RSS Amplifier

News source

Special News Media

Special News Media

specialnewsmedia.comSource feed ↗24 articles

Overdue Last read · last published · next check
Last read 1 day ago, longer than this feed's 6 hours schedule.

Latest articles

ರೈಲ್ವೆ ವಿಭಾಗ ಬದಲಾವಣೆ ಐತಿಹಾಸಿಕ ಸಾಧನೆ ಎಂದು ಹೇಳಿಕೊಳ್ಳುವ ನೈತಿಕ ಹಕ್ಕು ಬಿಜೆಪಿಗಿಲ್ಲ; ಇದು ಸಾಧನೆಯಲ್ಲ—ಜನರ ಕಣ್ಣಿಗೆ ಮಣ್ಣು ಎರಚುವ ರಾಜಕೀಯ ಪ್ರಚಾರ: ಸಂತೋಷ್ ಬಜಾಲ್

ಮಂಗಳೂರು ರೈಲ್ವೆಯನ್ನು ಮೈಸೂರು ವಿಭಾಗಕ್ಕೆ ಸೇರಿಸಿರುವುದನ್ನೇ ಬಿಜೆಪಿ ತನ್ನ ಅತೀ ದೊಡ್ಡ ಸಾಧನೆಯಂತೆ ಬಿಂಬಿಸಿಕೊಳ್ಳುವುದು ದಕ್ಷಿಣ ಕನ್ನಡದ ಜನತೆಗೆ ಮಾಡುವ ಮತ್ತೊಂದು ರಾಜಕೀಯ ಮೋಸ. ಸತತ ಹಲವು ಅವಧಿಗಳಲ್ಲಿ ದಕ್ಷಿಣ ಕನ್ನಡದಿಂದ ಬಿಜೆಪಿಯ ಸಂಸದರನ್ನು ನಿರಂತರವಾಗಿ ಆಯ್ಕೆ ಮಾಡಿ ಕಳುಹಿಸಿದರೂ, ಜಿಲ್ಲೆಯ ರೈಲ್ವೆ ಮೂಲಸೌಕರ್ಯಕ್ಕೆ ಅಗತ್ಯವಾದ ಅಭಿವೃದ್ಧಿಯನ್ನು ತರುವಲ್ಲಿ ಅವರು ಸಂಪೂರ್ಣ ವಿಫಲರಾಗಿದ್ದಾರೆ. ಮಂಗಳೂರು ಸೆಂಟ್ರಲ್‌ನಂತಹ ಪ್ರಮುಖ ರೈಲು ನಿಲ್ದಾಣಕ್ಕೆ ಸಮರ್ಪಕ ಪ್ಲಾಟ್‌ಫಾರಂ…

ಪುತ್ತೂರು ಪೊಲೀಸರ ಕಾರ್ಯಾಚರಣೆ: ನಾಲ್ವರು ಕುಖ್ಯಾತ ಕಳ್ಳರ ಬಂಧನ; ಪುತ್ತೂರಿನಿಂದ ಕದ್ದ ವಾಹನ ತಮಿಳುನಾಡಿನಲ್ಲಿ ಆಂಬ್ಯುಲೆನ್ಸ್

ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಮಾಡನ್ನೂರು ಕಾವು ಎಂಬಲ್ಲಿ ಓಮ್ನಿ ಕಾರು ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ, ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಅ.ಕ್ರ: 94/2026, ರಂತೆ ಪ್ರಕರಣ ದಾಖಲಿಸಿಕೊಂಡು, ಪುತ್ತೂರು ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಪ್ರಮೋದ್ ಕುಮಾರ್ ರವರ ಹಾಗೂ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ಪ್ರಭಾರ ಪೊಲೀಸ್ ನಿರೀಕ್ಷಕರಾದ ತಿಮ್ಮಪ್ಪ ನಾಯ್ಕ್ ರವರ ಮಾರ್ಗದರ್ಶನದಲ್ಲಿ, ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ PSI ಗುಣಪಾಲ ಜೆ ಮತ್ತು PSI ಸುಷ್ಮಾ.ಜಿ…

ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಆಸರೆ ಮುಸ್ಲಿಂ ಸಮುದಾಯ; ಮುಸ್ಲಿಂ ಸಮುದಾಯಕ್ಕೆ ಜಿಲ್ಲಾಧ್ಯಕ್ಷ ಹುದ್ದೆ ಮರೀಚಿಕೆಯೇ..?

ರಾಜ್ಯದಲ್ಲಿ ಮುಸ್ಲಿಂ ಉಪಮುಖ್ಯಮಂತ್ರಿ ಬೇಕು ಅನ್ನುವ ಕೂಗು ಹಾಗೊಮ್ಮೆ ಈಗೊಮ್ಮೆ ಎದ್ದೇಳುತ್ತಿದೆ. ಆದರೆ ಮುಸ್ಲಿಂ ಮುಖ್ಯಮಂತ್ರಿ ಅನ್ನುವುದು ಕನಸಾಗಿಯೇ ಉಳಿಯಲಿದೆ. ಇನ್ನು ಜಿಲ್ಲೆಯ ಅಧ್ಯಕ್ಷ ಹುದ್ದೆಗೆ ಮುಸ್ಲಿಂ ಸಮುದಾಯ ಏರಲು ಸಾಧ್ಯವಾಗದೇ ಇರುವುದು ದೊಡ್ಡ ದುರಂತ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಆಸರೆ ಮುಸ್ಲಿಂ ಸಮುದಾಯ. ವಿಧಾನಸಭಾ ಚುನಾವಣೆ ಇರಲಿ, ಲೋಕಸಭಾ ಚುನಾವಣೆ ಇರಲಿ ಮುಸ್ಲಿಂ ಸಮುದಾಯದ ಮತಗಳು ಕಾಂಗ್ರೆಸ್ ಪಕ್ಷಕ್ಕೆ ಹೋಲ್‍ಸೇಲ್ ಆಗಿ ಬೀಳುತ್ತಿದೆ.…

ದಕ್ಷಿಣ ಕನ್ನಡ, ಉಡುಪಿ ಕಾಂಗ್ರೆಸ್ ಗದ್ದುಗೆ ಗುದ್ದಾಟ.!

