RSS Amplifier

Blog

Nammur Express

ನಿಮ್ಮ ಸುದ್ದಿಯ ಜೊತೆಗಾರ

nammurexpress.inSource feed ↗14 posts

Live Last read · last published · next check

Latest posts

•ಶಿವಮೊಗ್ಗ: ಯುವಕನ ಜೀವ ತೆಗೆದ ಹೊಸ ಮಿಷನ್! •ಸಾಗರ: ರಂಗಮಂದಿರದ ಮೇಲೆ ದಾಳಿ ನಡೆಸಿದ ದುಷ್ಕರ್ಮಿಗಳು •ಕಳಸ: ಚಿರತೆ ಮರಿ ಪ್ರತ್ಯಕ್ಷ; ಆತಂಕದಲ್ಲಿ ಸ್ಥಳೀಯರು! •ಸೊರಬ: ಲಾರಿ ಮತ್ತು ಆಟೋ ನಡುವೆ ಭೀಕರ ಅಪಘಾತ – ಶಿವಮೊಗ್ಗ: ಸಿಎ ವಿದ್ಯಾರ್ಥಿ ಸಾವು: ಕುಟುಂಬದ ಕಣ್ಣೀರು •ಕಡೂರು: ಬೈಕ್ ಗಳ ನಡುವೆ ಅಪಘಾತ; ಸವಾರ ದುರ್ಮರಣ •ಹೊಸನಗರ: ಗುರುವಾಯನಕೆರೆ ಬಸ್ ನಿಲ್ದಾಣದಲ್ಲಿ ಸಾವು – ಶಿಕಾರಿಪುರ: ಬಂದ್ ಯಶಸ್ವಿ: ಹಿಂದೂಗಳ ಹೋರಾಟ

ಶಿವಮೊಗ್ಗ: ಗೋಡೆಗೆ ಬಣ್ಣ ಹಚ್ಚುವ(ವಾಲ್ ಕೇರ್ ಪುಟ್ಟಿ) ಮಿಷನ್ ಅನ್ನು ಪರೀಕ್ಷಿಸುವ ಸಂದರ್ಭದಲ್ಲಿ ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ಘಟನೆ, ಮಂಗಳವಾರದಂದು ಯಡೇಹಳ್ಳಿಯಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ಪೈಂಟರ್ ಶಾರುಖ್ ಖಾನ್ ಎಂದು ಗುರುತಿಸಲಾಗಿದೆ. ಶಿವಮೊಗ್ಗದಲ್ಲಿ ಹೊಸದಾಗಿ ಖರೀದಿಸಿ ತಂದಿದ್ದ ಮಿಷನ್ ಅನ್ನು ತಮ್ಮ ಮನೆಯಲ್ಲಿ ಟ್ರಯಲ್ ನೋಡುತ್ತಿದ್ದಾಗ, ಆಕಸ್ಮಿಕವಾಗಿ ವಿದ್ಯುತ್ ಸಂಚಾರ ಉಂಟಾಗಿ ಈ ದುರಂತ ಸಂಭವಿಸಿದೆ ಎನ್ನಲಾಗಿದೆ. ಪರಿಣಾಮವಾಗಿ ತೀವ್ರ ಅಸ್ವಸ್ಥರಾಗಿದ್ದ ಶಾರುಖ್…

ವಿಮೆ ಇಲ್ಲದ ವಾಹನಗಳ ಸಂಚಾರಕ್ಕೆ ಸುಪ್ರೀಂ ಕೋರ್ಟ್ ಬ್ರೇಕ್!? – ಇನ್ನು ಮುಂದೆ ಇನ್ಶೂರೆನ್ಸ್ ಇಲ್ಲದಿದ್ರೆ ಪೆಟ್ರೋಲ್, ಡೀಸೆಲ್ ಸಿಗಲ್ಲ? – ಶೇಕಡ 56ರಷ್ಟು ವಾಹನಗಳಿಗೆ ಇನ್ಶೂರೆನ್ಸ್ ಇಲ್ಲ

