ಚಿಕ್ಕಮಗಳೂರು: ಜಿಲ್ಲೆಯ ಕೊಪ್ಪ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗೋಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಜುಲೈ 6, 2026ರಂದು ಕೊಪ್ಪ ಪೊಲೀಸ್ ಠಾಣೆಯ ಪಿಎಸ್ಐ ಮಧು ಅವರು ಗಡಿಕಲ್ ಮುಖ್ಯ ರಸ್ತೆಯ ಬಳಿ ರೌಂಡ್ಸ್ ಕರ್ತವ್ಯದಲ್ಲಿದ್ದರು. ಬೆಳಗಿನ ಜಾವ ಸುಮಾರು 3 ಗಂಟೆಗೆ ಗಡಿಕಲ್ ಚೆಕ್‌ಪೋಸ್ಟ್ ಬಳಿ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ತೀರ್ಥಹಳ್ಳಿ ಕಡೆಯಿಂದ ಬಂದ ಇನ್ನೋವಾ ಕಾರನ್ನು ನಿಲ್ಲಿಸಲು ಸೂಚಿಸಲಾಗಿತ್ತು. ಆದರೆ ಕಾರಿನ ಚಾಲಕ ಕಾರನ್ನು…
ಎನ್.ಆರ್. ಪುರ: (ನ್ಯೂಸ್ ಮಲ್ನಾಡ್ ವರದಿ) ದೇವಸ್ಥಾನದ ಹೆಸರಿನಲ್ಲಿ ಮಹಿಳೆಯರನ್ನು ಕರೆಸಿ ಹಣ ವಸೂಲಿ ಮಾಡಲಾಗುತ್ತಿದೆ ಎಂದು ಆರೋಪಿಸಿ ಪ್ರಶ್ನಿಸಿದ ವ್ಯಕ್ತಿಗೆ ಅವಾಚ್ಯವಾಗಿ ನಿಂದಿಸಿ ಕೊಲೆ ಬೆದರಿಕೆ ಹಾಕಿರುವ ಕುರಿತು ನರಸಿಂಹರಾಜಪುರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಸೀತೂರು ಗ್ರಾಮದ ಮೇಕನಹಡ್ಲುವಿನ ಸತೀಶ್ ಪಾತ್ರಿ ಎಂಬಾತ ಕಳೆದ ಕೆಲವು ವರ್ಷಗಳಿಂದ ದೇವಸ್ಥಾನಕ್ಕೆ ಮಹಿಳೆಯರನ್ನು ಕರೆಸಿ ದೆವ್ವ ಬಿಡಿಸುವುದು, ಪದೇ ಪದೇ ದೇವಸ್ಥಾನಕ್ಕೆ ಬರುವಂತೆ ಒತ್ತಾಯಿಸುವುದು ಹಾಗೂ…
ಚಿಕ್ಕಮಗಳೂರು :ತಾಲೂಕಿನ ಇಬ್ಬರು ಸರ್ವೇಯರ್‌ಗಳು ₹2 ಲಕ್ಷ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಚಿಕ್ಕಮಗಳೂರು ತಾಲೂಕಿನ ಸರ್ವೇಯರ್‌ಗಳಾದ ದೊರೆರಾಜ್ ಮತ್ತು ರಂಗನಾಥ್ ಲೋಕಾಯುಕ್ತ ಬಲೆಗೆ ಸಿಕ್ಕಿಬಿದ್ದ ಆರೋಪಿಗಳು. ಚಿಕ್ಕಮಗಳೂರು ನಗರದ ಹೊರವಲಯದ ಇಂದಾವರ ಗ್ರಾಮದ ಧರಣೇಶ್ ಎಂಬುವವರು ತಮ್ಮ ಕೃಷಿ ಜಮೀನಿನ ಸರ್ವೇ ಮಾಡಿಸಿ ಸ್ಕೆಚ್ ತಯಾರಿಸುವ ಸಂಬಂಧ ಸರ್ವೇಯರ್‌ಗಳನ್ನು ಸಂಪರ್ಕಿಸಿದ್ದರು. ಈ ವೇಳೆ ಸರ್ವೇ ಮಾಡಿ ಸ್ಕೆಚ್ ತಯಾರಿಸಲು ಇಬ್ಬರು ಸರ್ವೇಯರ್‌ಗಳು ₹10 ಲಕ್ಷ ಲಂಚಕ್ಕೆ…
