ ಹಾಕಿದರು. ಈ ವೇಳೆ ಡಿಸಿಎಂ ಡಾ. ಜಿ. ಪರಮೇಶ್ವರ್, ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಮಧು ಬಂಗಾರಪ್ಪ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಶ್ಮಿ ಮಹೇಶ್…

## [ತೋಟಗಾರಿಕೆ ಬೆಳೆಗಳ ರೋಗ ನಿಯಂತ್ರಣ : ಔಷಧಿ ಖರೀದಿಗೆ ಸಹಾಯಧನ](https://newskarkala.com/2026/08/22/hotriculture-subsidy/)

_2026-08-22 · Newskarkala Desk · News Karkala_

ಕಾರ್ಕಳ : ತೋಟಗಾರಿಕೆ ಇಲಾಖೆಯ ವಿವಿಧ ಯೋಜನೆಗಳಡಿ ರೈತರು ತಮ್ಮ ತೋಟಗಾರಿಕೆ ಬೆಳೆಗಳಿಗೆ ಬಳಸುವ ಸಲುವಾಗಿ ಖರೀದಿಸಿರುವ ವಿವಿಧ ಕೀಟನಾಶಕಗಳು, ರೋಗನಾಶಕಗಳು, ಜೈವಿಕ ಗೊಬ್ಬರ ಹಾಗೂ ಜೈವಿಕ ಪೀಡೆ ನಾಶಕಗಳಿಗೆ ಶೇ. 30ರ ದರದಲ್ಲಿ ಪ್ರತಿ ಎಕರೆಗೆ ಗರಿಷ್ಠ 600 ರೂ.ಯಂತೆ ಸಹಾಯಧನ ಲಭ್ಯವಿದ್ದು, ಒಬ್ಬ ರೈತರಿಗೆ ಗರಿಷ್ಠ 3000 ರೂ.ವರೆಗೆ ಸಹಾಯಧನ ನೀಡಿಕೆಗೆ ಅವಕಾಶವಿರುತ್ತದೆ. ಅಡಿಕೆ ಕೊಳೆರೋಗ, ಎಲೆಚುಕ್ಕೆ ರೋಗ, ಕಾಳುಮೆಣಸು ಸೊರಗು ರೋಗ ಸೇರಿದಂತೆ ವಿವಿಧ ತೋಟಗಾರಿಕೆ ಬೆಳೆಗಳಿಗೆ ಬರುವ ರೋಗ ಮತ್ತು…

## [ಡೇವಿಡ್ ಡಿಸೋಜ ಹತ್ಯೆ ಪ್ರಕರಣ : ಕೃತ್ಯಕ್ಕೆ ಬೈಕ್ ಒದಗಿಸಿದ ಆರೋಪಿ ಬಂಧನ](https://newskarkala.com/2026/08/22/david-shootout-case-updates/)

_2026-08-22 · Newskarkala Desk · News Karkala_

ಉಡುಪಿ : ಮುದರಂಗಡಿ ಗ್ರಾಪಂ ಮಾಜಿ ಅಧ್ಯಕ್ಷ ಡೇವಿಡ್ ಡಿಸೋಜ ಶೂಟೌಟ್ ಪ್ರಕರಣದಲ್ಲಿ ಬೈಕ್ ಒದಗಿಸಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಮೂಲಕ ಈ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 9ಕ್ಕೇರಿದೆ. ಬೈಂದೂರು ಬಾಳಿಹಿತ್ಲು ನಿವಾಸಿ ಲೋಕೇಶ್ ತೇಜ ಕೊಠಾರಿ(42) ಬಂಧಿತ ಆರೋಪಿ. ಈತ ಈ ಮೊದಲು ಮುಂಬಯಿಯಲ್ಲಿ ಕೆಲಸ ಮಾಡಿ ಕೊಂಡಿದ್ದು, ಆಗ ಅಲ್ಲಿ ಈ ಪ್ರಕರಣದ ಆರೋಪಿ ಕಿಶೋರ್ ರಾಮ ಪೂಜಾರಿ ಪರಿಚಯವಾಗಿ ಸ್ನೇಹಿತನಾಗಿದ್ದನು.ಲೋಕೇಶ್ ಈ ಪ್ರಕರಣದಲ್ಲಿ ನೇರವಾಗಿ ಭಾಗಿಯಾಗಿದ್ದ ಆರೋಪಿಗಳಾದ ಅನ್ಮೋಲ್…

## [ಅಕ್ರಮವಾಗಿ ದನ ಸಾಗಾಟ &#8211; ಓರ್ವ ಪೊಲೀಸರ ವಶಕ್ಕೆ](https://newskarkala.com/2026/08/22/crime-belman/)

_2026-08-22 · Newskarkala Desk · News Karkala_

ಕಾರ್ಕಳ : ಪಿಕಪ್ ವಾಹನದಲ್ಲಿ ಅಕ್ರಮವಾಗಿ ಮೂರು ದನಗಳನ್ನು ಸಾಗಾಟ ಮಾಡುತ್ತಿದ್ದ ಬಗ್ಗೆ ಬಂದ ಖಚಿತ ಮಾಹಿತಿಯ ಮೇರೆಗೆ ಹಿಂದೂ ಸಂಘಟನೆಯ ಕಾರ್ಯಕರ್ತರು ವಾಹನವನ್ನು ತಡೆದು ನಿಲ್ಲಿಸಿ ಪೊಲೀಸರಿಗೆ ಒಪ್ಪಿಸಿದ ಘಟನೆ ಕಾರ್ಕಳ ತಾಲೂಕಿನ ಮುಂಡ್ಕೂರು ಗ್ರಾಮದ ಸಂಕಲಕರಿಯದಲ್ಲಿ ನಡೆದಿದೆ. ಏಳಿಂಜೆ ಗ್ರಾಮದ ಜಯ ಮೂಲ್ಯ ಬಂಧಿತ ಆರೋಪಿ. ಕೆಎ 19 ಎಎಫ್ 2512 ನಂಬರ್‌ನ ಪಿಕಪ್ ವಾಹನದಲ್ಲಿ ರೋಶ್ನಿ ಎಂಬವರಿಂದ ಖರೀದಿಸಿದ ದನಗಳನ್ನು ಸಾಗಿಸುತ್ತಿದ್ದಾಗ ಸಂಕಲಕರಿಯ ರಾಜ್ಯ ಹೆದ್ದಾರಿಯಲ್ಲಿ ತಡೆದು…

## [AI publishing with human taste (Sponsored)](https://crawlproof.com/a/MXU5aj9p8adS)

_2026-08-22 · **Sponsored**_

Convert AI research into blogs, podcasts, and newsletters with optional human review.