ನವದೆಹಲಿ: ವಿಮೆಗಳಿಲ್ಲದೆ ರಸ್ತೆಗಳಲ್ಲಿ ಸಂಚರಿಸುತ್ತಿರುವ ವಾಹನಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳಗೊಳ್ಳುತ್ತಿರುವ ಕುರಿತು ಸರ್ವೋಚ್ಚ ನ್ಯಾಯಾಲಯವು ತನ್ನ ಕಳವಳವನ್ನು ವ್ಯಕ್ತಪಡಿಸಿದೆ. ದೇಶದಲ್ಲಿ ಮೂರನೇ ದರ್ಜೆಯ ವಿಮೆ ಕಡ್ಡಾಯವಾಗಿದ್ದು, ಇದನ್ನು ಅಳವಡಿಸಿಕೊಳ್ಳದ ವಾಹನಗಳ ಸಂಚಾರಕ್ಕೆ ಕಡಿವಾಣ ಹಾಕುವ ಸಲುವಾಗಿ ‘ನೋ ಇನ್ಸೂರೆನ್ಸ್, ನೋ ಫ್ಯೂಯಲ್’ ಎನ್ನುವ ಪೈಲಟ್ ಯೋಜನೆಯನ್ನು ಜಾರಿಗೆ ತರುವ ಕುರಿತು ಗಂಭೀರವಾಗಿ ಚಿಂತನೆ ನಡೆಸಿದ್ದು, ಇದಕ್ಕೆ ಸಂಬಂಧಿಸಿದಂತೆ ಕೇಂದ್ರ ರಸ್ತೆ ಸಾರಿಗೆ…

ಪುತ್ತೂರು: ಕೋಳಿ ಅಂಕದ ಮೇಲೆ ದಾಳಿ; ಇಬ್ಬರ ಬಂಧನ •ಕಾರ್ಕಳ: ಉಸಿರಾಟದ ಸಮಸ್ಯೆ; ವ್ಯಕ್ತಿ ಆತ್ಮಹತ್ಯೆ •ಬೆಳ್ತಂಗಡಿ: ದಿನಸಿ ಅಂಗಡಿಗೆ ನುಗ್ಗಿದ ಕಾಳಿಂಗ ಸರ್ಪ •ಬಂಟ್ವಾಳ: ವಿದ್ಯುತ್ ಆಘಾತಕ್ಕೆ ವ್ಯಕ್ತಿ ಬಲಿ

ಉಡುಪಿ: ರಾಷ್ಟ್ರೀಯ ಹೆದ್ದಾರಿ 66ರ ಉಪ್ಪೂರು ಸಮೀಪ ಗುರುವಾರ ಬೆಳಗ್ಗೆ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಖಾಸಗಿ ಎಕ್ಸ್‌ಪ್ರೆಸ್ ಬಸ್ ಏಕಾಏಕಿ ಬೆಂಕಿಗೆ ಆಹುತಿಯಾಗಿದೆ. ಬಸ್ ಉಡುಪಿಯಿಂದ ಶಿವಮೊಗ್ಗ ಜಿಲ್ಲೆಯ ಸಾಗರದತ್ತ ತನ್ನ ಎಂದಿನ ಸಂಚಾರದಲ್ಲಿದ್ದ ವೇಳೆ ಈ ಘಟನೆ ಸಂಭವಿಸಿದೆ. ಬಸ್‌ನಲ್ಲಿ ಬೆಂಕಿ ಕಾಣಿಸಿಕೊಂಡಿರುವುದಕ್ಕೆ ಶಾರ್ಟ್ ಸರ್ಕ್ಯೂಟ್ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ. ಘಟನೆ ವೇಳೆ ಪ್ರಯಾಣಿಕರ ಸುರಕ್ಷತೆ ಹಾಗೂ ಹಾನಿಯ ಕುರಿತು ಹೆಚ್ಚಿನ ವಿವರಗಳು ಇನ್ನಷ್ಟೇ…

