RSS Amplifier

News source

Public TV – Latest Kannada News, Public TV Kannada Live, Public TV News

Public Tv Covers The Latest Bengaluru News, Mysuru News, Hubballi News, Dharwad News, Belagavi News & National News in Kannada. We Provide Latest Kannada News

publictv.inSource feed ↗10 articles

Overdue Last read · last published · next check
Last read 20 hours ago, longer than this feed's 1 hour schedule.

Written by

Latest articles

ವಂದೇ ಮಾತರಂ, ಭಾರತ್ ಮಾತಾಕಿ ಜೈ ಎಂದ ವಿದ್ಯಾರ್ಥಿಗೆ ಬೆದರಿಕೆ – ಪ್ರಾಂಶುಪಾಲರ ವಿರುದ್ಧ FIR

ಬೀದರ್: ವಂದೇ ಮಾತರಂ ಹಾಗೂ ಭಾರತ್ ಮಾತಾಕಿ ಜೈ ಎಂದ ವಿದ್ಯಾರ್ಥಿಗೆ ಬೆದರಿಕೆ ಹಾಕಿದ್ದಕ್ಕೆ ಪ್ರಾಂಶುಪಾಲರ ವಿರುದ್ಧ FIR ದಾಖಲಾಗಿದೆ. ಬೀದರ್‌ (Bidar) ಜಿಲ್ಲೆಯ ಚಿಟಗುಪ್ಪ ಪಟ್ಟಣದಲ್ಲಿರುವ ಕಾಲೇಜೊಂದರಲ್ಲಿ ಈ ಘಟನೆ ನಡೆದಿದೆ. ಆ.15ರಂದು ನಡೆದ 80ನೇ ಸ್ವಾತಂತ್ರ್ಯ ದಿನಾಚರಣೆಯಂದು ಘಟನೆಯಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಕಾಲೇಜಿನ ಪ್ರಾಂಶುಪಾಲ ಅಬ್ದುಲ್ ಹಕೀಮ್ ಎಂಬುವವರ ವಿರುದ್ಧ ವಿದ್ಯಾರ್ಥಿಯ ತಂದೆ ಹಿರೋಬಾ ಗೌಳಿ ದೂರು ನೀಡಿದ್ದಾರೆ. ಈ ಕುರಿತು ಚಿಟಗುಪ್ಪ ಪೊಲೀಸ್ ಠಾಣೆಯಲ್ಲಿ…

ದೆಹಲಿಯಲ್ಲಿ ವಿದ್ಯಾರ್ಥಿಗಳ ಮೇಲೆ ಲಾಠಿಚಾರ್ಜ್‌ – ತನಿಖೆಗೆ ಸುಪ್ರೀಂನಿಂದ ಉನ್ನತ ಮಟ್ಟದ ಸಮಿತಿ ರಚನೆ

ನವದೆಹಲಿ: ನೀಟ್ (NEET) ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿಸಿ ದೆಹಲಿಯ ಜಂತರ್ ಮಂತರ್ (Janatar Mantar) ಹಾಗೂ ಇತರ ರಾಜ್ಯಗಳಲ್ಲಿ ಪ್ರತಿಭಟನೆ ನಡೆಸಿದವರ ಮೇಲೆ ಪೊಲೀಸರು ಮತ್ತು ಅರೆಸೇನಾ ಪಡೆಗಳು ಅತಿಯಾದ ಬಲಪ್ರಯೋಗ ನಡೆಸಿವೆ ಎಂಬ ಆರೋಪಗಳ ತನಿಖೆಗಾಗಿ ಸುಪ್ರೀಂ ಕೋರ್ಟ್ (Supreme Court) ಗುರುವಾರ ಐವರು ಸದಸ್ಯರ ಉನ್ನತ ಮಟ್ಟದ ತಜ್ಞರ ಸಮಿತಿಯನ್ನು (HPEC) ರಚಿಸಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿಗಳಾದ ಜೋಯಮಲ್ಯ ಬಾಗ್ಚಿ ಮತ್ತು ವಿ. ಮೋಹನಾ ಅವರನ್ನೊಳಗೊಂಡ ಪೀಠವು…

ಅಡಿಕೆ ತೋಟಕ್ಕೆ ನುಗ್ಗಿದ ಬಸ್‌ – ಓರ್ವ ಸಾವು, 15ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ

– ಬೈಕ್‌ಗೆ ಡಿಕ್ಕಿ ತಪ್ಪಿಸಲು ಹೋಗಿ ಅವಘಡ – ಸವಾರ ಸಾವು ಶಿವಮೊಗ್ಗ: ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್‌ ರಸ್ತೆ ಬದಿಯ ಅಡಿಕೆ ತೋಟಕ್ಕೆ ನುಗ್ಗಿದ (Bus Accident) ಘಟನೆ ಭದ್ರಾವತಿ (Bhadravati) ತಾಲೂಕಿನ ಕೂಡ್ಲಿಗೆರೆ ಸಮೀಪ ನಡೆದಿದೆ. ಈ ಅಪಘಾತದಲ್ಲಿ 15ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ. ಬಸ್‌ ಭದ್ರಾವತಿಯಿಂದ ಚನ್ನಗಿರಿ ಕಡೆಗೆ ಪ್ರಯಾಣಿಕರನ್ನು ಕರೆದೊಯ್ಯುತ್ತಿತ್ತು. ಈ ವೇಳೆ ಎದುರಿನಿಂದ ಬೈಕ್‌ ಅಡ್ಡ ಬಂದಿದೆ. ಬಸ್‌ ಚಾಲಕ ಬೈಕ್‌ ಸವಾರನನ್ನು ಬಚಾವ್‌ ಮಾಡಲು…

ಲಡಾಖ್‌ನಲ್ಲಿ ಸೇನೆಯ ಜೊತೆ ವಾಗ್ವಾದ – ವಿಡಿಯೋ ವೈರಲ್‌ ಬೆನ್ನಲ್ಲೇ ಜನರಲ್ಲಿ ಕ್ಷಮೆ ಕೇಳಿದ Gen Z ಯುವತಿ

– ನಾನು ಈಗ ಮಾನಸಿಕ ಖಿನ್ನತೆಗೆ ಒಳಗಾಗಿದ್ದೇನೆ – ಅಚಾನಕ್ಕಾಗಿ ಬಾಯಿಂದ ಜೆನ್-ಝಿ ಪದ ಬಳಸಿದ್ದೆ ನವದೆಹಲಿ: ಲಡಾಖ್‌ನಲ್ಲಿ ರಸ್ತೆ ತಡೆ ವೇಳೆ ಭದ್ರತಾ ಸಿಬ್ಬಂದಿ (Indian Army) ವಿರುದ್ಧ ಆಕ್ರೋಶ ಹೊರಹಾಕಿ, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದ 25 ವರ್ಷದ ಯುವತಿ ಕೊನೆಗೂ ಭಾರತೀಯ ಸೇನೆ ಹಾಗೂ ಪೊಲೀಸರ ಬಳಿ ಕ್ಷಮೆಯಾಚಿಸಿದ್ದಾಳೆ. ಖಾಸಗಿ ವಾಹಿನಿಗೆ ಜೊತೆ ಮಾತನಾಡಿದ ಯುವತಿ, ತಾನು ಸಶಸ್ತ್ರ ಪಡೆಗಳನ್ನು ಅವಮಾನಿಸುವ ಅಥವಾ ಈ ಘಟನೆಯ ಮೂಲಕ ಪ್ರಚಾರ ಪಡೆಯುವ ಯಾವುದೇ ಉದ್ದೇಶವಿರಲಿಲ್ಲ. […]

ಚಿನ್ನದ ಅಂಬಾರಿಗೆ ಹೊಸ ಸಾರಥಿ ಯಾರು? ಧನಂಜಯ–ಪ್ರಶಾಂತನ ನಡುವೆ ಪೈಪೋಟಿ, ರೇಸ್‌ನಲ್ಲಿ ಮಹೇಂದ್ರ!

ಮಡಿಕೇರಿ: ಮೈಸೂರು ದಸರಾ (Mysuru Dasara) ಜಂಬೂಸವಾರಿಯ ಚಿನ್ನದ ಅಂಬಾರಿಯನ್ನು ಈ ಬಾರಿ ಯಾವ ಆನೆ ಹೊರುತ್ತದೆ ಎಂಬ ಕುತೂಹಲಕ್ಕೆ ತೆರೆ ಬೀಳುವ ಸಮಯ ಸಮೀಪಿಸುತ್ತಿದೆ. ಕಳೆದ 6 ವರ್ಷಗಳಿಂದ ಅಂಬಾರಿ ಹೊತ್ತು ಗಜಪಡೆಯನ್ನು ಮುನ್ನಡೆಸಿದ್ದ ಕ್ಯಾಪ್ಟನ್ ಅಭಿಮನ್ಯು ಈ ಬಾರಿ ದಸರಾದಲ್ಲಿ ಪಾಲ್ಗೊಳ್ಳುತ್ತಿಲ್ಲ. ಹೀಗಾಗಿ ಅಭಿಮನ್ಯುವಿನ (Abhimanyu Elephant) ಸ್ಥಾನವನ್ನು ತುಂಬುವ ಅದೃಷ್ಟ ಯಾರಿಗೆ ಎಂಬ ಕುತೂಹಲ ಮೂಡಿದೆ. ದುಬಾರೆ ಶಿಬಿರದ ಧನಂಜಯ ಅಥವಾ ಪ್ರಶಾಂತ ಅಥವಾ ನಾಗರಹೊಳೆ ಶಿಬಿರದ ಮಹೇಂದ್ರ…

