RSS Amplifier

News source

Suddi Puttur

suddi

puttur.suddinews.comSource feed ↗67 articles

Overdue Last read · last published · next check
Last read 13 hours ago, longer than this feed's 1 hour schedule.

Latest articles

ಆ.30: ವಿಟ್ಲದಲ್ಲಿ ರವಿ ಡೆಂಟಲ್ ಕ್ಲಿನಿಕ್ ಶುಭಾರಂಭ

ವಿಟ್ಲ: ಇಲ್ಲಿಮ ಅರಮನೆ‌ ರಸ್ತೆಯ ನಾಯಕ್ ಕಾಂಪ್ಲೆಕ್ಸ್ ನ ಪ್ರಥಮ ಮಹಡಿಯಲ್ಲಿ ಆ.೩೦ರಂದು ರವಿ ಡೆಂಟಲ್ ಕ್ಲಿನಿಕ್ ಶುಭಾರಂಭಗೊಳ್ಳಲಿದೆ. ಸುಳ್ಯ ಕೆವಿಜಿ ಡೆಂಟಲ್ ಕಾಲೇಜು ಮತ್ತು ಆಸ್ಪತ್ರೆಯಪ್ರೊಫೆಸರ್ ಹಾಗೂ ವಿಭಾಗ ಮುಖ್ಯಸ್ಥರಾಗಿರುವಡಾ| ಎಲ್. ಕೃಷ್ಣಪ್ರಸಾದ್ ದೀಪಬೆಳಗಿಸಲಿದ್ದಾರೆ. ಸುಳ್ಯ ಕೆವಿಜಿ ಡೆಂಟಲ್ ಕಾಲೇಜು ಮತ್ತು ಆಸ್ಪತ್ರೆಯ ಆಡಳಿತಾಧಿಕಾರಿ ಮಾಧವ ಬಿ.ಟಿ., ನಾಯಕ್ ಕಾಂಪ್ಲೆಕ್ಸ್ ನ‌ ಮಾಲಕರು, ಉದ್ಯಮಿ ಎಂ. ರಾಧಾಕೃಷ್ಣ ನಾಯಕ್,ಲಯನ್ ಪೂರ್ವ ಜಿಲ್ಲಾ ಸಾರ್ವಜನಿಕ ಸಂಪರ್ಕಾಧಿಕಾರಿ…

(ಸೆ.13): ಬಿಳಿಯೂರಿನಲ್ಲಿ ಕೆಸರ್ದ ಗೊಬ್ಬು- 2026 : ಆಮಂತ್ರಣ ಪತ್ರಿಕೆ ಬಿಡುಗಡೆ

ಪೆರ್ನೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪೆರ್ನೆ ವಲಯ, ಪ್ರಗತಿಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ ಕರುವೆಲು ಬಿಳಿಯೂರು ಹಾಗೂ ಶ್ರೀ ವಿಷ್ಣು ಮಹಿಳಾ ಭಜನಾ ಮಂಡಳಿ ಬಿಳಿಯೂರು ಇವರ ಜಂಟಿ ಆಶ್ರಯದಲ್ಲಿ ಸೆ.13ರ ಭಾನುವಾರದಂದು ಬಿಳಿಯೂರು ತೋಟ ಗದ್ದೆಯಲ್ಲಿ ನಡೆಯಲಿರುವ “ಕೆಸರ್ದ ಗೊಬ್ಬು – 2026” ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ ನಡೆಯಿತು. ಆ.28 ರಂದು ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ದೇವಸ್ಥಾನದ ಅರ್ಚಕ ಲಕ್ಷ್ಮೀಶ ಪ್ರವೀಣ್ ಭಟ್ ಅವರು ಆಮಂತ್ರಣ…

34ನೇ ವರ್ಷದ ಈದ್ ಮಿಲಾದ್ ಸಮಿತಿ ಯಶಸ್ವಿಗೆ ಧನ್ಯವಾದ

ಪುತ್ತೂರು: ಪುತ್ತೂರಿನಲ್ಲಿ 34ನೇ ವರ್ಷದ ಈದ್ ಮಿಲಾದ್ ಅತ್ಯಂತ ಯಶಸ್ವಿಯಾಗಲು ಕಾರಣಕರ್ತರಾದವರಿಗೆ ಧನ್ಯವಾದ ಸಲ್ಲಿಸುತ್ತೇವೆ ಎಂದು ಈದ್ ಮಿಲಾದ್ ಸಮಿತಿ ಅಧ್ಯಕ್ಷ ಹನೀಫ್ ಬಗ್ಗುಮೂಲೆ ಅವರು ಪತ್ರಿಕಾ ಗೋಷ್ಟಿಯಲ್ಲಿ ಹೇಳಿದ್ದಾರೆ. ಮೀಲಾದ್ ಕಾರ್ಯಕ್ರಮದಲ್ಲಿ ಅದ್ದೂರಿಯಾಗಿ ಜನ ಸಾಗರ ಸೇರಿತ್ತು. ಕಾರ್ಯಕ್ರಮಕ್ಕೆ ವರ್ತಕರು, ದಾರ್ಮಿಕ, ಶೈಕ್ಷಣಿಕ, ಸಮಾಜಿಕ ಮುಖಂಡರು ಸಹಕಾರ ನೀಡಿದ್ದಾರೆ. ಮುಂದಿನ ವರ್ಷ ೩೫ ನೇ ವರ್ಷದ ಮೀಲಾದ್ ಕಾರ್ಯಕ್ರಮ ಇದಕ್ಕಿಂತಲೂ ಯಶಸ್ವಿಯಾಗಲಿ ಎಂದು ಹೇಳಿದರು. ಸಮಿತಿ…

34 ನೇ ವರ್ಷದ ಈದ್ ಮಿಲಾದ್ ಸಮಿತಿ ಯಶಸ್ವಿಗೆ ಧನ್ಯವಾದ

ಪುತ್ತೂರು: ಪುತ್ತೂರಿನಲ್ಲಿ 34 ನೇ ವರ್ಷದ ಈದ್ ಮಿಲಾದ್ ಅತ್ಯಂತ ಯಶಸ್ವಿಯಾಗಲು ಕಾರಣಕರ್ತರಾದವರಿಗೆ ಧನ್ಯವಾದ ಸಲ್ಲಿಸುತ್ತೇವೆ ಎಂದು ಈದ್ ಮಿಲಾದ್ ಸಮಿತಿ ಅಧ್ಯಕ್ಷ ಹನೀಫ್ ಬಗ್ಗುಮೂಲೆ ಅವರು ಪತ್ರಿಕಾ ಗೋಷ್ಟಿಯಲ್ಲಿ ಹೇಳಿದ್ದಾರೆ. ಮೀಲಾದ್ ಕಾರ್ಯಕ್ರಮದಲ್ಲಿ ಅದ್ದೂರಿಯಾಗಿ ಜನ ಸಾಗರ ಸೇರಿತ್ತು. ಕಾರ್ಯಕ್ರಮಕ್ಕೆ ವರ್ತಕರು, ದಾರ್ಮಿಕ, ಶೈಕ್ಷಣಿಕ, ಸಮಾಜಿಕ ಮುಖಂಡರು ಸಹಕಾರ ನೀಡಿದ್ದಾರೆ. ಮುಂದಿನ ವರ್ಷ 35 ನೇ ವರ್ಷದ ಮೀಲಾದ್ ಕಾರ್ಯಕ್ರಮ ಇದಕ್ಕಿಂತಲೂ ಯಶಸ್ವಿಯಾಗಲಿ ಎಂದು ಹೇಳಿದರು. ಸಮಿತಿ…

ಒಡಿಯೂರು ಸಂಸ್ಥಾ‌ನದಲ್ಲಿ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ವೃತಪೂಜೆ

ವಿಟ್ಲ: ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಒಡಿಯೂರು ಶ್ರೀ ವಜ್ರಮಾತಾ ಮಹಿಳಾವಿಕಾಸ ಕೇಂದ್ರದ ವತಿಯಿಂದ ಶ್ರೀ ಗುರುದೇವಾನಂದ ಸ್ವಾಮೀಜಿ ಹಾಗೂ ಸಾಧ್ವಿ ಶ್ರೀ ಮಾತಾನಂದಮಯೀಯವರ ದಿವ್ಯ ಉಪಸ್ಥಿತಿಯಲ್ಲಿ ಆ.28ರಂದು ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ವೃತಪೂಜೆ ನಡೆಯಿತು‌.

ಆ.30- ಶ್ರೀಶಂಕರಭಾರತಿ ವಿವಿದೋದ್ದೇಶ ಸೌಹಾರ್ದ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ

ಪುತ್ತೂರು:ಪುತ್ತೂರು ದರ್ಬೆಯಲ್ಲಿರುವ ಅಪೂರ್ವ ಸಂಕೀರ್ಣದ ಪ್ರಥಮ ಮಹಡಿಯಲ್ಲಿ ವ್ಯವಹರಿಸುತ್ತಿರುವ ಶ್ರೀ ಶಂಕರಭಾರತಿ ವಿವಿದೋದ್ದೇಶ ಸೌಹಾರ್ದ ಸಹಕಾರಿ ಸಂಘ ನಿಯಮಿತ ಇದರ ವಾರ್ಷಿಕ ಮಹಾಸಭೆಯು ಅಗಸ್ಟ್ 30 ರಂದು ಸಣ್ಣ ಕೈಗಾರಿಕಾ ಅಭಿವೃದ್ಧಿ ಸಹಕಾರಿ ಸಂಘ ದರ್ಬೆ ಇದರ ಸಭಾಭವನದಲ್ಲಿ ಸಂಘದ ಅಧ್ಯಕ್ಷರಾದ ನಾಗರಾಜ್ ಭಟ್ ಕೆಎಂ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವುದು ಸಂಘದ ಸದಸ್ಯರು ಹಾಜರಾಗಿ ಸಭೆಯನ್ನು ಯಶಸ್ವಿಗೊಳಿಸಬೇಕಾಗಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯವರು ಪ್ರಕಟಣೆಯಲ್ಲಿ…

ಬೀರಮಲೆ ವಿಶ್ವಕರ್ಮ ಮಂದಿರದಲ್ಲಿ ಶ್ರೀ ವರಮಹಾಲಕ್ಷ್ಮೀ ಪೂಜೆ

ಪುತ್ತೂರು: ಗಾಯತ್ರಿ ಮಹಿಳಾ ಮಂಡಳಿ, ಬೀರಮಲೆ ಪುತ್ತೂರು ಇದರ ವತಿಯಿಂದ ೧೪ ನೇ ವರ್ಷದ ಶ್ರೀ ವರಮಹಾಲಕ್ಷ್ಮೀ ವ್ರತ ಪೂಜೆಯು ಆ.28ರಂದು ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠಾಧೀಶ್ವರ ಪರಮಪೂಜ್ಯ ಜಗದ್ಗುರು ಅನಂತ ಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳ ಆಶೀರ್ವಾದದೊಂದಿಗೆ ,ಪುರೋಹಿತರಾದ ಗಿರೀಶ್ ಆಚಾರ್ಯ ಮತ್ತು ಹೇಮಂತ್ ಆಚಾರ್ಯರವರ ಪೌರೋಹಿತ್ಯದಲ್ಲಿ ಬೀರಮಲೆ ವಿಶ್ವಕರ್ಮ ಮಂದಿರದಲ್ಲಿ ವರಮಹಾಲಕ್ಷ್ಮೀ ವ್ರತ ಪೂಜೆಯು ಜರುಗಿತು. ಆ ಪ್ರಯುಕ್ತ ಭಕ್ತಾದಿಗಳು ಪೂಜೆಯಲ್ಲಿ…