ಬಾಳೆಹಣ್ಣಿಗೂ ಕೆಮಿಕಲ್ ಮಿಕ್ಸ್! – ಉಡುಪಿಯಲ್ಲಿ ಅಧಿಕಾರಿಗಳ ಕಾರ್ಯಚರಣೆ

ಉಡುಪಿ: ದೇಶದ ಹಲವೆಡೆ ಆಹಾರ ಸುರಕ್ಷತಾ ಅಧಿಕಾರಿಗಳು ದಾಳಿ ನಡೆಸಿ ಸೇವಿಸಲು ಯೋಗ್ಯವಲ್ಲದ ಆಹಾರ ಉತ್ಪನ್ನಗಳನ್ನು ಪತ್ತೆ ಮಾಡುತ್ತಿರುವ ನಡುವೆಯೇ, ಸಾಮಾನ್ಯರು ಹೆಚ್ಚಾಗಿ ಬಳಸುವ ಬಾಳೆಹಣ್ಣಿಗೂ ಕೃತಕ ಬಣ್ಣ ಹಚ್ಚಿ ಮಾರಾಟ ಮಾಡುತ್ತಿದ್ದ ಜಾಲ ಉಡುಪಿಯಲ್ಲಿ ಬಯಲಾಗಿದೆ. ಗುರುವಾರ (ಆ.20) ಉಡುಪಿ ತಾಲೂಕಿನ ಅಲೆವೂರಿನಲ್ಲಿ ಕುಂದಾಪುರ ಉಪ ವಿಭಾಗಾಧಿಕಾರಿ (ಎಸಿ) ನೇತೃತ್ವದ ತಂಡ ಬಾಳೆಕಾಯಿ ಮಂಡಿಗೆ ದಾಳಿ ನಡೆಸಿದ್ದು, ಕೃತಕ ಬಣ್ಣ ಹಚ್ಚಿ ಮಾರಾಟಕ್ಕೆ ಸಿದ್ಧಪಡಿಸಿದ್ದ ಸುಮಾರು 5 ಸಾವಿರ ಕೆಜಿ…

ಅಡಿಕೆ ಬೆಳೆಗಾರರ ಬದುಕಿನ ಜೊತೆ ಚೆಲ್ಲಾಟ ನಿಲ್ಲಲಿ! – ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಮುಖಂಡ ಮೇಗರವಳ್ಳಿ ರಮೇಶ್ ಹೆಗ್ಡೆ – ಅಡಿಕೆ ನಿಷೇಧ ಹಂತ ತಲುಪಲು ಬಿಜೆಪಿ ಸರ್ಕಾರವೇ ಕಾರಣ!

ತೀರ್ಥಹಳ್ಳಿ: ಅಡಿಕೆ ನಿಷೇಧ ಹಂತ ತಲುಪಲು ಬಿಜೆಪಿ ಸರ್ಕಾರವೇ ಕಾರಣ. 2001ರಲ್ಲಿ ವಾಜಪೇಯಿ ಪ್ರಧಾನಿಯಾಗಿದ್ದ ಸಂದರ್ಭ ಅಡಿಕೆ ಕ್ಯಾನ್ಸರ್ ಕಾರಕ ಎಂಬ ವರದಿಯನ್ನು ಸಲ್ಲಿಸಿದೆ. 2017, 2021 ರಲ್ಲಿ ವಿವಿಧ ಇಲಾಖೆಯ ಸಚಿವರು, ಸಂಸದರು ನಿಷೇಧಕ್ಕೆ ಆಗ್ರಹಿಸಿದ್ದಾರೆ. ಆಗ ನಮ್ಮ ಅಡಿಕೆ ಜ್ಞಾನೇಂದ್ರ ಎಲ್ಲಿ ಹೋಗಿದ್ದರು ಎಂದು ಕಾಂಗ್ರೆಸ್ ನಾಯಕ ರಮೇಶ್ ಹೆಗ್ಡೆ ಆರೋಪಿಸಿದ್ದಾರೆ. ತೀರ್ಥಹಳ್ಳಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿ, ಅಡಿಕೆ ಬೆಳೆಗಾರರಿಗೆ ನಬಾರ್ಡ್, ರಾಷ್ಟ್ರೀಕೃತ ಬ್ಯಾಂಕ್,…