ಚಿಕ್ಕಮಗಳೂರು: ನಗರದಲ್ಲಿ ನಕಲಿ ನಾಟಿ ತುಪ್ಪ ತಯಾರಿಸಿ ಹಳ್ಳಿಗಳಿಗೆ ತೆರಳಿ ಮಾರಾಟ ಮಾಡುತ್ತಿದ್ದ ಜಾಲವನ್ನು ಆಹಾರ ಇಲಾಖೆಯ ಅಧಿಕಾರಿಗಳು ಪತ್ತೆಹಚ್ಚಿದ್ದಾರೆ. ಖಚಿತ ಮಾಹಿತಿ ಮೇರೆಗೆ ಆಹಾರ ಇಲಾಖೆಯ ಅಧಿಕಾರಿ ನಾಗರತ್ನ ನೇತೃತ್ವದ ತಂಡವು ನಗರದ ಮಾರ್ಕೆಟ್ ರಸ್ತೆಯಲ್ಲಿರುವ ಪಾಳು ಬಿದ್ದ ಮನೆಯೊಂದರ ಮೇಲೆ ದಾಳಿ ನಡೆಸಿದೆ. ಈ ವೇಳೆ ದಾಲ್ಡಾ, ವನಸ್ಪತಿ ಹಾಗೂ ವಿವಿಧ ರಾಸಾಯನಿಕ ವಸ್ತುಗಳನ್ನು ಬಳಸಿ ನಾಟಿ ತುಪ್ಪ ತಯಾರಿಸುತ್ತಿದ್ದ ತಂಡ ಪತ್ತೆಯಾಗಿದೆ. ನಾಟಿ ತುಪ್ಪದಂತೆ ಕಾಣಲು ಹಳದಿ ಬಣ್ಣ…
ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) 2026ನೇ ಸಾಲಿನ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ನೀಡಲಾಗುವ ಪ್ರತಿಷ್ಠಿತ ‘ಮೆಡಲ್ ಫಾರ್ ಮೆರಿಟೋರಿಯಸ್ ಸರ್ವಿಸ್’ ಪದಕಕ್ಕೆ ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ಇಲಾಖೆಯ ಇಬ್ಬರು ಸಿಬ್ಬಂದಿ ಆಯ್ಕೆಯಾಗಿದ್ದಾರೆ. ತರೀಕೆರೆ ಉಪವಿಭಾಗ ಕಚೇರಿಯ ಸಿ.ಹೆಚ್.ಸಿ. ಶ್ರೀ ಅಬ್ದುಲ್ ಕಮಾಲ್ ಎ. ಹಾಗೂ ಜಿಲ್ಲಾ ಪೊಲೀಸ್ ಇಲಾಖೆಯ ತಾಂತ್ರಿಕ ವಿಭಾಗದ ಎ.ಹೆಚ್.ಸಿ. ಶ್ರೀ ಅಬ್ದುಲ್ ರಬ್ಬಾನಿ ಅವರು ಕರ್ತವ್ಯನಿಷ್ಠೆ, ಪ್ರಾಮಾಣಿಕತೆ ಹಾಗೂ ಉತ್ತಮ ಸೇವೆಗಾಗಿ ಈ…
ಕೊಪ್ಪ, ಆ. 12: (ನ್ಯೂಸ್ ಮಲ್ನಾಡ್ ವರದಿ) ಶಿವಮೊಗ್ಗದ ಸರ್ಕಾರಿ ಆಯುರ್ವೇದ ಕಾಲೇಜು ಕ್ರೀಡಾಂಗಣದಲ್ಲಿ ಆಗಸ್ಟ್ 5ರಂದು ನಡೆದ ಅಂತರ ಕಾಲೇಜು 2026 ಕ್ರೀಡಾ ಪಂದ್ಯಾವಳಿಯಲ್ಲಿ ಕೊಪ್ಪದ ಎ.ಎಲ್.ಎನ್. ರಾವ್ ಆಯುರ್ವೇದ ವೈದ್ಯಕೀಯ ಕಾಲೇಜು ವಿದ್ಯಾರ್ಥಿಗಳು ಗಮನಾರ್ಹ ಸಾಧನೆ ಮಾಡಿದ್ದು, ಹಲವು ವಿಭಾಗಗಳಲ್ಲಿ ಚಾಂಪಿಯನ್ಸ್ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಕಾಲೇಜಿನ ಹುಡುಗರ ಕಬ್ಬಡಿ ತಂಡ ಪ್ರಶಸ್ತಿಯನ್ನು ಗೆದ್ದು ಚಾಂಪಿಯನ್ಸ್ ಆಗಿ ಹೊರಹೊಮ್ಮಿದರೆ, ಹುಡುಗಿಯರ ಕಬ್ಬಡಿ ತಂಡ ಕೂಡ…