ಆ.30: ಶ್ರೀ ಶಂಕರ ಭಾರತಿ ವಿವಿದೋದ್ದೇಶ ಸೌಹಾರ್ದ ಸಹಕಾರಿ ಸಂಘ ನಿ. ವಾರ್ಷಿಕ ಮಹಾಸಭೆ

ಪುತ್ತೂರು: ದರ್ಬೆಯಲ್ಲಿರುವ ಅಪೂರ್ವ ಸಂಕೀರ್ಣದ ಪ್ರಥಮ ಮಹಡಿಯಲ್ಲಿ ವ್ಯವಹರಿಸುತ್ತಿರುವ ಶ್ರೀ ಶಂಕರ ಭಾರತಿ ವಿವಿದೋದ್ದೇಶ ಸೌಹಾರ್ದ ಸಹಕಾರಿ ಸಂಘ ನಿಯಮಿತ ಇದರ ವಾರ್ಷಿಕ ಮಹಾಸಭೆಯು ಅಗಸ್ಟ್ 30 ರಂದು ಸಣ್ಣ ಕೈಗಾರಿಕಾ ಅಭಿವೃದ್ಧಿ ಸಹಕಾರಿ ಸಂಘ ದರ್ಬೆ ಇದರ ಸಭಾಭವನದಲ್ಲಿ ಸಂಘದ ಅಧ್ಯಕ್ಷರಾದ ಶ್ರೀ ನಾಗರಾಜ್ ಭಟ್ ಕೆಎಂ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವುದು ಸಂಘದ ಸದಸ್ಯರು ಹಾಜರಾಗಿ ಸಭೆಯನ್ನು ಯಶಸ್ವಿಗೊಳಿಸಬೇಕಾಗಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯವರು ಪ್ರಕಟಣೆಯಲ್ಲಿ…

ಶರವೂರು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಸಾಮೂಹಿಕ ವರಮಹಾಲಕ್ಷೀ ಪೂಜೆ

ಆಲಂಕಾರು: ಸೀಮಾ ದೇವಸ್ಥಾನ ಶ್ರೀ ಕ್ಷೇತ್ರ ಶರವೂರಿನಲ್ಲಿ‌ಆ.28 ರಂದು ಸಾಮೂಹಿಕ ವರಮಹಾಲಕ್ಷೀ ಪೂಜೆ ನಡೆಯಿತು. ಶ್ರೀ ಕ್ಷೇತ್ರದ ಪ್ರದಾನ ಆರ್ಚಕರಾದ ರಾಘವೇಂದ್ರ ಪ್ರಸಾದ್ ಭಟ್ ತೋಟಂತಿಲರವರ ನೇತೃತ್ವದಲ್ಲಿ ಪೂಜಾ ವಿಧಿವಿಧಾನ ನಡೆಯಿತು. ಆಗಮಿಸಿದ ಭಕ್ತಾಧಿಗಳು ಸಾಮೂಹಿಕ ವರಮಹಾಲಕ್ಷೀ ಪೂಜೆಯಲ್ಲಿ ಕುಳಿತು ಪ್ರಸಾದ ಸ್ವಿಕರಿಸಿ ಅನ್ನಸಂತರ್ಪಣೆ ಯಲ್ಲಿ ಪಾಲ್ಗೊಂಡರು.ಈ ಸಂಧರ್ಭದಲ್ಲಿ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಕೆ.ಸುಬ್ರಹ್ಮಣ್ಯ ರಾವ್ ನಗ್ರಿ ಸೇರಿದಂತೆ ವ್ಯವಸ್ಥಾಪನ ಸಮಿತಿ ಸದಸ್ಯರು…

ಸವಣೂರಿನ ಕರಾವಳಿ ಕಾಂಪ್ಲೆಕ್‌ನಲ್ಲಿ ಬಹು ಬ್ರಾಂಡ್‌ಗಳ ಟೂ ವೀಲರ್‌ಗಳ ಸಂಸ್ಥೆ “ಶ್ವೇತಾ ಮೋಟಾರ್‍ಸ್ ಶುಭಾರಂಭ”

ಶ್ವೇತಾ ಮೋಟಾರ್‍ಸ್ ದೊಡ್ಡ ಮಟ್ಟದಲ್ಲಿ ಹೆಸರು ಪಡೆಯಲಿ- ಈಶ್ವರ ಭಟ್ ಪಂಜಿಗುಡ್ಡೆ ಪುತ್ತೂರು: ಸವಣೂರಿನ ಕರಾವಳಿ ಕಾಂಪ್ಲೆಕ್ಸ್‌ನಲ್ಲಿ ಬಹು ಬ್ರಾಂಡ್‌ಗಳ ಟೂ ವೀಲರ್‌ಗಳ ಮಾರಾಟ ಮತ್ತು ಸರ್ವವೀಸಸ್ ನೀಡುವ ಸಂಸ್ಥೆ ಶ್ವೇತಾ ಮೋಟಾರ್‍ಸ್ ಆ.28ರಂದು ಶುಭಾರಂಭಗೊಂಡಿತು. ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ಅವರು ರಿಬ್ಬನ್ ಕಟ್ ಮಾಡಿ, ದೀಪ ಬೆಳಗಿಸಿ ಉದ್ಘಾಟಿಸಿ, ಮಾತನಾಡಿ ಆಧುನಿಕ ಜಗತ್ತಿನಲ್ಲಿ ಸೌಕರ್‍ಯಗಳು ಹೆಚ್ಚಾಗುತ್ತದೆ, ಈ…

ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಅರ್ಪಿತ್ ಟಿ. ಎ.ರವರಿಗೆ ಡಾಕ್ಟರೇಟ್ ಪದವಿ

ಪುತ್ತೂರು: ಮಂಗಳೂರು ವಿಶ್ವವಿದ್ಯಾನಿಲಯದ ವಾಣಿಜ್ಯ ವಿಭಾಗದ ಸಂಶೋಧನಾ ವಿದ್ಯಾರ್ಥಿ ಹಾಗೂ ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಅರ್ಪಿತ್ ಟಿ. ಎ. ಅವರು ಪಿಎಚ್.ಡಿ(ಡಾಕ್ಟರೇಟ್) ಪದವಿಯನ್ನು ಯಶಸ್ವಿಯಾಗಿ ಪಡೆದಿದ್ದಾರೆ. ಮಂಗಳೂರು ವಿಶ್ವವಿದ್ಯಾನಿಲಯದ ವಾಣಿಜ್ಯ ವಿಭಾಗದ ಪ್ರಾಧ್ಯಾಪಕರಾದ ಡಾ. ಈಶ್ವರ ಪಿ. ಅವರ ಮಾರ್ಗದರ್ಶನದಲ್ಲಿ “Performance Evaluation of Primary Agriculture Co-operative Credit Societies in Dakshina Kannada and Udupi Districts” ಎಂಬ…

ಪುತ್ತೂರು:ಬೊಳುವಾರು ಜ್ಞಾನ ಜ್ಯೋತಿ ತಾಂತ್ರಿಕ ಶಿಕ್ಷಣ ಕೇಂದ್ರ ದಲ್ಲಿ ಉದ್ಯೋಗ ಆಧಾರಿತ ತಾಂತ್ರಿಕ ತರಬೇತಿಗಳಿಗೆ ದಾಖಲಾತಿ ಆರಂಭ

ಪುತ್ತೂರು: ಕಳೆದ 15 ವರ್ಷ ಗಳಿಂದ ಪುತ್ತೂರು ಆಸುಪಾಸಿನ ಗ್ರಾಮೀಣ ಪ್ರದೇಶದ ವಿಧ್ಯಾರ್ಥಿಗಳಿಗೆ ತಾಂತ್ರಿಕ ತರಬೇತಿಯನ್ನು ನೀಡಿ ಹಲವಾರು ಅಭ್ಯರ್ಥಿಗಳಿಗೆ ದೇಶ ವಿದೇಶಗಳಲ್ಲಿ ಉದ್ಯೋಗವನ್ನು ದೊರಕಿಸಿ ಕೊಟ್ಟ ಜ್ಞಾನ ಜ್ಯೋತಿ ತಾಂತ್ರಿಕ ಶಿಕ್ಷಣ ಕೇಂದ್ರದಲ್ಲಿ 2026 -27 ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ದಾಖಲಾತಿ ಆರಂಭಗೊಂಡಿದೆ.ಸಂಸ್ಥೆಯು ಇಂಡಿಯನ್ ಟೆಕ್ನಿಕಲ್ ಎಜುಕೇಷನ್ ಸೊಸೈಟಿ ಮತ್ತು AISECT ಗ್ರೂಪ್ of university ಯೊಂದಿಗೆ ಸಂಯೋಜನೆ ಹೊಂದಿದೆ. ಉದ್ಯೋಗದಾರಿತ ಬಹು ಬೇಡಿಕೆಯ ಕೋರ್ಸ್…

ಅಪಘಾತ ಪ್ರಕರಣ: ಬಸ್ಸಿನ ಚಾಲಕ, ಮಾಲಕನಿಗೆ ಜೈಲು ಶಿಕ್ಷೆ ವಿಧಿಸಿದ ಮಂಗಳೂರು ಕೋರ್ಟ್

ಪ್ರಾಸಿಕ್ಯೂಶನ್ ಪರ ಎಪಿಪಿ ಆರೋನ್ ಡಿ ಸೋಜಾ ವಿಟ್ಲ ವಾದ ಮಂಡನೆ ಪುತ್ತೂರು: ಲೈಸನ್ಸ್ ಇಲ್ಲದೆ ಬಸ್ಸು ಚಲಾಯಿಸಿ ಅಪಘಾತ ಸಂಭವಿಸಿದ ಪ್ರಕರಣದಲ್ಲಿ ಮಂಗಳೂರಿನ ನ್ಯಾಯಾಲಯ ಚಾಲಕ ಮತ್ತು ಮಾಲಕನಿಗೆ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.ಚಾಲಕ ನಿಶಿತ್ ಶೆಟ್ಟಿ ಮತ್ತು ಬಸ್ ಮಾಲಕ ಪ್ರೀತಂ ದೇವೇಂದ್ರ ಕುಲಾಲ್ ಶಿಕ್ಷೆಗೆ ಒಳಗಾದವರು. ಮಂಗಳೂರಿನ‌ ಬೆಂದೂರ್‌ವೆಲ್ ಜಂಕ್ಷನ್ ನಲ್ಲಿ 2024ರ ಜು.10ರಂದು ಸುಂದರಿ(66) ಅವರು ಶಕ್ತಿನಗರಕ್ಕೆ ಹೋಗುವ ಬಸ್ಸನ್ನು ಹತ್ತಲು ರಸ್ತೆ ದಾಟುತ್ತಿದ್ದಾಗ ಕರಾವಳಿ…

ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟುರಿಗೆ ಪ್ರಿಯದರ್ಶಿನಿ ವಿದ್ಯಾಸಂಸ್ಥೆಯಲ್ಲಿ ಸನ್ಮಾನ

ಪುತ್ತೂರು: ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ಆಡಳಿತ ಮಂಡಳಿಗೆ ನೂತನ ನಿರ್ದೇಶಕರಾಗಿ ಆಯ್ಕೆಯಾದ ದ.ಕ. ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷರಾದ ಶಶಿಕುಮಾರ್ ರೈ ಬಾಲ್ಯೊಟ್ಟುರವರಿಗೆ ಬೆಟ್ಟಂಪಾಡಿ ಪ್ರಿಯದರ್ಶಿನಿ ಆಂಗ್ಲಮಾಧ್ಯಮ ಶಾಲೆಯಲ್ಲಿ ಸನ್ಮಾನ ಸಮಾರಂಭ ಆ. 26 ರಂದು ನಡೆಯಿತು. ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ರಂಗನಾಥ ರೈ ಗುತ್ತು ರವರು ಶಶಿಕುಮಾರ್ ರೈ ಯವರನ್ನು ಸನ್ಮಾನಿಸಿ ಬಳಿಕ ಮಾತನಾಡಿ ‘ಸಹಕಾರಿ ಕ್ಷೇತ್ರದ ಮೂಲಕ ನಮ್ಮೂರಿನ ವ್ಯಕ್ತಿಯೋರ್ವರು ರಾಜ್ಯಮಟ್ಟದ ನಾಯಕರ ಸಾಲಿಗೆ…

ಆ.28: ಬೊಳುವಾರು ಕ್ಷೇತ್ರದಲ್ಲಿ ಸಾಮೂಹಿಕ ಶ್ರೀವರಮಹಾಲಕ್ಷ್ಮೀ ಪೂಜೆ

ಪುತ್ತೂರು: ಬೊಳುವಾರು ಶ್ರೀದುರ್ಗಾ ಪರಮೇಶ್ವರಿ ಉಳ್ಳಾಲ್ತಿ ಮಲರಾಯ ಸಪರಿವಾರ ಕ್ಷೇತ್ರದಲ್ಲಿ ಆ.28ರಂದು ಸಂಜೆ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜೆಯು ಅರ್ಚಕರಾದ ವೆ.ಮೂ. ಶ್ರೀಧರ ಭಟ್ ಕಬಕರವರ ನೇತೃತ್ವದಲ್ಲಿ ನಡೆಯಲಿದೆ. ಸಂಜೆ ಕಲಶ ಪ್ರತಿಷ್ಠೆ, ಲಲಿತಾ ಸಹಸ್ರನಾಮ ಪಠಣ, ಕ್ಷೇತ್ರದ ದುರ್ಗಾಪರಮೇಶ್ವರೀ ಭಜನಾ ಮಂಡಳಿ ವತಿಯಿಂದ ಭಜನೆ, ವೇಣುಗೋಪಾಲ್‌ ಮತ್ತು ಬಳಗದವರಿಂದ ಸ್ಯಾಕ್ಸೋಫೋನ್ ವಾದನ, ರಾತ್ರಿ ವರಮಹಾಲಕ್ಷ್ಮೀಪೂಜೆಯ ಮಂಗಳಾರತಿ, ಶ್ರೀ ದುರ್ಗಾಪೂಜೆ, ಮಹಾಮಂಗಳಾರತಿ, ಪ್ರಸಾದ ವಿತರಣೆ,…

ಪ್ರೊ. ಸುಬ್ಬಪ್ಪ ಕೈಕಂಬರಿಗೆ “ಅಧ್ಯಾಪಕ ಭೂಷಣ”  ಅತ್ಯುತ್ತಮ ಶಿಕ್ಷಕ ಪ್ರಶಸ್ತಿ

ಪುತ್ತೂರು:ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘದ ವತಿಯಿಂದ 2026 ನೇ ಸಾಲಿನ ಅಧ್ಯಾಪಕ ಭೂಷಣ, ಅತ್ಯುತ್ತಮ ಶಿಕ್ಷಕ ಪ್ರಶಸ್ತಿಯನ್ನು ಸರಕಾರಿ ಪ್ರಥಮ ದರ್ಜೆ ಕಾಲೇಜು ಪುತ್ತೂರು ,ಜಿಡೆಕಲ್ಲು ಇದರ ಪ್ರಾಂಶುಪಾಲರಾದ ಪ್ರೊ| ಸುಬ್ಬಪ್ಪ ಕೈಕಂಬ ಇವರಿಗೆ ನೀಡಲಾಗಿದೆ. ದಕ್ಷಿಣ ಕನ್ನಡ, ಕೊಡಗು, ಉಡುಪಿ ಜಿಲ್ಲಾ ಪ್ರಾಧ್ಯಾಪಕರ ಶೈಕ್ಷಣಿಕ ಸಾಧನೆಗಳನ್ನು ಗುರುತಿಸಿ ಪ್ರೇರಣಾ ದಿವಸ್ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಸೆ.26ರಂದು ಇನ್ಫೋಸಿಸ್ ಯಕ್ಷ ಕಲಾ ಕೇಂದ್ರದಲ್ಲಿ…

ಜೇಸಿಐ ಆಲಂಕಾರು ಘಟಕಕ್ಕೆ ವಲಯಾಧ್ಯಕ್ಷರ ಅಧಿಕೃತ ಭೇಟಿ

ಘಟಕದ ಶಾಶ್ವತ ಯೋಜನೆ ಜೇಸಿ ಪ್ರದೀಪ್ ಬಾಕಿಲರ ಸ್ಮರಣಾರ್ಥ ನಿರ್ಮಿಸಲಾದ ಬಸ್ಸು ತಂಗುದಾಣದ ಲೋಕಾರ್ಪಣಾ ಕಾರ್ಯಕ್ರಮ ಆಲಂಕಾರು:ಜೇಸಿಐ ಆಲಂಕಾರು ಘಟಕದಲ್ಲಿ ವಲಯಾಧ್ಯಕ್ಷರ ಅಧಿಕೃತ ಭೇಟಿ ಹಾಗೂ ಘಟಕದ ಈ ವರ್ಷದ ಶಾಶ್ವತ ಯೋಜನೆಯಾದ ಜೇಸಿ ಪ್ರದೀಪ್ ಬಾಕಿಲರ ಸ್ಮರಣಾರ್ಥ ಆಲಂಕಾರು ಗ್ರಾಮದ ನೆಕ್ಕರೆಯಲ್ಲಿ ನಿರ್ಮಿಸಲಾದ ಬಸ್ಸು ತಂಗುದಾಣದ ಲೋಕಾರ್ಪಣಾ ಕಾರ್ಯಕ್ರಮ ನಡೆಯಿತು.ಜೇಸಿಐ ಭಾರತದ ವಲಯ 15ರ ವಲಯಾಧ್ಯಕ್ಷ JFS ಸಂತೋಷ್ ಶೆಟ್ಟಿಯವರನ್ನು ಆಲಂಕಾರು ಪೇಟೆಯಲ್ಲಿ ಜೇಸಿಐ ಘಟಕದ ಅಧ್ಯಕ್ಷ ಮಹೇಶ್ ಪಾಟಾಳಿ…

ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ಇಕೋ ಹಾಗೂ ಹೆಲ್ತ್ ಕ್ಲಬ್ ಉದ್ಘಾಟನೆ

ಪುತ್ತೂರು:ವಿವೇಕಾನಂದ ಪದವಿಪೂರ್ವ ಕಾಲೇಜಿನ ವೈದೇಹಿ ಸಭಾಂಗಣದಲ್ಲಿ ಇಕೋ ಹಾಗೂ ಹೆಲ್ತ್ ಕ್ಲಬ್ ಉದ್ಘಾಟನೆ ನೆರವೇರಿತು. ಪ್ರಾಂಶುಪಾಲರಾದ ದೇವಿಚರಣ್ ರೈ ಉದ್ಘಾಟನೆ ನೆರವೇರಿಸಿ ಮಾತನಾಡುತ್ತಾ, ಮನುಷ್ಯನ ಅಸ್ತಿತ್ವವು ಪ್ರಕೃತಿಯೊಂದಿಗೆ ಅವಿನಾಭಾವ ಸಂಬಂಧ ಹೊಂದಿದೆ. ಅದನ್ನು ಸಂರಕ್ಷಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ.ಇಂದು ಅಭಿವೃದ್ಧಿಯ ಹೆಸರಿನಲ್ಲಿ ಅರಣ್ಯನಾಶ,ಅತಿಯಾದ ಪ್ಲಾಸ್ಟಿಕ್ ಬಳಕೆ,ನೀರಿನ ದುರ್ಬಳಕೆ,ವಾಯುಮಾಲಿನ್ಯ,ಜಲಮಾಲಿನ್ಯ ಮತ್ತು ಜೀವವೈವಿಧ್ಯದ ನಾಶ ಹೆಚ್ಚುಗುತ್ತಿದೆ.ಇವುಗಳು…

ಪ್ರಗತಿ ಸ್ಟಡಿ ಸೆಂಟರ್‌ನಲ್ಲಿ 20ನೇ ವರ್ಷದ ONAM @Pragathi – 2026

ಪುತ್ತೂರು : ಕೇರಳದ ಸಾಂಸ್ಕೃತಿಕ ಪರಂಪರೆ , ಸಮೃದ್ಧಿ , ಸಮಾನತೆ ಮತ್ತು ಸಹಬಾಳ್ವೆಯ ಸಂಕೇತವಾಗಿರುವ ಓಣಂ ಹಬ್ಬವನ್ನು ಪುತ್ತೂರಿನ ಪ್ರಗತಿ ಸ್ಟಡಿ ಸೆಂಟರ್‌ ಶಿಕ್ಷಣ ಸಂಸ್ಥೆಯಲ್ಲಿ ” Onam @Pragathi – Spirit of Togetherness ” ಎಂಬ ಶೀರ್ಷಿಕೆಯಡಿ ಆ.26 ರಂದು ಆಚರಿಸಲಾಯಿತು. ಕಾರ್ಯಕ್ರಮಕ್ಕೆ ಸಾಂಪ್ರದಾಯಿಕ ಪೂಕಳಂ ಅಲಂಕಾರದ ನಡುವೆ ದೀಪ ಪ್ರಜ್ವಲನೆಯೊಂದಿಗೆ ಚಾಲನೆ ನೀಡಲಾಯಿತು. ವಿದ್ಯಾರ್ಥಿಗಳಿಗೆ ತರಗತಿವಾರು ಪೂಕಳಂ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು ವಿವಿಧ ತರಗತಿಗಳ…