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹರೀಶ್‍ ಕುಮಾರ್ ಬದಲಾವಣೆ ಪಕ್ಕಾ ಆಗಿದ್ದು, ಕಾರ್ಯಕರ್ತರು ಕೂಡಾ ಇದನ್ನೇ ಬಯಸಿದ್ದರು . ಹರೀಶ್ ಕುಮಾರ್ ನಂತರ ಯಾರು ಅನ್ನುವ ಪ್ರಶ್ನೆ ಇದೀಗ ಎದ್ದಿದೆ. ಬರೋಬ್ಬರಿ 50 ಕ್ಕಿಂತಲೂ ಅಧಿಕ ಮಂದಿ ಆಕಾಂಕ್ಷಿಗಳು ಅಧ್ಯಕ್ಷ ಹುದ್ದೆಯ ರೇಸ್‍ನಲ್ಲಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ಮತ್ತೆ ಗತಕಾಲದ ವೈಭವ ಮರಳಿ ಪಡೆಯಬೇಕಾದರೆ ಯಂಗ್ ಅಂಡ್ ಡೈನಾಮಿಕ್ ನಾಯಕರು ಜಿಲ್ಲಾಧ್ಯಕ್ಷರಾಗಿ ಬರಬೇಕು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ ತಳಮಟ್ಟದಿಂದಲೂ…

ಪೋಷಕರ ಸೇವೆ ಮಗ-ಮಗಳ ಹೊಣೆ, ಸೊಸೆಯದ್ದಲ್ಲ; ತವರು ಮನೆಗೆ ಹೋಗಲು ಅನುಮತಿ ಬೇಕಿಲ್ಲ, ಮದುವೆ ಅಂದರೆ ಗುಲಾಮಗಿರಿ ಅಲ್ಲ: ಹೈಕೋರ್ಟ್

ಕೌಟುಂಬಿಕ ಜೀವನದಲ್ಲಿ ಪತ್ನಿಯ ಸ್ಥಾನಮಾನ ಮತ್ತು ಆಕೆಯ ವೈಯಕ್ತಿಕ ಸ್ವಾತಂತ್ರ್ಯದ ಬಗ್ಗೆ ಕರ್ನಾಟಕ ಹೈಕೋರ್ಟ್ ಅತ್ಯಂತ ಮಹತ್ವದ ಹಾಗೂ ಕ್ರಾಂತಿಕಾರಿ ತೀರ್ಪನ್ನು ನೀಡಿದೆ. ಪತ್ನಿಯಾದವಳು ಕೇವಲ ಮನೆಗೆಲಸ ಮಾಡಲು ಮತ್ತು ಪತಿಯ ಪೋಷಕರನ್ನು ನೋಡಿಕೊಳ್ಳಲು ಇರುವವಳು ಎಂದು ಭಾವಿಸುವುದು ತಪ್ಪು. ಪತಿ ಸೇರಿದಂತೆ ಮನೆಯ ಯಾರೂ ಕೂಡ ಮಹಿಳೆಗೆ ಇಂತಹ ಕೆಲಸಗಳನ್ನು ಮಾಡುವಂತೆ ಬಲವಂತ ಮಾಡುವಂತಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ನ್ಯಾಯಮೂರ್ತಿ ಚಿಲ್ಲಾಕೂರ್ ಸುಮಲತಾ ಅವರ ಪೀಠವು ಒಂದು ಮಹತ್ವದ…

ಅಳದಂಗಡಿ ಪಿಲ್ಯ ಗ್ರಾಮದ ಬರಾಯಕೆರೆ ಅಕ್ರಮ ಗಣಿಗಾರಿಕೆ: ಜಿಲ್ಲಾಧಿಕಾರಿ, ಉಸ್ತುವಾರಿ ಸಚಿವರಿಗೆ ದೂರು

ಗಣಿ ಮತ್ತು ಭೂವಿಜ್ಞಾನ ಇಲಾಖೆ, ಕಂದಾಯ, ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳು ಜಂಟಿ ಬೇಟಿ; ಸ್ಥಳ ಪರಿಶೀಲನೆ ಅಳದಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಿಲ್ಯ ಗ್ರಾಮದ ಐತಿಹಾಸಿಕ ಬರಾಯಕೆರೆ ಎಂಬಲ್ಲಿ ಕಪ್ಪು ಕಲ್ಲಿನ ಗಣಿಗಾರಿಕೆ ನಡೆಯುತ್ತಿರುವ ಬಗ್ಗೆ ಬರಾಯಕೆರೆ ಸಂರಕ್ಷಣಾ ಸಮಿತಿ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ ಖಾದರ್ ಹಾಗೂ ಜಿಲ್ಲಾಧಿಕಾರಿ ದರ್ಶನ್ ಹೆಚ್.ವಿ ರವರಿಗೆ ಮನವಿ ಸಲ್ಲಿಸಿದ ಬೆನ್ನಲ್ಲೇ ಸೋಮವಾರ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು, ಕಂದಾಯ ಇಲಾಖೆ, ಪಂಚಾಯತ್ ರಾಜ್…