## [ಪದ್ಮಶ್ರೀ ಪ್ರಶಸ್ತಿ ವಿಜೇತ, ಖ್ಯಾತ ನಟಿ ಸಾಹುಕಾರ್ ಜಾನಕಿ ಇನ್ನಿಲ್ಲ](https://newskarkala.com/2026/08/21/janaki-no-more/)

_2026-08-21 · Newskarkala Desk · News Karkala_

ದೆಹಲಿ : ಭಾರತೀಯ ಚಿತ್ರರಂಗದ ಹಿರಿಯ ನಟಿ ಸಾಹುಕಾರ್ ಜಾನಕಿ ಅವರು ವಯೋಸಹಜ ಅನಾರೋಗ್ಯದಿಂದ ಆ. 21ರಂದು ಚೆನ್ನೈನಲ್ಲಿ ನಿಧನರಾಗಿದ್ದಾರೆ. ಅವರಿಗೆ 94 ವರ್ಷ ವಯಸ್ಸಾಗಿತ್ತು. ಕಳೆದ ಕೆಲವು ದಿನಗಳಿಂದ ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಅವರನ್ನು ಚೆನ್ನೈನ ಆಳ್ವಾರ್‌ ಪೇಟೆಯಲ್ಲಿರುವ ಕಾವೇರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು, ಶುಕ್ರವಾರ ಮಧ್ಯಾಹ್ನ 1.59ಕ್ಕೆ ಕೊನೆಯುಸಿರೆಳೆದಿದ್ದಾರೆ. 1931ರ ಡಿಸೆಂಬರ್ 12ರಂದು ಜನಿಸಿದ…

## [ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‌ ವಾದ) ಪ್ರಧಾನ ಸಂಚಾಲಕರಾಗಿ ರಮೇಶ್ ಬಿ. ಪೆರ್ವಾಜೆ](https://newskarkala.com/2026/08/21/ramesh-b/)

_2026-08-21 · Newskarkala Desk · News Karkala_

ಕಾರ್ಕಳ : ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‌ ವಾದ)ಯ ಕಾರ್ಕಳ ಶಾಖೆಯ ಪ್ರಧಾನ ಸಂಚಾಲಕರಾಗಿ ರಮೇಶ್ ಬಿ. ಪೆರ್ವಾಜೆ ಆಯ್ಕೆಯಾದ್ದಾರೆ.ರಾಜ್ಯ ಸಂಘಟನಾ ಸಂಚಾಲಕ ಸುಂದರ ಮಾಸ್ತರ್, ಉಡುಪಿ ವಿಭಾಗೀಯ ಸಂಚಾಲಕ ಶ್ಯಾಮ್‌ರಾಜ್ ಭಿರ್ತಿ, ಉಡುಪಿ ಜಿಲ್ಲಾ ಪ್ರಧಾನ ಸಂಚಾಲಕ ಟಿ. ಮಂಜುನಾಥ ಗಿಳಿಯಾರು ಆಯ್ಕೆ ಪ್ರಕ್ರಿಯೆ ನೆರವೇರಿಸಿದರು. The post ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‌ ವಾದ) ಪ್ರಧಾನ ಸಂಚಾಲಕರಾಗಿ ರಮೇಶ್ ಬಿ. ಪೆರ್ವಾಜೆ appeared first on News Karkala .

## [ವರದಿ ಪ್ರಕಟಿಸಿದ ಬೆನ್ನಲ್ಲೇ ಪತ್ರಕರ್ತನ ಮೇಲೆ ಸರಕಾರಿ ವೈದ್ಯನಿಂದ ಹಲ್ಲೆ](https://newskarkala.com/2026/08/21/reporter-shrikanth-hemmadi-attacked-by-dr-mahendra-kumar-shetty/)

_2026-08-21 · Newskarkala Desk · News Karkala_

ಕುಂದಾಪುರ : ಕುಂದಾಪುರ ತಾಲೂಕು ಸಾರ್ವಜನಿಕ ಆಸ್ಪತ್ರೆಯ ಭ್ರಷ್ಟಾಚಾರದ ಕುರಿತು ಸರಣಿ ವರದಿ ಪ್ರಕಟಿಸಿದ್ದ ಹಿನ್ನೆಲೆಯಲ್ಲಿ, ಕನ್ನಡಪ್ರಭ ದಿನಪತ್ರಿಕೆಯ ಕುಂದಾಪುರ ವರದಿಗಾರ ಶ್ರೀಕಾಂತ್ ಹೆಮ್ಮಾಡಿ ಅವರ ಮೇಲೆ ಸರ್ಕಾರಿ ವೈದ್ಯರೊಬ್ಬರು ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿರುವ ಘಟನೆ ನಡೆದಿದೆ. ಕುಂದಾಪುರದ ಖಾಸಗಿ ಹೊಟೇಲಿನಲ್ಲಿ ತನ್ನ ಪತ್ನಿ ಹಾಗು ಗೆಳಯರೊಂದಿಗೆ ಕುಳಿತಿದ್ದ ಶ್ರೀಕಾಂತ್ ಹೆಮ್ಮಾಡಿಯವರ ಮೇಲೆ ಕುಂದಾಪುರ ಸರ್ಕಾರಿ ಆಸ್ಪತ್ರೆಯ ವೈದ್ಯ ಡಾ. ಮಹೇಂದ್ರ ಶೆಟ್ಟಿ ಏಕಾಏಕಿ ಹಲ್ಲೆ…