ಜಗದ್ಗುರು ಶ್ರೀವಿದುಶೇಖರ ಭಾರತೀ ಸನ್ನಿಧಾನಂಗಳವರ 34 ನೇ ವರ್ಧಂತೋತ್ಸವದ ಪ್ರಯುಕ್ತ ಬೃಹತ್ ರಕ್ತದಾನ ಶಿಬಿರ

ಶೃಂಗೇರಿ: ಶೃಂಗೇರಿ ಶ್ರೀ ಶಾರದಾ ಪೀಠದ ಜಗದ್ಗುರು ಶ್ರೀ ವಿದುಶೇಖರ ಭಾರತೀ ಮಹಾಸ್ವಾಮಿಗಳ 34 ನೇ ವರ್ಧಂತೋತ್ಸವದ ಪ್ರಯುಕ್ತ ರಕ್ತದಾನಿಗಳು ವಾಟ್ಸ್ ಆ್ಯಪ್ ಗ್ರೂಪ್ ಹಾಗೂ ಕಾರ್ಮಿಕ ಮಿತ್ರ ಬಳಗವು ಅಭಿನವ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಶೃಂಗೇರಿ ಮತ್ತು ರೋಟ್ರಾಕ್ಟ್ ಕ್ಲಬ್ ಇವರ ಸಹಯೋಗದಲ್ಲಿ ಆಗಸ್ಟ್ 19 ರಂದು ಬೃಹತ್ ರಕ್ತದಾನ ಶಿಬಿರವನ್ನು ಆಯೋಜಿಸಿದೆ. ಶೃಂಗೇರಿಯ ಶ್ರೀಮಠದ ಶಾರದಾ ಕೃಪಾದಲ್ಲಿ ಬೆಳಿಗ್ಗೆ 9 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ನಡೆಯುವ ಈ ಶಿಬಿರದಲ್ಲಿ ಎಲ್ಲಾ…

ವಿದ್ಯಾಭ್ಯಾಸಕ್ಕೆ ನೆರವು ನೀಡುತ್ತೆ ‘ಎಸ್ ಬಿಐ ಆಶಾ’ – ಅರ್ಜಿ ಸಲ್ಲಿಕೆಗೆ ಸೆಪ್ಟೆಂಬರ್ 4ರವರೆಗೆ ಅವಕಾಶ – 9ನೇ ತರಗತಿಯಿಂದ ಉನ್ನತ ವ್ಯಾಸಂಗದವರೆಗೆ ವಿದ್ಯಾರ್ಥಿ ವೇತನ

ಬೆಂಗಳೂರು: ಪ್ರತಿಭೆ ಮತ್ತು ಓದಿನ ಬಗ್ಗೆ ವಿಶೇಷ ಒಲವು ಹಾಗೂ ಉತ್ಸಾಹವಿದ್ದರೂ ಕೆಲವೊಮ್ಮೆ ವಿದ್ಯಾರ್ಥಿಗಳಿಗೆ ಆರ್ಥಿಕ ಸಂಕಷ್ಟ ಎದುರಾಗಿ, ತಮ್ಮ ಕನಸುಗಳನ್ನು ಚಿವುಟಿ ಹಾಕಬೇಕಾದ ಪರಿಸ್ಥಿತಿ ಎದುರಾಗುತ್ತದೆ. ಆದರೆ, ಅಂತಹ ವಿದ್ಯಾರ್ಥಿಗಳ ಕನಸನ್ನು ನನಸಾಗಿಸಲು ಭಾರತದ ಪ್ರತಿಷ್ಠಿತ ಬ್ಯಾಂಕ್ ಗಳಲ್ಲಿ ಒಂದಾದ ‘ಎಸ್ ಬಿಐ’ ತನ್ನ ಎಸ್ ಬಿಐ ಫೌಂಡೇಶನ್ ನ ವತಿಯಿಂದ ‘ಎಸ್‌ಬಿಐ ಪ್ಲಾಟಿನಂ 2026-27 ಆಶಾ ವಿದ್ಯಾರ್ಥಿವೇತನ’ ಎನ್ನುವ ಹೊಸ ಯೋಜನೆಯೊಂದನ್ನು ರೂಪಿಸಿದೆ. ವಿದ್ಯಾರ್ಥಿಗಳ ಹೆಚ್ಚಿನ…