ಡೇತ್ ನೋಟಲ್ಲಿ ದೋಷಿತನಾದ ಮಾತ್ರಕ್ಕೆ ಪ್ರಚೋದನೆಯ ಅಪರಾಧವಾಗಲ್ಲ

FIR ದಾಖಲಿಸಿದ ಮಾತ್ರಕ್ಕೆ ಆತ್ಮಹತ್ಯೆಗೆ ಕುಮ್ಮಕ್ಕು ಎನ್ನಲಾಗದು: ಸುಪ್ರೀಂ ಕೋರ್ಟ್ ಆತ್ಮಹತ್ಯೆಯಿಂದ ಸಾವನ್ನಪ್ಪಿದ ವ್ಯಕ್ತಿಯ ವಿರುದ್ಧ ಕಾನೂನು ಕ್ರಮ ಜರುಗಿಸಿದ ಮಾತ್ರಕ್ಕೆ ಆತನನ್ನು ಕ್ರಿಮಿನಲ್ ಅಪರಾಧಕ್ಕೆ ಹೊಣೆಗಾರನನ್ನಾಗಿ ಮಾಡಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಇತ್ತೀಚಿನ ಆದೇಶದಲ್ಲಿ ತಿಳಿಸಿದೆ. ಪ್ರತಿಯೊಬ್ಬ ವ್ಯಕ್ತಿಯು ತಮ್ಮ ಹಕ್ಕುಗಳನ್ನು ರಕ್ಷಿಸಲು ಕಾನೂನಿನಡಿಯಲ್ಲಿ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವ ದೃಢ ಹಕ್ಕನ್ನು ಹೊಂದಿದ್ದಾರೆ ಎಂದು ಅದು ಒತ್ತಿ ಹೇಳಿದೆ. ಯಾರ…

ಕಾಂತರಾಜ್, ಜಯಪ್ರಕಾಶ್ ಹೆಗ್ಡೆ ಹಾಗೂ ಮಧುಸೂದನ್ ನಾಯಕ್ ವರದಿಗಳ ಜಾರಿಗೆ ದ.ಕ ಅಹಿಂದ ನಾಯಕರ ಆಗ್ರಹ.

ಕರ್ನಾಟಕ ರಾಜ್ಯಾದ್ಯಂತ ಅಹಿಂದ ಚಳುವಳಿಯ ಭಾಗವಾಗಿ, ಪ್ರತಿ ಜಿಲ್ಲೆಯಲ್ಲಿಯೂ ಸಾಮಾಜಿಕ ನ್ಯಾಯ ಹಾಗೂ ಹಿಂದುಳಿದ ವರ್ಗಗಳ ಹಕ್ಕುಗಳಿಗಾಗಿ ಹೋರಾಟವನ್ನು ಬಲಪಡಿಸಲಾಗುತ್ತಿದೆ. ಇದರ ಭಾಗವಾಗಿ ಇಂದು ಪತ್ರಿಕಾಗೋಷ್ಠಿ ನಡೆಸಿ, ಕಾಂತರಾಜ್ ವರದಿ, ಜಯಪ್ರಕಾಶ್ ಹೆಗ್ಡೆ ವರದಿ ಹಾಗೂ ಮಧುಸೂದನ್ ನಾಯಕ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವರದಿಯನ್ನು ಕೂಡಲೇ ಬಹಿರಂಗಪಡಿಸಿ, ಜಾರಿಗೊಳಿಸಬೇಕೆಂದು ರಾಜ್ಯ ಮತ್ತು ಕೇಂದ್ರ ಸರ್ಕಾರವನ್ನು ಒತ್ತಾಯಿಸಲಾಯಿತು. ಸಾಮಾಜಿಕ,…

ಡಿಕೆಶಿ ಫ್ಲೈಟಿನಿಂದ ಇಬ್ಬರು ಇಳೀತಾರೆ; ಗೌಡರಿಗೆ ಸೀಟು ತಪ್ಪಿಸಿದವರು; ಪಟ್ಟಣದ ಮೇಲೆ ಡಿಕೆ ಬಾಂಬು!

✍️. ಆರ್.ಟಿ.ವಿಠ್ಠಲಮೂರ್ತಿ ಕಳೆದ ವಾರ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಭಾಗವಹಿಸಲು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಕೆಲ ನಾಯಕರು ದಿಲ್ಲಿಗೆ ಹೊರಟಿದ್ದಾರೆ. ಹೀಗೆ ಐದಾರು ಮಂದಿ ಪ್ರಮುಖರು ಇದ್ದ ವಿಮಾನ ದಿಲ್ಲಿಯ ಕಡೆ ದೌಡಾಯಿಸುತ್ತಿದ್ದಂತೆಯೇ ಡಿ.ಕೆ.ಶಿವಕುಮಾರ್ ಅವರು ಸಿದ್ದರಾಮಯ್ಯ ಅವರ ಜತೆ ಮಾತನಾಡಲು ಬಯಸಿದ್ದಾರೆ.ಆದರೆ ಅವರು ಮಾತನಾಡಲು ಹೊರಟರೆ ಸಿದ್ದರಾಮಯ್ಯ ಅವರು ‘ಹಾ!’ ಎಂದಷ್ಟೇ ಉದ್ಗರಿಸಿ ಮೌನವಾಗಿದ್ದಾರೆ. ಆದರೂ ಪಟ್ಟು…

ನಕಲಿ ಔಷಧ ಮಾರಾಟ ಪ್ರಕರಣಕ್ಕೆ ಮಹತ್ವದ ತಿರುವು; ವಿದೇಶದಲ್ಲಿ ಕಸ್ಟಮ್ಸ್‌ ಅಧಿಕಾರಿಗಳ ಕೈಗೆ ಸಿಕ್ಕಿ ಬಿದ್ದ ಆರೋಪಿಗಳು