## [ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಕಾಯ್ದೆ 2006](https://newskarkala.com/2026/08/21/kanunu-kanaja-aug-21-2/)

_2026-08-21 · Newskarkala Desk · News Karkala_

ಲಾಭದ ಆಸೆಗಾಗಿ ಆಹಾರ ಪದಾರ್ಥಗಳಲ್ಲಿ ಕಳಪೆ ಗುಣಮಟ್ಟದ, ಹಾನಿಕರ ಅಥವಾ ನಿಷೇಧಿತ ವಸ್ತುಗಳನ್ನು ಬೆರೆಸಿ ಅದರ ಮೂಲ ಗುಣಮಟ್ಟವನ್ನು ಕಡಿಮೆ ಮಾಡುವುದನ್ನು ಆಹಾರ ಕಲಬೆರಕೆ ಎನ್ನಲಾಗುತ್ತದೆ. ನಮ್ಮ ಭಾರತ ದೇಶದಲ್ಲಿ ಆಹಾರ ಸುರಕ್ಷತೆಯನ್ನು ಕಾಪಾಡುವುದಕ್ಕಾಗಿ ಹಳೆಯದಾದ ‘ಆಹಾರ ಕಲಬೆರಕೆ ನಿಯಂತ್ರಣ ಕಾಯ್ದೆ 1954 ಎಂಬ ಕಾನೂನು ಜ್ಯಾರಿಯಲ್ಲಿತ್ತು. ಆಹಾರ ಪದಾರ್ಥಗಳ ಕಲಬೆರಕೆಯ ದುಷ್ಟತನವು ನಮ್ಮ ದೇಶಾದ್ಯಂತ ವ್ಯಾಪಕವಾಗಿ ಮತ್ತು ನಿರಂತರವಾಗಿ ಬೆಳೆದ ಕಾರಣ ಮತ್ತು ಈ ಕಾನೂನಿನಲ್ಲಿ ಕಂಡು ಬರುತ್ತಿದ್ದ…

## [ದಸ್ಕತ್ ಸಿನೆಮಾ ನಿರ್ದೇಶಕರಿಂದ ಹೊಸ ಚಿತ್ರ ‘ಅಜ್ಜಿಕಥೆ’!](https://newskarkala.com/2026/08/21/ajjikathe-film/)

_2026-08-21 · Newskarkala Desk · News Karkala_

ದುಬೈನಲ್ಲಿ ಶೀರ್ಷಿಕೆ ಅನಾವರಣ ಕಾರ್ಕಳ : ಲವ್ ಕಾಕ್‌ಟೈಲ್, ಅಪ್ಪೆ ಟೀಚರ್, ಮಾಲ್ಗುಡಿ ಡೇಸ್, ಹೌದ್ದೋ ಹುಲಿಯ ಸೇರಿದಂತೆ ವಿಭಿನ್ನ ಕಥೆಗಳು ಹಾಗೂ ಮನರಂಜನೆಯ ಚಿತ್ರಗಳನ್ನು ಪ್ರೇಕ್ಷಕರಿಗೆ ನೀಡಿರುವ ಸ್ವಯಂ‌ಪ್ರಭ ಎಂಟರ್ಟೈನ್ಮೆಂಟ್ & ಪ್ರೋಡಕ್ಷನ್ ಸಂಸ್ಥೆಯಿಂದ ಇದೀಗ ಮತ್ತೊಂದು ಹೊಸ ಚಿತ್ರ ತೆರೆಗೆ ಬರಲು ಸಜ್ಜಾಗಿದೆ. ವಿಭಿನ್ನ ಕಥಾಹಂದರ ಹಾಗೂ ಹಾಸ್ಯ ಮನರಂಜನೆಯೊಂದಿಗೆ ಮೂಡಿಬರುತ್ತಿರುವ ಹೊಸ ಚಿತ್ರವೇ ‘ಅಜ್ಜಿಕಥೆ’. ಆ. 20ರಂದು ದುಬೈನಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ‘ಅಜ್ಜಿಕಥೆ’…

## [ಸರ್ವರ್‌ ಡೌನ್ :‌ ನ್ಯಾಯಬೆಲೆ ಅಂಗಡಿಗಳಲ್ಲಿ ಇ-ಕೆವೈಸಿಗೆ ತಾತ್ಕಾಲಿಕ ತಡೆ](https://newskarkala.com/2026/08/21/server-down-in-nyayabele-angadi/)

_2026-08-21 · Newskarkala Desk · News Karkala_

ಬೆಂಗಳೂರು : ಸರ್ವರ್‌ ಡೌನ್‌ ಬೆನ್ನಲ್ಲೇ ರಾಜ್ಯದ ನ್ಯಾಯಬೆಲೆ ಅಂಗಡಿಗಳಲ್ಲಿ ಇ-ಕೆವೈಸಿಗೆ ತಾತ್ಕಾಲಿಕ ತಡೆ ನೀಡಲಾಗಿದೆ.ಸೆಪ್ಟೆಂಬರ್ 1ರ ಬಳಿಕ ಇ-ಕೆವೈಸಿಗೆ ಸೂಚನೆ ನೀಡಲಾಗಿದೆ. ಸೆಪ್ಟೆಂಬರ್ ಅಂತ್ಯದೊಳಗೆ ರೇಷನ್ ಕಾರ್ಡ್ ಇ-ಕೆವೈಸಿ ಮಾಡಬೇಕು. ಇ-ಕೆವೈಸಿಗೆ ಗಡುವು ವಿಧಿಸಿದ್ದರಿಂದ ಜನ ಏಕಾಏಕಿ ಮುಗಿಬಿದ್ದಿದ್ದರು. ಈ ತಿಂಗಳು ಒಂದೇ ಸಲ ಎರಡು ತಿಂಗಳ ಅಕ್ಕಿ ಕೊಡಬೇಕಾಗಿರುವುದರಿಂದ ಎರಡು ಸಲ ಬಯೋಮೆಟ್ರಿಕ್ ನೀಡಬೇಕಾಗಿತ್ತು. ಹೀಗಾಗಿ, ಸರ್ವರ್ ಕ್ಲ್ಯಾಷ್ ಆಗಿ ಜನ ಕ್ಯೂನಲ್ಲಿ ನಿಂತು…