ಆರ್ಯಾಪು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಸತತ 8ನೇ ಬಾರಿ ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ಪ್ರಶಸ್ತಿ-ಸನ್ಮಾನ

ಪುತ್ತೂರು: ಆರ್ಯಾಪು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಸಂಘದ ಅಧ್ಯಕ್ಷ ಎಚ್.ಮಹಮ್ಮದ್ ಆಲಿರವರ ನೇತೃತ್ವದಲ್ಲಿ ಸಂಘವು ಪ್ರತಿಯೊಂದು ವಿಭಾಗದಲ್ಲಿ ಉತ್ತಮ ಕಾರ್ಯ ನಿರ್ವಹಿಸುವುದರೊಂದಿಗೆ ಸತತ 8ನೇ ಬಾರಿ ಎಸ್.ಸಿಡಿಸಿಸಿ ಬ್ಯಾಂಕ್ ಪ್ರಶಸ್ತಿಯನ್ನು ಬಾಚಿಕೊಂಡಿದೆ. ಮಂಗಳೂರಿನಲ್ಲಿ ನಡೆದ ಎಸ್.ಸಿ.ಡಿ.ಸಿ.ಸಿ ಬ್ಯಾಂಕಿನ ಮಹಾಸಭೆಯಲ್ಲಿ ಸಂಘದ ಸಂಘದ ಅಧ್ಯಕ್ಷ ಎಚ್.ಮಹಮದ್ ಆಲಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಜಿತ್ ಕುಮಾರ್ ರೈ ಎನ್.ರವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.…

ಮೊಬೈಲ್ ಟವರ್ ಜನರೇಟರ್‌ನ ಡೀಸೆಲ್ ಕಳ್ಳತನ ಪ್ರಕರಣ : ಬೆಳ್ಳಿಪ್ಪಾಡಿಯ ದೀಕ್ಷನ್, ವಿಖ್ಯಾತ್, ಹೇಮಂತ್ ಬಿಡುಗಡೆ

ಪುತ್ತೂರು: ಬೆಳ್ತಂಗಡಿ ತಾಲೂಕಿನ ಬಂದಾರು ಗ್ರಾಮದ ಮೈರೋಳ್ತಡ್ಕದಲ್ಲಿ ಏರ್‌ಟೆಲ್ ಮೊಬೈಲ್ ಟವರ್‌ನ ಜನರೇಟರ್‌ನಿಂದ ಡೀಸೆಲ್ ಕಳ್ಳತನ ಮಾಡುತ್ತಿದ್ದ ಆರೋಪದಡಿ ಧರ್ಮಸ್ಥಳ ಠಾಣಾ ಪೊಲೀಸರ ವಶವಾಗಿದ್ದ ಮೂವರನ್ನು ಠಾಣಾ ಜಾಮೀನು ಪಡೆದು ಬಿಡುಗಡೆಗೊಳಿಸಲಾಗಿದೆ. ಬಂದಾರು ಗ್ರಾಮದ ಮೈರೋಳ್ತಡ್ಕದಲ್ಲಿರುವ ಏರ್‌ಟೆಲ್ ಮೊಬೈಲ್ ಟವರ್‌ನ ಜನರೇಟರ್‌ನಿಂದ ಕಳೆದ ಹಲವಾರು ದಿನಗಳಿಂದ ಡೀಸೆಲ್ ಕಳ್ಳತನವಾಗುತ್ತಿರುವ ಬಗ್ಗೆ ತೀವ್ರ ಅನುಮಾನವಿತ್ತು. ಈ ಹಿನ್ನೆಲೆಯಲ್ಲಿ ಏರ್‌ಟೆಲ್ ಸಂಸ್ಥೆಗೆ ಸೇರಿದ ಅಧಿಕಾರಿಗಳು,…

ಶಶಿಕುಮಾರ್ ರೈ ಬಾಲ್ಯೊಟ್ಟು ಅವರಿಗೆ 18ಕ್ಕೆ 18 ಮತ ; ಭರ್ಜರಿ ಗೆಲುವು : ಮೈಸೂರು ವಿಭಾಗದಿಂದ ರಾಜ್ಯ ಸಹಕಾರ ಮಹಾಮಂಡಳಕ್ಕೆ ಆಯ್ಕೆ

ಪುತ್ತೂರು: ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ., ಬೆಂಗಳೂರು ಇದರ ಆಡಳಿತ ಮಂಡಳಿ ಚುನಾವಣೆಯಲ್ಲಿ ಮೈಸೂರು ವಿಭಾಗದ ನಿರ್ದೇಶಕ ಸ್ಥಾನಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು ಅವರು ಸ್ಪರ್ಧಿಸಿ, 18 ಮತಗಳ ಪೈಕಿ ಎಲ್ಲಾ 18 ಮತಗಳನ್ನು ಪಡೆದು ಅವಿರೋಧದಂತೆಯೇ ಭರ್ಜರಿ ಗೆಲುವು ಸಾಧಿಸಿದ್ದಾರೆ. ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ 62 ವರ್ಷಗಳ ಇತಿಹಾಸದಲ್ಲಿ ನಿರ್ದೇಶಕರಾಗಿ ಆಯ್ಕೆಯಾದ ದಕ್ಷಿಣ ಕನ್ನಡ ಜಿಲ್ಲೆಯ ಮೊದಲ ಪ್ರತಿನಿಧಿ ಎಂಬ ಹೆಗ್ಗಳಿಕೆಗೆ…

ಸುಳ್ಯದಲ್ಲಿ ಸಂಭ್ರಮದ ಮಿಲಾದು ನ್ನೆಬಿ ಆಚರಣೆ

ಶಾಂತಿಯ ಸಂದೇಶ, ಮನುಕುಲದ ಸೇವೆ ಯ ಪ್ರವಾದಿಯವರ ಜೀವನ ಇಂದಿಗೂ ಪ್ರಸ್ತುತ : ಅಹ್ಸನಿ ಸುಳ್ಯ: ಪ್ರವಾದಿ ಮುಹಮ್ಮದ್ ಮುಸ್ತಫ ( ಸ. ಅ ) ರವರ ಜನ್ಮದಿನಾಚರಣೆಯ ಅಂಗವಾಗಿ ಗಾಂಧಿನಗರ ಮುಹಿಯ್ಯದ್ದೀನ್ ಜುಮ್ಮಾ ಮಸ್ಜಿದ್, ಮುನವ್ವಿರುಲ್ ಇಸ್ಲಾಂ ಮದ್ರಸ ಇದರ ಆಶ್ರಯ ದಲ್ಲಿ ವಿವಿಧ ಕಾರ್ಯಕ್ರಮ ಗಳು ವಿಜೃಂಭಣೆ ಯಿಂದ ಜರಗಿತು, ಮೀಲಾದ್ ಕಾಲ್ನಡಿಗೆ ಸ್ವಲಾತ್ ಜಾಥಾ ವನ್ನು ಜುಮ್ಮಾ ಮಸ್ಜಿದ್ ಆಡಳಿತ ಸಮಿತಿ ಅಧ್ಯಕ್ಷ ಹಾಜಿ ಕೆ ಎಂ ಎಸ್ ಮಹಮ್ಮದ್ ಜಾಥಾ ನಾಯಕ […]

ಪುತ್ತೂರು: ವಿಶ್ವಹಿಂದೂ ಪರಿಷದ್ ನೂತನ ಕಟ್ಟಡ ಕಾಮಗಾರಿಗೆ ಚಾಲನೆ

ಪುತ್ತೂರು: ವಿಶ್ವಹಿಂದೂ ಪರಿಷದ್ ಪುತ್ತೂರು ಜಿಲ್ಲಾ ಘಟಕದ ನೂತನ ಕಟ್ಟಡದ ಕಾಮಗಾರಿ ಪ್ರಾರಂಭೋತ್ಸವದ ಅಂಗವಾಗಿ ಆ.25ರಂದು ಗಣಪತಿ ಹವನ ನಡೆಯಿತು. ರೋಟರಿ ಬ್ಲಡ್ ಬ್ಯಾಂಕ್ ಸಮೀಪದ ಕಟ್ಟಡ ನಿರ್ಮಾಣ ಹಂತದ ಸ್ಥಳದಲ್ಲಿ ಗಣಪತಿ ಹವನ ಹಾಗೂ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸುವ ಮೂಲಕ ಕಟ್ಟಡ ಕಾಮಗಾರಿಗೆ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ವಿಶ್ವಹಿಂದೂ ಪರಿಷದ್ ಜಿಲ್ಲಾಧ್ಯಕ್ಷ ಡಾ. ಕೃಷ್ಣಪ್ರಸನ್ನ ಪೂಜೆಯಲ್ಲಿ ಭಾಗವಹಿಸಿದರು. ವಿಶ್ವಹಿಂದು ಪರಿಷತ್‌ನ ಕರ್ನಾಟಕ ಪ್ರಾಂತ ಉಪಾಧ್ಯಕ್ಷ…

ಶಾಸಕಿ ಭಾಗೀರಥಿ ಮುರುಳ್ಯರಿಂದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತರ ಭೇಟಿ- ಕ್ಷೇತ್ರದ ವಿಚಾರಗಳ ಬಗ್ಗೆ ಚರ್ಚೆ

ಕಾಣಿಯೂರು: ಸುಳ್ಯ ವಿಧಾನ ಸಭಾ ಕ್ಷೇತ್ರದ ಕುಕ್ಕೆ ಸುಬ್ರಹ್ಮಣ್ಯ ಆರೋಗ್ಯ ಕೇಂದ್ರ ಮತ್ತು ಬೆಳ್ಳಾರೆ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೆ ಏರಿಸಿ 24×7ಸೇವೆಯನ್ನು ಕಲ್ಪಿಸುವಂತೆ ಶಾಸಕಿ ಭಾಗೀರಥಿ ಮುರುಳ್ಯ ಅವರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವ ಯು.ಟಿ.ಖಾದರ್ ಅವರಿಗೆ ತಿಂಗಳ ಹಿಂದೆ ಮನವಿ ಸಲ್ಲಿಸಿದ್ದರು, ಮನವಿಯನ್ನು ಪರಿಗಣಿಸಿದ ಸಚಿವರು ಈ ಎರಡು ಆಸ್ಪತ್ರೆಗಳಲ್ಲಿ ಪರಿಶೀಲಿಸಿ ಅಗತ್ಯ ಕ್ರಮಕೈಗೊಳ್ಳುವಂತೆ ಅರೋಗ್ಯ ಇಲಾಖೆಯ ಆಯುಕ್ತರಿಗೆ ಪತ್ರದ ಮೂಲಕ ಸೂಚಿಸಿದ್ದರು. ಆ…

ಉಪ್ಪಳಿಗೆ ಒಕ್ಕೂಟದ ವತಿಯಿಂದ ಪರಿಸರ ಮಾಹಿತಿ- ಸಸಿ ನಾಟಿ ಕಾರ್ಯಕ್ರಮ.