ರಾಜ್ಯದಲ್ಲಿ ಭಾರೀ ಸಂಚಲನ ಉಂಟು ಮಾಡಿದ ನಕಲಿ ಹಾಗೂ ಕಳಪೆ ಔಷಧ ಮಾರಾಟ ಪ್ರಕರಣಕ್ಕೆ ಈಗ ಮತ್ತೊಂದು ಮಹತ್ವದ ತಿರುವು ಸಿಕ್ಕಿದೆ. ಬೆಂಗಳೂರಿನಲ್ಲಿ ನಡೆದ ಔಷಧ ದಂಧೆಯ ಹಿಂದೆ ವಿದೇಶಿ ಸಂಪರ್ಕವಿರುವುದು ತನಿಖೆಯಲ್ಲಿ ಬಯಲಾಗಿದ್ದು, ಪ್ರಕರಣದ ಪ್ರಮುಖ ರೂವಾರಿ ಎನ್ನಲಾದ ನಾಗರಬಾವಿಯ ಪ್ರಶಾಂತ್‌ ಹಾಗೂ ಆತನ ಇಬ್ಬರು ಸಹಚರರು ಪಶ್ಚಿಮ ಏಷ್ಯಾದ ದೇಶವೊಂದರ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್‌ ಅಧಿಕಾರಿಗಳ ಕೈಗೆ ಸಿಕ್ಕಿದ್ದಾರೆ ಎನ್ನಲಾಗಿದೆ. ಕ್ಯಾನ್ಸರ್ ಸೇರಿದಂತೆ ಗಂಭೀರ ಕಾಯಿಲೆಗಳಿಗೆ ಬಳಸುವ ಔಷಧಗಳು…

ಬೆಳ್ತಂಗಡಿ: ಕಪ್ಪು ಕಲ್ಲು ಗಣಿಗಾರಿಕೆಯಿಂದ ಸ್ಥಳೀಯ ನಿವಾಸಿಗಳ ಮನೆ ಬಿರುಕು, ಆತಂಕದಲ್ಲಿ ಪರಿಸರವಾಸಿಗಳು

ಬರಾಯನಕೆರೆ ಸಂರಕ್ಷಣಾ ಸಮಿತಿಯಿಂದ ಡಿ.ಸಿ ಗೆ ದೂರು; ಸ್ಥಳಕ್ಕೆ ಅಧಿಕಾರಿಗಳ ದೌಡು, ಪರಿಶೀಲನೆ ಬೆಳ್ತಂಗಡಿ ತಾಲೂಕಿನ ಅಳದಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಿಲ್ಯ ಗ್ರಾಮದ ಐತಿಹಾಸಿಕ ಬರಾಯಕೆರೆ ಎಂಬಲ್ಲಿ ಕಪ್ಪು ಕಲ್ಲಿನ ಗಣಿಗಾರಿಕೆ ನಡೆಯುತ್ತಿರುವ ಬಗ್ಗೆ ಬರಾಯಕೆರೆ ಸಂರಕ್ಷಣಾ ಸಮಿತಿ ಜಿಲ್ಲಾಧಿಕಾರಿ ದರ್ಶನ್ ಹೆಚ್ ವಿ ರವರಿಗೆ ಮನವಿ ಸಲ್ಲಿಸಿದ ಬೆನ್ನಲ್ಲೇ ಅಧಿಕಾರಿಗಳ ದಂಡು ಸಾಲು ಸಾಲಾಗಿ ಗಣಿಗಾರಿಕೆ ಪ್ರದೇಶಕ್ಕೆ ಭೇಟಿ ನೀಡುತ್ತಿದ್ದಾರೆ. ಇಂದು ಶನಿವಾರ ಬೆಳ್ತಂಗಡಿ ಪೋಲಿಸ್ ಉಪ ವಿಭಾಗದ…

ಕುಂದಾಪುರ ಪತ್ರಕರ್ತ ವಿರುದ್ಧ ಹಲ್ಲೆ ನಡೆಸಿದ ಭ್ರಷ್ಟಾಚಾರಿ ವೈದ್ಯ ಅಮಾನತು ಅಲ್ಲ ವಜಾಗೊಳ್ಳಲಿ; ಹೆಚ್ಚಿದ ಆಗ್ರಹ

ಕುಂದಾಪುರ ಸರ್ಕಾರಿ ಆಸ್ಪತ್ರೆಯ ಭೃಷ್ಟಾಚಾರವನ್ನು ಬಯಲಿಗೆಳೆದ ಪತ್ರಕರ್ತ ಶ್ರೀಕಾಂತ್ ಹೆಮ್ಮಾಡಿಯವರ ಮೇಲೆ ವೈದ್ಯ , ಭೃಷ್ಟಾಚಾರಿ ಡಾ. ಮಹೇಂದ್ರ ಶೆಟ್ಟಿ ಬೀದಿರೌಡಿಗಳಂತೆ ಸಾರ್ವಜನಿಕವಾಗಿ ಹಲ್ಲೆ ನಡೆಸಿರುವುದು ಅತ್ಯಂತ ಖಂಡನೀಯವಾಗಿದ್ದು , ಇದು ಪ್ರಜಾಪ್ರಭುತ್ವದ ಮೇಲಿನ ಹಲ್ಲೆಗೆ ಸಮವಾಗಿದೆ. ಕುಂದಾಪುರ ಸರ್ಕಾರಿ ಆಸ್ಪತ್ರೆಯ ಅಕ್ರಮ , ಭೃಷ್ಟಾಚಾರದ ವಿರುದ್ಧ ಜನಸಾಮಾನ್ಯರ ಧ್ವನಿಯಾಗಿ ಶ್ರೀಕಾಂತ್ ಹೆಮ್ಮಾಡಿ ಪತ್ರಿಕೆಯಲ್ಲಿ ವರದಿಯನ್ನು ಪ್ರಕಟಿಸಿದ್ದರು. ಇದನ್ನು ನೆಪವಾಗಿಟ್ಟುಕೊಂಡು…

ಬಾಳೆಹಣ್ಣಿಗೆ ಕೃತಕ ಬಣ್ಣ ಬಳಸಿ ಮಾರಾಟದ ಬೃಹತ್ ಜಾಲ; ಅಧಿಕಾರಿಗಳಿಂದ ಮಹತ್ವದ ಕಾರ್ಯಾಚರಣೆ, ಮಂಗಳೂರಿಗೂ ಲಿಂಕ್!