## [ಮೋದಿ, ಶಾ ಟೆಲಿಪ್ರಾಂಪ್ಟರ್ ಇಲ್ಲದೆ ಪೂರ್ತಿ ವಂದೇ ಮಾತರಂ ಹಾಡಿದ್ರೆ ರಾಜೀನಾಮೆ ಕೊಡ್ತೀನಿ : ಪ್ರಿಯಾಂಕ್ ಖರ್ಗೆ ಸವಾಲ್](https://newskarkala.com/2026/08/21/priyank-karge-challenge-to-bjp/)

_2026-08-21 · Newskarkala Desk · News Karkala_

ಬೆಂಗಳೂರು : ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ವಂದೇ ಮಾತರಂ ಗೀತೆಯನ್ನು ಟೆಲಿಪ್ರಾಂಪ್ಟರ್ ಇಲ್ಲದೇ ಪೂರ್ತಿ ಹಾಡಿದರೆ ನಾನು ರಾಜೀನಾಮೆ ಕೊಡ್ತೀನಿ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಸವಾಲ್ ಹಾಕಿದ್ದಾರೆ. ವಂದೇ ಮಾತರಂ ಗೀತೆ ಎರಡೇ ಪ್ಯಾರ ಹಾಡುವ ಕಾಂಗ್ರೆಸ್ ನಿರ್ಣಯದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, 1937ರಲ್ಲಿ ಸರ್ದಾರ್ ಪಟೇಲ್, ನೆಹರೂ, ಬೋಸ್, ಟ್ಯಾಗೂರ್ ಸೇರಿ ಒಂದು ತೀರ್ಮಾನಕ್ಕೆ ಬಂದರು. ಎರಡು ಪ್ಯಾರ ಅಂತ ತೀರ್ಮಾನ ಮಾಡಿದರು. ಅದನ್ನ ನಾವು ಅಳವಡಿಸಿಕೊಂಡು \[…\] The post…

## [ಚಿನ್ನ ಅಡವಿರಿಸಿಕೊಂಡು ಮುತ್ತೂಟ್‌ ಫೈನಾನ್ಸ್‌ ಸಿಬ್ಬಂದಿಯಿಂದ ಮಹಿಳೆಗೆ ವಂಚನೆ](https://newskarkala.com/2026/08/21/fraud-hebri/)

_2026-08-21 · Newskarkala Desk · News Karkala_

ಹೆಬ್ರಿ : ಮಹಿಳೆಯಿಂದ ಚಿನ್ನ ಅಡವಿರಿಸಿಕೊಂಡು ಮುತ್ತೂಟ್‌ ಫೈನಾನ್ಸ್‌ ಸಿಬ್ಬಂದಿ ವಂಚನೆ ಮಾಡಿರುವ ಬಗ್ಗೆ ಹೆಬ್ರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೆಬ್ರಿ ಗ್ರಾಮದ ಶೃತಿ ಎಂಬವರು 2025ರ ಫೆ. 23ರಂದು ತಮ್ಮ ತಾಯಿಗೆ ಆರೋಗ್ಯ ಸರಿಯಿಲ್ಲದ ಕಾರಣ ತುರ್ತು ಚಿಕಿತ್ಸೆಗಾಗಿ ಹಣದ ಅಗತ್ಯವಿದ್ದುದರಿಂದ ಹೆಬ್ರಿ ಮುತ್ತೂಟ್‌ ಪೈನಾನ್ಸ್‌ನಲ್ಲಿ ಕೆಲಸ ಮಾಡಿಕೊಂಡಿದ್ದ ಪರಿಚಯದ ಮಂಜುನಾಥರವರಲ್ಲಿ ತಿಳಿಸಿದಾಗ ಅವರು ನಿಮ್ಮಲ್ಲಿ ಚಿನ್ನ ಇದ್ದರೆ ಕೊಡಿ ತಾನು ಪೈನಾನ್ಸ್‌ನಲ್ಲಿ ಇಟ್ಟು ಹಣ…

## [ಚಿತ್ರ ಕಲಾವಿದ ಕಮಲ್ ಅಹ್ಮದ್ ಮಾಳೇಕೊಪ್ಪ ಅವರಿಗೆ ರಾಷ್ಟ್ರಪತಿ ಗೌರವ](https://newskarkala.com/2026/08/21/kamal-ahamadh/)

_2026-08-21 · Newskarkala Desk · News Karkala_

ಕಾರ್ಕಳ : ಕಾರ್ಕಳದಲ್ಲಿ ವಾಸ್ತವ್ಯವಿರುವ ಗದಗ ಜಿಲ್ಲೆಯ ಖ್ಯಾತ ಚಿತ್ರಕಲಾವಿದ, ವಿಜಯನಗರ ಗರುಡಾದ್ರಿ ಶೈಲಿಯಿಂದ ಪ್ರಭಾವಿತರಾದ ಕಮಲ್ ಅಹ್ಮದ್ ಮಾಳೇಕೊಪ್ಪ ಅವರಿಗೆ ರಾಷ್ಟ್ರಪತಿ ಭವನದಲ್ಲಿ ನಡೆದ ಪ್ರತಿಷ್ಠಿತ “ಆರ್ಟಿಸ್ಟ್ ಇನ್ ರೆಸಿಡೆನ್ಸಿ” ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಗೌರವ ದೊರಕಿದೆ. ದೆಹಲಿಯ ರಾಷ್ಟ್ರಪತಿ ಭವನದಲ್ಲಿ 10 ದಿನಗಳ ಕಾಲ ಆಯೋಜಿಸಲಾದ ಈ ವಿಶೇಷ ಕಾರ್ಯಕ್ರಮದಲ್ಲಿ ಭಾರತದೆಲ್ಲೆಡೆಯ ವಿವಿಧ ಸಾಂಪ್ರದಾಯಿಕ ಕಲಾ…