‘ಜೈ ಜೈ ಮೋದಿ, ಹರ ಹರ ಮೋದಿ’ – ದಿಲ್ಲಿಯಲ್ಲಿ ‘ಮೋದಿ ಚಾಲೀಸಾ’; ಸೋಷಿಯಲ್‌ ಮೀಡಿಯಾದಲ್ಲಿ ಭಾರೀ ಚರ್ಚೆ

– ಶ್ರೀ ರಾಮನ ಅವತಾರದಲ್ಲಿರುವ ಮೋದಿಯ ಪೋಸ್ಟರ್‌ ವೈರಲ್‌ ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರನ್ನು ಹಾಡಿ ಹೊಗಳುವ ಘೋಷಣೆಗಳೊಂದಿಗೆ ಧಾರ್ಮಿಕ ಶೈಲಿಯ ಕಾರ್ಯಕ್ರಮವೊಂದು ಗುರುವಾರ ದೆಹಲಿಯ ಪ್ರೆಸ್‌ಕ್ಲಬ್‌ನಲ್ಲಿ (Delhi Press Club) ನಡೆದಿದ್ದು, ಕಾರ್ಯಕ್ರಮದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ (Social Media) ವೈರಲ್ ಆಗಿವೆ. “Shri Narendra Modi Chalisa”#Modi Chalisa Unveiled at Delhi Press Club as Devotees Offer Divine Praise to PM…

ಪ್ರೀತಿಸಿ ಮದುವೆಯಾಗಿದ್ದಕ್ಕೆ ಪತಿ ಕುಟುಂಬಸ್ಥರಿಂದ ಕಿರುಕುಳ – ಮಗುವನ್ನು ಕೊಂದು ನೇಣಿಗೆ ಶರಣಾದ ಮಹಿಳೆ

– ಇಬ್ಬರ ಕಣ್ಗಳನ್ನು ದಾನ ಮಾಡಿದ ಕುಟುಂಬಸ್ಥರು ಹಾಸನ: ಪ್ರೀತಿಸಿ ಮದುವೆಯಾಗಿದ್ದಕ್ಕೆ (Love Marriage) ಪತಿಯ (Husband) ಕುಟುಂಬಸ್ಥರು ಮನೆಯಿಂದ ಹೊರಹಾಕಿ, ನಿರಂತರ ಕಿರುಕುಳ ನೀಡಿದ್ದಕ್ಕೆ ಬೇಸತ್ತು ಮಹಿಳೆಯೊಬ್ಬಳು ಮಗುವನ್ನು ಕೊಂದು ನೇಣಿಗೆ ಶರಣಾದ ಹೃದಯ ವಿದ್ರಾವಕ ಘಟನೆ ಆಲೂರಿನ (Alur) ಹೌಸಿಂಗ್ ಬೋರ್ಡ್‌ನಲ್ಲಿ ನಡೆದಿದೆ. ಮೃತ ಮಗಳು ಹಾಗೂ ಆಕೆಯ ಮಗುವಿನ ಕಣ್ಗಳನ್ನು ಕುಟುಂಬಸ್ಥರು ದಾನ ಮಾಡಿ ಸಾರ್ಥಕತೆ ಮೆರೆದಿದ್ದಾರೆ. ಅನುಪಮಾ (27) ಹಾಗೂ ಆರ್ಯನ್ (2) ದುರಂತ ಅಂತ್ಯ ಕಂಡವರು.…