ಉಡುಪಿ ಜಿಲ್ಲೆಯ ಅಲೆವೂರು ಗ್ರಾಮದ ಬಾಳೆಹಣ್ಣು ದಾಸ್ತಾನು ಕೇಂದ್ರಕ್ಕೆ ಧಿಡೀರ್ ದಾಳಿ ನಡೆಸಿದ ಕುಂದಾಪುರ ಅಸಿಸ್ಟೆಂಟ್ ಕಮಿಷನರ್ ರಶ್ಮಿ ಎಸ್ ಆರ್ ಹಾಗೂ ಆರೋಗ್ಯಾಧಿಕಾರಿಗಳು ಬಾಳೆಹಣ್ಣಿಗೆ ಹಾನಿಕಾರಕ ರಾಸಾಯನಿಕ ಬಳಸುತ್ತಿದ್ದ ಹಲವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಅಗಸ್ಟ್ 20 ರಂದು ಕೆಸ್ತೂರು ಹಾಗೂ ಮಣಿಪಾಲ ಸಮೀಪದ ದುಗ್ಗಿ ಪರಿಸರದಲ್ಲಿ ಬಾಳೆ ಹಣ್ಣು ರಖಂ ವ್ಯಾಪಾರಸ್ಥರು ಹಾಗೂ ದಾಸ್ತಾನುದಾರರ ಗೋದಾಮುಗಳಿಗೆ ದಾಳಿ ನಡೆಸಿದ ಅಧಿಕಾರಿಗಳು, ನಕಲಿ ಬಣ್ಣ ಹಚ್ಚಿದ್ದ ಸುಮಾರು 5 ಸಾವಿರ ಕೆ.ಜಿ…

ಪೋಷಕರನ್ನು ನೋಡಿಕೊಳ್ಳದಿದ್ದರೆ ಅವರ ಆಸ್ತಿಯಲ್ಲಿ ವಾಸಿಸುತ್ತಿರುವ ಮಕ್ಕಳು ಅಥವಾ ಇತರರು ಖಾಲಿ ಮಾಡಬೇಕು

ಹಿರಿಯ ನಾಗರಿಕರ ರಕ್ಷಣೆ, ಭದ್ರತೆ ಮತ್ತು ಗೌರವಯುತ ಜೀವನವನ್ನು ಖಚಿತಪಡಿಸಿಕೊಳ್ಳಲು ಅಗತ್ಯವಿದ್ದಲ್ಲಿ, ಅವರ ಆಸ್ತಿಯಲ್ಲಿ ವಾಸಿಸುತ್ತಿರುವ ಮಕ್ಕಳು ಅಥವಾ ಇತರರನ್ನು ತೆರವುಗೊಳಿಸಲು ‘ತಂದೆ-ತಾಯಿ ಮತ್ತು ಹಿರಿಯ ನಾಗರಿಕರ ಪೋಷಣೆ ಹಾಗೂ ಕಲ್ಯಾಣ ಕಾಯ್ದೆ- 2007’ ರಡಿಯಲ್ಲಿ ರಚಿಸಲಾದ ನ್ಯಾಯಾಧಿಕರಣಗಳಿಗೆ ಅಧಿಕಾರವಿದೆ ಎಂದು ಸುಪ್ರೀಂ ಕೋರ್ಟ್ ಅತ್ಯಂತ ಪ್ರಮುಖ ತೀರ್ಪು ನೀಡಿದೆ. ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ ಮತ್ತು ಅಲೋಕ್ ಅರಾಧೆ ಅವರಿದ್ದ ಪೀಠವು, ಪುತ್ರ ಮತ್ತು ಸೊಸೆಯನ್ನು ಮನೆಯಿಂದ…

ಮಾದಕ ದ್ರವ್ಯ ಜಾಲದ ವಿರುದ್ಧ ಸಮರ ಸಾರಿರುವ ಮಂಗಳೂರು ಪೊಲೀಸರು

ವಿದ್ಯಾರ್ಥಿಗಳಿಗೆ ಗಾಂಜಾ ಸಪ್ಲೈ ಮಾಡುತ್ತಿದ್ದ ಆಯುರ್ವೇದ ಥೆರಪಿಸ್ಟ್ ಸಹಿತ ಮೂವರು ಅಂದರ್ ಮಂಗಳೂರು ನಗರದಲ್ಲಿ ಮಾದಕ ವಸ್ತು ಮಾರಾಟದ ವಿರುದ್ಧ ಸಮರ ಸಾರಿರುವ ಮಂಗಳೂರು ಪೊಲೀಸರು ನಿರಂತರವಾಗಿ ಡ್ರಗ್ ಪೆಡ್ಲರ್ ಗಳನ್ನು ಬಂಧಿಸಿ ಜೈಲಿಗೆ ಅಟ್ಟುತ್ತಿದ್ದಾರೆ. ಅಗಸ್ಟ್ 18 ರಂದು ಮಂಗಳೂರು ಪೂರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಪಂಪ್ ವೆಲ್ ನಿಂದ ನಂತೂರು ಕಡೆಗೆ ತೆರಳುವ ಸರ್ವಿಸ್ ರಸ್ತೆಯ ಬದಿಯಲ್ಲಿ ಆಟೋ ರಿಕ್ಷಾದಲ್ಲಿ ನಿಷೇಧಿತ ಮಾದಕ ವಸ್ತುವಾದ MDMA ಅನ್ನು ಅಕ್ರಮವಾಗಿ ಮಾರಾಟ…