ನಿಡ್ಪಳ್ಳಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಪುತ್ತೂರು ಬೆಟ್ಟಂಪಾಡಿ ವಲಯದ ಉಪ್ಪಳಿಗೆ ಒಕ್ಕೂಟದ ವತಿಯಿಂದ ಪರಸರ ಮಾಹಿತಿ ಹಾಗೂ ಸಸಿ ನಾಟಿ ಕಾರ್ಯಕ್ರಮ ಆ.24 ರಂದು ನಡೆಯಿತು. ಉಪ್ಪಳಿಗೆ ಕಾರ್ಯಕ್ಷೇತ್ರದ ಅಜಲಡ್ಕ ಕೆರೆಯ ಆವರಣದ ಸುತ್ತಮುತ್ತ ವಿವಿಧ ಬಗೆಯ ಸಸಿಗಳನ್ನು ನೆಡಲಾಯಿತು.ಗ್ರಾಮಾಭಿವೃದ್ಧಿ ಯೋಜನೆಯ ಕೃಷಿ ಅಧಿಕಾರಿ ಹರೀಶ್ ರವರು ಪರಿಸರ ಸಂರಕ್ಷಣೆ ಬಗ್ಗೆ ಮಾಹಿತಿ ನೀಡಿದರು. ಒಕ್ಕೂಟದ ಅಧ್ಯಕ್ಷರುಗಳಾದ ನಾರಾಯಣ ನಾಯ್ಕ, ಚನಿಯಪ್ಪ ನಾಯ್ಕ, ಸೀತಾರಾಮ…

ಐಜಿಪಿ ಅಮಿತ್ ಸಿಂಗ್ ಪುತ್ತೂರಿಗೆ ಭೇಟಿ

ಪುತ್ತೂರು: ಈದ್ ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ ಹಾಗೂ ಹಿಂದೂ ಜಾಗರಣಾ ವೇದಿಕೆ ನೀಡಿರುವ ಸ್ವಯಂ ಪ್ರೇರಿತ ಮುಷ್ಕರಕ್ಕೆ ಸಂಬಂಧಿಸಿದಂತೆ ಪುತ್ತೂರಿನ ಪರಿಸ್ಥಿತಿಯನ್ನು ಅವಲೋಕಿಸಲು ಪಶ್ಚಿಮ ವಲಯ ಮಹಾ ಪೊಲೀಸ್ ನಿರೀಕ್ಷಕ (ಐಜಿಪಿ) ಅಮಿತ್ ಸಿಂಗ್ ಅವರು ಆ.25ರಂದು ಪುತ್ತೂರಿಗೆ ಭೇಟಿ ನೀಡಿದರು. ಮಧ್ಯಾಹ್ನ 12 ಗಂಟೆ ಸುಮಾರಿಗೆ ಪುತ್ತೂರಿನ ದರ್ಭೆಯಲ್ಲಿರುವ ನಿರೀಕ್ಷಣಾ ಮಂದಿರಕ್ಕೆ ಆಗಮಿಸಿದ ಐಜಿಪಿ ಅಮಿತ್ ಸಿಂಗ್ ಅವರಿಗೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ ಮತ್ತು…

ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಕಾರಿ ಸುಳ್ಳು ಸುದ್ದಿ – ಪ್ರಕರಣ ದಾಖಲು

ಪುತ್ತೂರು: ಸಾರ್ವಜನಿಕ ಶಾಂತಿ ಸುವ್ಯವಸ್ಥೆ ಕದಡುವಂತಹ ಹಾಗೂ ಪ್ರಚೋದನಕಾರಿ ಸುಳ್ಳು ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಿದ ಹಿನ್ನೆಲೆಯಲ್ಲಿ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಾಮಾಜಿಕ ಜಾಲತಾಣ (ವಾಟ್ಸಾಪ್) ದಲ್ಲಿ ಮಂಜುನಾಥ್ ಎಂಬ ಹೆಸರಿನ ಖಾತೆಯನ್ನು ಹೊಂದಿರುವ ವ್ಯಕ್ತಿಯು, ವಾಟ್ಸಾಪ್ ಮೂಲಕ ರಾಜಕೀಯ ಪಕ್ಷವೊಂದರ ಹೆಸರಿನಲ್ಲಿ, ದಿನಾಂಕ 26.08.2026ರಂದು ಪುತ್ತೂರು ಬಂದ್ ನಡೆಸಲು ಸವಾಲು ಹಾಕುವಂತಹ ಪ್ರಚೋದನಕಾರಿ ಹಾಗೂ ಸಾರ್ವಜನಿಕ ಶಾಂತಿ…

ಈದ್ ಮಿಲಾದ್ ಹಿನ್ನೆಲೆ ಪ್ರಜ್ಞಾ ಆಶ್ರಮ, ಸರಕಾರಿ ಆಸ್ಪತ್ರೆ ಹಣ್ಣು ಹಂಪಲು ವಿತರಣೆ

ಪುತ್ತೂರು: ಈದ್ ಮಿಲಾದ್ ಹಬ್ಬದ ಪ್ರಯುಕ್ತ ದಕ್ಷಿಣ ಕನ್ನಡ ಮುಸ್ಲಿಂ ಯುವಜನ ಪರಿಷತ್ತು ಮತ್ತು ಈದ್ ಮಿಲಾದ್ ಜಂಟಿ ಆಶ್ರಯದಲ್ಲಿ ಬೀರಮಲೆ ಪ್ರಜ್ಞಾ ಆಶ್ರಮದಲ್ಲಿ ಮತ್ತು ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ಹಣ್ಣು ಹಂಪಲು ವಿತರಿಸಲಾಯಿತು. ಪುತ್ತೂರು ಸರಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಯದುರಾಜ್ ಅವರ ಮೂಲಕ ಆಸ್ಪತ್ರೆಯ ರೋಗಿಗಳಿಗೆ ಮತ್ತು ಬೀರಮಲೆ ಪ್ರಜ್ಞಾ ಆಶ್ರಮದಲ್ಲಿ ಆಶ್ರಮದ ಅಣ್ಣಪ್ಪ ದಂಪತಿಯ ಮೂಲಕ ಹಣ್ಣು ಹಂಪಲು ವಿತರಿಸಲಾಯಿತು. ಈ ಸಂದರ್ಭ ಮೀಲಾದ್ ಸಮಿತಿ ಮತ್ತು ಮುಸ್ಲಿಂ…

ವಾಹನದ ಗ್ಲಾಸ್‌ಗೆ ನೋಂದಣಿ ಸಂಖ್ಯೆಗೆ ಸ್ಟಿಕ್ಕರ್ : ದಂಡ ವಿಧಿಸಿದ ಟ್ರಾಫಿಕ್ ಪೊಲೀಸರು

ಪುತ್ತೂರು: ವಾಹನದ ಚಾಲನೆಗೆ ಅಡ್ಡಿಯಾಗುವಂತೆ ಗ್ಲಾಸ್ ಗಳಿಗೆ ಸ್ಟಿಕ್ಕರ್ ಅಳವಡಿಸಿ, ವಾಹನದ ನೋಂದಣಿ ಸಂಖ್ಯೆ ಮರೆಮಾಚುವಂತೆ ಸ್ಟಿಕ್ಕರ್ ಅಳವಡಿಸುವ ಮೂಲಕ ಸಂಚಾರ ನಿಯಮಗಳನ್ನು ಉಲ್ಲಂಘಿಸಿ ಸಂಚರಿಸುತ್ತಿದ್ದ ವಾಹನಗಳಿಗೆ ಪುತ್ತೂರು ಸಂಚಾರ ಠಾಣಾ ಪೊಲೀಸರು ದಂಡ ವಿಧಿಸಿರುತ್ತಾರೆ. ಸಾರ್ವಜನಿಕರು ಯಾವುದೇ ಉತ್ಸವ, ಹಬ್ಬ ಹರಿದಿನಗಳು ಹಾಗೂ ಯಾವುದೇ ಕಾರ್ಯಕ್ರಮದ ನೆಪದಲ್ಲಿ ಸಂಚಾರ ನಿಯಮಗಳನ್ನು ಉಲ್ಲಂಘಿಸಿದಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಸೂಚನೆ ನೀಡಿದ್ದಾರೆ.

ಪುತ್ತೂರು ಶ್ರೀ ರಾಮಕೃಷ್ಣ ಸೇವಾ ಸಮಾಜದ ಅಧ್ಯಕ್ಷ, ಹಿರಿಯ ವಕೀಲ ಎನ್.ಸುಬ್ರಹ್ಮಣ್ಯ ಕೊಳತ್ತಾಯ ನಿಧನ

ಪುತ್ತೂರು: ಪುತ್ತೂರು ಶ್ರೀ ರಾಮಕೃಷ್ಣ ಸೆವಾ ಸಮಾಜದ ಅಧ್ಯಕ್ಷರು ಮತ್ತು ಪುತ್ತೂರು ಕೋ ಓಪರೇಟಿವ್ ಟೌನ್ ಬ್ಯಾಂಕ್ ಮಾಜಿ ಅಧ್ಯಕ್ಷರಾಗಿರುವ ಹಿರಿಯ ವಕೀಲ ಎನ್.ಸುಬ್ರಹ್ಮಣ್ಯ ಕೊಳತ್ತಾಯ(93ವ) ಆ.22ರಂದು ರಾತ್ರಿ ನಿಧನರಾದರು. ಕರ್ಮಲ ನಿವಾಸಿ ಎನ್.ಸುಬ್ರಹ್ಮಣ್ಯ ಕೊಳತ್ತಾಯ ಅವರು ಪುತ್ತೂರಿನಲ್ಲಿ ಹಲವಾರು ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದರು. ಮೃತರು ಪತ್ರರಾದ ಕಾವೇರಿ ರೆಫ್ರಿಜರೇಟರ್ ಸಂಸ್ಥೆಯ ಮಾಲಕ ಶ್ರೀಕಾಂತ್ ಕೊಳತ್ತಾಯ, ಪುತ್ತೂರು ಕೋ ಓಪರೇಟಿವ್ ಟೌನ್ ಬ್ಯಾಂಕ್ ಅಧ್ಯಕ್ಷ ಕಿಶೋರ್…