## [ಅಬ್ದುಲ್‌ ರಹಿಮಾನ್ ಹತ್ಯೆ ಪ್ರಕರಣ &#8211; 5 ಆರೋಪಿಗಳಿಗೆ ಷರತ್ತುಬದ್ಧ ನಿರೀಕ್ಷಣಾ ಜಾಮೀನು](https://newskarkala.com/2026/08/21/abdhul-rahiman-murder-case/)

_2026-08-21 · Newskarkala Desk · News Karkala_

ಬೆಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಇರಾಕೋಡಿಯಲ್ಲಿ ನಡೆದಿದ್ದ ಕೊಳತ್ತಮಜಲು ಅಬ್ದುಲ್ ರಹಿಮಾನ್ ಕೊಲೆ ಪ್ರಕರಣದಲ್ಲಿ ಕರ್ನಾಟಕ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆ (ಕೊಕಾ) ಅಡಿಯಲ್ಲಿ ಆರೋಪಿಗಳಾಗಿದ್ದ ಐವರಿಗೆ ಹೈಕೋರ್ಟ್ ಷರತ್ತುಬದ್ಧ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಪ್ರಕರಣದಲ್ಲಿ ಬಂಧನ ಭೀತಿ ಎದುರಿಸುತ್ತಿದ್ದ ಆರೋಪಿಗಳಾದ ಪವನ್ ಮಾರುತಿ ಗಾಯಕ್ವಾಡ್ (ಎ19), ಅನಂತ ನಾಗೋಜಿ ಸಾವಂತ್ (ಎ21), ಬಿಟ್ಟಪ್ಪ ನಾಗಪ್ಪ ತರಿಹಾಳ (ಎ22), ಎಂ. ನವೀನ್ ಕುಮಾರ್ (ಎ23) ಹಾಗೂ ಸಾಗರದ…

## [Stream Torrents and IPTV Instantly (Sponsored)](https://crawlproof.com/a/Xxmq5iEpdzOe)

_2026-08-21 · **Sponsored**_

Search, index, and play music, movies, books, and live TV in your browser.

## [ತಾಕತ್ತಿದ್ರೆ ಸಂಘದ ಕಚೇರಿಯಲ್ಲಿ ರಾಷ್ಟ್ರಗೀತೆ ಹಾಡಲಿ : ಹರಿಪ್ರಸಾದ್ ಸವಾಲು](https://newskarkala.com/2026/08/21/bk-hariprasad-challenge-to-rss-and-bjp/)

_2026-08-21 · Newskarkala Desk · News Karkala_

ಬೆಂಗಳೂರು : ವಂದೇ ಮಾತರಂ ಮುಂದಿಟ್ಟುಕೊಂಡು ರಾಜಕೀಯ ಮಾಡುವ ದೇಶದ್ರೋಹಿಗಳೇ ತಾಕತ್ತಿದ್ರೆ ಆರ್‌ಎಸ್‌ಎಸ್‌ ಶಾಖೆಯಲ್ಲಿ ರಾಷ್ಟ್ರಗೀತೆ ಹಾಡಲಿ ಎಂದು ಕೆಪಿಸಿಸಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಆರೆಸ್ಸೆಸ್, ಬಿಜೆಪಿಗೆ ಸವಾಲು ಹಾಕಿದರು. ಆ. 21ರಂದು ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ವಂದೇ ಮಾತರಂ ಎರಡು ಚರಣ ಮಾತ್ರ ಹಾಡುತ್ತೇವೆ. CWC ಸರಿಯಾದ ನಿರ್ಣಯವನ್ನು ತೆಗೆದುಕೊಂಡಿದೆ. ನಾವು ಇದನ್ನ ಸ್ವಾಗತಿಸುತ್ತೇನೆ. ಬಿಜೆಪಿಯವರು ಏನೇ ಕಾನೂನು ತರಲಿ, ಇವರು ನಮ್ಮನ್ನು…

## [ವಂದೇ ಮಾತರಂನ ಎರಡು ಚರಣ ಹಾಡುವ ನಿರ್ಧಾರ ದೇಶ ವಿರೋಧಿ -ಕಾಂಗ್ರೆಸ್ ವಿರುದ್ಧ ಅಮಿತ್ ಶಾ ವಾಗ್ದಾಳಿ](https://newskarkala.com/2026/08/20/amith-sha-7/)

_2026-08-20 · Newskarkala Desk · News Karkala_

ಚೆನ್ನೈ : ವಂದೇ ಮಾತರಂ ಗೀತೆಯ ಮೊದಲ ಎರಡು ಚರಣಗಳನ್ನು ಮಾತ್ರ ಕಾಂಗ್ರೆಸ್‌ ಕಾರ್ಯಕ್ರಮಗಳಲ್ಲಿ ಹಾಡುವ ನಿರ್ಧಾರಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಈ ನಿರ್ಧಾರವನ್ನು ಅವರು ದೇಶವಿರೋಧಿ ಎಂದು ಟೀಕಿಸಿದ್ದು, ಇದು ಕಾಂಗ್ರೆಸ್‌ನ ಹಳೆಯ ತುಷ್ಟೀಕರಣ ರಾಜಕಾರಣವನ್ನು ಮತ್ತೆ ಮುನ್ನೆಲೆಗೆ ತಂದಿದೆ ಎಂದು ಆರೋಪಿಸಿದ್ದಾರೆ. ತಮಿಳುನಾಡಿನ ಚೆಂಗಲ್ಪಟ್ಟಿನಲ್ಲಿ ಮಾತನಾಡಿದ ಅಮಿತ್ ಶಾ, 1937ರಲ್ಲಿ ಕಾಂಗ್ರೆಸ್ ವಂದೇ ಮಾತರಂ ಅನ್ನು…