ಪ. ಜಾತಿ – ಪಂಗಡಗಳ ಹಲವು ಬೇಡಿಕೆ ಹಾಗೂ ಡಿಸಿ ಮನ್ನಾ ಜಮೀನು ಹಂಚಿಕೆ ವಿಚಾರವಾಗಿ ರಕ್ಷಿತ್ ಶಿವರಾಂ ನೇತ್ರತ್ವದಲ್ಲಿ ಸಚಿವರುಗಳ ಹಾಗೂ ಕೆಪಿಸಿಸಿ ಅಧ್ಯಕ್ಷರ ಬೇಟಿ

ಪ.ಜಾತಿ, ಪ.ಪಂಗಡಗಳ ಹಲವು ವರ್ಷಗಳ ಬೇಡಿಕೆಯಾಗಿರುವ ಡಿಸಿ ಮನ್ನಾ ಜಮೀನು ಹಂಚಿಕೆಗೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷರಾದ ಬಿ.ಕೆ ಹರಿಪ್ರಸಾದ್ ಅವರನ್ನು ಕೆಪಿಸಿಸಿ ಕಛೇರಿಯಲ್ಲಿ ಹಾಗೂ ರಾಜ್ಯ ಕಂದಾಯ ಸಚಿವ, ಉಪ ಮುಖ್ಯಮಂತ್ರಿ ಡಾ.ಜಿ ಪರಮೇಶ್ವರ ಮತ್ತು ದ.ಕ ಜಿಲ್ಲಾ ಉಸ್ತುವಾರಿ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ ಖಾದರ್ ಅವರನ್ನು ಬೆಂಗಳೂರಿನ ವಿಧಾನಸೌಧದ ಕಚೇರಿಯಲ್ಲಿ ಇಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಹಾಗೂ ಬ್ಲಾಕ್ ಕಾಂಗ್ರೆಸ್ (ನಗರ) ಅಧ್ಯಕ್ಷ…

ಕರಾವಳಿಯಲ್ಲಿ ‘ಬಡ್ಡಿ’ ಮಕ್ಕಳದ್ದೇ ಗೂಂಡಾ ದರ್ಬಾರ್..!

ರಕ್ತಬೀಜಾಸುರರ ಅಟ್ಟಹಾಸಕ್ಕೆ ಬಡ, ಮಧ್ಯಮ ಕುಟುಂಬಗಳೇ ಬರ್ಬಾದ್ “ಸಾಲ ಮಾಡಿಯಾದರೂ ತುಪ್ಪ ತಿನ್ನು” ಇದು ಹಳೆಯ ಗಾದೆ ಮಾತು. ಆದರೆ ಬಡ, ಮಧ್ಯಮ ವರ್ಗದ ಕುಟುಂಬದ ಸ್ಥಿತಿಗತಿ ಇದಕ್ಕಿಂತ ಭಿನ್ನ. ದುಡಿಮೆಯ ಹಣ ಕುಟುಂಬ ಸಾಕುವುದೇ ಕಷ್ಟವಾಗುತ್ತದೆ. ಇಂದಿನ ಮಿತಿಮೀರಿದ ದರ ಏರಿಕೆ ನಡುವೆ ಕುಟುಂಬದ ಬೇಕು ಬೇಡವನ್ನು ಪೂರೈಸುವುದು ಯಜಮಾನನಿಗೆ ದೊಡ್ಡ ಸವಾಲು. ಇದರ ನಡುವೆ ಸ್ಕೂಲ್ ಫೀಸ್, ಅನಾರೋಗ್ಯ ಸಂಭವಿಸಿದರೆ ಆಸ್ಪತ್ರೆಗೆ ಹಾಕುವ ಕಾಸು ಹೀಗೆ ಒಂದಲ್ಲ ಒಂದು ರೀತಿಯಲ್ಲಿ ಇಂತಹ ಕುಟುಂಬದ ಸ್ಥಿತಿ…

ನಕಲಿ ಔಷಧಿ ಜಾಲವನ್ನು ಬೇಧಿಸಿದ ಅಧಿಕಾರಿಗಳು; 5 ಕೋಟಿ ರೂ. ಮೌಲ್ಯದ ಔಷಧಿ, ಸಲಕರಣೆ ವಶ

ಬೆಂಗಳೂರು ಸಿ.ಕೆ.ತಾಂಡ್ಯ ಸಮೀಪದ ಫಾರ್ಮ್‌ಹೌಸ್‌ನಲ್ಲಿ ಪರವಾನಗಿ ಇಲ್ಲದೆ ಅಕ್ರಮವಾಗಿ ನಡೆಯುತ್ತಿದ್ದ ಭಾರೀ ನಕಲಿ ಔಷಧಿ ಮರು ಪ್ಯಾಕಿಂಗ್ ಜಾಲವನ್ನು ಅಧಿಕಾರಿಗಳು ಭೇದಿಸಿದ್ದಾರೆ. ಆಹಾರ ಸುರಕ್ಷತೆ ಮತ್ತು ಔಷಧಿ ಆಡಳಿತ ಇಲಾಖೆ ಹಾಗೂ ಪೊಲೀಸರ ಜಂಟಿ ತಂಡ ನಡೆಸಿದ ಈ ಮೆಗಾ ಕಾರ್ಯಾಚರಣೆಯಲ್ಲಿ ಬರೋಬ್ಬರಿ 5 ಕೋಟಿ ರೂ. ಮೌಲ್ಯದ ಔಷಧಿಗಳು ಹಾಗೂ ಸಲಕರಣೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಶಾಂತ್ ಎಂಬಾತ ಸ್ಥಳೀಯರಿಂದ ಫಾರ್ಮ್‌ಹೌಸ್ ವೊಂದನ್ನು ಗುತ್ತಿಗೆಗೆ ಪಡೆದು, ಕಳೆದೊಂದು ವರ್ಷದಿಂದ ಈ ಕೃತ್ಯ…