ಸಮುದ್ರದಲ್ಲಿ 3 ಗಂಟೆ ಈಜಿದ ಯುವಕ!: ದಡಕ್ಕೆ ಕರೆ ತರಲು ಪೇಚಾಟ! – ಉಡುಪಿ: ಮೀನುಗಾರಿಕೆ ವೇಳೆ ಬೋಟಿನಿಂದ ಕೆಳಗೆ ಬಿದ್ದು ಸಾವು – ಮಂಗಳೂರು: ಅಕ್ರಮ ಮರ ಸಾಗಾಟ; ಆರೋಪಿ ಬಂಧನ – ಬೆಳ್ತಂಗಡಿ: ನಿಯಮ ಉಲ್ಲಂಘನೆ; ಹೋಮ್ ಸ್ಟೇ ಮಾಲೀಕನಿಗೆ ದಂಡ – ಕಡಬ: ನೈತಿಕ ಪೊಲೀಸ್ ಗಿರಿ; 9 ಮಂದಿ ವಿರುದ್ಧ ಪ್ರಕರಣ ದಾಖಲು

ಉಡುಪಿ: ಸುಮಾರು ಮೂರು ಗಂಟೆಗಳ ಕಾಲ ಅರಬ್ಬಿ ಸಮುದ್ರದಲ್ಲಿ ದಡದಿಂದ ದೂರ ಈಜುತ್ತಿದ್ದ ವ್ಯಕ್ತಿಯೊಬ್ಬರನ್ನು ಸಮಾಜ ಸೇವಕ ಈಶ್ವರ್ ಮಲ್ಪೆ ಅವರು ಸಮುದ್ರಕ್ಕೆ ಇಳಿದು ಸುರಕ್ಷಿತವಾಗಿ ದಡಕ್ಕೆ ಕರೆತಂದಿದ್ದಾರೆ. ರಕ್ಷಿಸಲ್ಪಟ್ಟ ವ್ಯಕ್ತಿಯನ್ನು ಕಾಡಿಪಟ್ಣ ನಿವಾಸಿ ಹಾಗೂ ಪಡುಬಿದ್ರಿ ಬ್ಲೂ ಫ್ಲ್ಯಾಗ್ ಬೀಚ್‌ನಲ್ಲಿ ಈ ಹಿಂದೆ ಲೈಫ್ ಗಾರ್ಡ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಯತೀಶ್ (38) ಎಂದು ಗುರುತಿಸಲಾಗಿದೆ. ಸ್ಥಳೀಯರ ಪ್ರಕಾರ, ಯತೀಶ್ ಈ ಹಿಂದೆ ಕೂಡ ಒಂದೆರಡು ಬಾರಿ ಇದೇ ರೀತಿಯ ಕೃತ್ಯಕ್ಕೆ…

ಸ್ವಾತಂತ್ರ್ಯ ಹಬ್ಬಕ್ಕೆ ಮತ್ತಷ್ಟು ಹೊಸ ಬಸ್ ನಿಲ್ದಾಣ! – ಮಲೆನಾಡು ಅಭಿವೃದ್ಧಿ ಮಂಡಳಿ ಅನುದಾನ: ಮಂಜುನಾಥ ಗೌಡರ ಸಾರಥ್ಯ – ಆಗುಂಬೆ ವೃತ್ತ, ಮೇಳಿಗೆ, ಬಸವಾನಿಯಲ್ಲಿ ನೂತನ ಬಸ್ ನಿಲ್ದಾಣಗಳ ಉದ್ಘಾಟನೆ