ಆ.23(ನಾಳೆ) :ಪಾಣಾಜೆ ಬೊಳ್ಳಿಂಬಳದಲ್ಲಿ ಹಿಂದವಿ ಕೆಸರ್ದ ಲೇಸ್ ಕಾರ್ಯಕ್ರಮ

ನಿಡ್ಪಳ್ಳಿ; ಪುತ್ತಿಲ ಪರಿವಾರ ಸೇವಾ ಟ್ರಸ್ಟ್ (ರಿ.) ಪುತ್ತೂರು ಪಾಣಾಜೆ ಗ್ರಾಮ ಸಮಿತಿ ಇದರ ಆಶ್ರಯದಲ್ಲಿ ಹಿಂದವಿ ಕೆಸರ್ದ ಲೇಸ್ ಕಾರ್ಯಕ್ರಮ ಆ.23 ರಂದು ಶ್ರೀ ದೇವಿವನ ಗದ್ದೆ ಬೊಳ್ಳಿಂಬಳ-ಪಾಣಾಜೆ ಇಲ್ಲಿ ನಡೆಯಲಿದೆ. ಬೆಳಿಗ್ಗೆ ಗಂಟೆ 9 ಕ್ಕೆ ಕಾರ್ಯಕ್ರಮ ಉದ್ಘಾಟನೆ ಗೊಳ್ಳಲಿದ್ದು ಸ್ಪರ್ಧಾ ಕಾರ್ಯಕ್ರಮಗಳು ಬೆಳಿಗ್ಗೆ ಗಂಟೆ 10 ರಿಂದ ಆರಂಭ ಗೊಳ್ಳಲಿದೆ.ಮಧ್ಯಾಹ್ನ 12.30 ಕ್ಕೆ ಮಧ್ಯಾಹ್ನದ ಭೋಜನ, ಸಂಜೆ ಗಂಟೆ 5-00ರಿಂದ ಸಮಾರೋಪ ಸಮಾರಂಭ ನಡೆಯಲಿದ್ದು ಪುತ್ತಿಲ ಪರಿವಾರದ ಸಂಸ್ಥಾಪಕ ಅರುಣ್…

ಸವಣೂರು ಹಾಲು ಉತ್ಪಾದಕರ ಸಹಕಾರಿ ಸಂಘದ ವಾರ್ಷಿಕ ಸಾಮಾನ್ಯ ಸಭೆ

4,68,29,255 ರೂ. ವ್ಯವಹಾರ, ರೂ. 7.09 ಲಕ್ಷ ಲಾಭ, ಶೇ. 12 ಡಿವಿಡೆಂಡ್ ಪುತ್ತೂರು: ಸವಣೂರು ಹಾಲು ಉತ್ಪಾದಕರ ಸಹಕಾರಿ ಸಂಘವು 2025-26ನೇ ಸಾಲಿನಲ್ಲಿ 4,68,29,255 ರೂ.ಗಳ ವ್ಯವಹಾರ ನಡೆಸಿ, 7.09 ರೂ ಲಕ್ಷ ನಿವ್ವಳ ಲಾಭ ಪಡೆದಿರುತ್ತದೆ ಎಂದು ಸಂಘದ ಅಧ್ಯಕ್ಷ ಕೃಷ್ಣ ಭಟ್ ಕುಕ್ಕುಜೆರವರು ಹೇಳಿದರು. ಅವರು ಆ. 21 ರಂದು ಸವಣೂರು ಯುವ ಸಭಾಭವನದಲ್ಲಿ ಜರಗಿದ ಸವಣೂರು ಹಾಲು ಉತ್ಪಾದಕರ ಸಹಕಾರಿ ಸಂಘದ ವಾರ್ಷಿಕ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಂಘದ […]

ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ಪಿ.ಡಿ.ಗಂಗಾಧರ್ ರೈ ದೇವಸ್ಯರವರ ಉತ್ತರ ಕ್ರಿಯೆ- ಶ್ರದ್ಧಾಂಜಲಿ ಸಭೆ

ಪುತ್ತೂರು: ಆ.1 ಎಂದು ನಿಧಾನರಾದ ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ಹಾಗೂ ಸವಣೂರು ಗ್ರಾ.ಪಂ, ಮಾಜಿ ಉಪಾಧ್ಯಕ್ಷ ಪಿ.ಡಿ.ಗಂಗಾಧರ್ ರೈ ದೇವಸ್ಯರವರ ಉತ್ತರ ಕ್ರಿಯೆ- ಶ್ರದ್ಧಾಂಜಲಿ ಸಭೆಯು ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ ನೇತ್ರಾವತಿ ಸಭಾಭವನದಲ್ಲಿ ಆ. 21 ರಂದು ಜರಗಿತು. ಶ್ರಮ ಜೀವಿಯಾಗಿದ್ದರು- ಗಿರಿಶಂಕರ್ ಸುಲಾಯನುಡಿನಮನ ಕಾರ್‍ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಗಿರಿಶಂಕರ್ ಸುಲಾಯ ದೇವಸ್ಯರವರು ನನ್ನ ಮಾವ ಗಂಗಾಧರ್ ರೈಯವರು ಸಾಮಾಜಿಕ…

ವಿವೇಕಾನಂದ ಇನ್ಸ್ಟಿಟ್ಯೂಟ್ ಆಫ್ ಫಾರ್ಮಸ್ಯುಟಿಕಲ್ ಸೈನ್ಸಸ್ 2025-26ನೇ ವಾರ್ಷಿಕೋತ್ಸವ ‘ಆರೋಹಣಂ’

ಯುವ ಔಷಧ ವಿಜ್ಞಾನಿಗಳ ಕೊಡುಗೆ ದೇಶದ ಪ್ರಗತಿಗೆ ಅಮೂಲ್ಯ – ಸಂಸದ ಕ್ಯಾ. ಬ್ರಿಜೇಶ್ ಚೌಟ ಪುತ್ತೂರು: ಯುವ ಸಮೂಹವೆಂದರೆ ದೇಶಕ್ಕೆ ಶಕ್ತಿಯಾಗಿ ನಿಂತು ಹೊಸ ಚಿತ್ರಣವನ್ನು ನೀಡಬಲ್ಲವರು. ಸಕಲ ಸೌಲಭ್ಯಗಳನ್ನು ಹೊಂದಿರುವ ಇಂದಿನ ವಿದ್ಯಾರ್ಥಿಗಳು ಅವುಗಳ ಸದುಪಯೋಗ ಪಡೆದು ಜಯಿಸಬೇಕು. ನಮ್ಮ ದೇಶದಲ್ಲಿ ಸ್ವಂತ ಸ್ಟಾರ್ಟಪ್ ಇತ್ಯಾದಿ ಉದ್ಯಮಗಳನ್ನು ಪ್ರಾರಂಭಿಸಿ ಉತ್ಪಾದನೆ, ಸಾಗಾಟ ಮುಂತಾದ ಹಂತಗಳಲ್ಲಿನ ಮಿತಿಗಳನ್ನು ಮೀರಲು ನಾವು ಪ್ರಯತ್ನಿಸಬೇಕು. ಸರ್ಕಾರ ಔಷದ ಉತ್ಪಾದನೆ, ಚಿಕಿತ್ಸೆ…

ವಿವೇಕಾನಂದ ಕಾಲೇಜಿನಲ್ಲಿ 45ನೇ ಮಾನ್ಸೂನ್ ಚೆಸ್ ಟೂರ್ನಮೆಂಟ್

ಪುತ್ತೂರು: ವಿವೇಕಾನಂದ ಕಲಾ, ವಿಜ್ಞಾನ, ಮತ್ತು ವಾಣಿಜ್ಯ ಕಾಲೇಜು(ಸ್ವಾಯತ್ತ) ಪುತ್ತೂರು. ಇಲ್ಲಿನ ದೈಹಿಕ ಶಿಕ್ಷಣ ವಿಭಾಗ ಮತ್ತು ಕ್ರೀಡಾ ಇಲಾಖೆ ಹಾಗೂ ಐಕ್ಯೂಎಸಿ ಘಟಕದ ಸಹಯೋಗದಲ್ಲ್ಲಿ ಅಂತರ್ ಕಾಲೇಜು ಹಾಗೂ ಅಂತರ್ ಜಿಲ್ಲಾ ಮಟ್ಟದ 45ನೇ ಮಾನ್ಸೂನ್ ಚೆಸ್ ಟೂರ್ನಮೆಂಟ್‌ನ ಸಮಾರೋಪ ಸಮಾರಂಭ ನಡೆಯಿತು. ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಪ್ರೊ. ಶ್ರೀಕೃಷ್ಣ ಗಣರಾಜ ಭಟ್ ಚೆಸ್ ಆಟಗಾರ ಮಾನಸಿಕವಾಗಿಸದೃಢನಾಗಿರಬೇಕು. ಆತನ ಯೋಚನಾಶೀಲ ಮನೋಭಾವ ಕೂಡ ಇತರರಿಗಿಂತ…

ಕಳೆದುಹೋದ ಮಾಂಡೋವಿ ಮೋಟಾರ್ಸ್ ನ ಹಣ – ಪ್ರಾಮಾಣಿಕತೆ ಮೆರೆದ ಮಂಗಳೂರಿನ ಉದ್ಯಮಿ ಯಾಕೂಬ್

ಪುತ್ತೂರು: ಉಪ್ಪಿನಂಗಡಿಯ ಮಾಂಡೋವಿ ಮೋಟಾರ್ಸ್ ಶೋರೂಮ್‌ನಿಂದ ಎಸ್‌ಬಿಐ ಬ್ಯಾಂಕ್‌ಗೆ ಕಂಪನಿಯ ರೂ.3,82,414 ಹಣವನ್ನು ಜಮಾ ಮಾಡಲು ಕಾರಿನಲ್ಲಿ ಕೊಂಡೊಯ್ಯುತ್ತಿದ್ದ ವೇಳೆ ಆಕಸ್ಮಿಕವಾಗಿ ಕಳೆದುಹೋದ ಹಣವನ್ನು ಪತ್ತೆಹಚ್ಚಿ ಕಂಪನಿಗೆ ಮರಳಿಸುವ ಮೂಲಕ ಮಂಗಳೂರಿನ ಗ್ರಾನೈಟ್ ವರ್ಲ್ಡ್ ಅಡ್ಯಾರ್ ಇದರ ಮಾಲಕ ಯಾಕೂಬ್ ಅವರು ಪ್ರಾಮಾಣಿಕತೆ ಮೆರೆದಿದ್ದಾರೆ. ಮಾಂಡೋವಿ ಮೋಟಾರ‍್ಸ್ ಉಪ್ಪಿನಂಗಡಿ ಶಾಖೆಯ ಉದ್ಯೋಗಿಗಳಾದ ಪ್ರವೀಣ್ ಮತ್ತು ಚಂದ್ರಶೇಖರ್ ಅವರು ಆ.21ರಂದು ಕಂಪನಿಯ ರೂ.3,82,414 ಹಣವನ್ನು…

ದರ್ಬೆ ಪ್ರಕರಣ : ಗಾಯಾಳುಗಳನ್ನು ಭೇಟಿ ಮಾಡಿದ ಶಾಸಕ ಅಶೋಕ್ ಕುಮಾರ್ ರೈ

ಪುತ್ತೂರು: ದರ್ಬೆಯಲ್ಲಿ ನಡೆದ ಅಹಿತಕರ ಘಟನೆಗೆ ಸಂಬಂಧಿಸಿದಂತೆ ಆಸ್ಪತ್ರೆಯಲ್ಲಿ ದಾಖಲಾಗಿರುವ ಗಾಯಾಳುಗಳನ್ನು ಶಾಸಕ ಅಶೋಕ್ ಕುಮಾರ್ ರೈ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು. ಗಾಯಾಳು ಮುಬಾರಿಶ್ ಮೆಡ್ ಲ್ಯಾಂಡ್ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಶಾಸಕ ಅಶೋಕ್ ರೈ ಅವರು ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿ, ಘಟನೆಯ ಬಗ್ಗೆ ಮಾಹಿತಿ ಪಡೆದುಕೊಂಡರು. ಬಳಿಕ ಪುತ್ತೂರು ಆದರ್ಶ ಆಸ್ಪತ್ರೆಯಲ್ಲಿ ದಾಖಲಾಗಿರುವ ಸಂಜನಾ ಪೈ ಅವರನ್ನು ಭೇಟಿ ಮಾಡಿ ಮಾಹಿತಿ ಪಡೆದುಕೊಂಡರು. ಈ ಸಂದರ್ಭದಲ್ಲಿ…

ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ 12ನೇ ಬಾರಿ ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ಪ್ರಶಸ್ತಿ

ಕಾಣಿಯೂರು: ಶತಮಾನೋತ್ಸವ ಆಚರಿಸಿಕೊಂಡ ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಕಾಣಿಯೂರು 2025-26ನೇ ಸಾಲಿನ ಶೇ 100 ಸಾಲ ವಸೂಲಾತಿ ಸಾಧನೆಗಾಗಿ 12ನೇ ಬಾರಿ ಪ್ರತಿಷ್ಠಿತ ಎಸ್ ಸಿ ಡಿ ಸಿ ಸಿ ಬ್ಯಾಂಕ್ ಪ್ರಶಸ್ತಿ ನೀಡಿ ಗೌರವಿಸಿದೆ. ಆ.22ರಂದು ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮಂಗಳೂರಿನಲ್ಲಿ ಎಸ್ ಸಿ ಡಿ ಸಿ ಸಿ ಬ್ಯಾಂಕ್ ನ ಅಧ್ಯಕ್ಷ ಡಾ| ಎಂ. ಎನ್ ರಾಜೇಂದ್ರ ಕುಮಾರ್ ಅವರು ಸಂಘದ ಅಧ್ಯಕ್ಷ ಗಣೇಶ್ ಉದನಡ್ಕ, ಮುಖ್ಯ […]

ದರ್ಬೆಯ ಘಟನೆ : ಎಂ.ಎಲ್.ಸಿ ಕಿಶೋರ್, ಮಾಜಿ ಶಾಸಕ ಆಸ್ಪತ್ರೆಗೆ ಭೇಟಿ

ಪುತ್ತೂರು: ದರ್ಬೆ ಅಂಗಡಿಯೊಂದರಲ್ಲಿ ಲ್ಯಾಮಿನೇಷನ್ ವೇಳೆ ಜನನ ಪ್ರಮಾಣ ಪತ್ರ ಮೆಲ್ಟ್ ಅಗಿರುವ ವಿಚಾರದಲ್ಲಿ ಗ್ರಾಹಕರು ಹಾಗೂ ಸಂಸ್ಥೆಯ ಮ್ಹಾಲಕಿ ಮಧ್ಯೆ ನಡೆದ ಪರಸ್ಪರ ಹಲ್ಲೆಯಿಂದ ಗಾಯಗೊಂಡು ಆದರ್ಶ ಆಸ್ಪತ್ರೆಯಲ್ಲಿ ದಾಖಲಾಗಿರುವ ಸಂಸ್ಥೆಯ ಮ್ಹಾಲಕಿ ಅಂಜನಾ ಪೈ ಅವರನ್ನು ಆ.22ರಂದು ವಿಧಾನ ಪರಿಷತ್ ಸದಸ್ಯ ಕಿಶೋರ್ ಬೊಟ್ಯಾಡಿ ಹಾಗೂ ಮಾಜಿ ಶಾಸಕ ಸಂಜೀವ ಮಠಂದೂರು ಹಾಗೂ ಬಿಜೆಪಿ ಪಕ್ಷದ ಪ್ರಮುಖರು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು. ಘಟನೆಯ ಬಗ್ಗೆ ಮಾಹಿತಿ ಪಡೆದುಕೊಂಡರು. ನಂತರ…

ಪುಣಚ ಮಹಿಷಮರ್ದಿನಿ ದೇವಸ್ಥಾನದಲ್ಲಿ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ

ಪುಣಚ: ಪುಣಚ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಆ.22ರಂದು ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ನಡೆಯಿತು. ಬೆಳಿಗ್ಗೆ ಬ್ರಹ್ಮಶ್ರೀ ವರ್ಕಾಡಿ ಗಣೇಶ ತಂತ್ರಿವರ್ಯರ ನೇತೃತ್ವದಲ್ಲಿ ಪ್ರಾರ್ಥನೆಯೊಂದಿಗೆ ಮಹಾಗಣಪತಿ ಹೋಮ, ಪಂಚ ವಿಂಶತಿ ಕಲಶ ನಡೆಯಿತು. ವೇದಮೂರ್ತಿ ಶಿಬರ ಶ್ರೀವತ್ಸ ಕೆದಿಲಾಯರ ಪೌರೋಹಿತ್ಯದಲ್ಲಿ ಪ್ರಾರ್ಥನೆ, ಶ್ರೀ ಸತ್ಯನಾರಾಯಣ ಪೂಜೆ ನೆರವೇರಿತು. ಮಧ್ಯಾಹ್ನ ಮಹಾಪೂಜೆ ಪ್ರಸಾದ ವಿತರಣೆ ಅನ್ನಸಂತರ್ಪಣೆ ನಡೆಯಿತು.‌‌ ಸಾವಿರಾರು ಭಕ್ತರ ಪಾಲ್ಗೊಳ್ಳುವಿಕೆ: ಕಾರ್ಯಕ್ರಮದಲ್ಲಿ‌…

ಮಳೆ ರಜೆ ಸರಿದೂಗಿಸಲು ಸೆಪ್ಟೆಂಬರ್ ೨ನೇ ವಾರದಿಂದಹೆಚ್ಚುವರಿ ತರಗತಿ ನಡೆಸಲು ಡಿಡಿಪಿಐ ಆದೇಶ

ಮಂಗಳೂರು:ಜಿಲ್ಲೆಯಲ್ಲಿ ಭಾರೀ ಮಳೆಯಿಂದಾಗಿ ನಷ್ಟವಾದ ಶಾಲಾ ಬೋಧನಾ ಅವಧಿಯನ್ನು ಸರಿದೂಗಿಸಲು ಸೆಪ್ಟೆಂಬರ್‌ನಿಂದ ಹೆಚ್ಚುವರಿ ತರಗತಿ ನಡೆಸುವಂತೆ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರು ಆದೇಶ ಹೊರಡಿಸಿದ್ದಾರೆ.ಭಾರೀ ಮಳೆ ಹಿನ್ನೆಲೆಯಲ್ಲಿ ಮಂಗಳೂರು ಉತ್ತರ, ಮಂಗಳೂರು ದಕ್ಷಿಣ, ಬಂಟ್ವಾಳ ಮತ್ತು ಮೂಡುಬಿದಿರೆ ತಾಲೂಕುಗಳಲ್ಲಿ 8 ಪೂರ್ಣ ದಿನ ಹಾಗೂ 1 ಅರ್ಧ ದಿನ ರಜೆ ನೀಡಲಾಗಿತ್ತು.ಅದೇ ರೀತಿ ಬೆಳ್ತಂಗಡಿ, ಪುತ್ತೂರು ಹಾಗೂ ಸುಳ್ಯ ತಾಲೂಕುಗಳಿಗೆ 9 ಪೂರ್ಣ ದಿನ ರಜೆ ನೀಡಲಾಗಿತ್ತು.ಇದನ್ನು…

ದರ್ಬೆ ಡಿಜಿಟಲ್‌ ಸೇವಾ ಕೇಂದ್ರದಲ್ಲಿ ಸಿಬ್ಬಂದಿ-ಗ್ರಾಹಕಿಯ ನಡುವೆ ಮಾತಿನ ಚಕಮಕಿ

ಪರಸ್ಪರ ಹಲ್ಲೆ ಆರೋಪ | ಗುಂಪು ಸೇರಿ ಉದ್ವಿಗ್ನತೆ | ಪೊಲೀಸರಿಂದ ಲಾಠಿಚಾರ್ಜ್‌ | ಇತ್ತಂಡದಿಂದ ಪ್ರಕರಣ ದಾಖಲುಪುತ್ತೂರು: ದರ್ಬೆ ಡಿಜಿಟಲ್‌ ಸೇವಾ ಕೇಂದ್ರವೊಂದರಲ್ಲಿ ಕೇಂದ್ರದ ಸಿಬ್ಬಂದಿ ಹಾಗೂ ಗ್ರಾಹಕಿ ಓರ್ವರ ನಡುವೆ ಮಾತಿನ ಚಕಮಕಿ ನಡೆದು, ಎರಡೂ ಕಡೆಯವರ ಬೆಂಬಲಿಗರು ಗುಂಪುಗೂಡಿದ್ದು, ಬಳಿಕ ಪೊಲೀಸರಿಂದ ಲಾಠಿಚಾರ್ಜ್‌ ನಡೆದ ಘಟನೆ ಆ.21ರಂದು ಶುಕ್ರವಾರ ಸಂಜೆ ನಡೆದಿದೆ. ಬಳಿಕ ಇತ್ತಂಡದಿಂದ ಪುತ್ತೂರು ನಗರ ಠಾಣೆಯಲ್ಲಿ ದೂರು ದಾಖಲಾಗಿರುವ ಬಗ್ಗೆ ತಿಳಿದುಬಂದಿದೆ. ದರ್ಬೆ ಡಿಜಿಟಲ್‌ ಸೇವಾ…

ಸಚಿವ ಬಿ. ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಪುತ್ತೂರು ಬಿಜೆಪಿಯಿಂದ ಧರಣಿ

ಪುತ್ತೂರು: ವಾಲ್ಮೀಕಿ ನಿಗಮದಲ್ಲಿ ನಡೆದಿದೆ ಎನ್ನಲಾದ 187 ಕೋಟಿ ರೂ. ಹಗರಣಕ್ಕೆ ಸಂಬಂಧಿಸಿದಂತೆ ಸಚಿವ ಬಿ. ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ, ಭ್ರಷ್ಟ ಹಾಗೂ ಬಡವರ ವಿರೋಧಿ ಕಾಂಗ್ರೆಸ್ ಸರಕಾರದ ವೈಫಲ್ಯಗಳ ವಿರುದ್ಧ ಆರೋಪಿಸಿ, ಬಿಜೆಪಿ ಪುತ್ತೂರು ವಿಧಾನಸಭಾ ಕ್ಷೇತ್ರದ ವತಿಯಿಂದ ಆ.21ರಂದು ಪುತ್ತೂರು ಅಮರ್ ಜವಾನ್ ಜ್ಯೋತಿ ಸ್ಮಾರಕದ ಬಳಿ ಧರಣಿ ನಡೆಯಿತು. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯತೀಶ್ ಆರುವಾರ ಮಾತನಾಡಿ, ಮೂರು ವರ್ಷದ ಹಿಂದೆ ರಾಜ್ಯದಲ್ಲಿ ಭ್ರಷ್ಟ ಕಾಂಗ್ರೆಸ್ ಸರಕಾರ…