ಕೇಂದ್ರದ ಕಸ್ತೂರಿ ರಂಗನ್ ವರದಿಯ 7ನೇ ಕರಡು ಅಧಿಸೂಚನೆ ತಿರಸ್ಕರಿಸಲು ರಾಜ್ಯ ಸರ್ಕಾರ ನಿರ್ಧಾರ

ಬೆಂಗಳೂರು: ಪಶ್ಚಿಮ ಘಟ್ಟಗಳ ರಕ್ಷಣೆಗೆ ಕೇಂದ್ರ ಸರ್ಕಾರದ ಕಸ್ತೂರಿ ರಂಗನ್ ವರದಿಯ (Kasturi Rangan Report) ಏಳನೇ ಕರಡು ಅಧಿಸೂಚನೆ ತಿರಸ್ಕರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ವಿಧಾನಸಭೆಯಲ್ಲಿ ಇಂದು ಕೇಂದ್ರದ ಏಳನೇ ಕರಡು ಅಧಿಸೂಚನೆ ವಿರೋಧಿಸಿ ನಡೆದ ಚರ್ಚೆಗೆ ಉತ್ತರ ಕೊಡುವಾಗ ಅರಣ್ಯ ಸಚಿವ ರಾಮಲಿಂಗಾರೆಡ್ಡಿ (Ramalinga Reddy), ಕೇಂದ್ರದ ಅಧಿಸೂಚನೆಗೆ ಆಕ್ಷೇಪಣೆ ಸಲ್ಲಿಸಲು 60 ದಿನಗಳ ಕಾಲಾವಕಾಶ ಇದೆ. ರಾಜ್ಯ ಸರ್ಕಾರ ತನ್ನ ಆಕ್ಷೇಪಣೆಗಳನ್ನು ಸಲ್ಲಿಸುವ ಮೂಲಕ ಕೇಂದ್ರದ…

ಬೆಂಗಳೂರಿನಲ್ಲಿ ಎರಡನೇ ವಿಮಾನ ನಿಲ್ದಾಣಕ್ಕೆ 3 ಸ್ಥಳ ಶಾರ್ಟ್‌ಲಿಸ್ಟ್‌ – ತುಮಕೂರಿನಲ್ಲಿ ಪ್ರಸ್ತಾಪ ಇಲ್ಲ

ಬೆಂಗಳೂರು: ನಗರದಲ್ಲಿ ಎರಡನೇ ವಿಮಾನ ನಿಲ್ದಾಣಕ್ಕೆ (Bengaluru Second Airport) ಮೂರು ಸ್ಥಳಗಳನ್ನು ಶಾರ್ಟ್‌ಲಿಸ್ಟ್‌ ಮಾಡಲಾಗಿದ್ದು, ಅದರಲ್ಲಿ ತುಮಕೂರು (Tumakuru) ಜಿಲ್ಲೆಯಲ್ಲಿ ಮಾಡುವ ಪ್ರಸ್ತಾಪ ಇಲ್ಲ ಅಂತಾ ಸರ್ಕಾರ ಸ್ಪಷ್ಟಪಡಿಸಿದೆ. ಅಧಿವೇಶನದಲ್ಲಿ ತುಮಕೂರು ಎಂಎಲ್‌ಎ ಜ್ಯೋತಿ ಗಣೇಶ್ ಕೇಳಿರುವ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಸಚಿವ ಎಂಬಿ ಪಾಟೀಲ್ (MB Patil) ಅವರು ಉತ್ತರಿಸಿದರು. ಎರಡನೇ ವಿಮಾನ ನಿಲ್ದಾಣಕ್ಕೆ ಸೋಮನಹಳ್ಳಿ-ಕನಕಪುರ ರಸ್ತೆ ರಾಮನಗರ, ಚೂಡಹಳ್ಳಿ- ಕನಕಪುರ…

ಕಟ್ ಆಗಿ ಹೊಳೆಗೆ ಬಿದ್ದಿದ್ದ ವಿದ್ಯುತ್ ತಂತಿಯನ್ನ ಈಜಿ ಮರು ಜೋಡಿಸಿದ ಲೈನ್‌ಮನ್

ಮಂಗಳೂರು: ಹೊಳೆಗೆ ಕಡಿದು ಬಿದ್ದ ವಿದ್ಯುತ್ ತಂತಿಯನ್ನು ಲೈನ್‌ಮನ್ ಈಜಿ ಮರು ಜೋಡಿಸಿದ ಪ್ರಸಂಗ ಬೆಟ್ಟಂಪಾಡಿಯ ಧೂಮಡ್ಕ ಎಂಬಲ್ಲಿ ನಡೆದಿದೆ. ಧೂಮಡ್ಕದಲ್ಲಿ ಹಾದುಹೋಗುವ ಹೊಳೆಗೆ ವಿದ್ಯುತ್ ತಂತಿ ಬಿದ್ದಿತ್ತು. ಬೆಟ್ಟಂಪಾಡಿ ಮೆಸ್ಕಾಂ ಸಿಬ್ಬಂದಿ ನವಾಜ್ ಎಂಬ ಲೈನ್‌ಮನ್ ಅದನ್ನು ಮರುಜೋಡಿಸಿದ್ದಾರೆ. ಲೈನ್‌ಮನ್ ಉಕ್ಕಿ ಹರಿಯುತ್ತಿದ್ದ ನದಿಯಲ್ಲಿ ಸಾಹಸಮಯ ಕರ್ತವ್ಯ ಪ್ರದರ್ಶಿಸಿದ್ದಾರೆ. ಈ ದೃಶ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.