ತೀರ್ಥಹಳ್ಳಿ: ರಾಜ್ಯ ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರು ಹಾಗೂ ಶಿವಮೊಗ್ಗ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಡಾ. ಆರ್. ಎಂ. ಮಂಜುನಾಥ್ ಗೌಡ ಅವರ ಅನುದಾನದಲ್ಲಿ ಈಗಾಗಲೇ ತೀರ್ಥಹಳ್ಳಿ ಸೇರಿ ಮಲೆನಾಡ ಅನೇಕ ಕಡೆ ಹೈಟೆಕ್ ಬಸ್ ನಿಲ್ದಾಣ ಉದ್ಘಾಟನೆಗೊಳ್ಳುತ್ತಿವೆ. ಇದೀಗ ಸ್ವಾತಂತ್ರ ಹಬ್ಬದ ದಿನ ನಿರ್ಮಾಣಗೊಂಡಿರುವ ನೂತನ ಬಸ್ ನಿಲ್ದಾಣಗಳ ಉದ್ಘಾಟನಾ ಕಾರ್ಯಕ್ರಮ ಆಗುಂಬೆ ವೃತ್ತ, ಮೇಳಿಗೆ, ಬಸವಾನಿಯಲ್ಲಿ ನಡೆಯಲಿದೆ. ಬೆಳಿಗ್ಗೆ 11 ಗಂಟೆಗೆ ತೀರ್ಥಹಳ್ಳಿ ಪಟ್ಟಣದ ಆಗುಂಬೆ ವೃತ್ತದಲ್ಲಿ…

8 ವರ್ಷದ ಬಾಲಕನ ಬಲಿ ಪಡೆದ ಕಡಜ ಹುಳುಗಳು! – ಆಲ್ದೂರಲ್ಲಿ ವಸತಿ ಶಾಲೆಯಲ್ಲೇ ನೇಣು ಬಿಗಿದುಕೊಂಡ ವಿದ್ಯಾರ್ಥಿ! – ಚಿಕ್ಕಮಗಳೂರು: ಕುದುರೆಮುಖ ಆಫ್ ರೋಡ್: ಸರ್ಕಾರ ಕಡಿವಾಣ

ಸಾಗರ: ಸಾಗರ ತಾಲೂಕು ಹೆಗ್ಗೋಡು ಬಳಿಯ ಅತ್ತಿಸರ ಗ್ರಾಮದಲ್ಲಿ ಕಡಜ ಹುಳುಗಳು ಕಡಿದು ಎಂಟು ವರ್ಷದ ಬಾಲಕ ಮೃತಪಟ್ಟಿದ್ದಾನೆ. ಮನೆಯ ಹಿಂದಿನ ಬಾಳೆಗಿಡದಲ್ಲಿದ್ದ ಕಡಜದ ಹುಳುವಿನ ಗೂಡಿನಿಂದಾಗಿ ವೆಂಕಟೇಶ್ ಹಾಗೂ ಅವರ ಮಗ ನಿಶ್ಚಿತ್ ಮೇಲೆ ಕಡಜ ಹುಳುಗಳು ದಾಳಿ ಮಾಡಿದ್ದವು. ಕುಟುಂಬದವರು ತಕ್ಷಣವೇ ಬಾಲಕ ಹಾಗೂ ತಂದೆಯನ್ನು ಹೆಗ್ಗೋಡಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಿದ್ದರು. ಆಲ್ದೂರಲ್ಲಿ ವಸತಿ…

ಮಂಗಳೂರು-ಶೃಂಗೇರಿ- ಶಿವಮೊಗ್ಗ ರೈಲು ಮಾರ್ಗ ಸ್ಥಳ ಸಮೀಕ್ಷೆಗೆ ಗ್ರೀನ್ ಸಿಗ್ನಲ್! – ನೂತನ ರೈಲು ಮಾರ್ಗದ ಡಿಪಿಆರ್ ಸಿದ್ಧಪಡಿಸಲು ಕೇಂದ್ರದ ಸಮ್ಮತಿ – 332 ಕಿಲೋಮೀಟರ್ ಉದ್ದದ ರೈಲು ಮಾರ್ಗಕ್ಕೆ ಸ್ವಾಗತ