ಸಂಸೆ: (ನ್ಯೂಸ್ ಮಲ್ನಾಡ್ ವರದಿ) ಇಲ್ಲಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೈಗಾರಿಕಾ ತರಬೇತಿ ಸಂಸ್ಥೆ (ಎಸ್‌ಡಿಎಮ್ ಐ.ಟಿ.ಐ, ಸಂಸೆ) ಇತ್ತೀಚೆಗೆ ಪ್ರಕಟಗೊಂಡ ಅಖಿಲ ಭಾರತ ವೃತ್ತಿ ಪರೀಕ್ಷೆ (AITT) ಯಲ್ಲಿ ಶೇ.100 ಫಲಿತಾಂಶ ದಾಖಲಿಸಿ ಗಮನಾರ್ಹ ಸಾಧನೆ ಮಾಡಿದೆ. ಸಂಸ್ಥೆಯ ಈ ಅಭೂತಪೂರ್ವ ಯಶಸ್ಸಿಗೆ ವಿದ್ಯಾರ್ಥಿಗಳ ಪೋಷಕರು ಹಾಗೂ ಸ್ಥಳೀಯ ಸಾರ್ವಜನಿಕರು ಹರ್ಷ ವ್ಯಕ್ತಪಡಿಸಿ, ಆಡಳಿತ ಮಂಡಳಿ ಮತ್ತು ಬೋಧಕ ವರ್ಗಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ…
ಎನ್. ಆರ್. ಪುರ: (ನ್ಯೂಸ್ ಮಲ್ನಾಡ್ ವರದಿ) ಜಮೀನಿಗೆ ಅಳವಡಿಸಿದ್ದ ಐಬೆಕ್ಸ್ ತಂತಿ ಬೇಲಿಗೆ ಅನಧಿಕೃತವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಿದ್ದರಿಂದ ಎರಡು ಜಾನುವಾರುಗಳು ಮೃತಪಟ್ಟಿವೆ ಎಂಬ ಗಂಭೀರ ಆರೋಪ ಕೇಳಿಬಂದಿದ್ದು, ಸಂಬಂಧಪಟ್ಟ ವ್ಯಕ್ತಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಎನ್. ಆರ್. ಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ತಾಲೂಕಿನ ಗದ್ದೆಮನೆ ಕಾನೂರು ಗ್ರಾಮದ ಶೈಲಾ ಅವರಿಗೆ ಸೇರಿದ ಎರಡು ಜಾನುವಾರುಗಳನ್ನು ನಿನ್ನೆ ಮೇಯಿಸಲು ಕಾಡಿನತ್ತ ಕರೆದೊಯ್ಯಲಾಗಿತ್ತು. ಈ…
ಎನ್. ಆರ್. ಪುರ: (ನ್ಯೂಸ್ ಮಲ್ನಾಡ್ ವರದಿ) ತಾಲ್ಲೂಕಿನ ಗುಬ್ಬಿಗಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಿದ್ದನಕೊಡಿಗೆ ಕಾಲೊನಿ ಮುಖ್ಯ ರಸ್ತೆಯಲ್ಲಿ ಬಸ್ಸಿಗೆ ಕಾಯುತ್ತಿದ್ದ ಶಾಲಾ ಮಕ್ಕಳನ್ನು ಒಂಟಿ ಸಲಗವೊಂದು ಬೆನ್ನಟ್ಟಿ ಓಡಿಸಿದ ಘಟನೆ ಮಂಗಳವಾರ ಬೆಳಿಗ್ಗೆ ಸಂಭವಿಸಿದ್ದು, ಗ್ರಾಮಸ್ಥರಲ್ಲಿ ಆತಂಕಕ್ಕೆ ಕಾರಣವಾಗಿದೆ. ಸಿದ್ದನಕೊಡಿಗೆ ಕಾಲೊನಿಯಿಂದ ಶಾಲಾ ಬಸ್ ನಿಲ್ದಾಣದತ್ತ ಆರು ವಿದ್ಯಾರ್ಥಿಗಳು ಕಾಲ್ನಡಿಗೆಯಲ್ಲಿ ತೆರಳುತ್ತಿದ್ದ ವೇಳೆ, ಅವರಿಗಿಂತ ಸ್ವಲ್ಪ ಮುಂದೆ ನಡೆದಿದ್ದ 9ನೇ ತರಗತಿ…
ಕೊಪ್ಪ: (ನ್ಯೂಸ್ ಮಲ್ನಾಡ್ ವರದಿ) 80ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಕೊಪ್ಪದಲ್ಲಿ ಆಗಸ್ಟ್ 15ರಂದು ಬೃಹತ್ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿದೆ. ಶ್ರೀ ವಿದ್ಯಾಪೀಠ ಸಂವರ್ಧನ ಪ್ರತಿಷ್ಠಾನ, ಶ್ರೀ ಜಗದ್ಗುರು ಬದರೀ ಶಂಕರಾಚಾರ್ಯ ಸಂಸ್ಥಾನಮ್–ಶ್ರೀ ಕ್ಷೇತ್ರ ಶಕಟಪುರಂ, ಶ್ರೀಶ್ರೀ ಕೃಷ್ಣಾನಂದತೀರ್ಥ ಮಹಾಸ್ವಾಮಿಗಳ ಪೂರ್ಣಾನುಗ್ರಹದೊಂದಿಗೆ ಈ ಶಿಬಿರ ನಡೆಯಲಿದೆ. ರೋಟರಿ ಕ್ಲಬ್–ಕೊಪ್ಪ, ರೋಟರಿ ಸಮುದಾಯ ದಳ–ಹರಿಹರಪುರ, ಪ್ರಶಮನೀ ಆಸ್ಪತ್ರೆ–ಕೊಪ್ಪ, ಲಯನ್ಸ್ ಕ್ಲಬ್–ಕೊಪ್ಪ, ವಿಪ್ರ…
ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಜಿಲ್ಲಾಧಿಕಾರಿ ಭಂವರ್ ಸಿಂಗ್ ಮೀನಾ ಅವರ ಹೆಸರಿನಲ್ಲಿ ಥೈಲ್ಯಾಂಡ್ ದೇಶದ ಕಂಟ್ರಿ ಕೋಡ್ (+66) ಹೊಂದಿರುವ ನಕಲಿ ವಾಟ್ಸಾಪ್ ಖಾತೆ ತೆರೆದು ಸೈಬರ್ ವಂಚಕರು ನಡೆಸುತ್ತಿದ್ದ ಮೋಸದ ಜಾಲಕ್ಕೆ ಜಿಲ್ಲೆಯ ಅಧಿಕಾರಿಯೊಬ್ಬರು ಬಲಿಯಾಗಿರುವ ಘಟನೆ ಬೆಳಕಿಗೆ ಬಂದಿದೆ. ತುರ್ತು ಬ್ಯಾಂಕಿಂಗ್ ಸಮಸ್ಯೆ ಎಂದು ನಂಬಿಸಿ ಹಣ ಪೀಕಿದ ಖದೀಮ: ಈ ನಕಲಿ ಜಾಲದ ಬಲೆಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪ ನಿರ್ದೇಶಕ ಸಿಲುಕಿದ್ದು, ಜಿಲ್ಲಾಧಿಕಾರಿಯವರ ಹೆಸರಿನಲ್ಲಿ…
ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ತಾಲೂಕಿನ ದೊಡ್ಡಹೊನ್ನೆಯ ಶ್ರೀ ವಾರಾಹಿ ಅಮ್ಮನವರ ದೇವಸ್ಥಾನಕ್ಕೆ ಇಂದು ಶ್ರೀ ಶ್ರೀ ಶ್ರೀ ತಾಳ್ಳಪಾಕ ಅನ್ನಮಾಚಾರ್ಯರ 12ನೇ ತಲೆಮಾರಿನ ವಂಶಸ್ಥರಾದ ಶ್ರೀ ತಾಳ್ಳಪಾಕ ಸ್ವಾಮಿಯವರು ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ದೇವಸ್ಥಾನಕ್ಕೆ ಆಗಮಿಸಿದ ಶ್ರೀ ತಾಳ್ಳಪಾಕ ಸ್ವಾಮಿಯವರನ್ನು ದೇವಸ್ಥಾನದ ಆಡಳಿತ ಮಂಡಳಿ, ಅರ್ಚಕರು ಹಾಗೂ ಭಕ್ತರು ಆತ್ಮೀಯವಾಗಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ದೇವಸ್ಥಾನದಲ್ಲಿ ವಿಶೇಷ ಪೂಜೆ, ಆಶೀರ್ವಚನ ಹಾಗೂ ಭಕ್ತರೊಂದಿಗೆ…
ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ನಾಟ್ಯ ಲಲಿತಕಲಾ ಟ್ರಸ್ಟ್ (ರಿ) ಹಾಗೂ ನಾಟ್ಯವೈಭವ ನೃತ್ಯ ಅಕಾಡೆಮಿ, ಶೃಂಗೇರಿ ಇವರ ಸಂಯುಕ್ತ ಆಶ್ರಯದಲ್ಲಿ “ಅಭಿನಯ ಲಹರಿ ನೃತ್ಯೋತ್ಸವಂ–2026” ಅಂಗವಾಗಿ ರಾಜ್ಯಮಟ್ಟದ ಪಾಶ್ಚಾತ್ಯ ಮತ್ತು ಶಾಸ್ತ್ರೀಯ ನೃತ್ಯ ಸ್ಪರ್ಧೆಗಳು ನಡೆಯಲಿವೆ. ಸ್ಪರ್ಧೆಯು 2026ರ ಆಗಸ್ಟ್ 23ರಂದು ಭಾನುವಾರ ಬೆಳಿಗ್ಗೆ 9 ಗಂಟೆಯಿಂದ ಶೃಂಗೇರಿಯ ಶ್ರೀ ಜೆಸಿಬಿಎಂ ಕಾಲೇಜಿನ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ. ಕಾರ್ಯಕ್ರಮದಲ್ಲಿ ಪಾಶ್ಚಾತ್ಯ ಹಾಗೂ ಶಾಸ್ತ್ರೀಯ ನೃತ್ಯ…
ಎನ್. ಆರ್. ಪುರ: (ನ್ಯೂಸ್ ಮಲ್ನಾಡ್ ವರದಿ) ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಎನ್.ಆರ್.ಪುರ ಪೊಲೀಸರು ಅಂದಾಜು 50 ಸಾವಿರ ರೂಪಾಯಿ ಮೌಲ್ಯದ ಗಾಂಜಾ, ಎರಡು ಬೈಕ್‌ಗಳನ್ನು ವಶಪಡಿಸಿಕೊಂಡು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಶನಿವಾರ ಸಂಜೆ ಸುಮಾರು 4.30 ಗಂಟೆಗೆ ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆ.ಕಣಬೂರು ಬಸ್ ನಿಲ್ದಾಣದಲ್ಲಿ ಮೂವರು ಅನುಮಾನಾಸ್ಪದವಾಗಿ ನಿಂತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ಎನ್.ಆರ್.ಪುರ ಪೊಲೀಸ್…