ವೀರಮಂಗಲ ವೈಷ್ಣವೀ ಮಹಿಳಾ ಮಂಡಲದ ಬೆಳ್ಳಿಹಬ್ಬ-14ನೇ ವರ್ಷದ ಶ್ರೀ ವರಮಹಾಲಕ್ಷ್ಮೀ ಪೂಜೆ

ಪುತ್ತೂರು: ವೀರಮಂಗಲದ ಶ್ರೀ ವೈಷ್ಣವೀ ಮಹಿಳಾ ಮಂಡಲ ಇದರ ಬೆಳ್ಳಿ ಹಬ್ಬದ ಪ್ರಯುಕ್ತ ಶ್ರೀ ಮಹಾವಿಷ್ಣು ಸೇವಾ ಪ್ರತಿಷ್ಠಾನ ಆನಾಜೆ ಇದರ ಸಹಯೋಗದಲ್ಲಿ 14ನೇ ವರ್ಷದ ಶ್ರೀ ವರಮಹಾಲಕ್ಷೀ ಪೂಜೆಯು ಆ.21ರಂದು ವೀರಮಂಗಲ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ನೆರವೇರಿತು. ದೇವಸ್ಥಾನದ ಅರ್ಚಕ ರಾಧಾಕೃಷ್ಣ ಶಗ್ರಿತ್ತಾಯ ಅವರ ನೇತೃತ್ವದಲ್ಲಿ ನಡೆದ ಪೂಜಾ ಕಾರ್ಯಕ್ರಮದಲ್ಕಿ ಬೆಳಿಗ್ಗೆ ಶ್ರೀವಿಷ್ಣುಸಹಸ್ರ ನಾಮಾರ್ಚನೆ, ಶ್ರೀವರಮಹಾಲಕ್ಷ್ಮೀ ಪೂಜೆ ಆರಂಭ, ಭಗವದ್ಧೀತಾ ಪಾರಾಯಣ ಮತ್ತು ಭಜನೆ, ಮಧ್ಯಾಹ್ನ…

ಆ.29 : ಶ್ರೀ ಸರಸ್ವತಿ ಕ್ರೆಡಿಟ್‌ ಸೌಹಾರ್ದ ಸಹಕಾರಿ ಸಂಘದ ನೂತನ 23ನೇ ಶಾಖೆ ಸಿದ್ದಕಟ್ಟೆಯಲ್ಲಿ ಶುಭಾರಂಭ

ಪುತ್ತೂರು : ಪುತ್ತೂರಿನಲ್ಲಿ ಕೇಂದ್ರ ಕಛೇರಿಯನ್ನು ಹೊಂದಿ ರಾಜ್ಯಾದ್ಯಂತ 22 ಶಾಖೆಗಳೊಂದಿಗೆ ಯಶಸ್ವಿಯಾಗಿ ಕಾರ್ಯಾಚರಿಸುತ್ತಿರುವ ಶ್ರೀ ಸರಸ್ವತಿ ಕ್ರೆಡಿಟ್‌ ಸೌಹಾರ್ದ ಸಹಕಾರಿ ಸಂಘದ 23ನೇ ಶಾಖೆಯು ಆ.29ರಂದು ನೆಲ ಮಹಡಿ, ಕಣಿಯೂರು ಕಾಂಪ್ಲೆಕ್ಸ್‌, ಸಿದ್ದಕಟ್ಟೆಯಲ್ಲಿ ಶುಭಾರಂಭಗೊಳ್ಳಲಿದೆ.ನೂತನ ಶಾಖೆಯನ್ನು ಬಂಟ್ವಾಳ ವಿಧಾನಸಭಾ ಕ್ಷೇತ್ರದ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರ ಸಭಾಧ್ಯಕ್ಷತೆಯಲ್ಲಿ ಮಂಗಳೂರು ಲೋಕಸಭಾ ಕ್ಷೇತ್ರದ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು…

ಮುಳಿಯ ಜ್ಯುವೆಲ್ಸ್‌ನಲ್ಲಿ ವರಮಹಾಲಕ್ಷ್ಮೀ ಹಬ್ಬ ಆಚರಣೆ

ಪುತ್ತೂರು: ಮುಳಿಯ ಜ್ಯುವೆಲ್ಸ್‌ನಲ್ಲಿ ವರಮಹಾಲಕ್ಷ್ಮೀ ಹಬ್ಬವನ್ನು ಆಚರಿಸಲಾಯಿತು. ಹಬ್ಬದ ಅಂಗವಾಗಿ ಸಂಸ್ಥೆಯ ಆವರಣದಲ್ಲಿ ವಿಶೇಷ ಪೂಜಾ ಆಯೋಜಿಸಲಾಗಿತ್ತು. ವರಮಹಾಲಕ್ಷ್ಮೀ ದೇವಿಗೆ ವಿಶೇಷ ಪೂಜೆ ಹಾಗೂ ಪ್ರಾರ್ಥನೆ ಸಲ್ಲಿಸಿ, ಸಂಸ್ಥೆಯ ಸಮೃದ್ಧಿ, ಅಭಿವೃದ್ಧಿ ಮತ್ತು ಗ್ರಾಹಕರ ಸುಖ-ಸಂತೋಷಕ್ಕಾಗಿ ಪ್ರಾರ್ಥಿಸಲಾಯಿತು. ಈ ಸಂದರ್ಭದಲ್ಲಿ ಸಂಸ್ಥೆಯ ಆಡಳಿತ ನಿರ್ದೇಶಕಿ ಅಶ್ವಿನಿ ಕೃಷ್ಣ ನಾರಾಯಣ ಮುಳಿಯ ಅವರು ಮತ್ತು ಸಿಬ್ಬಂದಿವರ್ಗ ಉಪಸ್ಥಿತರಿದ್ದರು , ಸಾಂಪ್ರದಾಯಿಕವಾಗಿ ಹಬ್ಬವನ್ನು ಆಚರಿಸಿದರು.

ಪುತ್ತೂರಿನಲ್ಲಿ “ಕಲರವ” ಮಕ್ಕಳ ಅಭಿವೃದ್ಧಿ ಕೇಂದ್ರ ಉದ್ಘಾಟನೆ — ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ಹೊಸ ಆಶಾಕಿರಣ

ಪುತ್ತೂರು: ಮಕ್ಕಳ ನರವಿಕಸನ ಮತ್ತು ವರ್ತನಾ ಸಮಸ್ಯೆಗಳಿಗೆ ಚಿಕಿತ್ಸೆ ನೀಡುವ “ಕಲರವ ಮಕ್ಕಳ ಅಭಿವೃದ್ಧಿ ಕೇಂದ್ರ”ದ ನೂತನ ಶಾಖೆಯನ್ನು ಪುತ್ತೂರಿನಲ್ಲಿ ಆ.20ರಂದು ಉದ್ಘಾಟಿಸಲಾಯಿತು. ಮಂಗಳೂರು, ಉಡುಪಿ ಮತ್ತು ಬೆಳ್ತಂಗಡಿಯಲ್ಲಿ ಈಗಾಗಲೇ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿರುವ ಕಲರವ, ಇದೀಗ ಪುತ್ತೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳ ಕುಟುಂಬಗಳಿಗೂ ತನ್ನ ಬಹುಶಿಸ್ತೀಯ ಸೇವೆಗಳನ್ನು ವಿಸ್ತರಿಸಿದೆ. ಪುತ್ತೂರಿನ ಹಿರಿಯ ಮಕ್ಕಳ ತಜ್ಞ ವೈದ್ಯರಾದ ಡಾ. ಶ್ರೀಕಾಂತ್ ರಾವ್ ಅವರು ಕೇಂದ್ರವನ್ನು…

ಪುತ್ತೂರು ಬಿಲ್ಲವ ಸಂಘದಲ್ಲಿ ವರಮಹಾಲಕ್ಷ್ಮೀ ವೃತ ಪೂಜೆ

ಪುತ್ತೂರು: ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘ ಪುತ್ತೂರು, ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಮಂದಿರ ಪುತ್ತೂರು ಮತ್ತು ಬಿಲ್ಲವ ಮಹಿಳಾ ವೇದಿಕೆ ಪುತ್ತೂರು ಇದರ ಆಶ್ರಯದಲ್ಲಿ ಆ.21 ರಂದು ಪುತ್ತೂರು ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಸಭಾಂಗಣದಲ್ಲಿ ಶ್ರೀ ವರಮಹಾಲಕ್ಷ್ಮೀ ವೃತ ಪೂಜೆಯು ಜರಗಿತು. ಅರ್ಚಕರಾದ ನವೀನ್ ಶಾಂತಿ ಅಡ್ಯಾಲು ಅಜಿಲಮೊಗರು ಇವರ ಪೌರೋಹಿತ್ಯದಲ್ಲಿ ಧಾರ್ಮಿಕ ವಿಧಿವಿಧಾನ ನಡೆಯಿತು. ಈ ಸಂದರ್ಭದಲ್ಲಿ ಮಹಿಳಾ ವೇದಿಕೆಯ ಸದಸ್ಯರಿಂದ ಭಜನೆ, ಮಹಾಪೂಜೆ ಬಳಿಕ…

ಝೀವಾ ಟ್ರಾವೆಲ್ಸ್ & ಟೂರ್ಸ್ ಶುಭಾರಂಭ : ಬೈತುಲ್ ಬಿಷಾರ ಅಪ್ಲೆಕೇಶನ್‌ಗೆ ಚಾಲನೆ

ಪುತ್ತೂರು: ಬೊಳ್ವಾರ್ ಟ್ರೆಂಡ್ಸ್ ಮುಂಭಾಗದಲ್ಲಿ ಝೀವಾ ಟ್ರಾವೆಲ್ಸ್ & ಟೂರ್ಸ್ ಸಂಸ್ಥೆ ಆ.20ರಂದು ಶುಭಾರಂಭಗೊಂಡಿತು. ಸಾಲ್ಮರ ಸಯ್ಯದ್ ಮಲೆ ಜುಮಾ ಮಸೀದಿಯ ಖತೀಬ್ ಅಲ್ ಹಾಜಿ ಉಮ್ಮರ್ ದಾರಿಮಿ ಸಂಸ್ಥೆಯನ್ನು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಅಲ್ ಹಾಜಿ ಸಯ್ಯದ್ ಎಸ್.ಎಂ. ಮಹಮ್ಮದ್ ತಂಙಲ್, ಸಾಲ್ಮರ ಅವರು ದುವಾ ಹಾಗೂ ಆಶೀರ್ವಚನ ನೆರವೇರಿಸಿ, ಸಂಸ್ಥೆಯ ಹೊಸ ಪ್ರಯತ್ನಕ್ಕೆ ಶುಭ ಹಾರೈಸಿದರು. ಸಯ್ಯದ್ ಮಾಲೆ ಜುಮಾ ಮಸ್ಜಿದ್ ಅಧ್ಯಕ್ಷ ಡಾ. ಶಂಸುದ್ದೀನ್ ಮಾತನಾಡಿ, ಸಂಸ್ಥೆಯು ಮುಂದಿನ ದಿನಗಳಲ್ಲಿ…