ಮಲೆನಾಡು/ ಕರಾವಳಿ: ಮಂಗಳೂರು-ಶೃಂಗೇರಿ- ಶಿವಮೊಗ್ಗ ನಡುವೆ ಪ್ರಸ್ತಾಪಗೊಂಡಿರುವ 332 ಕಿಲೋಮೀಟರ್ ಉದ್ದದ ರೈಲು ಮಾರ್ಗಕ್ಕೆ ಸಂಬಂಧಿಸಿದಂತೆ ಸಮಗ್ರ ಯೋಜನಾ ವರದಿ ಸಿದ್ಧಪಡಿಸಲು ಸ್ಥಳ ಸಮೀಕ್ಷೆಗೆ ಕೇಂದ್ರ ರೈಲ್ವೆ ಸಚಿವಾಲಯವು ಅನುಮೋದನೆ ನೀಡಿದೆ. ಮಂಗಳೂರು ರೈಲ್ವೆ ಸಂಪರ್ಕ ಸಾಮರ್ಥ್ಯ ವೃದ್ಧಿಯ ಕುರಿತು ಲೋಕಸಭೆಯಲ್ಲಿ ಕೇಳಲಾಗಿರುವಂತಹ ಪ್ರಶ್ನೆಗೆ ಕೇಂದ್ರ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ಅವರು ಬುಧವಾರದಂದು ಲಿಖಿತ ರೂಪದಲ್ಲಿ ಉತ್ತರ ನೀಡಿರುವ ಕುರಿತು ಮಾಹಿತಿ ಲಭಿಸಿದೆ. ಮಂಗಳೂರು…

ಗುಟ್ಕಾ ನಿಷೇಧ ವಾಪಾಸ್! – ಅಡಿಕೆ ಬೆಳೆಗಾರರಿಗೆ ನೆಮ್ಮದಿಯ ಸುದ್ದಿ – ಲಕ್ಷ ಲಕ್ಷ ರೈತರ ಪರ ನಿಂತ ಡಿಕೆಶಿ

ಬೆಂಗಳೂರು: ರಾಜ್ಯ ಸರ್ಕಾರ ಜಾರಿಗೊಳಿಸಿದ್ದ ಗುಟ್ಕಾ ಹಾಗೂ ನಿಕೋಟಿನ್ ಅಥವಾ ತಂಬಾಕು ಅಂಶ ಹೊಂದಿರುವ ಪಾನ್ ಮಸಾಲಾ ಉತ್ಪನ್ನಗಳ ಮೇಲಿನ ಒಂದು ವರ್ಷದ ನಿಷೇಧ ಆದೇಶ ಹಿಂಪಡೆದಿದೆ.. ಲಕ್ಷ ಲಕ್ಷ ಅಡಿಕೆ ಬೆಳೆಗಾರರ ಬದುಕು ಅಡಿಕೆ ಮೇಲೆ ನಿಂತಿದ್ದು ಏಕಾಏಕಿ ಈ ನಿಯಮ ಹಿಂಪಡೆಯಲು ಸಿಎಂ ಡಿಕೆ ಶಿವಕುಮಾರ್ ನಿರ್ಧಾರ ಮಾಡಿದ್ದಾರೆ. ಈ ಬಗ್ಗೆ ಅಧಿಕೃತ ಆದೇಶ ಹೊರ ಬಿದ್ದಿದೆ. ಕೆಲವೇ ದಿನಗಳ ಹಿಂದೆ ಹೊರಡಿಸಿದ್ದ ನಿಷೇಧ ಆದೇಶದಿಂದ ಶಿವಮೊಗ್ಗ, ಚಿಕ್ಕಮಗಳೂರು, ಉತ್ತರ ಕನ್ನಡ, ದಾವಣಗೆರೆ ಸೇರಿದಂತೆ [...]…

ಗುಟ್ಕಾ, ಪಾನ್ ಮಸಾಲಾ ಬ್ಯಾನ್ ಬ್ಯಾನ್! – ರಾಜ್ಯದಲ್ಲಿ ಮಾರಾಟ ಒಂದು ವರ್ಷ ನಿಷೇಧ – ಉತ್ಪಾದನೆ, ಶೇಖರಣೆ, ವಿತರಣೆ, ಸಾಗಣೆ ಮತ್ತು ಮಾರಾಟ ಇಲ್ಲ