## [ಕಾರ್ಕಳ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ರಾಜೀವ್ ಗಾಂಧಿ, ದೇವರಾಜ ಅರಸು ಜನ್ಮದಿನಾಚರಣೆ](https://newskarkala.com/2026/08/20/block-congress-karkala-4/)

_2026-08-20 · Newskarkala Desk · News Karkala_

ಕಾರ್ಕಳ : ಕಾರ್ಕಳ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಭಾರತ ರತ್ನ ಮಾಜಿ ಪ್ರಧಾನಿ ದಿ. ರಾಜೀವ್ ಗಾಂಧಿ ಮತ್ತು ಮಾಜಿ ಮುಖ್ಯಮಂತ್ರಿ ದಿ. ದೇವರಾಜ ಅರಸು ಅವರ ಜನ್ಮದಿನಾಚರಣೆಯನ್ನು ಆಚರಿಸಲಾಯಿತು. ಬ್ಲಾಕ್ ಅಧ್ಯಕ್ಷ ಶುಭದರಾವ್ ಮಹನೀಯರ ಭಾವಚಿತ್ರಕ್ಕೆ ದೀಪ ಬೆಳಗಿಸಿ ಪುಷ್ಪಾರ್ಚನೆಗೈದು ಗೌರವ ಸಲ್ಲಿಸಿದರು. ಕಾಂಗ್ರೆಸ್ ಉಡುಪಿ ಜಿಲ್ಲಾ ವಕ್ತಾರ ಬಿಪಿನ್ ಚಂದ್ರಪಾಲ್ ನಕ್ರೆ ಮಾತನಾಡಿ, ಮಾಜಿ ಪ್ರಧಾನಿ ದಿ. ರಾಜೀವ್ ಗಾಂಧಿ ಅವರು ಪಂಚಾಯತ್ ರಾಜ್ ವ್ಯವಸ್ಥೆಯನ್ನು ಸಮರ್ಪಕವಾಗಿ ಅನುಷ್ಠಾನಿಸಿದ…

## [ಘನತ್ಯಾಜ್ಯ ನಿರ್ವಹಿಸದ ಮಾಲ್‌, ಹೊಟೇಲ್‌ಗಳಿಗೆ ವಿದ್ಯುತ್, ನೀರು ಸಂಪರ್ಕ ಕಡಿತ : ಸುಪ್ರೀಂ ಕೋರ್ಟ್ ಆದೇಶ](https://newskarkala.com/2026/08/20/supreem-court-order-waste-management/)

_2026-08-20 · Newskarkala Desk · News Karkala_

ದೆಹಲಿ : ಘನತ್ಯಾಜ್ಯ ನಿರ್ವಹಣೆ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ, ಅದು ಕೇವಲ ನೈರ್ಮಲ್ಯ ಕಾರ್ಮಿಕರ ಹೊಣೆಗಾರಿಕೆಯಲ್ಲ ಎಂದು ಸುಪ್ರೀಂ ಕೋರ್ಟ್ ಗುರುವಾರ ಹೇಳಿದೆ. ಘನತ್ಯಾಜ್ಯ ನಿರ್ವಹಣಾ ನಿಯಮಗಳನ್ನು ಪಾಲಿಸದ ದೊಡ್ಡ ಮಾಲ್‌ಗಳು, ಹೊಟೇಲ್‌ಗಳು, ಆಸ್ಪತ್ರೆಗಳು, ವಾಣಿಜ್ಯ ಸಂಕೀರ್ಣಗಳು ಹಾಗೂ ದೊಡ್ಡ ವಸತಿ ಸಂಘಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆದೇಶಿಸಿದೆ. ನಿಯಮ ಪಾಲಿಸದ ಬೃಹತ್ ತ್ಯಾಜ್ಯ ಉತ್ಪಾದಕರನ್ನು ಆರು ವಾರಗಳೊಳಗೆ ಗುರುತಿಸಬೇಕು. ನಿಯಮ ಪಾಲನೆಗೆ ವಿಫಲವಾದರೆ ಅವರ ನೀರು ಅಥವಾ…

## [ಬಾಳೆಹಣ್ಣಿಗೆ ಕೃತಕ ಬಣ್ಣ ಹಚ್ಚುತ್ತಿದ್ದ ಜಾಲ ಪತ್ತೆ &#8211; ಅಧಿಕಾರಿಗಳಿಂದ ದಿಢೀರ್‌ ದಾಳಿ](https://newskarkala.com/2026/08/20/health-officials-raid/)

_2026-08-20 · Newskarkala Desk · News Karkala_

ಉಡುಪಿ : ಉಡುಪಿ ಸಮೀಪದ ಅಲೆವೂರು ಗ್ರಾಮದ 3-4 ಬಾಳೆ ಹಣ್ಣು ದಾಸ್ತಾನು ಕೇಂದ್ರಗಳಿಗೆ ಆ. 20ರಂದು ಏಕಕಾಲದಲ್ಲಿ ಧಿಡೀರ್ ದಾಳಿ ನಡೆಸಿದ ಕುಂದಾಪುರ ಅಸಿಸ್ಟೆಂಟ್ ಕಮಿಷನರ್ ರಶ್ಮಿ ಎಸ್. ಆರ್. ಹಾಗೂ ಆರೋಗ್ಯಾಧಿಕಾರಿಗಳು ಬಾಳೆ ಹಣ್ಣಿಗೆ ಹಾನಿಕಾರಕ ರಾಸಾಯನಿಕ ಬಳಸುತ್ತಿದ್ದ ಹಲವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಗುರುವಾರ ಮಂಜಾನೆ ಕೆಸ್ತೂರು ಹಾಗೂ ಮಣಿಪಾಲ ಸಮೀಪದ ದುಗ್ಗಿ ಪರಿಸರದಲ್ಲಿ ಬಾಳೆ ಹಣ್ಣು ರಖಂ ವ್ಯಾಪಾರಸ್ಥರು ಹಾಗೂ ದಾಸ್ತಾನುದಾರರ ಗೋದಾಮುಗಳಿಗೆ ದಾಳಿ ನಡೆಸಿದ ಅಧಿಕಾರಿಗಳು,…