ಮಂಜೇಶ್ವರದಲ್ಲಿ ಗಡಿನಾಡ ಯಕ್ಷ ಸಂಭ್ರಮ ಸಮಾರೋಪ : ಯಕ್ಷಗಾನ ರಂಗಕ್ಕೆ ಗಡಿನಾಡು ಕನ್ನಡಿಗರ ಕೊಡುಗೆ ಅಪಾರ: ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು

ಉಡುಪಿ: ಯಕ್ಷಗಾನಕ್ಕೆ ಮೂಲ ಪುರುಷ ಎಂದೇ ಖ್ಯಾತರಾದ ಕವಿ ಪ್ರಾರ್ಥಿಸುಬ್ಬ ಅವರ ತವರೂರಾದ ಗಡಿನಾಡಿನ ಶ್ರೇಷ್ಠ ಯಕ್ಷಗಾನ ಕಲಾವಿದರು, ಸಂಸ್ಥೆಗಳು ಯಕ್ಷಗಾನಕ್ಕೆ ನೀಡಿದ ಕೊಡುಗೆ ಅಪಾರ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು. ಅವರು ಭಾನುವಾರ ಕಾಸರಗೋಡಿನ ಮಂಜೇಶ್ವರ ಕಡಂಬಾರು ಶ್ರೀ ಮಹಾವಿಷ್ಣು ದೇವಸ್ಥಾನದ ವಠಾರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ , ಕರ್ನಾಟಕ ಯಕ್ಷಗಾನ ಅಕಾಡೆಮಿ, ಬೆಂಗಳೂರು ಹಾಗೂ ದೇವಳದ ಸಹಕಾರದಲ್ಲಿ ಯಕ್ಷ ಬಳಗ ಹೊಸಂಗಡಿ…

ಬಜಪೆ ಪೊಲೀಸರ ಕಾರ್ಯಾಚರಣೆ: ಗಾಂಜಾ ಮಾರಾಟ ಮಾಡಲು ಯತ್ನಿಸಿದ ಇಬ್ಬರು ಆರೋಪಿಗಳ ಬಂಧನ

ಕೈಕಂಬ: ಮೂಡಬಿದ್ರೆ – ಮಂಗಳೂರು ರಾಷ್ಟ್ರೀಯ ಹೆದ್ದಾರಿ ಸಮೀಪದ ಗುರುಪುರ- ಕೈಕಂಬ ಪೊಳಲಿ ದ್ವಾರದ ರಸ್ತೆಯ ಬಳಿ ದಿನಾಂಕ: 15-08-2026 ರಂದು 1.214 ಗ್ರಾಂ ತೂಕದ ಮಾದಕವಸ್ತು ಗಾಂಜಾವನ್ನು ಅಕ್ರಮವಾಗಿ ಮಾರಾಟ ಮಾಡಲೆತ್ನಿಸಿದ ಬೆಂಜನಪದವು, ಕಲ್ಲಿಗೆ ಎಂಬಲ್ಲಿಯ ನಿವಾಸಿಗಳಾದ ರಕ್ಷಿತ್ ಹಾಗೂ ಅಕ್ಷಯ್ ಬಿ. ಎಂಬವರನ್ನು ಬಜಪೆ ಪೊಲೀಸ್ ನಿರೀಕ್ಷಕರಾದ ಬಾಲಕೃಷ್ಣ ಎಚ್.ಎನ್ ನೇತ್ರತ್ವದ ಪೊಲೀಸರ ತಂಡ ದಾಳಿ ನಡೆಸಿ, ವಶಕ್ಕೆ ಪಡೆದು ಆರೋಪಿಗಳಿಂದ ಸುಮಾರು 65 ಸಾವಿರ ರೂಪಾಯಿ ಮೌಲ್ಯದ 1.214 ಕೆ.ಜಿ ತೂಕದ…

ಇಡೀ ದೇಶಕ್ಕೆ 2002ರ ವರ್ಷವನ್ನು ಮೂಲ ವರ್ಷವಾಗಿ ನಿಗದಿಪಡಿಸಲಾಗಿದೆ. ಈ ವಿಷಯದಲ್ಲಿ ಹಸ್ತಕ್ಷೇಪ ಮಾಡಲು ಬರುವುದಿಲ್ಲ: ಸುಪ್ರೀಂ ಕೋರ್ಟ್

ಸಿಕ್ಕಿಂನಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಗೆ (SIR‌) 2002ನೇ ವರ್ಷವನ್ನು ಆಧಾರವಾಗಿರಿಸಿಕೊಂಡಿರುವ ಚುನಾವಣಾ ಆಯೋಗದ ನಿರ್ಧಾರದಲ್ಲಿ ಹಸ್ತಕ್ಷೇಪ ಮಾಡಲು ಸುಪ್ರೀಂ ಕೋರ್ಟ್‌ ಸೋಮವಾರ ನಿರಾಕರಿಸಿದೆ. ಸಿಕ್ಕಿಂ ಮೂಲನಿವಾಸಿ ಸುರಕ್ಷಾ ಸಂಘವು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್‌, ನ್ಯಾಯಮೂರ್ತಿಗಳಾದ ಜಾಯ್‌ಮಾಲ್ಯಾ ಬಾಗ್ಚಿ ಹಾಗೂ ವಿ. ಮೋಹನಾ ಅವರನ್ನೊಳಗೊಂಡ ಪೀಠವು ವಜಾಗೊಳಿಸಿದೆ. ರಾಜ್ಯದಲ್ಲಿ ಎಸ್‌ಐಆರ್‌…