ಬೆಂಗಳೂರು: ರಾಜ್ಯದಲ್ಲಿ ಗುಟ್ಕಾ, ಪಾನ್ ಮಸಾಲಾ ಬ್ಯಾನ್ ಮಾಡಲಾಗಿದೆ. ರಾಜ್ಯ ಸರ್ಕಾರವು ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಮಹತ್ವವಾದ ನಿರ್ಣಯವೊಂದನ್ನು ಕೈಗೊಂಡಿದ್ದು ಸಂಬಂಧಿಸಿದಂತೆ ತಂಬಾಕು ಮತ್ತು ನಿಕೋಟಿನ್ ಯುಕ್ತ ಗುಟ್ಕಾ ಮತ್ತು ಪಾನ್ ಮಸಾಲಾದಂತಹ ಉತ್ಪಾದನೆ, ಶೇಖರಣೆ, ವಿತರಣೆ, ಸಾಗಣೆ ಮತ್ತು ಮಾರಾಟವನ್ನು ಒಂದು ವರ್ಷಗಳ ಕಾಲ ನಿಷೇಧಿಸುವಂತೆ ಆದೇಶವನ್ನು ಹೊರಡಿಸಿದೆ. ತಂಬಾಕು ಅಥವಾ ನಿಕೋಟಿನ್ ಅಂಶವನ್ನು ಪ್ರತ್ಯೇಕ ಪ್ಯಾಕೆಟ್ ಗಳಲ್ಲಿ ನೀಡಿ, ಗ್ರಾಹಕರು ಅದನ್ನು ಮತ್ತೊಂದು…

ಮಲ್ನಾಡ್ ಟಾಪ್ ನ್ಯೂಸ್ , ಚಿಕ್ಕಮಗಳೂರು: 300 ಅಡಿ ಪ್ರಪಾತಕ್ಕೆ ಉರುಳಿದ ಲಾರಿ •ಶಿವಮೊಗ್ಗ: ಕುಸಿದು ಬಿದ್ದು ಎಸ್ಎಸ್ಎಲ್ ಸಿ ವಿದ್ಯಾರ್ಥಿ ಸಾವು •ಶೃಂಗೇರಿ: ಕುಸಿದು ಬಿದ್ದ ಗುಡ್ಡ; ಪ್ರಯಾಣಿಕರಲ್ಲಿ ಮೂಡಿದ ಆತಂಕ •ತೀರ್ಥಹಳ್ಳಿ: ಕಾವೇರಿ ಲೋನ್ ಸರ್ವಿಸ್ ನಂಬಿ ಲಕ್ಷಾಂತರ ವಂಚನೆ

ಚಿಕ್ಕಮಗಳೂರು: 300 ಅಡಿ ಪ್ರಪಾತಕ್ಕೆ ಉರುಳಿದ ಲಾರಿ ಚಿಕ್ಕಮಗಳೂರು: 10 ಚಕ್ರದ ಲಾರಿಯೊಂದು ಕಾರಿಗೆ ಡಿಕ್ಕಿ ಹೊಡೆದು, ಪ್ರಪಾತಕ್ಕೆ ಉರುಳಿ ಬಿದ್ದಿರುವ ಘಟನೆ ಕೆಎಂ ರಸ್ತೆಯ ಲಕ್ಯಾ ತಿರುವಿನಿಂದ ಗೇಟ್ ವೇ ಹೊಟೇಲ್ ನ ತಿರುವಿನ ನಡುವೆ ನಡೆದಿದೆ. ಕಡೂರು ನಿವಾಸಿಯಾದ ಇರ್ಫಾನ್ ಅವರು ತಮ್ಮ ಕುಟುಂಬದ ಸದಸ್ಯರೊಂದಿಗೆ ಆಲ್ಟೋ ಕಾರಿನಲ್ಲಿ ಕಡೂರಿನಿಂದ ಚಿಕ್ಕಮಗಳೂರಿಗೆ ತೆರಳುತ್ತಿದ್ದ ಸಂದರ್ಭದಲ್ಲಿ, ಲಾರಿಯೊಂದು ಅತಿ ವೇಗವಾಗಿ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದ ಕಾರಣದಿಂದಾಗಿ ಈ ಅವಘಡ…