## [ಡಿ.‌ ದೇವರಾಜ ಅರಸು 111ನೇ ಜನ್ಮ‌ ದಿನಾಚರಣೆ](https://newskarkala.com/2026/08/20/devaraj-arasu-111th-birthday/)

_2026-08-20 · Newskarkala Desk · News Karkala_

ಅರಸು ಆಡಳಿತಾವಧಿಯಲ್ಲಿ ಕ್ರಾಂತಿಕಾರಿ ಬದಲಾವಣೆ – ಪ್ರದೀಪ್‌ ಆರ್. ಕಾರ್ಕಳ : ಭೂ ಸುಧಾರಣೆ ಕಾಯ್ದೆಯ ಪರಿಣಾಮಕಾರಿ ಅನುಷ್ಠಾನದೊಂದಿಗೆ ರಾಜ್ಯದಲ್ಲಿ ಕ್ರಾಂತಿಕಾರಿ ಬದಲಾವಣೆಗೆ ನಾಂದಿ ಹಾಡಿದ ಡಿ. ದೇವರಾಜ ಅರಸು ಅವರನ್ನು ಸದಾ ಸ್ಮರಿಸುವ ಕಾರ್ಯವಾಗಬೇಕೆಂದು ಕಾರ್ಕಳ ತಹಶೀಲ್ದಾರ್‌ ಪ್ರದೀಪ್‌ ಆರ್.‌ ಹೇಳಿದರು. ಅವರು ಜಿಲ್ಲಾ ಪಂಚಾಯತ್, ಕಾರ್ಕಳ ತಾಲೂಕು ಪಂಚಾಯತ್, ತಾಲೂಕು ಆಡಳಿತ, ಪುರಸಭೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಆ. 20ರಂದು ಕಾರ್ಕಳ ಡಿ. ದೇವರಾಜ…

## [ಅರ್ಹ ಫಲಾನುಭವಿಗಳಿಗೆ ಪಿಂಚಣಿ ಮುಂದುವರೆಸುವಂತೆ ಕಂದಾಯ ಇಲಾಖೆ ಆದೇಶ](https://newskarkala.com/2026/08/20/pension/)

_2026-08-20 · Newskarkala Desk · News Karkala_

ಬೆಂಗಳೂರು : ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಯಡಿ ಪರಿಶೀಲನೆಯ ನಂತರ 1.20 ಲಕ್ಷ ರೂ.ಒಳಗಿನ ವಾರ್ಷಿಕ ಆದಾಯ ಮಿತಿ ಹೊಂದಿರುವ ಅರ್ಹ ಫಲಾನುಭವಿಗಳ ಪಿಂಚಣಿಗಳನ್ನು ಮುಂದುವರೆಸುವಂತೆ ಕಂದಾಯ ಇಲಾಖೆ ಆದೇಶ ಹೊರಡಿಸಿದೆ. ಈ ಬಗ್ಗೆ ಮಾಹಿತಿ ನೀಡಿದ ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವ ಡಾ.ಜಿ.ಪರಮೇಶ್ವರ್ ಅವರು ವಿವಿಧ ಸಾಮಾಜಿಕ ಪಿಂಚಣಿಗಳಾದ ವೃದ್ಧಾಪ್ಯ ವೇತನ, ವಿಧವಾ ವೇತನ, ಅಂಗವಿಕಲ ವೇತನ ಇತ್ಯಾದಿಗಳಿಗೆ 32 ಸಾವಿರ ರೂ. ಆದಾಯ ಮಿತಿ ಇತ್ತು. ಬಹಳ ದಿನಗಳಿಂದ ಇದೇ ಆದಾಯ ಮಿತಿಯಿದ್ದ ಕಾರಣ \[…\] The…

## [ಉಡುಪಿಯಿಂದ ಸಾಗರಕ್ಕೆ ತೆರಳುತ್ತಿದ್ದ ಖಾಸಗಿ ಬಸ್‌ಗೆ ಬೆಂಕಿ](https://newskarkala.com/2026/08/20/bus-catches-fire/)

_2026-08-20 · Newskarkala Desk · News Karkala_

ಉಡುಪಿ : ಉಡುಪಿಯಿಂದ ಸಾಗರಕ್ಕೆ ತೆರಳುತ್ತಿದ್ದ ಖಾಸಗಿ ಬಸ್‌ಗೆ ಬ್ರಹ್ಮಾವರ ಸಮೀಪ ಬೆಂಕಿ ಹೊತ್ತಿಕೊಂಡ ಘಟನೆ ಸಂಭವಿಸಿದ್ದು, ಬಸ್‌ನಲ್ಲಿದ್ದ ಏಳು ಪ್ರಯಾಣಿಕರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಸ್‌ನಲ್ಲಿ ಏಕಾಏಕಿ ಹೊಗೆ ಕಾಣಿಸಿಕೊಂಡಿದೆ. ಬಳಿಕ ಬಸ್‌ನ ಎಲೆಕ್ಟ್ರಿಕಲ್ ಬಾಕ್ಸ್ ಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕೆಲವೇ ಕ್ಷಣಗಳಲ್ಲಿ ಬೆಂಕಿ ವ್ಯಾಪಿಸಲು ಆರಂಭಿಸಿದೆ. ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಬಸ್ ನಿರ್ವಾಹಕರು ತಕ್ಷಣ ಸಮಯಪ್ರಜ್ಞೆ ಮೆರೆದು ಬಸ್ ನಿಲ್ಲಿಸಿ…