ವಿಟ್ಲ: ಉಮೇಶ್ ಶೆಟ್ಟಿ ಎಂಬಾತನಿಂದ ಅಪ್ರಾಪ್ತ ಬಾಲಕನಿಗೆ ಲೈಂಗಿಕ ದೌರ್ಜನ್ಯ; ವಿಟ್ಲ ಪೊಲೀಸರ ಕಾರ್ಯಾಚರಣೆ, ಆರೋಪಿಯ ಬಂಧನ, ಪೋಕ್ಸೋ ಪ್ರಕರಣ ದಾಖಲು

ವಿಟ್ಲ ಪಡ್ನೂರು ಗ್ರಾಮದ ಕಾಪುಮಜಲು ಕೋಡಿ ನಿವಾಸಿ ಉಮೇಶ್ ಶೆಟ್ಟಿ ಎಂಬಾತ ಬಸ್ಸಲ್ಲಿ ಪರಿಚಿತನಾದ ಅಪ್ರಾಪ್ತ ಬಾಲಕನನ್ನು ಪುಸಲಾಯಿಸಿ ಆತನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ವಿಟ್ಲ ಪೊಲೀಸರು ಆರೋಪಿಯನ್ನು ಬಂಧಿಸಿ, ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ಉಮೇಶ್ ಶೆಟ್ಟಿ ಎಂಬಾತ ಈ ಹಿಂದೆ ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ಡಿ ಗ್ರೂಪ್ ನೌಕರನಾಗಿದ್ದು, ಇದೀಗ ಕೃಷಿ ಕೆಲಸ ಕಾರ್ಯ ಮಾಡಿಕೊಂಡಿದ್ದಾನೆಂದು ತಿಳಿದುಬಂದಿದೆ. ವಿವಾಹಿತನಾದ ಈತ ಎರಡು ಮಕ್ಕಳ ತಂದೆಯಾಗಿದ್ದು,…

ಸುಲಿಗೆ ಪ್ರಕರಣ: ಅಜ್ಜಿಯನ್ನೇ ಯಮಾರಿಸಿದ ಮೊಮ್ಮಗನ ಬಂಧನ; ಎರಡು ಚಿನ್ನದ ಬಳೆಗಳು ವಶ

ಪುಂಜಾಲಕಟ್ಟೆ ಪೊಲೀಸ್‌ ಠಾಣಾ ವ್ಯಾಪ್ತಿಯ ಬಂಟ್ವಾಳ ತೆಂಕಕಜೆಕಾರು ಉದ್ದದ ಗುಡ್ಡೆ ಎಂಬಲ್ಲಿ 82 ವರ್ಷ ಪ್ರಾಯದ ಅವ್ವಮ್ಮ ಎಂಬವರು ಮನೆಯಲ್ಲಿ ಒಬ್ಬಂಟಿಯಾಗಿದ್ದಾಗ ಯಾರೋ ಅಪರಿಚಿತ ವ್ಯಕ್ತಿ ಮುಖ ಚಹರೆ ಕಾಣದಂತೆ ಮುಖಕ್ಕೆ ಬಟ್ಟೆ ಸುತ್ತಿಕೊಂಡು ಮನೆಯೊಳಗೆ ನುಗ್ಗಿ ಅವ್ವಮ್ಮರವರ ಕೈಯಲ್ಲಿದ್ದ ಸುಮಾರು 5 ಲಕ್ಷ ರೂ. ಮೌಲ್ಯದ 40 ಗ್ರಾಂ ತೂಕದ ಎರಡು ಚಿನ್ನದ ಬಳೆಗಳನ್ನು ಬಲತ್ಕಾರವಾಗಿ ಕಸಿದು ಪರಾರಿಯಾಗಿದ್ದರು. ಅ ವೇಳೆಯಲ್ಲಿ ಅವ್ವಮ್ಮರವರ ಕೈಗೆ ಗಾಯವಾಗಿ ರಕ್ತ ಬರುತ್ತಿದ್ದು, ಈ ಬಗ್ಗೆ…

ಮೇಜರ್ ಸರ್ಜರಿಯ ಸುಳಿವು ಕೊಟ್ಟರು‌ ನಿತಿನ್; ಡಲ್ಲಾಯಿತು ಜಮೀರ್ ಪವರ್

ಹತ್ತಿರವಾಗುತ್ತಿದೆ ಸರ್ಜರಿ ಡೇಟು, ಯೋಗೀಶ್ವರ್ ವಿಥ್ ಪುಲಿಕೇಶಿ ✍️. ಆರ್.ಟಿ.ವಿಠ್ಠಲಮೂರ್ತಿ ಕೆಲ ದಿನಗಳ ಹಿಂದೆ ಕಾಂಗ್ರೆಸ್ ವರಿಷ್ಟರು ವೀಕ್ಷಕರೊಬ್ಬರನ್ನು ಕರ್ನಾಟಕಕ್ಕೆ ಕಳಿಸಿದ್ದಾರೆ. ಹೀಗೆ ವರಿಷ್ಟರ ಸೂಚನೆಯಂತೆ ಬಂದ ಆ ವೀಕ್ಷಕರು ಮಾಜಿ ಮುಖ್ಯಮಂತ್ರಿ, ಹಿರಿಯ ನಾಯಕ ಎಂ.ವೀರಪ್ಪ ಮೊಯ್ಲಿ ಅವರನ್ನು ಭೇಟಿ ಮಾಡಿದ್ದಾರೆ. ಈ ಭೇಟಿಯ ಸಂದರ್ಭದಲ್ಲಿ ಪಕ್ಷದ ಬೆಳವಣಿಗೆಗಳ ಬಗ್ಗೆ ಆ ವೀಕ್ಷಕರು ತಮ್ಮ ಅಭಿಪ್ರಾಯ ಕೇಳಿದಾಗ ವೀರಪ್ಪ ಮೊಯ್ಲಿ ನೋವಿನಿಂದ ಮಾತನಾಡಿದರಂತೆ.ಕಾರಣ? ಮುಖ್ಯಮಂತ್ರಿ…