## [ದಸರಾ ಜಂಬೂಸವಾರಿಯಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಿ ಅಭಿಮನ್ಯುಗೆ ರಾಜೋಚಿತ ಬೀಳ್ಕೊಡುಗೆ ನೀಡಿ &#8211; ಈಶ್ವರ ಖಂಡ್ರೆ ಮನವಿ](https://newskarkala.com/2026/08/19/abhimanyu-elephant/)

_2026-08-19 · Newskarkala Desk · News Karkala_

ಬೆಂಗಳೂರು : ಆರು ಬಾರಿ ಚಿನ್ನದಂಬಾರಿ ಹೊತ್ತ 60 ವರ್ಷದ ಕ್ಯಾಪ್ಟನ್ ಅಭಿಮನ್ಯು ಆನೆಗೆ ಈ ಬಾರಿ ದಸರಾ ಜಂಬೂಸವಾರಿಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಿ ರಾಜೋಚಿತ ಬೀಳ್ಕೊಡುಗೆ ನೀಡುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ ಖಂಡ್ರೆ ಮನವಿ ಮಾಡಿದ್ದಾರೆ. ಈ ಸಂಬಂಧ ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಪತ್ರ ಬರೆದಿರುವ ಅವರು, ದಸರಾ ಮಹೋತ್ಸವದಲ್ಲಿ ನಾಡದೇವಿ ಚಾಮುಂಡೇಶ್ವರಿ ವಿರಾಜಮಾನಳಾದ 750 ಕೆ.ಜಿ. ತೂಕದ ಚಿನ್ನದಂಬಾರಿ ಹೊತ್ತು ಗಜಗಾಂಭೀರ್ಯದಿಂದ ಹೆಜ್ಜೆ…

## [ಆಳ್ವಾಸ್ ಪ್ರಗತಿಯಲ್ಲಿ 2416 ಅಭ್ಯರ್ಥಿಗಳಿಗೆ ಸ್ಥಳದಲ್ಲೇ ಉದ್ಯೋಗ : 6183 ಮಂದಿ ಶಾರ್ಟ್‌ಲಿಸ್ಟ್ &#8211; ವಿವೇಕ್ ಆಳ್ವ](https://newskarkala.com/2026/08/19/alvas-pragathi-2026/)

_2026-08-19 · Newskarkala Desk · News Karkala_

ಮಂಗಳೂರು : ಆಳ್ವಾಸ್ ಶಿಕ್ಷಣ ಪ್ರತಿಷ್ಟಾನದ ವತಿಯಿಂದ ಆಯೋಜಿಸಲಾದ 16ನೇ ಆವೃತ್ತಿಯ ಉದ್ಯೋಗ ಮೇಳ ಆಳ್ವಾಸ್ ಪ್ರಗತಿಯಲ್ಲಿ 2416 ಅಭ್ಯರ್ಥಿಗಳಿಗೆ ಸ್ಥಳದಲ್ಲಿಯೇ ಉದ್ಯೋಗದ ಆಫರ್ ದೊರಕಿದೆ. 6183 ಅಭ್ಯರ್ಥಿಗಳು ವಿವಿಧ ಹುದ್ದೆಗಳಿಗೆ ಮುಂದಿನ ಹಂತಕ್ಕೆ ಆಯ್ಕೆಯಾಗಿದ್ದಾರೆ ಎಂದು ಪ್ರತಿಷ್ಟಾನದ ಟ್ರಸ್ಟಿ ವಿವೇಕ್ ಆಳ್ವ ತಿಳಿಸಿದ್ದಾರೆ. ಮಂಗಳೂರು ಪ್ರೆಸ್‌ಕ್ಲಬ್‌ನಲ್ಲಿ ಆ.19ರಂದು ಸುದ್ದಿಗೋಷ್ಟಿಯಲ್ಲಿ ಪ್ರಗತಿ ಯಶಸ್ಸಿನ ಬಗ್ಗೆ ಮಾಹಿತಿ ಹಂಚಿಕೊಂಡ ಅವರು, ಉದ್ಯೋಗ ಮೇಳದಲ್ಲಿ 332 ಕಂಪನಿಗಳು ಹಾಗೂ…

## [Refer a Friend, Earn Rewards (Sponsored)](https://crawlproof.com/a/evsD05Cu5OFm)

_2026-08-19 · **Sponsored**_

Earn rewards when a friend signs up for the Graphite Business Card

## [ಎಸ್‌ಕೆಪಿಎ ಕಾರ್ಕಳ ವಲಯ &#8211; ಆರೋಗ್ಯ ತಪಾಸಣಾ ಶಿಬಿರ](https://newskarkala.com/2026/08/19/skpa-karkala-world-photographers-day/)

_2026-08-19 · Newskarkala Desk · News Karkala_

ಕೆ.ಎಂ. ಖಲೀಲ್ ಅವರಿಗೆ ವಲಯದ ವತಿಯಿಂದ ʼಛಾಯಾ ಸಾಧಕʼ ಪ್ರಶಸ್ತಿ ಕಾರ್ಕಳ : ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ದಕ್ಷಿಣ ಕನ್ನಡ–ಉಡುಪಿ ಜಿಲ್ಲೆ ಕಾರ್ಕಳ ವಲಯದ ವತಿಯಿಂದ ವಿಶ್ವ ಛಾಯಾಗ್ರಾಹಕರ ದಿನಾಚರಣೆಯ ಪ್ರಯುಕ್ತ ಕಸ್ತೂರ್ಬಾ ಮೆಡಿಕಲ್ ಹಾಸ್ಪಿಟಲ್ ಮಣಿಪಾಲ ಹಾಗೂ ಟಿ.ಎಂ.ಎ. ಪೈ ರೋಟರಿ ಆಸ್ಪತ್ರೆ ಕಾರ್ಕಳ ಇವರ ಸಹಯೋಗದಲ್ಲಿ ಸಾಲ್ಮರದ ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.ಜಮಾತುಲ್…

